ರಾಜನಿಲ್ಲದ ರಾಜ್ಯಕ್ಕೆ 9 ತಿಂಗಳು ಅಪ್ಪು ಅವರನ್ನು ನಾವು ಕಳೆದುಕೊಂಡು 9 ತಿಂಗಳು ಆಗಿದೆ ನಿಜಕ್ಕೂ ಕೂಡ ಯಾರಿಂದಲೂ ಊಹೆ ಮಾಡುವುದಕ್ಕೂ ಕೂಡ ಸಾಧ್ಯವಾಗುತ್ತಿಲ್ಲ ಅಪ್ಪು ಅವರನ್ನು ಕಳೆದುಕೊಂಡು ನಾವು ಒಂಬತ್ತು ತಿಂಗಳು ಆಯ್ತಾ ಅಂತ. ನೆನ್ನೆ ಮೊನ್ನೆ ಅಷ್ಟೇ ಅವರನ್ನು ಕಳೆದುಕೊಂಡವೇನೋ ಎಂಬ ರೀತಿಯಲ್ಲಿ ನಮ್ಮ ಮನಸ್ಸಿಗೆ ಭಾಸವಾಗುತ್ತದೆ. ಅಪ್ಪು ಅವರು ನಮ್ಮನ್ನು ಶಾರೀರಿಕವಾಗಿ ಮಾತ್ರ ಬಿಟ್ಟು ಹೋಗಿದ್ದಾರೆ ಅಂತ ಅನಿಸುತ್ತದೆ ಇನ್ನು ಎಷ್ಟೋ ಕ್ಷಣದಲ್ಲಿ ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿಲ್ಲ ಬದಲಿಗೆ ನಮ್ಮೊಟ್ಟಿಗೆ ಇದ್ದಾರೆ ಅಂತ ಅನಿಸುತ್ತದೆ. ಯಾವುದೇ ಸೋಶಿಯಲ್ ಮೀಡಿಯಾ ಆಗಿರಬಹುದು ಸಾರ್ವಜನಿಕ ಸ್ಥಳ ಆಗಿರಬಹುದು ಧಾರ್ಮಿಕ ಕ್ಷೇತ್ರ ಆಗಿರಬಹುದು ಎಲ್ಲಾ ಕಡೆಯಲ್ಲೂ ಕೂಡ ಅಪ್ಪು ಅವರ ಫೋಟೋಗಳು ರಾರಾಜಿಸುತ್ತಿರುವುದನ್ನು ನೋಡಿದರೆ.
ಅಪ್ಪು ಅವರು ಯಾವುದೋ ಪ್ರಚಾರ ಮಾಡುತ್ತಿದ್ದಾರೆ ಅಥವಾ ಅಪ್ಪು ಅವರ ಯಾವುದೋ ಸಿನಿಮಾ ಪ್ರಸಾರವಾಗುತ್ತಿದೆ ಎಂಬ ರೀತಿಯಲ್ಲಿ ನಮಗೆ ಅನಿಸುತ್ತದೆ. ನಿಜಕ್ಕೂ ಕೂಡ ಇದು ಭಾವಪೂರ್ಣ ಶ್ರದ್ಧಾಂಜಲಿಯ ಫೋಟೋ ಅಂತ ಅನಿಸುವುದಿಲ್ಲ ಬದಲಾಗಿ ಅಪ್ಪು ಅವರನ್ನು ನಾವು ಸ್ವಾಗತ ಮಾಡುತ್ತಿದ್ದೇನೆ ಎಂಬ ರೀತಿಯಲ್ಲಿ ಅನಿಸುತ್ತದೆ. ಆದರೂ ಕೂಡ ಅಪ್ಪು ಶಾರೀರಿಕವಾಗಿ ನಮ್ಮ ಜೊತೆ ಇಲ್ಲ ಎಂಬ ವಾಸ್ತವವನ್ನು ನಾವು ಅರಿತುಕೊಳ್ಳಲೇಬೇಕು. ನೆನ್ನೆಗೆ ಅಪ್ಪು ಆ.ಗ.ಲಿ ಒಂಬತ್ತು ತಿಂಗಳು ಈ ಕಾರಣಕ್ಕಾಗಿ ದೊಡ್ಡ ಮನೆಯ ಸದಸ್ಯರೆಲ್ಲರೂ ಕೂಡ ಕಂಠೀರವ ಸ್ಟುಡಿಯೋಗೆ ಹೋಗಿ ಅಪ್ಪು ಸ.ಮಾ.ಧಿ.ಗೆ ಪೂಜೆ ಸಲ್ಲಿಸಿ ಬಂದಿದ್ದಾರೆ.
