ಆಯುರ್ವೇದ ಎನ್ನುವುದು ನಮ್ಮ ನೆಲದ ಬೇರು ಎಂದು ಹೇಳಬಹುದು. ಆಯುರ್ವೇದದಲ್ಲಿ ಬಹಳ ಸ್ಪಷ್ಟವಾಗಿ ಮನುಷ್ಯನ ದೇಹಕ್ಕೆ ಯಾವ ಆಹಾರ ಪದಾರ್ಥಗಳು ಒಳ್ಳೆಯದು, ಯಾವುದು ಕೆಟ್ಟದ್ದು ಯಾವುದನ್ನು ಹೇಗೆ ಉಪಯೋಗಿಸಬೇಕು, ಯಾವ ರೀತಿಯ ದೇಹ ಪ್ರಕೃತಿ ಉಳ್ಳವರು ಯಾವುದನ್ನು ಎಷ್ಟು ಪ್ರಮಾಣದಲ್ಲಿ ಉಪಯೋಗಿಸಬೇಕು ಮತ್ತು ಯಾವ ಸಮಯದಲ್ಲಿ ಉಪಯೋಗಿಸಬೇಕು ಎನ್ನುವುದರ ವಿವರವನ್ನು ತಿಳಿಸಿದ್ದಾರೆ.
ನಮಗಿಂತ ನಮ್ಮ ಹಿರಿಯರಿಗೆ ಇವುಗಳು ಚೆನ್ನಾಗಿ ಗೊತ್ತಿದ್ದರಿಂದ ಯಾವುದೇ ಕಾಯಿಲೆ ಬಂದರೂ ಕೂಡ ಆಸ್ಪತ್ರೆಗೆ ಹೋಗದೆ ಮನೆಯಲ್ಲಿ ಮನೆ ಮದ್ದುಗಳನ್ನು ಮಾಡಿಕೊಂಡು ಅನಾರೋಗ್ಯ ಗುಣಪಡಿಸಿಕೊಳ್ಳುತ್ತಿದ್ದರು. ಆಗಿನ ಕಾಲದಲ್ಲಿ ಆಸ್ಪತ್ರೆಗಳು ಇಲ್ಲದೆ ಇದ್ದ ಸಂದರ್ಭದಲ್ಲಿಯೂ ಕೂಡ ಅನಾರೋಗ್ಯದಿಂದ ಸಾ’ವನ್ನಪ್ಪಿದ್ದವರ ಸಂಖ್ಯೆ ಬಹಳ ಕಡಿಮೆ.
ಆದರೆ ಇಂದು ನಾವು ಆಧುನಿಕ ಬದುಕಿನ ಓಟದಲ್ಲಿ ಆಹಾರದಲ್ಲಿನ ಮಹತ್ವವನ್ನೇ ಮರೆಯುತ್ತಿದ್ದೇವೆ ದೇಹವು ನಮ್ಮ ಉಸಿರಿರುವವರೆಗೂ ಕೂಡ ನಮ್ಮ ಜೊತೆ ಬರುವ ಸಂಗಾತಿಯಾಗಿದೆ. ಹಾಗಾಗಿ ನಮ್ಮ ದೇಹದ ಸೌಂದರ್ಯ ಮಾತ್ರವಲ್ಲದೇ ಆರೋಗ್ಯದ ಬಗ್ಗೆಯೂ ಕೂಡ ನಾವು ಕಾಳಜಿ ಮಾಡಬೇಕು. ಹಾಗಾಗಿ ಈ ದೇಹಕ್ಕೆ ಯಾವುದೇ ರೋಗಗಳು ತಾಕದಂತೆ ಇರಲು ಅದಕ್ಕೆ ಬೇಕಾದ ಪೂರಕ ಆಹಾರ ಪದಾರ್ಥಗಳನ್ನು ನಾವು ಕೊಟ್ಟು ಕಾಪಾಡಿಕೊಳ್ಳಬೇಕು.
ಆದರೆ ಇಂದು ಅಂತಹ ಪೌಷ್ಟಿಕಾಂಶಗುಣಗಳುಳ್ಳ ಆಹಾರಗಳನ್ನು ತಿನ್ನುವುದನ್ನೇ ಮರೆತಿದ್ದೇವೆ. ನಾಲಿಗೆಗೆ ರುಚಿ ಆಗುವುದನ್ನು ತಿಂದು ನಾನಾ ರೋಗಗಳಿಗೆ ದೇಹವನ್ನು ಗುರಿ ಪಡಿಸುತ್ತಿದ್ದೇವೆ. ಪ್ರತಿನಿತ್ಯವೂ ಕೂಡ ಆಹಾರದಲ್ಲಿ ಬಳಸಲೇಬೇಕಿದ್ದ ಕೆಲ ಪದಾರ್ಥಗಳನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟಿದ್ದೇವೆ ಆದ್ದರಿಂದಲೇ ದೇಹದ ಬ್ಯಾಲೆನ್ಸ್ ತಪ್ಪುತ್ತಿದೆ ಎಂದರೆ ತಪ್ಪಾಗಲಾರದು.
