ಕೈ ಬೆರಳಿಗೆ ಉಂಗುರ ಹಾಕುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ರೂಢಿ. ಬೆರಳುಗಳಲ್ಲಿ ಕಿರುಬೆರಳು ಹಾಗೂ ಮಧ್ಯದ ಬೆರಳಿನ ನಡುವೆ ಇರುವ ಬೆರಳನ್ನು ಉಂಗುರದ ಬೆರಳು ಎಂದು ಕರೆಯಲಾಗುತ್ತದೆ. ಈ ಉಂಗುರದ ಬೆರಳಿಗೆ ಉಂಗುರ ಹಾಕಿದರೆ ಕೆಲವು ಸಂಪ್ರದಾಯಗಳಲ್ಲಿ ಮದುವೆ ಆದಂತೆ.
ಯಾಕೆಂದರೆ ಆ ಉಂಗುರದ ಬೆರಳಿನಲ್ಲಿರುವ ನರವು ನೇರವಾಗಿ ಹೃದಯಕ್ಕೆ ಸಂಪರ್ಕಿಸುತ್ತದೆ ಹಾಗಾಗಿ ಅದನ್ನು ಹಾರ್ಟ್ ಕನೆಕ್ಷನ್ ಎಂದು ಗೌರವಿಸಲಾಗುತ್ತದೆ. ಆದರೆ ಈಗ ಫ್ಯಾಷನ್ ಹೆಸರಿನಲ್ಲಿ ನಾವು ಎಲ್ಲಾ ಬೆರಳಿಗೂ ಉಂಗುರಗಳನ್ನು ಹಾಕುತ್ತಿದ್ದೇವೆ ಮತ್ತು ಇದುವರೆಗೂ ವಜ್ರದ ಹಾಗೂ ಬಂಗಾರದ ಉಂಗುರಗಳು ಹೆಚ್ಚು ವಿಶೇಷ ಎನಿಸುತ್ತಿದ್ದವು.
ಈಗ ಟ್ರೆಂಡ್ ಬದಲಾಗಿ ನಮ್ಮ ರಾಶಿ ನಕ್ಷತ್ರಕ್ಕೆ ತಕ್ಕ ಹರಳಿನ ಉಂಗುರಗಳು ಮತ್ತು ನಮ್ಮ ರಾಶಿಗೆ ತಕ್ಕ ಲೋಹದ ಉಂಗುರಗಳನ್ನು ಕೂಡ ಧರಿಸುತಿದ್ದೇವೆ. ಇವುಗಳಲ್ಲಿ ಎಲ್ದದಕ್ಕಿಂತ ಬೆಳ್ಳಿಯ ಉಂಗುರವನ್ನು ಧರಿಸುವುದು ಎಲ್ಲಕ್ಕಿಂತ ಹೆಚ್ಚು ಶ್ರೇಷ್ಠ. ಯಾಕೆ ಬೆಲ್ಲಿ ಉಂಗುರವನ್ನು ಧರಿಸಬೇಕು ಎನ್ನುವುದಕ್ಕೆ ಕೆಲ ಕಾರಣಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ಬೆಳ್ಳಿಯ ಉಂಗುರ ಧರಿಸುವುದರಿಂದ ಮನಸ್ಸಿನ ಚಂಚಲತೆ ದೂರ ಆಗುತ್ತದೆ ಮನಸ್ಸಿನಲ್ಲಿ ಸಕರಾತ್ಮಕ ಭಾವನೆಗಳು ಮೂಡುತ್ತವೆ.
* ಬೆಳ್ಳಿಯ ಉಂಗುರ ಧರಿಸುವುದರಿಂದ ಕೋ’ಪ ಕಂಟ್ರೋಲ್ ಗೆ ಬರುತ್ತದೆ, ಶಾರ್ಟ್ ಟೆಂಪರ್ ಇರುವವರು ಬೆಳಿಯ ಉಂಗುರವನ್ನು ಧರಿಸುವುದರಿಂದ ಅವರ ಸಿ’ಟ್ಟ’ನ್ನು ನಿಯಂತ್ರಣ ಮಾಡಬಹುದು
* ಬೆಳ್ಳಿಯ ಉಂಗುರ ಧರಿಸುವುದರಿಂದ ರಾಶಿ ಚಕ್ರದಲ್ಲಿ ಚಂದ್ರ ಮತ್ತು ಬುಧನು ಶಕ್ತಿಶಾಲಿ ಆಗುತ್ತಾನೆ. ಮನಸ್ಸಿನ ಕಾರಕನಾಗಿರುವ ಚಂದ್ರನು ಈ ಮೇಲೆ ತಿಳಿಸಿದಂತೆ ಮನಸ್ಸನ್ನು ತಿಳಿಗೊಳಿಸುವಂತಹ ಪರಿಣಾಮ ಉಂಟು ಮಾಡಿದರೆ ಬುಧ ಗ್ರಹ ಬುದ್ದಿಯ ದೇವತೆ ಎಂದು ಹೇಳಲಾಗುತ್ತದೆ. ಬುಧನ ಒಳ್ಳೆಯ ಪ್ರಭಾವದಿಂದ ಬುದ್ಧಿ ಚುರುಕಾಗುತ್ತದೆ, ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವವರು ಬೆಳ್ಳಿಯ ಉಂಗುರ ಧರಿಸಿದರೆ ಒಳ್ಳೆಯದು. ನಿಮ್ಮ ಆದಾಯ ಹೆಚ್ಚಿಸಿಕೊಳ್ಳುವುದಕ್ಕೆ ಬೆಳ್ಳಿಯ ಉಂಗುರವನ್ನು ಧರಿಸಬಹುದು.
