ಈಗ ನಾವು ಹೇಳುವಂತಹ ಮಾಹಿತಿ ಮಹಿಳೆಯರಿಗೆ ಒಂದು ಗುಡ್ ನ್ಯೂಸ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೇಂದ್ರ ಸರಕಾರದ ಬಹುನಿರೀಕ್ಷಿತ ಮಧ್ಯಂತರ ಬಜೆಟ್ ಮಂಡನೆಯಾಗಿದ್ದು. ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಈ ಬಜೆಟ್ ಅನ್ನು ಮಂಡನೆ ಮಾಡಿದ್ದು. ಖಂಡಿತವಾಗಿಯೂ ಕೂಡ ಈ ಒಂದು ಮಾಹಿತಿ ಮಹಿಳೆಯರಿಗೆ ತುಂಬಾ ಒಳ್ಳೆಯ ಮಾಹಿತಿ ಎಂದೇ ಹೇಳಬಹುದು.
ಹಾಗಾದರೆ ಈ ಒಂದು ಮಧ್ಯಂತರ ಬಜೆಟ್ ನಲ್ಲಿ ಮಹಿಳೆಯರಿಗೆ ಸಿಕ್ಕಿರುವಂತಹ ಗುಡ್ ನ್ಯೂಸ್ ಏನು ಇದರಿಂದ ಮಹಿಳೆಯರಿಗೆ ಏನು ಪ್ರಯೋಜನ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಕೇಂದ್ರ ಸರ್ಕಾರ ಸತತ 10 ವರ್ಷಗಳ ಕಾಲ ಒಳ್ಳೆಯ ಸರ್ಕಾರವನ್ನು ಒಳ್ಳೆಯ ಆಡಳಿತವನ್ನು ನಡೆಸುತ್ತಾ ಬಂದಿದ್ದು ಇದು ಈ ಒಂದು ಅಧಿಕಾರದ ಅವಧಿಯ ಕೊನೆಯ ಬಜೆಟ್ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಎರಡನೇ ಅವಧಿಯ ಕೊನೆಯ ಬಜೆಟ್ ಅನ್ನು ಇದೀಗ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಮಂಡಿಸಿದ್ದು ಈ ಒಂದು ಬಜೆಟ್ ನಲ್ಲಿ ನಮ್ಮ ದೇಶದ ಮೂರು ಕೋಟಿ ಮಹಿಳೆಯರಿಗೆ ಗುಡ್ ನ್ಯೂಸ್ ಎಂದೇ ಹೇಳಬಹುದು. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಆಗಸ್ಟ್ 15ನೇ ತಾರೀಕು 2023ರಲ್ಲಿ ಒಂದು ಹೇಳಿಕೆ ಅಂದರೆ ಒಂದು ಘೋಷಣೆಯನ್ನು ಮಾಡಿದ್ದರು ಅದೇನೆಂದರೆ ಲಕ್ ಪತಿ ದೀದಿ ಯೋಜನೆ.
ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಇಲ್ಲದಿದ್ದರು ದಂಡ ಬೀಳಬಾರದು ಅಂದ್ರೆ ಈ 2 ಕೆಲಸ ಮಾಡಿ.!
ಈ ಒಂದು ಯೋಜನೆಯನ್ನು ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ತರುತ್ತೇವೆ ಎಂದು ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದರು. ಆದರೆ ಇದೀಗ ಈ ವಿಷಯಕ್ಕೆ ಸಂಬಂಧಪಟ್ಟಂತೆ ಬಜೆಟ್ ನಲ್ಲಿ ಒಂದಷ್ಟು ವಿಷಯಗಳು ಚರ್ಚೆಯಾಗಿದ್ದು ಆ ಯೋಜನೆಗಳು ಜಾರಿಗೆ ಬರುವ ಎಲ್ಲಾ ನಿರೀಕ್ಷೆಗಳು ಇದೆ ಎಂದೇ ಹೇಳಬಹುದು. 2024ರ ಈ ಒಂದು ಮಧ್ಯಂತರ ಬಜೆಟ್ ನಲ್ಲಿ ಮೂರು ಕೋಟಿ ಮಹಿಳೆಯರಿಗೆ ಲಕ್ ಪತಿ ದೀದಿ ಯೋಜನೆಯ ಅಡಿಯಲ್ಲಿ ಒಳ್ಳೆಯ ಸೌಲಭ್ಯ ಸಿಗುತ್ತದೆ ಎಂದೇ ಹೇಳಬಹುದು.
ಈ ಯೋಜನೆಯಲ್ಲಿ ಮೂರು ಕೋಟಿ ಮಹಿಳೆ ಯರಿಗೆ ಅನುಕೂಲವಾಗುವುದರ ಜೊತೆಗೆ 9 ಕೋಟಿ ಮಹಿಳೆಯರಿಗೆ ಅನುಕೂಲವಾಗುತ್ತದೆ ಎಂದು ನಿರ್ಮಲ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡುವಂತಹ ಸಂದರ್ಭದಲ್ಲಿ ತಿಳಿಸಿದ್ದಾರೆ.
ಅದಕ್ಕೂ ಮೊದಲು ಈ ಲಕ್ ಪತಿ ದೀದಿ ಯೋಜನೆ ಎಂದರೇನು? ಇದರ ಪ್ರಯೋಜನ ಏನು ಎಂದು ನೋಡುವುದಾದರೆ.
ಈ ಒಂದು ಯೋಜನೆಯ ಮೂಲ ಉದ್ದೇಶ ಬಡತನ ನಿರ್ಮೂಲನೆ ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣ. ಅಂದರೆ ಮಹಿಳೆಯರು ಬಡತನದಿಂದ ಹೊರಗಡೆ ಬಂದು ಆರ್ಥಿಕವಾಗಿ ಮಹಿಳೆಯರು ಸಬಲೀಕರಣವಾಗಬೇಕು ಇನ್ನುವ ದೃಷ್ಟಿಯಿಂದ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವುದರ ಮೂಲಕ ಮಹಿಳೆಯರನ್ನು ಉದ್ಯೋಗದತ್ತ ಮುಖ ಮಾಡುವಂತೆ ಮಾಡುವುದಾಗಿದೆ.
ಈ ಸುದ್ದಿ ಓದಿ:- ಯಾವ ರಾಶಿಯವರಿಗೆ ಭೂಮಿ ಖರೀದಿ ಯೋಗ ತುಂಬಾ ಜಾಸ್ತಿ ಇದೆ ಗೊತ್ತ.!
ಹಾಗೆಂದ ಮಾತ್ರಕ್ಕೆ ಮಹಿಳೆ ಯರು ಮನೆಯಿಂದ ಹೊರಗಡೆ ಬಂದು ಹಣವನ್ನು ಸಂಪಾದನೆ ಮಾಡಬೇಕು ಎಂದಲ್ಲ ಬದಲಿಗೆ ಮಹಿಳಾ ಸ್ವಸಹಾಯ ಗುಂಪುಗಳು ಎಲ್ಲಾ ಕಡೆಯಲ್ಲೂ ಕೂಡ ಇದ್ದೇ ಇರುತ್ತದೆ. ಆ ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ವಾರ್ಷಿಕವಾಗಿ ಒಂದು ವರ್ಷಕ್ಕೆ ಒಂದು ಲಕ್ಷ ರೂಪಾಯಿ ಸಹಾಯ ಧನವನ್ನು ನೀಡಲು ಇದೀಗ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನಿರ್ಧಾರವನ್ನು ಮಾಡಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.