ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದಿಂದ ಪಿಎಂ ಸೂರ್ಯ ಘರ್ ಮಫ್ತ್ ಬಿಜಿಲಿ ಯೋಜನೆಯನ್ನು ಘೋಷಣೆ ಮಾಡಿರುವಂಥದ್ದು. ಇದೇನು ಹೊಸ ಯೋಜನೆ ಅಲ್ಲ ಬಹಳಷ್ಟು ವರ್ಷಗಳ ಹಿಂದೆಯೇ ಈ ಯೋಜನೆಯನ್ನು ನರೇಂದ್ರ ಮೋದಿಯವರು ತಮ್ಮ ಕೇಂದ್ರ ಸರ್ಕಾರ ದಿಂದ ಘೋಷಣೆ ಮಾಡಿದ್ದರು.
ಈ ಹಿಂದೆ ಈ ಒಂದು ಯೋಜನೆಗೆ ಸೂರ್ಯೋದಯ ಯೋಜನೆ ಎಂಬ ಹೆಸರಿಟ್ಟಿದರು ಆದರೆ ಈಗ ಇದರ ಹೆಸರನ್ನು ಬದಲಾಯಿಸಿ ಸೂರ್ಯ ಘರ್ ಮಫ್ತ್ ಬಿಜಿಲಿ ಯೋಜನೆ ಎಂಬ ಹೊಸ ನಾಮಕರಣವನ್ನು ಮಾಡಿದ್ದಾರೆ ಎಂದೇ ಹೇಳಬಹುದು. ಹಾಗಾದರೆ ಈ ಒಂದು ಯೋಜನೆಯ ಪ್ರಮುಖ ಉದ್ದೇಶ ಏನು ಹಾಗು ಈ ಒಂದು ಯೋಜನೆಯ ಪ್ರಯೋಜನ ಏನು.
ಒಂದು ಯೋಜನೆಯ ಪ್ರಯೋಜನವನ್ನು ಯಾರೆಲ್ಲಾ ಪಡೆದು ಕೊಳ್ಳ ಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಈ ಒಂದು ಯೋಜನೆಯ ಮುಖ್ಯ ಉದ್ದೇಶ ಏನೆಂದರೆ.
* ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸುವುದರ ಮೂಲಕ ಸೂರ್ಯನ ಬೆಳಕಿನಿಂದ ವಿದ್ಯುತ್ ಅನ್ನು ಉತ್ಪಾದನೆ ಮಾಡುವುದು.
ಈ ಸುದ್ದಿ ಓದಿ:- ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ.!
ಸುಮಾರು ಒಂದು ಕೋಟಿ ಮನೆಗಳು ಈ ಒಂದು ಯೋಜನೆಯ ಪ್ರಯೋಜನಗಳನ್ನು ಪಡೆದು ಕೊಳ್ಳುವುದರ ಮೂಲಕ 300 ಯೂನಿಟ್ ಉಚಿತವಾದಂತಹ ಕರೆಂಟ್ ಅನ್ನು ಉತ್ಪಾದನೆ ಮಾಡುವುದರ ಜೊತೆಗೆ ತಮಗೂ ಕೂಡ ಇಂತಿಷ್ಟು ಉಚಿತ ವಿದ್ಯುತ್ ಅನ್ನು ಪಡೆಯುವಂತಹ ಪ್ರಯೋಜನವನ್ನು ಪಡೆದುಕೊಳ್ಳು ವಂತಹ ಮೂಲ ಉದ್ದೇಶ ಇದಾಗಿದೆ.
ಹಾಗೇನಾದರೂ ಅದಕ್ಕಿಂತ ಹೆಚ್ಚಿನ ವಿದ್ಯುತ್ ಅನ್ನು ಉತ್ಪಾದನೆ ಮಾಡಿದರೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಮಾರಾಟ ಮಾಡುವುದರ ಮೂಲಕ ನೀವು ಕೂಡ ಹಣವನ್ನು ಸಂಪಾದನೆ ಮಾಡಬಹುದು. ಹಾಗಾದರೆ ಯಾರೆಲ್ಲ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬಹುದು ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಯಾವ ಒಂದು ವೆಬ್ಸೈಟ್ ನಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಯಾರೆಲ್ಲ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಹೀಗೆ ಈ ಎಲ್ಲಾ ವಿಚಾರ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಈಗ ನಾವು ಹೇಳುವಂತಹ ಈ ಒಂದು ಮೂಲ ವೆಬ್ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು.
ಈ ಸುದ್ದಿ ಓದಿ:-40 ರಿಂದ 60 ವರ್ಷ ಮೇಲ್ಪಟ್ಟವರಿಗೆ ಪಿ.ಎಂ ಮೋದಿ ಹೊಸ 4 ಸ್ಕೀಮ್ 3000-5000ರೂ. ಸಾವಿರ ಪೆನ್ಷನ್ ಪಡೆಯಬಹುದು.!
https://pmsuryaghar.gov.in
ಈ ಒಂದು ವೆಬ್ ಸೈಟ್ ನಲ್ಲಿ ಹೋಗಿ ನೀವು ಕೆಲವೊಂದಷ್ಟು ದಾಖಲಾತಿಗಳ ಮಾಹಿತಿಗಳನ್ನು ಹಾಕುವುದರ ಮೂಲಕ ನೀವು ಲಾಗಿನ್ ಮಾಡಿಕೊಂಡು ಆನಂತರ ಅರ್ಜಿ ಹಾಕಬೇಕು. ಮೊದಲನೆಯದಾಗಿ ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಹಾಗೂ ನಿಮ್ಮ ಹತ್ತಿರದ ಎಲೆಕ್ಟ್ರಿಕ್ ಡಿಸ್ಟ್ರಿಬ್ಯೂಷನ್ ಕಂಪನಿ ಹೀಗೆ ಎಲ್ಲವನ್ನೂ ಸಹ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಆನಂತರ ನಿಮ್ಮ ಅಕೌಂಟ್ ನಂಬರ್ ಹೀಗೆ ಈ ಎಲ್ಲಾ ರೀತಿಯ ಮೂಲ ದಾಖಲಾತಿಗಳನ್ನು ಹಾಕುವುದರ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ಆನಂತರ ನೀವು ಈ ಯೋಜನೆಯನ್ನು ಪಡೆಯುವುದಕ್ಕೆ ಅರ್ಹರ ಅಥವಾ ಅರ್ಹರಿಲ್ಲವ ಎನ್ನುವುದನ್ನು ಪರಿ ಶೀಲಿಸುವುದರ ಮೂಲಕ ಅವರು ಕೆಲವೊಂದಷ್ಟು ಸಮಯ ತೆಗೆದು ಕೊಳ್ಳುತ್ತಾರೆ.
ಒಪ್ಪಿಗೆ ಯಾಗಿದ್ದರೆ ನಿಮಗೆ ಕೆಲವೊಂದಷ್ಟು ಮಾಹಿತಿ ಗಳನ್ನು ಕಳಿಸುವುದರ ಮೂಲಕ ನಿಮಗೆ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎನ್ನುವಂತಹ ಸಂದೇಶವನ್ನು ತಿಳಿಸುತ್ತಾರೆ. ಈ ಮೂಲಕ ನೀವು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.