Home Entertainment ಹೊಸ ಮನೆ ಕಟ್ಟುವ ಸಂಭ್ರಮದಲ್ಲಿದ್ದರೆ ಅನುಶ್ರೀ ಎಷ್ಟು ಕೋಟಿ ವೆಚ್ಚದಲ್ಲಿ ಈ ಮನೆ ನಿರ್ಮಾಣವಾಗಲಿದೆ ಗೊತ್ತ.?

ಹೊಸ ಮನೆ ಕಟ್ಟುವ ಸಂಭ್ರಮದಲ್ಲಿದ್ದರೆ ಅನುಶ್ರೀ ಎಷ್ಟು ಕೋಟಿ ವೆಚ್ಚದಲ್ಲಿ ಈ ಮನೆ ನಿರ್ಮಾಣವಾಗಲಿದೆ ಗೊತ್ತ.?

0
ಹೊಸ ಮನೆ ಕಟ್ಟುವ ಸಂಭ್ರಮದಲ್ಲಿದ್ದರೆ ಅನುಶ್ರೀ ಎಷ್ಟು ಕೋಟಿ ವೆಚ್ಚದಲ್ಲಿ ಈ ಮನೆ ನಿರ್ಮಾಣವಾಗಲಿದೆ ಗೊತ್ತ.?

ಆಂಕರ್ ಅನುಶ್ರೀ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಪಟ ಪಟ ಎಂದು ಹರುಳು ಉರಿದಂತೆ ಕನ್ನಡ ಮಾತನಾಡುವ ಯಾವುದೇ ಕಾರ್ಯಕ್ರಮ ಆದರೂ ಕೂಡ ತನ್ನ ವಾಕ್ಚಾತುರ್ಯದಿಂದ ಎಲ್ಲವನ್ನು ನಿಭಾಯಿಸುವ ಕಾರ್ಯಕ್ರಮದ ಪೂರ್ತಿ ನಗುಮುಖದಿಂದ ಕೂಡಿದ್ದು ಎಲ್ಲರನ್ನು ನಗಿಸುತ್ತ ಚಟುವಟಿಕೆಯಿಂದ ನಡೆಸಿಕೊಡುವ, ಆಂಕರ್ ಎಂದರೆ ಹೀಗಿರಬೇಕು ಎಂದು ಎಲ್ಲರಿಂದ ಶಭಾಷ್ ಗಿರಿ ಗಿಟ್ಟಿಸಿಕೊಳ್ಳುವ ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಬಹಳ ಬೇಡಿಕೆ ಇರುವ ಆಂಕರ್ ಆಗಿದ್ದಾರೆ ಇವರು. ಬಹಳ ಕಷ್ಟ ಜೀವನವನ್ನು ಕಂಡಿರುವ ಇವರು ಬಾಲ್ಯದಿಂದಲೇ ಹಲವಾರು ಏರುಪೇರುಗಳನ್ನು ನೋಡಿಕೊಂಡು ಬೆಳೆದಿದ್ದಾರೆ. ಚಿಕ್ಕ ವಯಸ್ಸಿಗೆ ತಂದೆಯಿಂದ ಬೇರ್ಪಟ್ಟ ಅನುಶ್ರೀ ಅವರು ಒಂದು ಮಟ್ಟದಲ್ಲಿ ಆಗಿನಿಂದಲೂ ಕುಟುಂಬದ ಜವಾಬ್ದಾರಿ ಹೊತ್ತಿದ್ದಾರೆ ಎನ್ನಬಹುದು. ತನಗೆ ಸಮಯ ಸಿಕ್ಕಾಗಲೆಲ್ಲಾ ಯಾವುದಾದರು ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡು ಅಮ್ಮನಿಗೆ ಮನೆ ನಿರ್ವಹಿಸಲು ಸಹಾಯ ಮಾಡುತ್ತಿದ್ದ ಅನುಶ್ರೀ ಅವರು ಜೀವನ ಸಾಗಿಸಲು ಹಲವಾರು ವೃತ್ತಿಗಳನ್ನು ಮಾಡಿದ್ದಾರೆ.

