ಮೊದಲಿಗೆ ವೆರಿಕೋಸ್ ವೆನ್ಸ್ ಎಂದರೆ ಏನು ಎಂದು ತಿಳಿದುಕೊಳ್ಳಬೇಕು. ಎಲ್ಲರಿಗೂ ಗೊತ್ತಿರುವಂತೆ ಹೃದಯದಿಂದ ರಕ್ತ ನಾಳಗಳ ಮೂಲಕ ರಕ್ತವು ದೇಹದ ಎಲ್ಲಾ ಅಂಗಾಂಗ ಗಳಿಗೂ ಸಂಚಾರವಾಗುತ್ತದೆ. ಇದನ್ನು ಹೊತ್ತು ಸಾಗಿಸುವ ರಕ್ತನಾಳಗಳಿಗೆ ಅಪಧಮನಿಗಳು (Artery) ಎನ್ನುತ್ತಾರೆ.
ಹಾಗೆಯೇ ವಾಪಸ್ಸು ಹೃದಯಕ್ಕೆ ದೇಹದ ಎಲ್ಲಾ ಅಂಗಗಳಿಂದಲೂ ರಕ್ತವು ಅಭಿದಮನಿ (veins) ರಕ್ತನಾಳಗಳ ಮೂಲಕ ಪಂಪ್ ಆಗುತ್ತದೆ. ಈ ವೇನ್ಸ್ ಗಳು ಮೆದುಳಿನಿಂದ ಕಾಲಿನ ಪಾದದವರೆಗೂ ಕೂಡ ಇರುತ್ತವೆ. ಅದರಲ್ಲಿ ಕಾಲಿನ ನರಗಳಿಂದ ರಕ್ತ ಹೃದಯಕ್ಕೆ ಹೋಗುವಾಗ ಗುರುತ್ವಾಕರ್ಷಣೆಗೆ ವಿರುದ್ಧ ದಿಕ್ಕಿನಲ್ಲಿ ಹೋಗಬೇಕು ಈ ಕಾರ್ಯಕ್ಕೆ ಮೀನ ಖಂಡಗಳಲ್ಲಿರುವ ವಾಲ್ವ್ (valves) ಹಾಗೂ ಮಾಂಸ ಖಂಡಗಳು ಪ್ರೆಸ್ ಆಗಿ ಸಂಚಾರ ಸರಾಗ ಮಾಡಿಕೊಡುತ್ತವೆ.
ವಾಲ್ವ್ ಗಳು ವೀಕ್ ಆದಾಗ ರಕ್ತ ಸಂಚಾರವು ಹೃದಯದ ಕಡೆಗೆ ಹೋಗುವುದರ ಬದಲು ವಾಪಸ್ ಕಾಲಿನ ಕಡೆಗೆ ಹಿಮ್ಮುಖವಾಗಿ ಚಲನೆ ಆಗುತ್ತದೆ. ಆಗ ರಕ್ತನಾಳಗಳು ಉಬ್ಬಿಕೊಂಡು ಹಾವಿನ ಆಕಾರದಲ್ಲಿ ನೀಲಿ ಅಥವಾ ಹಸಿರು ಬಣ್ಣ ಕಟ್ಟುತ್ತದೆ. ಈ ಸಮಸ್ಯೆಗೆ ವೆರಿಕೋಸ್ ವೇನ್ಸ್ ಎನ್ನುತ್ತಾರೆ.
ವೆರಿಕೋಸ್ ವೇನ್ಸ್ ಆದಾಗ ಕಾಲಿನಲ್ಲಿ ವಿಪರೀತ ನೋ’ವು, ಸೆಳೆತ ಇರುತ್ತದೆ, ಕಾಲು ಭಾರವಾಗುತ್ತದೆ ಹಾಗೂ ಊದಿಕೊಳ್ಳುತ್ತದೆ, ಈ ಮೇಲೆ ತಿಳಿಸಿದಂತೆ ಕಾಲಿನ ರಕ್ತನಾಳಗಳು ಹಸಿರು ಅಥವಾ ನೀಲಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಆಂಕಲ್ ಜಾಯಿಂಟ್ ಗಳಲ್ಲಿ ಚರ್ಮದ ಬಣ್ಣ ಬದಲಾಗಿರುತ್ತದೆ, ಕಾಲಿನ್ನು ಯಾವ ರೀತಿ ಹಾಕಿಕೊಂಡರೂ ಸಮಾಧಾನ ಇರುವುದಿಲ್ಲ, ಇದನ್ನು ರೆಸ್ಟ್ ಲೆಸ್ ಲೆಗ್ ಅವಸ್ಥೆ ಎನ್ನುತ್ತಾರೆ ಕೆಲವರಿಗೆ ಕಾಲಿನಲ್ಲಿ ತುರಿಕೆ ಕೂಡ ಇರುತ್ತದೆ.
