ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು (government) ದೇಶದಲ್ಲಿರುವ ಬಡ ಜನರು ಹಾಗೂ ಮಧ್ಯಮ ವರ್ಗದವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರೇಷನ್ ಕಾರ್ಡ್ (Ration card) ಕೂಡ ಈ ರೀತಿ ಬಡತನವನ್ನು ಅಳೆಯುವ ಮಾಪನ ಆಗಿದೆ ಎಂದರು ಕೂಡ ಬಹುಶಃ ಅದು ತಪ್ಪಾಗಲಾರದು.
ಯಾಕೆಂದರೆ BPL ಹಾಗೂ AAY ಕಾರ್ಡ್ ಹೊಂದಿರುವವರನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಹಾಗೂ APL ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳನ್ನು ಬಡತನ ರೇಖೆಗಿಂತ ಮೇಲಿರುವ ವರ್ಗಗಳು ಎಂದು ಗುರುತಿಸಲಾಗುತ್ತದೆ. ಈ ರೀತಿ BPL ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸರ್ಕಾರ ವಿಶೇಷವಾದ ಸೌಲಭ್ಯಗಳನ್ನು ಒದಗಿಸುತ್ತದೆ.
ಇಂತಹ ಯೋಚನೆಗಳ ಪೈಕಿ ಆರೋಗ್ಯದ ದೃಷ್ಟಿಯಿಂದ ಜಾರಿಗೆ ತಂದಿರುವ ಆಯುಷ್ಮಾನ್ ಕಾರ್ಡ್ ಯೋಜನೆ (Ayushman Card) ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಆಯುಷ್ಮಾನ್ ಕಾರ್ಡ್ ನಿಮಗೆ ಆರೋಗ್ಯ ವಿಮೆಗಳ ರೀತಿ ಕೆಲಸ ಮಾಡುತ್ತದೆ ಎಂದು ಹೇಳಬಹುದು ಯಾಕೆಂದರೆ ಬಡಜನರು ಹಾಗೂ ಮಾಧ್ಯಮ ವರ್ಗದವರಿಗೆ ಅನಿರೀಕ್ಷಿತವಾಗಿ ಆರೋಗ್ಯ ಸಮಸ್ಯೆ ಉಂಟಾದಾಗ ಹಣಕಾಸಿಗೆ ಬಹಳ ಒದ್ದಾಡುತ್ತಾರೆ.
ಇದರ ತಪ್ಪಿಸುವ ಸಲುವಾಗಿ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಲಾಗುತ್ತಿದ್ದು ,ಈ ಕಾರ್ಡ್ ಗಳನ್ನು ಹೊಂದಿರುವವರು ಇಂತಹ ಸಂದರ್ಭಗಳಲ್ಲಿ ನಗದು ರಹಿತ ವಹಿವಾಟಿನ ಚಿಕಿತ್ಸೆ ಪಡೆಯಬಹುದು. ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ ಕೇಂದ್ರ ಪ್ರಾಯೋಜಿತ ಯೋಜನೆಯಾದ – ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ (RSBY) ಯಲ್ಲಿ ನೋಂದಾಯಿಸಿಕೊಂಡಿರುವವರು ಅಥವಾ BPL ಕಾರ್ಡ್ ಹೊಂದಿರುವವರು ಆಯುಷ್ಮಾನ್ ಕಾರ್ಡ್ ಪಡೆದು ಈ ಪ್ರಯೋಜನಗಳನ್ನು ಪಡೆಯಬಹುದು. ಈ ಅಂಕಣದಲ್ಲಿ ಆಯುಷ್ಮಾನ್ ಕಾರ್ಡ್ ಕುರಿತು ಪ್ರಮುಖ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ.
ಪ್ರಯೋಜನಗಳು:-
● BPL ರೇಷನ್ ಕಾರ್ಡ್ ಅಥವಾ ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದರೆ ವಾರ್ಷಿಕವಾಗಿ ಆ ಕುಟುಂಬ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು.