ಆದರೆ ತಾನೊಬ್ಬ ನಿರೂಪಕಿ ಆಗಬೇಕು ಎನ್ನುವುದು ಅವರ ಮಹಾದಾಸೆ ಆಗಿತ್ತು. ನಂತರ ಮಂಗಳೂರಿನ ಖಾಸಗಿ ಚಾನೆಲ್ ಒಂದು ಸೇರಿಕೊಂಡ ಅನುಶ್ರೀ ಅವರು ಅಂದಿನಿಂದ ನಿರೂಪಕಿಯಾಗಿ ಕೆಲಸ ಮಾಡಲು ಶುರು ಮಾಡಿದರು. ನಂತರ ನಡೆದದ್ದೆಲ್ಲ ಇತಿಹಾಸವೇ ಆಯಿತು. ಬಳಿಕ ಕಸ್ತೂರಿ ವಾಹಿನಿಯಲ್ಲಿ ಇವರು ಆಂಕರ್ ಆಗಲು ಸೆಲೆಕ್ಟ್ ಆದರೂ ಅದಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಇವರು ಈ ಟಿವಿಯ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡು ಕಾರ್ಯಕ್ರಮದ ಮೂಲಕ ಎಲ್ಲರ ಮನೆ ಮಾತಾದರು. ಅಲ್ಲದೆ ಅದೇ ಸಮಯಕ್ಕೆ ಇವರಿಗೆ ಬಿಗ್ ಬಾಸ್ ಸೀಸನ್ 1 ಅಲ್ಲಿ ಕಂಟೆಸ್ಟಂಟಾಗಿ ಭಾಗವಹಿಸುವ ಅದೃಷ್ಟ ಒಲಿಯಿತು. ಬಿಗ್ ಬಾಸ್ ಮನೆಯೊಳಗೆ ಇದ್ದಾಗಲೇ ಸಾಕಷ್ಟು ಅಭಿಮಾನಿಗಳ ಮನ ಗೆದ್ದ ಇವರು ನಂತರ ಹೊಸ ಹೊಸ ಪ್ರಾಜೆಕ್ಟ್ ಮೂಲಕ ಜನಗಳ ಮುಂದೆ ಬಂದರು. ಜನತೆ ಇವರ ಎಲ್ಲಾ ಕಾರ್ಯಕ್ರಮಗಳನ್ನು ಇವರ ನಿರೂಪಣೆಗಾಗಿ ನೋಡುತ್ತಿದ್ದರು ಎನ್ನಬಹುದು.

ನಂತರ ಜೀ ಕನ್ನಡ ವಾಹಿನಿಯ ಸರಿಗಮಪ ಎನ್ನುವ ಕಾರ್ಯಕ್ರಮವು ಇವರಿಗೆ ದೊಡ್ಡ ಖ್ಯಾತಿಯನ್ನು ತಂದುಕೊಟ್ಟಿತ್ತು. ಈವರೆಗೂ ಹಲವಾರು ಎಪಿಸೋಡಿಗಳು ಹತ್ತಿರ ಇಪ್ಪತ್ತು ಸೀಸನ್ ಗಳು ನಡೆಯುತ್ತಿದ್ದರು ಕೂಡ ಆಂಕರ್ ಅನುಶ್ರೀ ಅವರೇ ಈಗಲೂ ಅದಕ್ಕೆ ನಿರೂಪಕಿಯಾಗಿದ್ದಾರೆ. ಜೀ ಕನ್ನಡ ಬಹುತೇಕ ಎಲ್ಲಾ ಕಾರ್ಯಕ್ರಮಗಳನ್ನು ಕೂಡ ಇವರೇ ನಿರೂಪಕಿಯಾಗಿ ನಡೆಸಿಕೊಡುತ್ತಾರೆ. ಮತ್ತು ತಮ್ಮದೇ ಆದ ಯುಟ್ಯೂಬ್ ಚಾನೆಲ್ ಒಂದನ್ನು ಕೂಡ ಓಪನ್ ಮಾಡಿರುವ ಅನುಶ್ರೀ ಅವರು ಅಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ಆ ಕಾರ್ಯಕ್ರಮಗಳಿಗೆ ಸೆಲೆಬ್ರೆಟಿಗಳನ್ನು ಕರೆತಂದು ಮಾತನಾಡಿಸಿ ಆ ಮೂಲಕ ಕೂಡ ಫೇಮಸ್ ಆಗುತ್ತಿದ್ದಾರೆ. ಈಗಾಗಲೇ ಅವರ ಯೂಟ್ಯೂಬ್ ಚಾನೆಲ್ ಗೆ ಲಕ್ಷಾಂತರ ಮಂದಿ ಸಬ್ಸ್ಕ್ರೈಬ್ ಕೂಡ ಆಗಿದ್ದಾರೆ. ಈಗ ಅವರು ಅವರ ಬದುಕಿನ ಘಟ್ಟದ ಮತ್ತೊಂದು ಹೆಜ್ಜೆ ಇಡುತ್ತಿದ್ದಾರೆ.

ಬೆಂಗಳೂರಿಗೆ ಬಂದು ಇಷ್ಟು ವರ್ಷವಾದರೂ ಕೂಡ ಬಾಡಿಗೆ ಮನೆಯಲ್ಲೇ ವಾಸವಾಗಿರುವ ಇವರು ಈಗ ಸ್ವಂತ ಮನೆ ಕಟ್ಟಿಕೊಳ್ಳುವ ಮನಸ್ಸು ಮಾಡಿದ್ದಾರೆ. ಇದಕ್ಕೆ ಜೆಪಿ ನಗರ ಸಮೀಪ ಸೈಟ್ ಖರೀದಿಸಿ ಅಮ್ಮ ಹಾಗೂ ತಮ್ಮನ ಜೊತೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಮಾಹಿತಿಗಳ ಪ್ರಕಾರ ಅನುಶ್ರೀ ಅವರು ತುಂಬಾ ನೂತನ ವಿನ್ಯಾಸದಲ್ಲಿ ಮನೆಯನ್ನು ಕಟ್ಟಿಸಿಕೊಳ್ಳುವ ಆಸೆ ಹೊಂದಿದ್ದು ಇದಕ್ಕಾಗಿ 8 ಕೋಟಿ ವೆಚ್ಚದಲ್ಲಿ ಆ ಮನೆಯನ್ನು ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಾರಂತೆ. ಅನುಶ್ರೀ ಅವರ ಈ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ

LEAVE A REPLY

Please enter your comment!
Please enter your name here