ಈ ಕಾಯಿಲೆ ಯಾರಿಗೆ ಹೆಚ್ಚಾಗಿ ಬರುತ್ತದೆ ಅಥವಾ ಬರಲು ಕಾರಣವೇನೆಂದರೆ ಯಾವಾಗಲೂ ಹೆಚ್ಚು ಹೊತ್ತು ನಿಂತುಕೊಂಡು ಕೆಲಸ ಮಾಡುವವರು, ಗರ್ಭಿಣಿ ಸ್ತ್ರೀಯರಿಗೆ ಹೊಟ್ಟೆ ಭಾಗ ದಪ್ಪವಾಗುವುದರಿಂದ ಮತ್ತು ಹಾರ್ಮೋನ್ ವೇರಿಯೇಶನ್ ನಿಂದ, ಮೆನೋಪಾಸ್ ಹಂತದಲ್ಲಿರುವ ಮಹಿಳೆಯರಿಗೆ ಹಾರ್ಮೋನ್ ವೇರಿಯೇಷನ್ ನಿಂದ, ದೇಹದ ತೂಕ ಹೆಚ್ಚಾಗುವುದರಿಂದ ಮತ್ತು ಅನುವಂಶಿಯವಾಗಿ ಕೂಡ ಈ ಕಾಯಿಲೆ ಬರುತ್ತದೆ.
ಅದರಲ್ಲೂ ಮಹಿಳೆಯರಿಗೆ ಬರುವ ಸಾಧ್ಯತೆ ಹೆಚ್ಚು ಇದನ್ನು ಆರಂಭದಲ್ಲಿಯೇ ಗುರುತಿಸಿ ಗುಣಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಸ್ಕಿನ್ ಅಲ್ಸರ್, ರಕ್ತ ಹೆಪ್ಪುಗಟ್ಟುವಿಕೆ, ಕಾಲು ಮರಗಟ್ಟುವಿಕೆ ಅಥವಾ ಕೆಲವರಿಗೆ ಇದು ಹೊಡೆದು ರಕ್ತ ಬರುವಂತಹ ಹಂತಕ್ಕೂ ತಲಪಬಹುದು ಹಾಗಾಗಿ ಆರಂಭಿಕ ಹಂತದಲ್ಲಿಯೇ ಇದನ್ನು ಗುರುತಿಸಿದರೆ ಸುಲಭವಾಗಿ ಮನೆಮದ್ದುಗಳಿಂದಲೇ ಪರಿಹಾರ ಮಾಡಿಕೊಳ್ಳಬಹುದು. ಸುಲಭವಾಗಿ ಈ ಸಮಸ್ಯೆಗಳನ್ನು ಪರಿಹರಿಸಬಹುದಾದ ಮನೆಮದ್ದುಗಳ ಮಾಹಿತಿ ಹೀಗಿದೆ ನೋಡಿ.
1. ಕಾಲಿಗೆ ವ್ಯಾಯಾಮ ನೀಡುವಂತಹ ಸ್ವಿಮ್ಮಿಂಗ್, ವಾಕಿಂಗ್ ಸೈಕಲಿಂಗ್ ರೂಢಿಸಿಕೊಳ್ಳಬೇಕು ಇದರಿಂದ ಕಾಲಿನ ರಕ್ತ ಸಂಚಾರ ಸುಗಮವಾಗುತ್ತದೆ.
* ಯೋಗಾಸನಗಳು ಕೂಡ ಬಹಳ ಪರಿಣಾಮಕಾರಿಯಾಗಿ ಪರಿಹಾರ ನೀಡುತ್ತದೆ. ಅದರಲ್ಲೂ ತಾಳಸನ, ಉತ್ಕಟಾಸನ, ಸರ್ವಂಗಾಸನ, ಪವನ ಮುಕ್ತಾಸನ ಇವುಗಳನ್ನು ಮಾಡುವುದು ಕೂಡ ಒಳ್ಳೆಯ ರಿಸಲ್ಟ್ ಕೊಡುತ್ತದೆ.