* ಬೆಳ್ಳಿಯ ಉಂಗುರ ಧರಿಸುವುದರಿಂದ ಶಕ್ತಿದೇವತೆ ಪಾರ್ವತಿ ದೇವಿ ಮತ್ತು ಭಗವಂತನಾದ ಮಹಾದೇವನ ಆಶೀರ್ವಾದ ಕೂಡ ಸಿಗುತ್ತದೆ.ಬೆಳ್ಳಿಯನ್ನು ರಜ ಎಂದು ಕರೆಯುತ್ತಾರೆ.ಈ ರಜಸ್ಸು ಪಾರ್ವತಿ ದೇವಿಯಿಂದ ಉತ್ಪತ್ತಿಯಾಗಿರುತ್ತದೆ. ಒಂದು ವೇಳೆ ಬೆಳ್ಳಿಯ ಉಂಗುರ ಧರಿಸಿದರೆ ಅಸಾಧ್ಯವಾದ ಕಾರ್ಯಗಳನ್ನು ತಾಯಿ ಮಹಾಮಾಯೆಯ ಕೃಪಾಕಟಾಕ್ಷದಿಂದ ಮಾಡಬಹುದು.
* ಬೆಳ್ಳಿಯ ಉಂಗುರ ಧರಿಸಿದರೆ ದೈವಿಕ ಶಕ್ತಿ ಸಿದ್ದಿಗೊಳ್ಳುತ್ತದೆ.
* ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ನರದೌರ್ಬಲ್ಯದ ಸಮಸ್ಯೆ ದೂರ ಆಗುತ್ತದೆ. ಇದರಿಂದ ರಕ್ತಕ್ಕೆ ಸಂಬಂಧಿಸಿದ ರೋಗವನ್ನು ಕೂಡ ಕಂಟ್ರೋಲ್ ಆಗುತ್ತದೆ. ಹೆಣ್ಣು ಮಕ್ಕಳು ಕಾಲಿಗೆ ಬೆಳ್ಳಿಯ ಕಾಲುಂಗುರ ಧರಿಸುವುದರಿಂದ ಗರ್ಭಕೋಶಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನ್ಯಾಚುರಲ್ ಆಗಿ ಪರಿಹಾರ ಸಿಗುತ್ತದೆ
* ಬೆಳ್ಳಿಯ ಉಂಗುರ ಧರಿಸಿದಾಗ ಚಂದ್ರನು ಶಕ್ತಿಶಾಲಿ ಆದಾಗ ಮುಖದಲ್ಲಿ ಒಂದು ಹೊಳಪು ಬರುತ್ತದೆ. ಜನರನ್ನು ನಿಮ್ಮತ್ತ ಆಕರ್ಷಿಸುವ ಶಕ್ತಿ ಬೆಳ್ಳಗಿದೆ.
* ಬೆಳ್ಳಿಯನ್ನು ತಾಮ್ರ ಮತ್ತು ಚಿನ್ನದ ಜೊತೆ ಸೇರಿಸಿಕೊಂಡರೆ ಮನಸ್ಸು ಮತ್ತು ದೇಹದ ಆರೋಗ್ಯದ ಜೊತೆ ಸುಖ, ಶಾಂತಿ, ನೆಮ್ಮದಿ, ಸಂಪತ್ತು ತಾನಾಗೆ ಸಿಗಲು ಶುರು ಆಗುತ್ತವೆ.
* ಬೆಳ್ಳಿಯು ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು, ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಇದೆ. ಹಾಗಾಗಿ ಚಿಕ್ಕ ಮಕ್ಕಳಿಗೆ ಬೆಳ್ಳಿಯ ಬಟ್ಟಲು ಹಾಗೂ ಬೆಳ್ಳಿಯ ಚಮಚದಲ್ಲಿ ತಿನಿಸುತ್ತಾರೆ. ಆದರೆ ಬೆಳೆಯುತ್ತಾ ಹೋದಂತೆ ಅದನ್ನು ಬದಲಾಯಿಸಬೇಕು ಎನ್ನುವ ನಿಯಮ ಇಲ್ಲ. ದೊಡ್ಡವರದ ಮೇಲೆ ಅನುಕೂಲತೆ ಇಲ್ಲದವರು ಬೆಳ್ಳಿ ತಟ್ಟೆ ಖರೀದಿಸಲು ಆಗದಿದ್ದರೆ ಬೆಳ್ಳಿಯ ಉಂಗುರಗಳನ್ನು ಹಾಕಿಕೊಂಡು ಊಟ ಮಾಡುವುದರಿಂದ ಕೂಡ ಸಾಕಷ್ಟು ಆರೋಗ್ಯಕ್ಕೆ ಪೂರಕವಾದ ಅಂಶಗಳು ದೇಹಕ್ಕೆ ಸೇರುತ್ತವೆ.