ಅಶ್ವಿನಿ ಪುನೀತ್ ರಾಜಕುಮಾರ್ ಧೀರನ್ ರಾಮ್ ಕುಮಾರ್ ಯುವರಾಜ್ ಕುಮಾರ್ ರಾಘವೇಂದ್ರ ರಾಜಕುಮಾರ್ ಸೇರಿದಂತೆ ದೊಡ್ಡ ಮನೆಯ ಕುಟುಂಬಸ್ಥರೆಲ್ಲರೂ ಕೂಡ ಅಪ್ಪು ಅವರ ಸಮಾಧಿಗೆ ಭೇಟಿ ನೀಡಿ 9 ತಿಂಗಳ ವಿಧಿ ವಿಧಾನ ಕಾರ್ಯವನ್ನು ಮಾಡಿ ಮುಗಿಸಿದ್ದಾರೆ. ಇದರ ಜೊತೆಗೆ ಅಪ್ಪು ಅವರು ಆಹಾರಪ್ರಿಯರು ಹಾಗಾಗಿ ಅಪ್ಪು ಅವರ ಸಮಾಧಿ ಬಳಿ ಅವರಿಗೆ ಇಷ್ಟ ಆದ ತಿಂಡಿ ತಿನಿಸುಗಳನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ. ಈ ಸಮಯದಲ್ಲಿ ಅಶ್ವಿನಿ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಯಾರಿಗೆ ತಾನೇ ಕಣ್ಣೀರು ಬರುವುದಿಲ್ಲ ಹೇಳಿ ಅಪ್ಪು ಅವರು ನಮಗೆ ರಕ್ತ ಸಂಬಂಧ ಅಲ್ಲ ನಮ್ಮ ಸ್ನೇಹಿತನು ಅಲ್ಲ ಆದರೂ ಕೂಡ ಅವರನ್ನು ನಾವು ತೆರೆಯ ಮೇಲೆ ನೋಡಿದ ನಂತರ ನಮ್ಮ ಕುಟುಂಬಸ್ಥರಲ್ಲಿ ಒಬ್ಬರು ಅಂತ ಅಂದುಕೊಂಡು ಅವರ ಅಗಲಿಕೆಯ ದುಃಖವನ್ನು ಇನ್ನೂ ಕೂಡ ಅನುಭವಿಸುತ್ತಿದ್ದೇವೆ.
ನಮಗೆ ಇಷ್ಟು ನೋವಾಗುತ್ತಿದೆ ಅಂದಮೇಲೆ ಇನ್ನು ಅವರ ಕೈ ಹಿಡಿದು ಸುಮಾರು 20 ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿದಂತಹ ಅಶ್ವಿನಿ ಅವರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ನೀವೇ ಊಹೆ ಮಾಡಿ ನೋಡಿ. ಅಶ್ವಿನಿ ಅವರು ಗಟ್ಟಿಗಿತ್ತಿ ಹೆಂಗಸು ಎಂದು ಹೇಳಬಹುದು ಅಪ್ಪು ಅವರು ಇಲ್ಲದೇ ಇದ್ದರೂ ಕೂಡ ಎಲ್ಲ ಜವಾಬ್ದಾರಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರೆ. ಕಬ್ಬಿಣ ಎಷ್ಟೇ ಗಟ್ಟಿ ಇದ್ದರೂ ಕೂಡ ಕುಲುಮೆಗೆ ಹಾಕಿದಾಗ ಅದು ಬಾಗುತ್ತದೆ ಅದೇ ರೀತಿ ಅಶ್ವಿನಿ ಅವರು ಎಷ್ಟೇ ಗಟ್ಟಿ ಮನಸ್ಸು ಮಾಡಿಕೊಂಡರು ಕೂಡ ಕಂಠೀರವ ಸ್ಟುಡಿಯೋಗೆ ಹೋದಾಗ ಅವರ ಪತಿಯ ಸ.ಮಾ.ಧಿ.ಯನ್ನು ನೋಡಿದಾಗ ಕರಗಿ ಕಣ್ಣೀರಲ್ಲಿ ಮುಳುಗಿ ಹೋಗುತ್ತಾರೆ. ಈ ದುಃಖವನ್ನು ಬರಿಸುವಂತಹ ಶಕ್ತಿ ಆ ದೇವರು ಕುಟುಂಬಕ್ಕೆ ನೀಡಲಿ ಎಂಬುದಷ್ಟೇ ನಮ್ಮ ಆಶಯ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ದೇಹಕ್ಕೆ ಮಾತ್ರ ಸಾವು ಪರಮಾತ್ಮನಿಗೆ ಯಾವುದೇ ರೀತಿಯಾದಂತಹ ಸಾವು ಇಲ್ಲ ಅಪ್ಪು ನೀ ಎಂದೆಂದಿಗೂ ಅಮರ… ನಿಮ್ಮ ಮನದಾಳದ ಎರಡು ಮಾತುಗಳನ್ನು ನಿಮಗೆ ಕಮೆಂಟ್ ಮುಖಾಂತರ ತಿಳಿಸಿ, ಧನ್ಯವಾದಗಳು ಸ್ನೇಹಿತರೆ.