* ಬೆಳಗ್ಗೆ 10-20 ನಿಮಿಷ ಹಾಗೂ ಸಂಜೆ 10 ರಿಂದ 20 ನಿಮಿಷ ಕಾಲನ್ನು ಲಂಬವಾಗಿ ಇಟ್ಟುಕೊಳ್ಳಬೇಕು, ದಿಂಬುಗಳ ಸಹಾಯದಿಂದ L ಶೇಪ್ ನಲ್ಲಿ ಗೋಡೆಗಳಿಗೆ ಕಾಲನ್ನು ಒರಗಿಸಿ ಇಟ್ಟುಕೊಳ್ಳಬೇಕು ಅಥವಾ ಸರ್ವಾಂಗಾಸನದಲ್ಲಿ ಓರೆಯಾಗಿ ಇಟ್ಟುಕೊಳ್ಳಬೇಕು
* ಕಾಫ್ ಮತ್ತು ಹ್ಯಾಂಡ್ ಸ್ಪ್ರಿಂಗ್ ಸ್ಟ್ರೆಚಿಂಗ್ ಮಾಡುವುದರಿಂದ ತೊಡೆ ಹಾಗೂ ನೀಲಖಂಡಗಳ ಮಾಂಸ ಗಟ್ಟಿಯಾಗುತ್ತವೆ. ಇದರಿಂದ ರಕ್ತ ಸಂಚಾರಕ್ಕೆ ಇದ್ದ ತೊಡಕು ನಿವಾರಣೆ ಆಗುತ್ತದೆ.
* ದೇಹದ ತೂಕವನ್ನು ಉಳಿಸಿಕೊಳ್ಳುವುದು ಕೂಡ ಇದಕ್ಕೆ ಒಂದು ಉತ್ತಮ ಪರಿಹಾರ
* ಕಂಪ್ರೆಶನ್ ಸ್ಟಾಕಿಂಗ್ ಸಾಕ್ಸ್ ಗಳನ್ನು ಕೂಡ ಈ ಸಮಸ್ಯೆ ಪರಿಹಾರಕ್ಕಾಗಿ ಬಳಸಬಹುದು, ಇದರಲ್ಲಿ ಮೂರು ಬಗೆಯ ಸಾಕ್ಸ್ ಗಳು ಇರುತ್ತವೆ. ನಿಮ್ಮ ಸಮಸ್ಯೆ ಯಾವ ಪ್ರಮಾಣದಲ್ಲಿ ಇದೆ ಎನ್ನುವುದರ ಆಧಾರದ ಮೇಲೆ ವೈದ್ಯರ ಸಲಹೆ ಅಂತ ಇವುಗಳನ್ನು ಬಳಸಿ. ಬೆಳಿಗ್ಗೆ ಸ್ನಾನದ ತಕ್ಷಣ ಹಾಕಿ ನಂತರ ಮಲಗುವಾಗ ತೆಗಿಯಬೇಕು
* ಆಹಾರ ಪದ್ಧತಿಯನ್ನು ಸರಿ ಮಾಡಿಕೊಳ್ಳಬೇಕು , ಆಂಟಿ ಆಕ್ಸಿಡೆಂಟ್ ಅಂಡ್ ಇನ್ಫ್ಲಾಮೆಂಟರಿ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ
* ಉಪ್ಪಿನಾಂಶವನ್ನು ಕಡಿಮೆ ಮಾಡಿ ಅತಿ ಹೆಚ್ಚು ನೀರನ್ನು ಕುಡಿಯಬೇಕು
* ಹೆಚ್ಚು ಹೊತ್ತು ನಿಂತು ಕೆಲಸ ಮಾಡುವುದನ್ನು ಕಡಿಮೆ ಮಾಡಬೇಕು
* ಹೆಚ್ಚು ಹೊತ್ತು ಕುಳಿತಿರುವವರು ಕೂಡ ಆಗಾಗ ಬ್ರೇಕ್ ತೆಗೆದುಕೊಂಡು ಆಂಕಲ್ ಪಾಯಿಂಟ್ ಎಕ್ಸರ್ಸೈಜ್ ಮಾಡಬೇಕು
* ಲಾವೆಂಡರ್ ಎಣ್ಣೆಯನ್ನು ಕೊಬ್ಬರಿ ಎಣ್ಣೆ ಜೊತೆ ಹಚ್ಚುವುದರಿಂದ ಕೂಡ ಆರಂಭಿಕ ಹಂತದಲ್ಲಿರುವ ವೇರಿಕೋಸ್ ವೇನ್ಸ್ ಗುಣವಾಗುತ್ತದೆ.
* ಉತ್ತರಾಣಿ ಸೊಪ್ಪು ಕೂಡ ಇದಕ್ಕೆ ಉತ್ತಮ ಪರಿಹಾರ.