ಮಹಿಳೆಯರು ಮತ್ತು ಪುರುಷರು ಇಬ್ಬರು ಕೂಡ ಅಧಿಕವಾದಂತಹ ನೀರನ್ನು ಸೇವನೆ ಮಾಡಬೇಕು. ಹೌದು ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ನೀರಿನ ಅವಶ್ಯಕತೆ ಅಧಿಕವಾಗಿ ಇರುವುದರಿಂದ ಪ್ರತಿಯೊಬ್ಬರೂ ಕೂಡ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ಹೌದು ಆರೋಗ್ಯದ ದೃಷ್ಟಿಯಿಂದ ಅಧಿಕವಾದ ನೀರಿನ ಸೇವನೆ ತುಂಬಾ ಒಳ್ಳೆಯದು ಎಂದು ವೈದ್ಯರು ಕೂಡ ಹೇಳುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಸರಿ ಸುಮಾರು 70ರಷ್ಟು ನೀರಿನ ಅಂಶವಿದ್ದು ಇದರಿಂದಲೇ ನಮ್ಮ ದೇಹ ಸಂಪೂರ್ಣವಾಗಿ ಆರೋಗ್ಯವಾಗಿರುತ್ತದೆ ಎಂದೇ ತಿಳಿಸಿದ್ದಾರೆ.
ಆದರೆ ಕೆಲವೊಂದಷ್ಟು ಜನ ಹೆಚ್ಚಿನ ಪ್ರಮಾಣದ ನೀರನ್ನು ಸೇವನೆ ಮಾಡುವುದಿಲ್ಲ ಇದರಿಂದ ಅವರು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಎಂದೇ ಹೇಳಬಹುದು. ಹೌದು ನಾವು ಹೆಚ್ಚಾಗಿ ನೀರನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿರುವಂತಹ ಎಲ್ಲಾ ಕೆಟ್ಟ ಅಂಶವು ಸಹ ಮಲಮೂತ್ರದ ಮೂಲಕ ಆಚೆ ಹೋಗುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಹೆಚ್ಚಿನ ಪ್ರಮಾಣದ ನೀರನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯರು ಮತ್ತು ಪುರುಷರು ಎಷ್ಟು ಪ್ರಮಾಣದ ನೀರನ್ನು ಸೇವನೆ ಮಾಡಬೇಕು ಹಾಗು ಅದು ಅವರಿಗೆ ಹೇಗೆ ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.
* ಗ್ಯಾಸ್ ಎದೆಯುರಿ ಸಮಸ್ಯೆಯನ್ನು ಕಡಿಮೆ ಮಾಡಲು ಹೆಚ್ಚು ನೀರು ಸೇವಿಸಿ ಸಾಕಷ್ಟು ನೀರು ದೇಹವನ್ನು ಪ್ರವೇಶಿಸಿದರೆ, ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ. ಹೀಗಾಗಿ ಅನೇಕ ರೋಗಗಳನ್ನು ನೀರು ದೂರ ಮಾಡಲು ಸಹಾಯಕವಾಗಿದೆ.
* ಜೀವಿಗಳ ಉಳಿವಿಗೆ ನೀರು ಅತ್ಯಗತ್ಯ. ಬಾಯಾರಿಕೆಯಾದಾಗಲೆಲ್ಲಾ ನೀರು ಕುಡಿಯುವುದು ಬಹಳ ಸಹಜವಾಗಿದೆ. ಆದರೆ ವಯಸ್ಕರು ಎಷ್ಟು ಲೋಟ ನೀರು ಕುಡಿಯಬೇಕು ಎಂದು ನಿಮಗೆ ತಿಳಿದಿದೆಯೇ.
* ಅನೇಕ ಆರೋಗ್ಯ ತಜ್ಞರ ಪ್ರಕಾರ, ಚಯಾಪಚಯ, ತೂಕ, ಎತ್ತರ ಮತ್ತು ಚರ್ಮಕ್ಕಾಗಿ ದಿನಕ್ಕೆ 6 ರಿಂದ 7 ಲೋಟ ನೀರು ಕುಡಿಯಲು ಶಿಫಾರಸು ಮಾಡಲಾಗುತ್ತದೆ. ಇದು ಚರ್ಮವನ್ನು ಪ್ರಕಾಶಮಾನವಾಗಿ ಮತ್ತು ಆರೋಗ್ಯಕರವಾಗಿಸುತ್ತದೆ.
* ಯಾವುದೇ ಆಹಾರವನ್ನು ಸೇವಿಸಿದ ತಕ್ಷಣವೇ ನೀರು ಕುಡಿಯುವುದು ತುಂಬಾ ಅನಾರೋಗ್ಯಕರವಾಗಿರುತ್ತದೆ. ದಿನಕ್ಕೆ 6 ರಿಂದ 8 ಲೋಟ ನೀರು ಕುಡಿಯಲು ಶಿಫಾರಸು ಮಾಡಲಾಗಿದೆ. ಆದರೆ ಹೆಚ್ಚು ನೀರು ಕುಡಿಯುವುದರಿಂದ ರೋಗಗಳು ಬರುವುದಿಲ್ಲ ಎಂದು ಇಲ್ಲಿ ಯಾವುದೇ ಉಲ್ಲೇಖವಿಲ್ಲ.
* ಅಷ್ಟೇ ಅಲ್ಲದೆ, ಮೆದುಳು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯ ಕರವಾಗಿರಿಸುತ್ತದೆ. ಮೊದಲೇ ಹೇಳಿದಂತೆ ನಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶವಿದ್ದು ಅದಕ್ಕೂ ಹೆಚ್ಚಾಗಿ ನೀರನ್ನು ಸೇವನೆ ಮಾಡುವುದರಿಂದ ಕೆಲವೊಂದಷ್ಟು ಸಮಸ್ಯೆ ಉಂಟಾಗುತ್ತದೆ. ಹೌದು ಹೆಚ್ಚಾಗಿ ನೀರನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಸೋಡಿಯಂ ಅಂಶ ಕಡಿಮೆಯಾಗುವುದು.
ಇದರಿಂದ ಹೈಪೊನೇಟ್ರಿಮಿಯಾದಂತಹ ಸಮಸ್ಯೆಯೂ ಕಂಡು ಬರುವುದು. ಇದರಿಂದ ಮೈ ಊದಿಕೊಳ್ಳುವುದು, ತಲೆಸುತ್ತು, ವಾಂತಿ ಈ ರೀತಿಯ ಸಮಸ್ಯೆಗಳು ಕಂಡು ಬರುವುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ಮೇಲೆ ಹೇಳಿದಂತೆ ಈ ಒಂದು ವಿಧಾನದಲ್ಲಿ ನೀರನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು. ಇಲ್ಲವಾದಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ವಿಚಾರಗಳನ್ನು ತಿಳಿದು ಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.