ಸಾಮಾನ್ಯವಾಗಿ ಎಲ್ಲರೂ ಕಡ್ಡಾಯವಾಗಿ ಒಂದನ್ನಾದ್ರೂ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ. ಇವುಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank Of India-SBI) ಕೂಡ ಒಂದು. ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಿಮಗೆಲ್ಲರಿಗೂ ಗೊತ್ತಿರಬಹುದು SBI ಬ್ಯಾಂಕ್ ಅನ್ನು ಸರ್ಕಾರಿ ಬ್ಯಾಂಕುಗಳಲ್ಲಿ ಅತ್ಯಂತ ದೊಡ್ಡ ಬ್ಯಾಂಕ್ ಎನ್ನುವುದಾಗಿ ಕರೆಯಲಾಗುತ್ತದೆ. ಆದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಲವೊಂದು ಪ್ರಮುಖ ನಿಯಮಗಳನ್ನು ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವವರು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.
ಸ್ಟೇಟ್ ಬ್ಯಾಂಕ್ ಕುರಿತಂತೆ ಕೆಲವು ಪ್ರಮುಖ ಅಪ್ಡೇಟ್ಗಳನ್ನು ಇಲ್ಲಿ ನೀಡಲಾಗಿದ್ದು, ನೀವು ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದಾರೆ, ಈ ಪ್ರಮುಖ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾಗಿರುವುದು ಅಗತ್ಯ. ಹಾಗಾಗಿ, ಈ ಲೇಖನವನ್ನು ಕೊನೆವರೆಗೂ ಓದಿ ಮಾಹಿತಿ ತಿಳಿದುಕೊಳ್ಳಿ.
ಇನ್ಮುಂದೆ ವಾಹನ, ಚಿನ್ನ, ಹಣ ಏನೇ ಕಳುವಾದ್ರೆ ಮೊಬೈಲ್‌ನಲ್ಲೇ ಪೊಲೀಸರಿಗೆ ದೂರು ನೀಡಬಹುದು ಹೇಗೆ ಅಂತ ನೋಡಿ.!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಸರ್ಕಾರ ಚಾಲಿತ ಬ್ಯಾಂಕ್ ಆಗಿದ್ದು ಇದರಲ್ಲಿ ಖಾತೆಯನ್ನು ಹೊಂದಿರುವವರು ಈ ಕೆಲವೊಂದು ಪ್ರಮುಖ ಅಪ್ಡೇಟ್ಗಳನ್ನು ತಿಳಿಯದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸುವ ಸಾಧ್ಯತೆ ಕೂಡ ಇರುತ್ತದೆ. ಇದೀಗ SBIನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಹೊಸ 5 ರೂಲ್ಸ್‌ಗಳನ್ನು ಜಾರಿಗೆ ತಂದಿದೆ. ಹಾಗಿದ್ರೆ, ಬನ್ನಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ತಿಳಿದುಕೊಳ್ಳಬೇಕಾಗಿರುವ ಆ ಪ್ರಮುಖ ರೂಲ್ಸ್‌ಗಳು ಯಾವುವು ಅಂತಾ ತಿಳಿಯೋಣ ಬನ್ನಿ.
ಯಾವುವು ಆ ಪ್ರಮುಖ 5 ರೂಲ್ಸ್?
SBI ಎಲ್ಲಿ ಯಾವುದೇ ಗ್ರಾಹಕರು ಇನ್ಸೂರೆನ್ಸ್ ಮಾಡಿದ್ರು ಕೂಡ 15 ಲಕ್ಷ ರೂಪಾಯಿ ವರೆಗೂ ಕೂಡ ಪರ್ಸನಲ್ ಆ-ಕ್ಸಿ-ಡೆಂ-ಟ್ ಕವರೇಜ್ ಥರ್ಡ್ ಪಾರ್ಟಿ ಲಯಾಬ್ಲಿಟಿ ಕವರ್, ಇದೇ ರೀತಿ 15 ಆಡ್ ಆನ್ ಸೇವೆಗಳನ್ನು ಕೂಡ ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುತ್ತದೆ. ಈ ಮೂಲಕ ಬ್ಯಾಂಕ್ ಹಾಗೂ ಇನ್ಸೂರೆನ್ಸ್ ಕಂಪನಿ ಪಾರ್‌ಟ್ನರ್‌ಶಿಪ್ ಅನ್ನು ಇದರಲ್ಲಿ ಮಾಡಿಕೊಂಡಿದ್ದು, ಈ ಪ್ರಕ್ರಿಯೆಯಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಈ ಸೌಲಭ್ಯಗಳು ದೊರಕುತ್ತವೆ.
