Home Useful Information ಲೇಬರ್ ಕಾರ್ಡ್ಅ ಪ್ಡೇಟ್.! ಕಾರ್ಮಿಕ ಕಾರ್ಡ್ ಇದ್ದವರು ಕೂಡಲೇ ಈ ಕೆಲಸ ಮಾಡಿ ಇಲ್ಲದಿದ್ರೆ ನಿಮಗೆ ಯಾವುದೇ ಸೌಲಭ್ಯ ಸಿಗಲ್ಲ.!

ಲೇಬರ್ ಕಾರ್ಡ್ಅ ಪ್ಡೇಟ್.! ಕಾರ್ಮಿಕ ಕಾರ್ಡ್ ಇದ್ದವರು ಕೂಡಲೇ ಈ ಕೆಲಸ ಮಾಡಿ ಇಲ್ಲದಿದ್ರೆ ನಿಮಗೆ ಯಾವುದೇ ಸೌಲಭ್ಯ ಸಿಗಲ್ಲ.!

0
ಲೇಬರ್ ಕಾರ್ಡ್ಅ ಪ್ಡೇಟ್.! ಕಾರ್ಮಿಕ ಕಾರ್ಡ್ ಇದ್ದವರು ಕೂಡಲೇ ಈ ಕೆಲಸ ಮಾಡಿ ಇಲ್ಲದಿದ್ರೆ ನಿಮಗೆ ಯಾವುದೇ ಸೌಲಭ್ಯ ಸಿಗಲ್ಲ.!

 

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಲೇಬರ್ ಕಾರ್ಡ್ ಹೊಂದಿರುವ ಸದಸ್ಯರು ಸರ್ಕಾರದಿಂದ ಸಿಗುವಂತಹ ಹಲವಾರು ರೀತಿಯ ಸೌಲಭ್ಯ ಗಳನ್ನು ಪಡೆದುಕೊಳ್ಳಬಹುದು ಹಾಗೂ ಅದೇ ರೀತಿಯಲ್ಲಿ ಕಟ್ಟಡ ಕಾರ್ಮಿಕ ಇಲಾಖೆಯ ಕಡೆಯಿಂದ ಸಿಗುವಂತಹ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳುವಂತಹ ಪ್ರತಿಯೊಬ್ಬ ಸದಸ್ಯರು ಕೂಡ ಲೇಬರ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯವಾಗಿರುತ್ತದೆ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಯಾರೆಲ್ಲ ಇನ್ನೂ ಹಳೆ ಲೇಬರ್ ಕಾರ್ಡ್ ಹೊಂದಿರುತ್ತೀರೋ ಅವರು ಹೊಸ ಲೇಬರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ನಿಮ್ಮ ಲೇಬರ್ ಕಾರ್ಡ್ ನಿಂದ ಸಿಗುವಂತಹ ಹಲವಾರು ರೀತಿಯ ಸೌಲಭ್ಯಗಳನ್ನು ರದ್ದುಪಡಿಸಲಾಗು ತ್ತದೆ ಎಂಬ ಮಾಹಿತಿಯನ್ನು ಹೊರಡಿಸಿದ್ದಾರೆ.

ಆದ್ದರಿಂದ ಲೇಬರ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬ ಸದಸ್ಯರು ಕೂಡ ಈಗ ಹೊಸ ಅಪ್ಡೇಟ್ ಮಾಡಿಸಿ ಹೊಸ ವಿಧಾನದಲ್ಲಿ ಬಂದಿರುವಂತಹ ಲೇಬರ್ ಕಾರ್ಡ್ ಅನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಲೇಬರ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬ ಸದಸ್ಯರು ಕೂಡ ಇದರಿಂದ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಈ ಸುದ್ದಿ ಓದಿ:- ಕೇಂದ್ರ ಬಜೆಟ್‌ನಲ್ಲಿ ಮಹಿಳೆಯರಿಗೆ ಗುಡ್‌ನ್ಯೂಸ್// 3 ಕೋಟಿ ಸ್ತ್ರೀಯರಿಗೆ ಸಿಗಲಿದೆ ಲಾಭ// ಬಜೆಟ್ 2024…..||

ಆರೋಗ್ಯದ ವಿಚಾರವಾಗಿರಬಹುದು, ಅವರ ಮನೆಯ ಕುಟುಂಬದ ಮಕ್ಕಳ ಆರೋಗ್ಯದ ವಿಚಾರವಾಗಿರಬಹುದು ಏನಾದರೂ ಸಮಸ್ಯೆ ಉಂಟಾದರೆ ಅವರಿಗೆ ಅನುಕೂಲವಾಗುವಂತೆ ಇಂತಿಷ್ಟು ಹಣವನ್ನು ಸಹ ಅವರು ಪಡೆಯಬಹುದು. ಜೊತೆಗೆ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯರ ಮಕ್ಕಳು ಉನ್ನತಮಟ್ಟದ ವಿದ್ಯಾಭ್ಯಾಸವನ್ನು ಪಡೆಯುವುದಕ್ಕೆ ಇಚ್ಚಿಸುತ್ತಿದ್ದರೆ ಅವರು ಕೂಡ ಇಂತಿಷ್ಟು ಸಹಾಯಧನವನ್ನು ಪಡೆಯುವುದರ ಮೂಲಕ ಅವರು ಉನ್ನತ ಶಿಕ್ಷಣವನ್ನು ಪಡೆಯಬಹುದಾಗಿದೆ.

