ನವೀನ್ ಸಜ್ಜು ಅವರು ಸದ್ಯಕ್ಕೆ ಕನ್ನಡದ ಹೆಸರಾಂತ ಗಾಯಕ. ಜಾನಪದ ಹಾಡುಗಾರಿಕೆ ಮೂಲಕ ಖ್ಯಾತಿಗಳಿಸಿದ ನವೀನ್ ಸಜ್ಜು ಅವರು ಅವರ ಅದ್ಭುತವಾದ ಕಂಚಿನ ಕಂಠದಿಂದ ಕನ್ನಡದಲ್ಲಿ ಬಹು ಬೇಡಿಕೆಯ ಗಾಯಕ ಆಗಿದ್ದಾರೆ. ತುಂಬಾ ಡೀಪ್ ಬೇಸ್ ವಾಯ್ಸ್ ಹೊಂದಿರುವ ಇವರ ಕಂಠವು ಅಶ್ವತ್ ಅವರ ಕಂಠವನ್ನೇ ಹೋಲುತ್ತದೆ ಎನ್ನುವುದು ಹಲವರ ಅಭಿಪ್ರಾಯ. ಈಗಾಗಲೇ ಕನ್ನಡದಲ್ಲಿ ಹಲವಾರು ಹಾಡುಗಳನ್ನು ಹಾಡಿರುವ ನವೀನ್ ಸಜ್ಜು ಅವರು ಸಿನಿಮಾಗಳಲ್ಲಿ ಹಾಡಲು ಅವಕಾಶ ಪಡೆದುಕೊಂಡ ಕಥೆಯೇ ಒಂದು ರೋಚಕ. ಪೂರ್ಣ ಅವರ ಗರಡಿಯಲ್ಲಿ ಪಳಗಿದ ಈ ಪ್ರತಿಭೆ ಮೊದಲಿಗೆ ಲೂಸಿಯ ಎನ್ನುವ ಸಿನಿಮಾದಲ್ಲಿ ಹಾಡಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದರು. ಲೂಸಿಯ ಸಿನಿಮಾದ ಸಕ್ಸಸ್ಸಿನ ನಂತರ ನಂತರ ನಡೆದದ್ದೆಲ್ಲ ಇತಿಹಾಸವೇ ಆಯಿತು ಎನ್ನಬಹುದು. ಈಗ ಕನ್ನಡ ಸೊಡಗಿನ ಹೆಮ್ಮೆಯ ಗಾಯಕ ನವೀನ್ ಸಜ್ಜು ಅವರು.
ಲೂಸಿಯಾ ಸಿನಿಮಾದ ಬಹುತೇಕ ಹಾಡುಗಳನ್ನು ನವೀನ್ ಸಜ್ಜು ಅವರೇ ಹಾಡಿದ್ದಾರೆ ಹಾಗೂ ಈ ಸಿನಿಮಾದ ಹಾಡುಗಳ ಗಾಯನಕ್ಕೆ ಹಲವಾರು ಪ್ರಶಸ್ತಿಗಳು ಕೂಡ ಇವರಿಗೆ ಸಂದಿವೆ. ಆದರೆ ಈ ಸಿನಿಮಾದಲ್ಲಿ ಇವರನ್ನು ಹಾಡಿಸಲು ಪೂರ್ಣ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನವೀನ್ ಸಜ್ಜು ಅವರು ಹಳ್ಳಿಯ ಪ್ರತಿಭೆ ಗ್ರಾಮೀಣ ಭಾಷಾ ಜ್ಞಾನ ಮಾತ್ರ ಅವರಿಗೆ ಇತ್ತು. ಸ್ಪಷ್ಟ ಕನ್ನಡ ಉಚ್ಚಾರಣೆಗೆ ತುಂಬಾ ಕಷ್ಟಪಡುತ್ತಿದ್ದರು ಆರ್ಕೆಸ್ಟ್ರಾ ಒಂದರಲ್ಲಿ ಇವರು ಹಾಡುವುದನ್ನು ಕೇಳಿ ಇವರ ಕಂಠಕ್ಕೆ ಮಾರುಹೋದ ಪೂರ್ಣ ಅವರು ಇವರನ್ನು ಕರೆತಂದು ತಮ್ಮ ಮನೆಯಲ್ಲಿ ಇಟ್ಟುಕೊಂಡು ಪ್ರತಿನಿತ್ಯ ಕೂಡ ಕನ್ನಡದ ಕಠಿಣ ಪದಗಳನ್ನು ಬರೆದು ಅದನ್ನು ಓದಲು ಹೇಳುತ್ತಿದ್ದರಂತೆ. ಹಾಗೂ ಹಲವು ದಿನಗಳ ವರೆಗೆ ಕನ್ನಡ ದಿನಪತ್ರಿಕೆಗಳನ್ನು ಓದಿಸಿ ನಂತರ ಅವರು ಸ್ಪಷ್ಟವಾಗಿ ಕನ್ನಡ ಮಾತನಾಡುವುದನ್ನು ಅರಿತ ಮೇಲೆ ಇವರಿಂದ ಲೂಸಿಯ ಸಿನಿಮಾದ ಹಾಡುಗಳನ್ನು ಪ್ರಾಕ್ಟೀಸ್ ಮಾಡಿಸಿ ನಂತರ ಸಿನಿಮಾಗಾಗಿ ಹಾಡಿಸಲಾಯಿತಂತೆ.
