ಹಲ್ಲಿನ ಆರೋಗ್ಯವು ನಮ್ಮ ಸೌಂದರ್ಯವನ್ನು ವೃದ್ಧಿಸುತ್ತದೆ. ನಮ್ಮ ಹಲ್ಲುಗಳು ಚೆನ್ನಾಗಿ ಕಾಣದೆ ಇದ್ದರೆ ನಾವು ಮನಃಸ್ಪೂರ್ತಿಯಾಗಿ ನಗುವುದೇ ಇಲ್ಲ. ಇಷ್ಟರ ಮಟ್ಟಿಗೆ ನಮ್ಮ ಕಾನ್ಫಿಡೆನ್ಸ್ ನ್ನು ಕಡಿಮೆ ಮಾಡಿ ಮಾನಸಿಕವಾಗಿ ನಮಗೆ ಒತ್ತಡ ಕ್ರಿಯೇಟ್ ಮಾಡುವ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಆರೋಗ್ಯದ ದೃಷ್ಟಿಯಿಂದ ನೋಡುವುದಾದರೂ ಕೂಡ ಹಲ್ಲುಗಳ ಆರೋಗ್ಯ ಹಾಳಾದರೆ ಅದರ ತಡೆಯಲಾಗದ ನೋ’ವಿ’ನ ಜೊತೆ ಅದರ ಚಿಕಿತ್ಸೆಗೆ ತೆರಬೇಕಾದ ಮೊತ್ತವು ಕೂಡ ಹೆಚ್ಚಿನ ಹೊರೆ ಆಗಿರುವುದರಿಂದ ಹಲ್ಲುಗಳು ನಿರ್ಲಕ್ಷಿಸುವ ವಿಷಯವೇ ಅಲ್ಲ.
ನಮ್ಮ ಹಲ್ಲುಗಳ ಆರೋಗ್ಯ ಹಾಳಾಗುವುದಕ್ಕೆ ಹಾಗೂ ಅಂತಹ ಹಳದಿಯಾಗುವುದಕ್ಕೆ ಸಾಕಷ್ಟು ಕಾರಣಗಳಿವೆ. ಪ್ರಮುಖವಾಗಿ ಸರಿಯಾಗಿ ಹಲ್ಲುಗಳನ್ನು ಸ್ವಚ್ಛ ಮಾಡಿ ಕಾಳಜಿ ಮಾಡದೆ ಇರುವುದು, ಸಿಹಿ ಪದಾರ್ಥಗಳನ್ನು ಹೆಚ್ಚು ತಿನ್ನುವುದು, ಕಾಫಿ ಚಹಾ ಇವುಗಳ ಹೆಚ್ಚು ಸೇವನೆ , ತಂಬಾಕು ಗುಟ್ಕಾ, ಧೂಮಪಾನ ಇವುಗಳು ಕೂಡ ಹಲ್ಲಿನ ಅಂದವನ್ನು ಕೆಡಿಸುತ್ತವೆ.
ಹೀಗೆ ನಾನಾ ಕಾರಣಗಳಿಂದ ಹಳದಿ ಆಗುವ ಈ ಹಲ್ಲನ್ನು ಬಿಳಿ ಬಣ್ಣ ಮಾಡಿಕೊಳ್ಳಲು ಅನೇಕರು ದಂತ ವೈದ್ಯರ ಬಳಿ ಹೋಗುತ್ತಾರೆ. ನೀವು ಯಾವುದೇ ಡೆಂಟಲ್ ಕ್ಲಿನಿಕ್ ಗೆ ಹೋಗದೆ ನಿಮ್ಮ ಮನೆಯಲ್ಲಿ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡು ನಿಮ್ಮ ಹಲ್ಲಿಗೆ ಹಾಲಿನಂತೆ ಬಿಳುಪನ್ನು ತರಬಹುದು. ಅಂತಹ ಕೆಲವು ಟಿಪ್ ಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
* ಮೊದಲು 7 ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ, ಸ್ವಲ್ಪ ಪ್ರಮಾಣದ ಒಣಗಿದ ಕಿತ್ತಳೆ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ಕೂಡಾ ನುಣ್ಣಗೆ ಪುಡಿಮಾಡಿ. ಈಗ ಈ ಎರಡು ಪದಾರ್ಥಗಳನ್ನು ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನೇರವಾಗಿ ನಿಮ್ಮ ಹಲ್ಲುಗಳ ಮೇಲೆ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ಮಾಮೂಲಿಯಂತೆ ನೀರಿನಿಂದ ನಿಮ್ಮ ಬಾಯಿಯನ್ನು ತೊಳೆದರೆ ಹಲ್ಲುಗಳ ಪಳಪಳ ಎಂದು ಹೊಳೆಯುತ್ತವೆ. ನೀವು ದಿನದಲ್ಲಿ ಒಂದು ಬಾರಿ ಅಥವಾ ವಾರದಲ್ಲಿ ಹಲವಾರು ಬಾರಿ ಈ ಪರಿಹಾರವನ್ನು ಮಾಡಬಹುದು.