SBI ನ ಗ್ರಾಹಕರು ತಮ್ಮ Rupay ಕಾರ್ಡ್ ಮೂಲಕ ಯಾವುದೇ ಯುಪಿಐ ಟ್ರಾನ್ಸಾಕ್ಷನ್(UPI transaction) ಅನ್ನು ಸುಲಭವಾಗಿ ಮಾಡಬಹುದಾಗಿದೆ. ಲಿಂಕ್ ಮಾಡಿಕೊಂಡರೆ ಸಾಕು ಲಿಮಿಟ್ ಒಳಗಿರುವಂತಹ ಹಣವನ್ನು ಟ್ರಾನ್ಸಾಕ್ಷನ್ ಮಾಡಬಹುದಾದಂತಹ ಹಕ್ಕನ್ನು ಗ್ರಾಹಕರು ಹೊಂದಿರುತ್ತಾರೆ. SBI ತನ್ನ ಗ್ರಾಹಕರ ಡಾಕ್ಯುಮೆಂಟುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ತನ್ನದೇ ಆದ ಡಿಜಿ ಲಾಕರ್(Digilocker) ಸೇವೆಯನ್ನು ಪ್ರಾರಂಭಿಸಿದೆ.
ಇದರ ಮೂಲಕ ನಿಮ್ಮ ಲೈಸೆನ್ಸ್(License) ಪಾನ್ ಕಾರ್ಡ್(PAN Card) ನಂತಹ ಪ್ರಮುಖ ದಾಖಲೆಗಳನ್ನು ಕೂಡ ಬೇರೆ ಕಡೆಗಳಲ್ಲಿ ಹೋಲಿಸಿದರೆ, ಅತ್ಯಂತ ಸುರಕ್ಷಿತವಾಗಿ ಇಡಬಹುದಾಗಿದೆ. ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಲಾಕರ್( SBI Bank Locker) ನಿಯಮಗಳು ಕೂಡ ಬದಲಾಗಿದ್ದು, ಕೂಡಲೇ ನೀವು ನಿಮ್ಮ ಬ್ಯಾಂಕಿನ ಬ್ರಾಂಚ್ ಗೆ ಹೋಗಿ ಕೆಲವೊಂದು ಅಗ್ರಿಮೆಂಟ್‌ಗಳಿಗೆ ಸಹಿ ಮಾಡಬೇಕಾದ ಸಾಧ್ಯತೆ ಹೆಚ್ಚಾಗಿದೆ.
ಸಪ್ಟೆಂಬರ್ 30ರವರೆಗೆ ಈ ಕೆಲಸವನ್ನು ಸಂಪೂರ್ಣವಾಗಿ ಪೂರೈಸ ಬೇಕಾಗಿರುತ್ತದೆ ಎಂಬುದಾಗಿ ಕೂಡ ಬ್ಯಾಂಕ್ ಸುತ್ತೋಲೆಯನ್ನು ಹೊರಡಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದಾರೆ ಕೂಡಲೇ ಬ್ಯಾಂಕಿಗೆ ಹೋಗಿ ಇದರ ಕುರಿತಂತೆ ಹೆಚ್ಚಿನ ಮಾಹಿತಿಗಳನ್ನು ಹಾಗೂ ಆಗಬೇಕಾಗಿರುವಂತಹ ಪ್ರಕ್ರಿಯೆಗಳನ್ನು ಮುಗಿಸಿ ಬರಬೇಕಾಗಿದೆ.