● ಒಂದು ವೇಳೆ APL ರೇಷನ್ ಕಾರ್ಡ್ ಹೊಂದಿದ್ದರೆ ಅಥವಾ ರೇಷನ್ ಕಾರ್ಡ್ ಹೊಂದಿರದೆ ಇದ್ದರೆ ಅವರಿಗೆ ಅವರ ಚಿಕಿತ್ಸಾ ವೆಚ್ಚದ 30% ಅಂದರೆ ಒಂದು ವರ್ಷಕ್ಕೆ 1.5 ಲಕ್ಷ ಚಿಕಿತ್ಸೆಯ ವೆಚ್ಚದಲ್ಲಿ ರಿಯಾಯಿತಿ ಸಿಗಲಿದೆ.
● ದೇಶದಾದ್ಯಂತ ಇರುವ ಯಾವುದೇ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸೆಗೂ ಕೂಡ ಇಧು ಅನ್ವಯವಾಗುತ್ತದೆ.
● ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು, ಹೃದಯಘಾತ ಕ್ಯಾನ್ಸರ್ ನರರೋಗ ಮೂತ್ರಪಿಂಡದ ಕಾಯಿಲೆಗಳು ನವಜಾತ ಶಿಶುವಿನ ಕಾಯಿಲೆಗಳು ಮುಂತಾದ ತೃತೀಯ ಹಂತದ 900ಕ್ಕೂ ಹೆಚ್ಚು ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು ಸೇರಿ ಸರಿಯಾಗಿ 1650 ಚಿಕಿತ್ಸೆಗಳು ನಿಮಗೆ ಉಚಿತವಾಗಿ ಸಿಗಲಿದೆ.
ಗೃಹಿಣಿಯರೇ ನೀವು ದಪ್ಪ ಆಗಲು ನೈಟಿ ಕಾರಣ ಎಚ್ಚರ.!
ಅರ್ಜಿ ಸಲ್ಲಿಸುವ ವಿಧಾನ:-
● ನಿಮ್ಮ ಹತ್ತಿರದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಅಥವಾ ಸೇವಾ ಕೇಂದ್ರದಲ್ಲಿ ನೀವು ಅರ್ಜಿ ಸಲ್ಲಿಸಬಹುದು.
● ಕನಿಷ್ಠ ಅರ್ಜಿ ಶುಲ್ಕ ಸ್ವೀಕರಿಸಿ ನಿಮಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ ನೀಡುತ್ತಾರೆ.
ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್
● ರೇಷನ್ ಕಾರ್ಡ್
● ಮೊಬೈಲ್ ಸಂಖ್ಯೆ
LIC ಜೀವನ್ ಶಾಂತಿ ಪ್ಲಾನ್, 1,50,000 ಡೆಪಾಸಿಡ್ ಮಾಡಿದ್ರೆ ಸಾಕು ಗಂಡ ಹೆಂಡತಿ ಇಬ್ಬರಿಗೂ ಬರಲಿದೆ 13,395 ಪೆನ್ಷನ್.!
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
● ನಿಮ್ಮ ಗ್ರಾಮದ ಆರೋಗ್ಯ ಕೇಂದ್ರ ಅಥವಾ ತಾಲೂಕು ಆಸ್ಪತ್ರೆ ಜಿಲ್ಲಾ ಆಸ್ಪತ್ರೆಯಲ್ಲಿ ಆಯುಷ್ಮಾನ್ ಕಾರ್ಡ್ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು ಹಾಗೂ ನೋಂದಾಯಿಸಿಕೊಂಡು ಕಾರ್ಡ್ ಪಡೆಯಬಹುದು
● ಹತ್ತಿರದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲೂ ಕೂಡ ಮಾಹಿತಿ ಪಡೆಯಬಹುದು
● ಖಾಸಗಿ ಆಸ್ಪತ್ರೆಗಳಲ್ಲಿರುವ ಆರೋಗ್ಯ ಮಿತ್ರರು ಸಹ ಇದರ ಬಗ್ಗೆ ಮಾಹಿತಿ ನೀಡಲಿದ್ದಾರೆ
● ಸಹಾಯವಾಣಿ ಸಂಖ್ಯೆಗಳಾದ 1800 425 8330 ಹೆಚ್ಚಿನ ವಿವರ ಪಡೆಯಬಹುದು.