* ಅಡಿಗೆ ಸೋಡಾ ಕೂಡ ಹಳೆ ಹಳದಿ ಕಲೆ ತೆಗೆದು ಹಲ್ಲನ್ನು ಶೈನಿಂಗ್ ಮಾಡಲು ಒಂದು ಉತ್ತಮ ಔಷಧಿಯಾಗಿದೆ.
ಮೊದಲು 2 ಚಮಚ ಅಡಿಗೆ ಸೋಡಾವನ್ನು ತೆಗೆದುಕೊಂಡು ಅದನ್ನು ನೀರಿನೊಂದಿಗೆ ಬೆರೆಸಿ ದಪ್ಪನಾದ ಪೇಸ್ಟ್ ಮಾಡಿಕೊಳ್ಳಿ. ಈಗ ಆ ಪೇಸ್ಟ್ ಅನ್ನು ಹಲ್ಲುಗಳಿಗೆ ಹಚ್ಚಿ 5 ನಿಮಿಷಗಳ ಕಾಲ ಹಾಗೇ ಮಾಮೂಲಿ ನೀರಿನಲ್ಲಿ ನಿಮ್ಮ ಬಾಯಿಯನ್ನು ತೊಳೆಯಿರಿ. ಮುಖ್ಯವಾಗಿ ಈ ಒಂದು ಚಟುವಟಿಕೆಯನ್ನು ಪ್ರತಿ ದಿನ ರಾತ್ರಿ ಮಲಗುವ ಮುನ್ನ ಮಾಡುತ್ತಾ ಬಂದರೆ ಹಲ್ಲಿನಲ್ಲಿ ಇರುವ ಎಲ್ಲಾ ಕಲೆಗಳು ಮಾಯವಾಗುತ್ತವೆ.
* ಇದೇ ರೀತಿ ಉಪ್ಪು ಹಾಗೂ ನಿಂಬೆರಸದಿಂದ ಕೂಡ ಹಲ್ಲಿನ ಕಲೆಯನ್ನು ತೆಗೆಯಬಹುದು. ಮೊದಲು ಒಂದು ಚಮಚ ಉಪ್ಪನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ. ಈ ಮಿಶ್ರಣದಿಂದ ಹಲ್ಲುಜ್ಜಿದರೆ ಹಲ್ಲಿನಲ್ಲಿರುವ ಹಳದಿ ಕಲೆಯನ್ನು ಸುಲಭವಾಗಿ ಕ್ಲೀನ್ ಆಗಿ ಹಲ್ಲಿಗೆ ಶೈನಿಂಗ್ ಬರುತ್ತದೆ.
* ಆಪಲ್ ಸೈಡರ್ ವಿನೆಗರ್ ಅನ್ನು ಎರಡು ಚಮಚದಷ್ಟು ತೆಗೆದುಕೊಂಡು ಅದಕ್ಕೆ ಒಂದು ಲೋಟ ಬೆಚ್ಚಗಿರುವ ನೀರನ್ನು ಮಿಕ್ಸ್ ಮಾಡಿ ಆ ನೀರಿನಿಂದ ಚೆನಾಗಿ ಬಾಯಿಯನ್ನು ಮುಕ್ಕಳಿಸುತ್ತಾ ಬನ್ನಿ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಈ ಮನೆಮದ್ದನ್ನು ಅನುಸರಿಕೊಂಡು ನ್ಯಾಚುರಲ್ ಆಗಿ ಹಲ್ಲುಗಳು ಬೆಳ್ಳಗಾಗುತ್ತವೆ.