ನಮ್ಮ ಕರ್ನಾಟಕದಲ್ಲಿ ಸಾವಿರಾರು ದೇವಾಲಯಗಳಿವೆ. ಕೆಲವು ದೇವಾಲಯಗಳು ತಮ್ಮ ಸಾಂಸ್ಕೃತಿಕ ಹಿನ್ನೆಲೆ, ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಕಾರಣದಿಂದಾಗಿ ಪ್ರಖ್ಯಾತಿಯಾಗಿದ್ದರೆ ಇನ್ನು ಕೆಲವು ಸ್ಥಳ ಮಹಾತ್ಮೆ ಕಾರಣದಿಂದಾಗಿ ಜಗತ್ ವಿಖ್ಯಾತಗೊಂಡಿವೆ. ನಮ್ಮ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಕೂಡ ಇಂತಹ ಶಕ್ತಿಶಾಲಿ ದೈವ ಬಲವುಳ್ಳ ಸಾಕಷ್ಟು ದೇವಸ್ಥಾನಗಳು ನೆಲೆಗೊಂಡಿರುವುದು ಮತ್ತು ಅಲ್ಲಿ ಪ್ರತಿನಿತ್ಯವೂ ಭಕ್ತರ ಸಮೂಹ ತುಂಬಿರುವುದನ್ನು ನಾವು ಕಾಣಬಹುದು.
ಅಂತಹದ್ದೇ ಒಂದು ವಿಶೇಷ ಧಾರ್ಮಿಕ ಸ್ಥಳದ ಬಗ್ಗೆ ನಾವು ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ. ಈ ಸ್ಥಳದ ಮಹಾತ್ಮೆಯನ್ನು ತಿಳಿದ ಮೇಲೆ ನೀವು ಕೂಡ ಈ ದೇವಸ್ಥಾನಕ್ಕೆ ಹೋಗಲು ಬಯಸುವುದರಲ್ಲಿ ಎರಡು ಮಾತಿಲ್ಲ. ಈಗ ನಾವು ಹೇಳುತ್ತಿರುವುದು ಹಾಸನ ಜಿಲ್ಲೆಯಲ್ಲಿರುವ ಪ್ರತಿಮನೆಯ ಆರಾಧ್ಯ ದೈವವಾಗಿ ಕಾಯುತ್ತಾ ಮನೆಮನೆ ಮಾತಾಗಿರುವ ತಾಯಿ ಪುರದಮ್ಮ ವಾಸವಿರುವ ದೇವಸ್ಥಾನದ ಬಗ್ಗೆ.
ಈ ಸುದ್ದಿ ಓದಿ:- ಎಲ್ಲಾ ರೈತರ ಖಾತೆಗೂ ಬೆಳೆ ಹಾನಿ ಹಾಗೂ ಬರ ಪರಿಹಾರದ ಹಣ ಜಮೆ, ನಿಮ್ಮ ಖಾತೆಗೆ ಹಣ ಬರಲಿದೆಯೇ ಈ ರೀತಿ ಚೆಕ್ ಮಾಡಿ.!
ಹಾಸನದ ಬಳಿ ಇರುವ ಸೊಪ್ಪಿನ ಹಳ್ಳಿ ಎನ್ನುವ ಗ್ರಾಮದಲ್ಲಿ ಈ ಪುರದಮ್ಮ ತಾಯಿಯ ದೇವಸ್ಥಾನ ಇದೆ. ಆರಂಭದಲ್ಲಿ ಒಂದು ಮರದ ಕೆಳಗೆ ವಿಗ್ರಹ ರೂಪದಲ್ಲಿ ಪೂಜೆ ಮಾಡಿಸಿಕೊಳ್ಳುತ್ತಿದ್ದ ತಾಯಿಯ ಮಹಾತ್ಮೆ ಎಂದು ಲೋಕ ವಿಖ್ಯಾತಿಯಾಗಿ ಪುರದಮ್ಮನ ದೇವಸ್ಥಾನವು ಇಂದು ಕರ್ನಾಟಕದ ಹಾಸನ ನಗರದಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ.
