ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬ ಗಾದೆ ಮಾತೇ ಇದೆ. ಈ ಮಾತು ಅಡುಗೆಗೆ ಉಪ್ಪು ಎಷ್ಟು ಮುಖ್ಯ ಎನ್ನುವುದನ್ನು ತಿಳಿಸುತ್ತದೆ. ಹಾಗಾಗಿ ಕೆಲವು ಕಡೆ ಉಪ್ಪನ್ನು ರುಚಿ ಎಂದು ಕೂಡ ಕರೆಯುತ್ತಾರೆ. ಉಪ್ಪು ಅಡುಗೆಗೆ ಮಾತ್ರವಲ್ಲ ಅದು ಆಯುರ್ವೇದದಲ್ಲಿ ಕೂಡ ಬಹಳ ಮಹತ್ವದ ಸ್ಥಾನ ಗಿಟ್ಟಿಸಿಕೊಂಡಿದೆ.
ಉಪ್ಪು ಅನೇಕ ಕಾಯಿಲೆಗಳಿಗೆ ಔಷಧಿಯೂ ಹೌದು ಇದಿಷ್ಟು ಮಾತ್ರವಲ್ಲದ ಜ್ಯೋತಿಷ್ಯ ಶಾಸ್ತ್ರದಲ್ಲೂ ಕೂಡ ಉಪ್ಪು ಬಹಳ ಮುಖ್ಯ. ಉಪ್ಪನ್ನು ತಾಯಿ ಮಹಾಲಕ್ಷ್ಮಿಗೆ ಹೋಲಿಸಲಾಗುತ್ತದೆ ಹಾಗಾಗಿ ಒಪ್ಪಿಗೆ ಎಲ್ಲರೂ ಬಹಳ ಗೌರವ ಕೊಡುತ್ತಾರೆ ಕೆಲವು ತಂತ್ರ ಶಕ್ತಿಗಳ ಬಳಕೆಗೆ ಉಪ್ಪನ್ನು ವಸ್ತುವಾಗಿ ಬಳಸುತ್ತಾರೆ.
ಯಾಕೆಂದರೆ ಉಪ್ಪಿಗೆ ಎಲ್ಲ ನಕಾರಾತ್ಮಕ ಶಕ್ತಿಗಳನ್ನು ತೊಡೆದು ಹಾಕುವ ಶಕ್ತಿ ಇದೆ, ಉಪ್ಪಿನ ಬಳಕೆ ಮಾನಸಿಕ ಒತ್ತಡವನ್ನು ಕುಟುಂಬಕ್ಕಾಗಿರುವ ದೃಷ್ಟಿ ದೋಷ, ವಾಸ್ತುದೋಷಗಳನ್ನು ಪರಿಹಾರ ಮಾಡುತ್ತದ.ೆ ಯಾವ ರೀತಿ ಉಪ್ಪಿನಿಂದ ಪ್ರಯೋಗಗಳನ್ನು ಮಾಡಿ ನಮ್ಮ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
1. ಮನೆಯಲ್ಲಿರುವ ಒಂದು ಗಾಜಿನ ಲೋಟ, ಅದರ ತುಂಬಾ ಉಪ್ಪು ಹಾಗೂ ಒಂದು ಕೆಂಪು ವಸ್ತ್ರವನ್ನು ತೆಗೆದುಕೊಂಡು ಒಂದು ದಿನ ಸಂಜೆ ಸಮಯ ಆ ಕೆಂಪು ವಸ್ತ್ರಕ್ಕೆ ಉಪ್ಪನ್ನು ಹಾಕಿ ಗಂಟು ಕಟ್ಟಿ ಮನೆಗೆ ದೃಷ್ಟಿ ತೆಗೆದು ಮನೆಯ ಮುಂಭಾಗಕ್ಕೆ ಕಟ್ಟಿದರೆ ಮನೆಯಲ್ಲಿರುವ ಎಲ್ಲ ನಕಾರತ್ಮಕ ಶಕ್ತಿಯನ್ನು ಸೆಳೆಯುತ್ತದೆ. ಮನೆಯ ಅಕ್ಕಪಕ್ಕ ನಕಾರಾತ್ಮಕ ಶಕ್ತಿಗಳ ಸಂಚಾರ ಇಟ್ಟರೆ ಅಥವಾ ಮನೆ ಮೇಲೆ ನಕಾರಾತ್ಮಕ ಪ್ರಭಾವಗಳು ಆಗಿದ್ದರೆ ಅದನ್ನು ಕೂಡ ಪರಿಹಾರ ಮಾಡುತ್ತದೆ. ಒಂದು ವಾರ ಆದ ನಂತರ ಆ ಉಪ್ಪಿನ ಗಂಟನ್ನು ಬಿಚ್ಚಿ ಯಾವುದಾದರೂ ಗಿಡದ ಬುಡಕ್ಕೆ ಅಥವಾ ಹರಿಯುವ ನೀರಿಗೆ ಹಾಕಬಹುದು.