* ಅದೇ ರೀತಿಯಾಗಿ ಲೇಬರ್ ಕಾರ್ಡ್ ಹೊಂದಿರುವಂತಹ ಸದಸ್ಯರು ತಮ್ಮ ಮಕ್ಕಳಿಗೆ ಮದುವೆ ಮಾಡುವಂತಹ ಸಂದರ್ಭದಲ್ಲಿ ಅವರ ಒಂದು ಇಲಾಖೆಯ ವತಿಯಿಂದ ಉಚಿತವಾಗಿ 60 ಸಾವಿರ ರೂಪಾಯಿ ಹಣವನ್ನು ಪಡೆಯಬಹುದಾಗಿದೆ. ಹೀಗೆ ಇನ್ನೂ ಹಲವಾರು ರೀತಿಯ ಪ್ರಯೋಜನಗಳನ್ನು ಲೇಬರ್ ಕಾರ್ಡ್ ಹೊಂದಿರುವಂತಹ ಸದಸ್ಯರು ಪಡೆಯಬಹುದು.

ಆದ್ದರಿಂದ ಯಾರೆಲ್ಲ ಇನ್ನೂ ಹಳೆ ಲೇಬರ್ ಕಾರ್ಡ್ ಹೊಂದಿರುತ್ತಾರೋ ಅವರು ತಕ್ಷಣವೇ ಈಗ ಹೊಸ ಲೇಬರ್ ಕಾರ್ಡ್ ಅನ್ನು ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇಲ್ಲವಾದರೆ ನೀವು ಈ ಯಾವುದೇ ರೀತಿಯ ಪ್ರಯೋಜನಗಳನ್ನು ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ.ಹಾಗಾದರೆ ಹೊಸ ಲೇಬರ್ ಕಾರ್ಡ್ ಪಡೆಯಬೇಕು ಎಂದರೆ ಯಾವ ವಿಧಾನ ಅನುಸರಿಸಬೇಕು ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಯೋಣ.

ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಇಲ್ಲದಿದ್ದರು ದಂಡ ಬೀಳಬಾರದು ಅಂದ್ರೆ ಈ 2 ಕೆಲಸ ಮಾಡಿ.!

* ಮೊದಲನೆಯದಾಗಿ ಲೇಬರ್ ಕಾರ್ಡ್ ಮಾಡಿಸುತ್ತಿದ್ದರೆ ಆ ಸದಸ್ಯನ ಕುಟುಂಬದ ಪ್ರತಿಯೊಬ್ಬರ ಆಧಾರ್ ಕಾರ್ಡ್ ಪ್ರತಿ ಬೇಕಾಗುತ್ತದೆ.
* ಜೊತೆಗೆ ಹಳೆ ಲೇಬರ್ ಕಾರ್ಡ್ ಹೊಂದಿದ್ದರೆ ಅದರ ಪ್ರತಿ ಹಾಗೂ ಮೂಲಪ್ರತಿ.
* ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯನ ಬ್ಯಾಂಕ್ ಪಾಸ್ ಬುಕ್ ವಿವರಗಳು.

ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆ.
ಇಷ್ಟು ದಾಖಲಾತಿಗಳು ಇದ್ದರೆ ಸಾಕು ನೀವು ಹೊಸದಾದಂತಹ ಲೇಬರ್ ಕಾರ್ಡ್ ಅನ್ನು ಪಡೆಯಬಹುದು ಹಾಗೂ ಈ ಒಂದು ಅಪ್ಲಿಕೇಶನ್ ಹಾಕುವುದಕ್ಕೆ ನೀವು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಹೋಗಿ ಅರ್ಜಿ ಸಲ್ಲಿಸಬಹುದು.

ಅಥವಾ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯ ಮೂಲ ವೆಬ್ಸೈಟ್ ಗೆ ಹೋಗುವುದರ ಮೂಲಕ ಅಲ್ಲಿ ಹೊಸ ಅರ್ಜಿ ಎನ್ನುವಂತಹ ಆಯ್ಕೆಯ ಮೇಲೆ ಓಕೆ ಮಾಡುವುದರ ಮೂಲಕ ಅಲ್ಲಿ ಕೇಳುವಂತಹ ಕೆಲವೊಂದಷ್ಟು ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಹಾಕುವುದರ ಮೂಲಕ ನೀವೇ ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

 

 

LEAVE A REPLY

Please enter your comment!
Please enter your name here