ಈ ದೇವಸ್ಥಾನವು ಪ್ರಮುಖವಾಗಿ ಶಕ್ತಿ ಮತ್ತು ಮಹಾಲಕ್ಷ್ಮಿ ದೇವಿಯರನ್ನು ಒಟ್ಟಿಗೆ ಪೂಜಿಸುವುದಕ್ಕಾಗಿ ಪ್ರಸಿದ್ಧವಾಗಿದೆ. ಸಾಕ್ಷಾತ್ ಶಕ್ತಿ ದೇವತೆಗಳ ಸ್ವರೂಪವಾಗಿರುವ ಈ ದೇವಿಯು ಶಕ್ತಿ ಮತ್ತು ಮಹಾಲಕ್ಷ್ಮಿ ರೂಪದಲ್ಲಿ ಪ್ರತಿಷ್ಠಾಪನೆಯಾಗಿದ್ದಾರೆ. ಪುರದಮ್ಮ ದೇವಸ್ಥಾನದ ಮತ್ತೊಂದು ವಿಶೇಷತೆ ಏನೆಂದರೆ ಈ ತಾಯಿಯ ಅಲಂಕಾರ ಹಾಗೂ ಬಲಿ ಕೊಡುವ ವಿಧಾನ ಇಲ್ಲಿ ದೇವಿಗೆ ತಾಳಿ ಬಿಟ್ಟು ಬೇರೆ ಯಾವ ಒಡವೆ ವಸ್ತ್ರಗಳನ್ನು ಹಾಕುವುದಿಲ್ಲ.
ಈ ಸುದ್ದಿ ಓದಿ:- ಹಣಕಾಸು ಉಳಿತಾಯಕ್ಕೆ ನಿಮ್ಮ ಮನೆ ವಾಸ್ತು ಕಾರಣವಾಗುತ್ತಾ ನೀವೇ ತಿಳಿದುಕೊಳ್ಳಿ.
ಹಿಂದೆ ಮರದ ಕೆಳಗಿದ್ದ ದೇವಾಲಯವನ್ನು ಈಗ ಚಿಕ್ಕ ದೇವಸ್ಥಾನವಾಗಿ ಮಾಡಲಾಗಿದೆ ಅಷ್ಟೇ, ಆದರೆ ತಾಯಿಗೆ ಅಲಂಕಾರ ಇಲ್ಲ. ಅರಿಶಿನ ಕುಂಕುಮವೇ ತಾಯಿಗೆ ಇಷ್ಟ ಹಾಗಾಗಿ ಅದನ್ನೇ ಧರಿಸಲಾಗುತ್ತದೆ. ಹಾಗೆಯೇ ಎಲ್ಲಾ ದೇವಸ್ಥಾನದಲ್ಲಿ ಕುರಿ ಕೋಳಿ ಬಲಿ ಕೊಡುವುದು ವಾಡಿಕೆ ಇರುವಂತೆ ಇಲ್ಲಿಯೂ ಸಹ ಭಕ್ತಾದಿಗಳು ಇಂತಹ ಹರಕೆಗಳನ್ನು ಹೊರುತ್ತಾರೆ ಆದರೆ ಇಲ್ಲಿ ಆಚರಣೆಯು ಸ್ವಲ್ಪ ಭಿನ್ನವಾಗಿದೆ.