ಇಂದು ಈ ಶ್ರಮಕ್ಕೆಲ್ಲಾ ಫಲಸಂದಿದೆ ಎನ್ನಬಹುದು. ಲೂಸಿಯಾ ಸಿನಿಮಾದ ಹಾಡುಗಳು ಸಿನಿಮಾಕ್ಕೆ ಹತ್ತು ವರ್ಷಗಳೇ ಕಳೆದಿದ್ದರೂ ಕೂಡ ಈಗಲೂ ಈ ಹಾಡುಗಳು ಎವರ್ಗ್ರೀನ್ ಹಾಡುಗಳಾಗಿ ಕೇಳುಗರಿಗೆ ಮುದ ನೀಡುತ್ತವೆ . ಮತ್ತೊಂದು ಹೆಮ್ಮೆಯ ವಿಚಾರ ಎಂದರೆ ಪೂರ್ಣ ಅವರ ಆ ಕಠಿಣ ಪರಿಶ್ರಮದಿಂದ ಇಂದು ಕರ್ನಾಟಕಕ್ಕೆ ಮತ್ತೊಬ್ಬ ಅಶ್ವತ್ ಅವರು ಸಿಕ್ಕ ಸಮಾಧಾನ ಇದೆ. ಇದಾದ ಬಳಿಕ ಕನ್ನಡಿಗರು ಅವರ ಕಂಠವನ್ನು ಮಾತ್ರ ಕೇಳುತ್ತಿದ್ದರು. ಆದರೆ ನವೀನ್ ಸಜ್ಜು ಎಂದರೆ ಏನು ಅವರ ವ್ಯಕ್ತಿತ್ವ ಏನು ಎನ್ನುವುದನ್ನು ಬಿಗ್ ಬಾಸ್ ಸೀಸನ್ 6ರಲ್ಲಿ ತಿಳಿದುಕೊಂಡರು. ಬಿಗ್ ಬಾಸ್ ಸೀಸನ್ ಆರರಲ್ಲಿ ರನ್ನರ್ ಅಪ್ ಆಗಿ ನವೀನ್ ಸಜ್ಜು ಹೊರಹೊಮ್ಮಿದರು ಕೂಡ ಮನೆಯಲ್ಲಿ ಇದ್ದಷ್ಟು ದಿನ ಎಲ್ಲರಿಗೂ ತುಂಬಾ ಇಷ್ಟವಾಗಿದ್ದರು. ಇದೀಗ ಇವರು ಹೊಸ ಮನೆ ಖರೀದಿಸಿದ ಸಂತಸದಲ್ಲಿದ್ದಾರೆ.
ಮೂಲತಃ ಮೈಸೂರಿನವರೇ ಆದ ಇವರು ಮೈಸೂರಿನಲ್ಲಿ ಮನೆಯೊಂದನ್ನು ಖರೀದಿಸಿ ಅದಕ್ಕೆ ಪ್ರೀತಿಯಿಂದ ಮಾನಸು ಎಂದು ಹೆಸರಿಟ್ಟಿದ್ದಾರೆ. ಈ ಹೆಸರನ್ನು ಇವರೇ ಸೆಲೆಕ್ಟ್ ಮಾಡಿದ್ದಂತೆ ಕಾರಣ ಮಾ ಎಂದರೆ ಇವರ ತಂದೆ ಹೆಸರು ಮಾದೇಗೌಡ ನ ಎಂದರೆ ನವೀನ್ ಸು ಎಂದರೆ ಸುಮಿತ್ರಾ ಇದು ಅವರ ತಾಯಿಯ ಹೆಸರು. ಹೀಗೆ ಮೂರು ಜನರ ಹೆಸರಿನ ಮೊದಲ ಅಕ್ಷರವನ್ನು ಸೇರಿಸಿ ಮಾನಸು ಎಂಬ ಹೆಸರು ಇಟ್ಟಿದ್ದಾರೆ. ಮತ್ತು ಇವರ ಮನೆಯ ಗೃಹಪ್ರವೇಶದಲ್ಲಿ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ ಹಾಗೂ ಬಿಗ್ ಬಾಸ್ ಮನೆಯಲ್ಲಿ ಇವರಿಗೆ ಸ್ನೇಹಿತೆಯಾದ ಅಕ್ಷತಾ ಪಾಂಡವಪುರ ಕೂಡ ಈ ಕಾರ್ಯಕ್ರಮಕ್ಕೆ ಹೋಗಿ ಶುಭ ಹಾರೈಸಿದ್ದಾರೆ.