ಇಂತಹದ್ದೇ ಒಂದು ಮುಖ್ಯವಾದ ಆಹಾರ ಪದಾರ್ಥವಾದ ಬೆಳ್ಳುಳ್ಳಿಯ ಪ್ರಯೋಜನದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಬೆಳ್ಳುಳ್ಳಿಯ ಸೇವನೆಯಿಂದ ರಕ್ತದೊತ್ತಡ, ಕೊಲೆಸ್ಟ್ರಾಲ್, ಉಸಿರಾಟದ ಸಮಸ್ಯೆ, ಅಜೀರ್ಣ, ಹೊಟ್ಟೆ ಊದಿಕೊಳ್ಳುವುದು, ಟ್ರೈ ಗ್ಲಿಸರಿನ್, ಹೃದಯದ ಸಮಸ್ಯೆ ಇನ್ನು ಮುಂತಾದ ಸಮಸ್ಯೆಗಳು ಕಂಟ್ರೋಲ್ ಆಗುತ್ತವೆ.
ಬೆಳ್ಳುಳ್ಳಿಯನ್ನು ಆಯುರ್ವೇದದಲ್ಲಿ ಮೇಧ್ಯ ಎನ್ನುತ್ತಾನೆ ಹೀಗೆಂದರೆ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಅರ್ಥ ಹಾಗೆ ಹೃದಯದ ರಕ್ತನಾಳಗಳಲ್ಲಿ ಉಂಟಾಗುವ ಬ್ಲಾಕ್ ಗಳನ್ನು ಕ್ಲಿಯರ್ ಮಾಡಲು ಬೆಳ್ಳುಳ್ಳಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಗ್ಯಾಸ್ ಸಮಸ್ಯೆ ಇರುವವರಿಗೂ ಕೂಡ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಅದು ಕಂಟ್ರೋಲ್ ಗೆ ಬರುತ್ತದೆ.
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು,ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಆದರೆ ಇದು ಅಷ್ಟೇ ಉಷ್ಣಕಾರಿ ಪದಾರ್ಥವಾಗಿದೆ ಈ ಕಾರಣಕ್ಕಾಗಿ ಮತ್ತು ಇದನ್ನು ತಿಂದರೆ ಬಾಯಿ ವಾಸನೆ ಬರುತ್ತದೆ ಎನ್ನುವ ಕಾರಣಕ್ಕಾಗಿ ಅನೇಕರು ಇದನ್ನು ತಿನ್ನುವುದೇ ಇಲ್ಲ. ಇನ್ನು ಅನೇಕರಿಗೆ ಇದನ್ನು ಯಾವ ರೀತಿ ತಿನ್ನಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎನ್ನುವುದೇ ಗೊತ್ತಿಲ್ಲ.
ಬೆಳ್ಳುಳ್ಳಿಯಲ್ಲಿ ಎಲಿನ್ ಎನ್ನುವ ಕೆಮಿಕಲ್ ಇದೆ, ಬೆಳ್ಳುಳ್ಳಿಯನ್ನು ಹಾಗೆ ತಿನ್ನುವುದರಿಂದ ಪ್ರಯೋಜನವಿಲ್ಲ ಹಾಗಾಗಿ ಅದನ್ನು ಜಜ್ಜಿ ಹತ್ತರಿಂದ ಹದಿನೈದು ನಿಮಿಷ ಹಾಗೆ ಬಿಟ್ಟು ನಂತರ ತಿನ್ನಬೇಕು, ಇದರಿಂದ ಅದು ಎಲ್ಸಿನ್ ಬಿಡುಗಡೆ ಮಾಡುತ್ತದೆ ಅದು ಆರೋಗ್ಯಕ್ಕೆ ಪೂರಕ. ಹಾಗೆ ಒಂದು ದಿನದಲ್ಲಿ 6gm ನಷ್ಟು ಬೆಳ್ಳುಳ್ಳಿಯನ್ನು ತಿನ್ನಬೇಕು ಇದನ್ನು ಚೆನ್ನಾಗಿ ಜಗಿದು ನುಂಗಿದರೆ ಇನ್ನೂ ಒಳ್ಳೆಯದು.
ಊಟ ಮಾಡುವ ಮುಂದೆ ಈ ರೀತಿ ಮಾಡಿ ನಂತರ ಊಟ ಮಾಡಬೇಕು. ಈ ರೀತಿ ತಿನ್ನಲು ಆಗದಿದ್ದವರು ತುಪ್ಪ ಅಥವಾ ಬೆಣ್ಣೆಯಲ್ಲಿ ಇದನ್ನು ಉರಿದು ತಿನ್ನಬಹುದು. ಇದರ ಉಷ್ಣಗುಣದ ಬಗ್ಗೆ ಸಮಸ್ಯೆ ಇದ್ದರೆ ಈ ರೀತಿ ಬೆಳ್ಳುಳ್ಳಿಯನ್ನು ಸೇವನೆ ಮಾಡುವಾಗ ತುಪ್ಪ, ಬೆಣ್ಣೆ ಸೇವನೆ ಕೂಡ ಹೆಚ್ಚು ಮಾಡಿದರೆ ಇದು ಬ್ಯಾಲೆನ್ಸ್ ಆಗುತ್ತದೆ.