ತಾಯಿ ಪುರದಮ್ಮ ದೇವಿಗೆ ಹಂದಿ ಬಲಿ ಎಂದರೆ ಬಹಳ ಅಚ್ಚು ಮೆಚ್ಚು. ಹಾಗಾಗಿ ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಡಲು ಈ ತಾಯಿಗೆ ಭಕ್ತರು ಇಲ್ಲಿಗೆ ಬಂದು ಹಂದಿಯನ್ನೇ ಬಲಿ ಕೊಡುತ್ತಾರೆ. ಸಸ್ಯಹಾರಿಗಳು ಕೂಡ ಇಂತಹದನ್ನೇ ಹರಕ್ಕೆ ಹೊತ್ತು ಬೇರೆಯವರಿಂದ ಪ್ರಸಾದ ಮಾಡಿಸುತ್ತಾರೆ.
ಈ ಸುದ್ದಿ ಓದಿ:- ಈ ಐದು ಲಕ್ಷಣಗಳು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವುದನ್ನು ತಿಳಿಸುತ್ತವೆ.!
ಈ ರೀತಿ ತಾಯಿಗೆ ಬಲಿ ಕೊಟ್ಟು ತಮ್ಮ ಕಷ್ಟಗಳನ್ನು ಪರಿಹಾರ ಮಾಡುವಂತೆ ಬೇಡಿಕೊಂಡರೆ ಅಥವಾ ಬಲಿಕೊಡುವುದಾಗಿ ಹರಕೆ ಹೊತ್ತುಕೊಂಡರೆ ಸಾಕು ಆದಷ್ಟು ಬೇಗ ಅವರ ಕಷ್ಟ ಬಗೆಹರಿಯಲಿದೆ. ಆದರೆ ಈ ಸ್ಥಳದಲ್ಲಿ ಯಾರು ಕೂಡ ಹೋಗಿ ಹಂದಿ ಎಂದು ಹೇಳಬಾರದು.
ಅಂಗಡಿಗಳಲ್ಲಿ ಆಗಲಿ ಬಲಿಕೊಡುವ ಸ್ಥಳದಲ್ಲೇ ಆಗಲಿ ಹಂದಿ ಎನ್ನುವಂತಿಲ್ಲ. ಅದರ ಬದಲಿಗೆ ಭೇಟೆ ಎಂಬ ಪದ ಬಳಸಬೇಕು. ಈ ತಾಯಿಯನ್ನು ನಂಬಿ ಕಷ್ಟಗಳನ್ನು ಹೊತ್ತು ಬಂದವರಿಗೆ ಯಾರಿಗೂ ಕೊಡ ಇಲ್ಲಿ ಮೋ’ಸ, ನಿರಾಸೆ ಆಗುವುದಿಲ್ಲ ಎಂದು ಬಲವಾಗಿ ನಂಬಬಹುದು ಪ್ರತಿನಿತ್ಯವೂ ಕೂಡ ದೇವಿಯ ದರ್ಶನ ಸಿಗುತ್ತದೆ.
ಈ ಸುದ್ದಿ ಓದಿ:- ತುಲಾ ರಾಶಿಯ ಮಾಸ ಭವಿಷ್ಯ ಮಾರ್ಚ್ 2024, ಮುಖ್ಯವಾದ ಮೂರು ಸಲಹೆಗಳು.!
ಆದರೆ ಮಂಗಳವಾರ, ಶುಕ್ರವಾರ, ಭಾನುವಾರ ಮತ್ತು ಅಮಾವಾಸ್ಯೆ ದಿನಗಳಂದು ವಿಪರೀತ ಜನಜಂಗುಳಿ ಇರುತ್ತದೆ ಮತ್ತು ದೇವಸ್ಥಾನದ ಸುತ್ತ ಜಾತ್ರೆಯ ವಾತಾವರಣವೇ ನಿರ್ಮಾಣವಾಗಿರುತ್ತದೆ. ನೀವು ಕೂಡ ಬಿಡುವಾದಾಗ ಕುಟುಂಬದ ಜೊತೆ ಒಮ್ಮೆ ಭೇಟಿ ಕೊಡಿ, ತಾಯಿಯ ಕೃಪೆಗೆ ಪಾತ್ರರಾಗಿ.