ಪ್ರತಿಯೊಂದು ರಾಶಿ ಚಕ್ರದಲ್ಲಿಯೂ ಕೂಡ ಪ್ರತಿ ತಿಂಗಳು ಗ್ರಹಗಳ ಬದಲಾವಣೆಯಿಂದ ಆ ಒಂದು ರಾಶಿಯವರ ಜೀವನದಲ್ಲಿ ಹಲವಾರು ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಅದೇ ರೀತಿಯಾಗಿ ಸಿಂಹ ರಾಶಿಯವರಿಗೆ ಮಾರ್ಚ್ ತಿಂಗಳು ಯಾವ ರೀತಿಯ ಫಲಗಳನ್ನು ಪಡೆದುಕೊಳ್ಳುತ್ತಾರೆ ಹಾಗೂ ಯಾವ ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಮೊದಲನೆಯದಾಗಿ ಎಲ್ಲರಿಗೂ ತಿಳಿದಿರುವಂತೆ ಪ್ರತಿ ರಾಶಿಯಲ್ಲಿಯೂ ಕೂಡ ಗ್ರಹಗಳು ಬದಲಾವಣೆಯನ್ನು ಹೊಂದುತ್ತಿರುತ್ತದೆ. ಆದ್ದರಿಂದ ಅವರು ತಮ್ಮ ಗ್ರಹಗಳ ಬದಲಾವಣೆಯ ಮೂಲಕ ತಮ್ಮ ಭವಿಷ್ಯವನ್ನು ಕೆಲವೊಮ್ಮೆ ಒಳ್ಳೆಯ ರೀತಿಯಲ್ಲಿ ಪಡೆದುಕೊಳ್ಳುತ್ತಾರೆ ಹಾಗೂ ಇನ್ನೂ ಕೆಲವೊಮ್ಮೆ ಕೆಟ್ಟ ರೀತಿಯಲ್ಲಿ ಪಡೆದುಕೊಳ್ಳುತ್ತಾರೆ.
ಒಟ್ಟಾರೆಯಾಗಿ ಪ್ರತಿ ಬಾರಿ ಒಳ್ಳೆಯ ಫಲಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗಾದರೆ ಈ ದಿನ ಸಿಂಹ ರಾಶಿಯವರಿಗೆ ಮಾರ್ಚ್ ತಿಂಗಳು ಯಾವ ರೀತಿಯ ಒಳ್ಳೆಯ ಫಲಗಳನ್ನು ನೀಡುತ್ತದೆ ಹಾಗೂ ಯಾವ ರೀತಿಯ ಶುಭಫಲಗಳನ್ನು ನೀಡುತ್ತದೆ ಎಂದು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಉಚಿತ ಕರೆಂಟ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.? ಯೋಜನೆಯ ಫಲಾನುಭವಿಯಾಗುವುದು ಹೇಗೆ ನೋಡಿ.!
ಮಾರ್ಚ್ ತಿಂಗಳಲ್ಲಿ ಗ್ರಹಗತಿಗಳು ಏರುಪೇರು ಆಗುವುದರಿಂದ 60 ಭಾಗದಷ್ಟು ನಿಮಗೆ ಒಳ್ಳೆಯ ಶುಭಫಲಗಳೆ ಸಿಗುತ್ತದೆ ಕೇವಲ 40 ಭಾಗದಷ್ಟು ಮಾತ್ರ ನಿಮಗೆ ಅಶುಭ ಫಲಗಳು ಸಿಗುತ್ತದೆ.
ಹಾಗಾದರೆ ನೀವು ಈ ತಿಂಗಳ ಪ್ರಾರಂಭದ 15 ದಿನಗಳಲ್ಲಿ ಯಾವ ರೀತಿಯ ಕೆಲಸ ಕಾರ್ಯಗಳನ್ನು ಮಾಡುವುದರ ಮೂಲಕ ನೀವು ಅತಿ ಹೆಚ್ಚಿನ ಶುಭಫಲಗಳನ್ನು ಪಡೆದುಕೊಳ್ಳುತ್ತೀರಿ ಎಂದು ಈ ಕೆಳಗೆ ತಿಳಿಯೋಣ.
* ಮೊದಲನೆಯದಾಗಿ ನೀವು ಮಾಡುವಂತಹ ವ್ಯಾಪಾರ ವ್ಯವಹಾರ ದಲ್ಲಿ ಕೆಲಸ ಕಾರ್ಯಗಳಲ್ಲಿ ಅತಿ ಹೆಚ್ಚಿನ ಅಭಿವೃದ್ಧಿಯನ್ನು ಪಡೆದು ಕೊಳ್ಳುತ್ತೀರಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮವಾದ ದಕ್ಷತೆ ನಿಮ್ಮದಾಗಿರುತ್ತದೆ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಮುಂಬಡ್ತಿಯನ್ನು ಪಡೆದು ಕೊಳ್ಳುತ್ತೀರಿ.