2. ಮನೆಯಲ್ಲಿ ವಿನಾಕಾರಣ ಕ’ಲ’ಹ, ಮ’ನ’ಸ್ಥಾ’ಪಗಳು, ಇದ್ದಕ್ಕಿದ್ದಂತೆ ಜ’ಗ’ಳಗಳು ಇಂತಹ ವಾತಾವರಣ ಉಂಟಾಗಿದ್ದರೆ, ಚೆನ್ನಾಗಿದ್ದ ಸಂಸಾರದಲ್ಲಿ ಈ ರೀತಿ ಆಗಲು ನರ ದೃಷ್ಟಿಯೇ ಕಾರಣ ಆಗಿರುತ್ತದೆ. ಹಾಗಾಗಿ ಆ ದೃಷ್ಟಿ ದೋಷ ನಿವಾರಣೆಗೆ ಮತ್ತು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳ ನಿವಾರಣೆಗೆ ಯಾವಾಗಲೂ ಮನೆಯನ್ನು ಒರೆಸುವಾಗ ನೀರಿಗೆ ಚಿಟಿಕೆ ಅರಿಶಿಣದ ಜೊತೆ ಒಂದು ಹಿಡಿ ಉಪ್ಪನ್ನು ಹಾಕಿಕೊಂಡು ಮನೆಯನ್ನು ಒರೆಸಬೇಕು ಆಗ ದೋಷಗಳು ಪರಿಹಾರವಾಗುತ್ತದೆ.
3. ಮನೆಯಲ್ಲಿ ಹಣಕಾಸಿನ ಕೊರತೆ ಇದ್ದರೆ, ಕೈಗೆ ಬಂದ ಹಣ ಉಳಿಯುತ್ತಿಲ್ಲ ಎಂದರೆ, ಸಾಲಬಾಧೆಗಳು ಹೆಚ್ಚಾಗಿದ್ದರೆ, ಯಾವ ಕೆಲಸವು ಕೈಗೂಡುತ್ತಿಲ್ಲ ಎನ್ನುವುದಾದರೆ ಈ ಸಮಸ್ಯೆ ಪರಿಹಾರವಾಗಿ ನಿಮ್ಮ ಆರ್ಥಿಕ ಅಭಿವೃದ್ಧಿಯಾಗಲು ಮತ್ತು ನಿಮ್ಮ ಕಡೆಗೆ ಹಣದ ಆಕರ್ಷಣೆ ಹೆಚ್ಚಾಗಲು ಉಪ್ಪಿನಿಂದ ಮತ್ತೊಂದು ಪ್ರಯೋಗವನ್ನು ಮಾಡಬಹುದು.
ಆದರೆ ಇದನ್ನು ಯಾರು ಕೂಡ ನೋಡಬಾರದು ಮನೆಯಲ್ಲಿ ಗೃಹಿಣಿ ಒಂದು ದಿನ ಮನೆಯನ್ನು ಸ್ವಚ್ಛ ಮಾಡಿ ನಿಮ್ಮ ಮನೆ ದೇವರನ್ನು ಪ್ರಾರ್ಥನೆ ಮಾಡಿ ಹಾಗೆಯೇ ಹಣದ ದೇವತೆಯಾದ ಶ್ರೀ ಮಹಾಲಕ್ಷ್ಮಿಯನ್ನು ಜೊತೆಗೆ ನಾರಾಯಣನನ್ನು ಮನಸಾರೆ ಪ್ರಾರ್ಥಿಸಿ ಬಳಿಕ ಸಂಜೆ ಸಮಯ ಗಾಜಿನ ಬಟ್ಟಲು ಅಥವಾ ಲೋಟದಲ್ಲಿ ಅರ್ಧ ಭಾಗ ಉಪ್ಪನ್ನು ತುಂಬಿಸಿ ಆ ಉಪ್ಪನ್ನು ಮನೆಯ ಮೂಲೆ ಮೂಲೆಗೂ ಹಿಡಿದುಕೊಂಡು ಓಡಾಡಬೇಕು, ಬಳಿಕ ಅದನ್ನು ತಂದು ಹಣ ಇಡುಲವ ಬೀರುವಿನ ಕೆಳಗೆ ಇಡಬೇಕು.
ಇದನ್ನು ಯಾರು ಕೂಡ ನೋಡಬಾರದು ಮತ್ತು ಇದು ಯಾರಿಗೂ ಕಾಣದ ರೀತಿ ನೋಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಬಹಳ ಉತ್ತಮ ಪರಿಣಾಮ ಬೀರುತ್ತದೆ. ಒಂದು ವಾರದ ಬಳಿಕ ಇದನ್ನು ತುಳಸಿ ಗಿಡದ ಬಳಿ ಅಥವಾ ಯಾವುದಾದರೂ ಗಿಡದ ಬಳಿ ಹಾಕಿ ಅಥವಾ ಯಾರು ತುಳಿಯದ ಜಾಗದಲ್ಲಿ ಹಾಕಿ ಬಳಿಕ ಮತ್ತೊಮ್ಮೆ ಇದೇ ಪ್ರಯೋಗವನ್ನು ನಿಮಗೆ ಎಷ್ಟು ದಿನ ಸಾಧ್ಯ ಅಷ್ಟು ದಿನ ಮುಂದುವರಿಸಿದರೆ ನಿಮ್ಮ ಆರ್ಥಿಕ ಸಮಸ್ಯೆ ಸುಧಾರಿಸುತ್ತದೆ.