ಆದರೆ ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ಅಂದರೆ 15 ದಿನಗಳ ನಂತರ ಶನಿ ಮತ್ತು ಸೂರ್ಯನು ಒಟ್ಟಾಗಿ ಒಂದೇ ರಾಶಿಯಲ್ಲಿ ಚಲನೆ ಮಾಡುವುದರಿಂದ ತಂದೆ ಮತ್ತು ಮಕ್ಕಳ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಜಗಳಗಳು ಕಂಡುಬರುತ್ತದೆ. ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ವ್ಯಾಸಂಗ ಅಭಾವ ಆಗುವಂಥಹ ಯೋಗವು ಇರುವುದರಿಂದ ಅದರ ಬಗ್ಗೆ ಹೆಚ್ಚು ಏಕಾಗ್ರತೆಯನ್ನು ತೆಗೆದುಕೊಂಡು ನಿಮ್ಮ ವಿದ್ಯಾಭ್ಯಾಸದಲ್ಲಿ ಅತಿ ಹೆಚ್ಚಿನ ಗಮನವನ್ನು ವಹಿಸುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ಓದಿ:- ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ 2 ಲಕ್ಷ ಸಿಗುತ್ತೆ…|
ನಿಮ್ಮ ಈ ಒಂದು ಏಕಾಗ್ರತೆಯಿಂದ ನೀವು ಉತ್ತಮವಾದ ಸ್ಥಾನವನ್ನು ಪಡೆದು ಕೊಳ್ಳುತ್ತೀರಿ. ಸಿಂಹ ರಾಶಿಯವರಿಗೆ ಒಂದು ಒಳ್ಳೆಯ ವಿಷಯ ಏನೆಂದರೆ ಇವರು ಯಾವುದೇ ಎಂತದ್ದೇ ಸಂದರ್ಭ ಬಂದರು ಯಾವುದಕ್ಕೂ ಹೆದರುವು ದಿಲ್ಲ ಅತಿ ಹೆಚ್ಚಿನ ಧೈರ್ಯ ಹಾಗೂ ಪ್ರತಿಯೊಂದು ಕೆಲಸ ಕಾರ್ಯಗಳ ಲ್ಲಿಯೂ ಛಲ ಇರುವುದರಿಂದ ಇವರು ಯಾವುದೇ ಎಂತದ್ದೇ ಸಂದರ್ಭವನ್ನು ಕೂಡ ಬಹಳ ಸುಲಭವಾಗಿ ನಿಭಾಯಿಸುತ್ತಾರೆ.
ಎಲ್ಲರಿಗೂ ತಿಳಿದಿರುವಂತೆ ನಾವು ಪ್ರತಿಯೊಂದು ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ದೇವರ ಆಶೀರ್ವಾದ ಎನ್ನುವುದು ಬಹಳ ಮುಖ್ಯವಾಗಿ ರುತ್ತದೆ. ಅದೇ ರೀತಿ ನಮ್ಮ ಎಲ್ಲಾ ಕೆಟ್ಟ ಸಂದರ್ಭಗಳನ್ನು ಸಹ ದೂರ ಮಾಡಿಕೊಳ್ಳುವುದಕ್ಕೆ ದೇವರ ಆರಾಧನೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ನಾವು ಯಾವ ಪೂಜಾ ವಿಧಾನಗಳನ್ನು ಮಾಡುವುದರಿಂದ ನಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ.
* ಸಿಂಹ ರಾಶಿಯ ಅಧಿಪತಿ ಸೂರ್ಯ ಆದ್ದರಿಂದ ಸೂರ್ಯ ನಮಸ್ಕಾರಗಳನ್ನು ಸೂರ್ಯನಾರಾಯಣನನ್ನು ಆರಾಧಿಸುವಂತಹ ವರ್ಣಿಸುವಂತಹ ಆದಿತ್ಯ ಹೃದಯಾದಿ ಮಂತ್ರಗಳನ್ನು ಪಠಿಸುವುದು ಅಥವಾ ಆಲಿಸುವುದು ಮಾಡುವುದರಿಂದ ನಿಮ್ಮ ಕಷ್ಟಕಾರ್ಪಣ್ಯಗಳನ್ನು ದೂರ ಮಾಡಿಕೊಳ್ಳಬಹುದು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಮತ್ತು 7ನೇ ಕಂತಿನ ಹಣ ಜಮಾ ಆಗಿಲ್ಲ ಅಂದ್ರೆ|| ಈ ಕೆಲಸ ಎಲ್ಲರಿಗೂ ಕಡ್ಡಾಯ.!
* ಇದರ ಜೊತೆ ಪ್ರಾತಃ ಕಾಲದಲ್ಲಿ ತಂದೆ ತಾಯಿಗಳ ಪಾದ ಸ್ಪರ್ಶ ಮಾಡುವುದು ಕೂಡ ಉತ್ತಮ.
* ಸಿಂಹ ರಾಶಿಯವರ ಮಾರ್ಚ್ ತಿಂಗಳ ಉತ್ತಮವಾದ ದಿನಾಂಕಗಳನ್ನು ನೋಡುವುದಾದರೆ. ” 9, 18, 24, 27 ಇವು ನಿಮಗೆ ಶುಭ ದಿನಗಳಾಗಿರುತ್ತದೆ.
* ಶುಭ ವರ್ಣಗಳು :- ಕೆಂಪು, ಬಿಳಿ, ಹಸಿರು ಮಿಶ್ರಿತ ಹಳದಿ.