Home Useful Information ಒಂದೇ ಒಂದು ಖಾಲಿ ತೆಂಗಿನಕಾಯಿ ಚಿಪ್ಪಿನಿಂದ ನಿಮ್ಮ ಮನೆಗೆ ಸೊಳ್ಳೆಗಳು ಬಾರದಂತೆ ಮಾಡಬಹುದು.!

ಒಂದೇ ಒಂದು ಖಾಲಿ ತೆಂಗಿನಕಾಯಿ ಚಿಪ್ಪಿನಿಂದ ನಿಮ್ಮ ಮನೆಗೆ ಸೊಳ್ಳೆಗಳು ಬಾರದಂತೆ ಮಾಡಬಹುದು.!

0
ಒಂದೇ ಒಂದು ಖಾಲಿ ತೆಂಗಿನಕಾಯಿ ಚಿಪ್ಪಿನಿಂದ ನಿಮ್ಮ ಮನೆಗೆ ಸೊಳ್ಳೆಗಳು ಬಾರದಂತೆ ಮಾಡಬಹುದು.!

 

ಮಳೆಗಾಲ ಬಂತು ಎಂದರೆ ಜೊತೆಗೆ ಮನೆಯಲ್ಲಿ ಸೊಳ್ಳೆಗಳ ಕಾಟವು ಕೂಡ ಶುರು ಆಗುತ್ತದೆ. ಪ್ರತಿದಿನ ಸಂಜೆ ತಪ್ಪದೇ ಅತಿಥಿಗಳಂತೆ ಸೊಳ್ಳೆಗಳ ಆಗಮನ ಆಗುತ್ತಿರುತ್ತದೆ. ಈ ರೀತಿ ಬರುವ ಸೊಳ್ಳೆಗಳಿಂದ ಗುಯ್ ಗುಯ್ ಎನ್ನುವ ಶಬ್ದದ ಕಿರಿಕಿರಿ ಮಾತ್ರವಲ್ಲದೆ ಮಲೇರಿಯಾ, ಡೆಂಗ್ಯೂ ನಂತಹ ಮಾರಣಾಂತಿಕ ಕಾಯಿಲೆಗಳು ಕೂಡ ಹರಡುತ್ತವೆ ಹಾಗಾಗಿ ಈ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಪಡುವ ಪಾಡು ಅಷ್ಟಿಷ್ಟಲ್ಲ.

ಸೊಳ್ಳೆ ಕಚ್ಚಬಾರದೆಂದು ಸೊಳ್ಳೆ ಪರದೆ ಕಟ್ಟಿಕೊಂಡು ಮಲಗುವುದು, ಮೈತುಂಬ ಬಟ್ಟೆ ಹಾಕುವುದು, ಮನೆಯ ಅಕ್ಕ ಪಕ್ಕದಲ್ಲಿ ನೀರು ಶೇಖರೆಯಾಗದಂತೆ ನೋಡಿಕೊಳ್ಳುವುದು ಇಷ್ಟೆಲ್ಲಾ ಜಾಗ್ರತೆಯಿಂದ ಇದ್ದರೂ ಕೂಡ ಇದಿಷ್ಟೇ ಸಾಲವುದಿಲ್ಲ ಕೆಲವರು ಇವುಗಳನ್ನು ಕೊಲ್ಲಲು ಅಥವಾ ಇವುಗಳು ಬಾರದಂತೆ ತಡೆಯಲು ಸೊಳ್ಳೆ ಕಾಯಿಲ್ ಉರಿಸುವುದು ಅಥವಾ ಸ್ಪ್ರೇ ಹಚ್ಚುವುದು ಇಂತಹ ಕೆಮಿಕಲ್ ಗಳನ್ನು ಬಳಸುತ್ತಾರೆ. ಆದರೆ ಇದರ ವಾಸನೆಯನ್ನು ತೆಗೆದುಕೊಳ್ಳುವಂತಹ ನಮ್ಮ ಮೇಲೂ ಕೂಡ ಇದರ ಸೈಡ್ ಎಫೆಕ್ಟ್ ಆಗುತ್ತದೆ.

ಈ ಸುದ್ದಿ ಓದಿ:- ನಾವು ಹುಟ್ಟುವ ಮೊದಲೇ ನಾವೇನಾಗಬೇಕು ಎನ್ನುವುದು ನಿರ್ಧಾರ ಆಗಿರುತ್ತದೆಯೇ? ಹಣೆಬರಹ ಎನ್ನುವುದು ಎಷ್ಟು ಸತ್ಯ…

ಮನೆಯಲ್ಲಿ ಚಿಕ್ಕ ಮಕ್ಕಳು ಬಹಳ ವಯಸ್ಸಾದವರು ಇದ್ದರೆ ಈ ಕೆಮಿಕಲ್ ಗಳಿಂದ ಬಹಳ ಬೇಗ ಅವರಿಗೆ ತೊಂದರೆ ಆಗುತ್ತದೆ. ಅಲರ್ಜಿ, ಚರ್ಮ ಸಮಸ್ಯೆ, ಕೆಮ್ಮು ಇನ್ನು ಮುಂತಾದ ತೊಂದರೆಗಳು ಸೊಳ್ಳೆಗಳಿಗೆ ಸಿಂಪಡಿಸಲು ಕೆಮಿಕಲ್ ವಸ್ತುಗಳ ಕಾರಣದಿಂದಾಗಿ ನಮಗೂ ಆಗುತ್ತದೆ. ಹಾಗಾಗಿ ನ್ಯಾಚುರಲ್ ಆಗಿಯೇ ಆದಷ್ಟು ಸೊಳ್ಳೆಗಳನ್ನು ಓಡಿಸಲು ಪ್ರಯತ್ನ ಪಡುವುದು ಬಹಳ ಒಳ್ಳೆಯದು, ಇದರಿಂದ ಸೊಳ್ಳೆಗಳ ಕಾಟವು ತಪ್ಪುತ್ತದೆ.

ನಮ್ಮ ಆರೋಗ್ಯಕ್ಕೂ ಕೂಡ ತೊಂದರೆ ಆಗುವುದಿಲ್ಲ. ಈ ರೀತಿ ನೀವು ನ್ಯಾಚುರಲ್ ಆಗಿ ಸೊಳ್ಳೆ ಬರದಂತೆ ಹೇಗೆ ತಡೆಯುವುದು ಎಂದು ಯೋಚಿಸುತ್ತಿದ್ದರೆ ಈಗ ನಾವು ಹೇಳುವ ಈ ಒಂದು ಸಣ್ಣ ಟಿಪ್ ಫಾಲೋ ಮಾಡಿ ಸಾಕು. ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಒಂದು ರೂಪಾಯಿ ಕೂಡ ಖರ್ಚು ಇಲ್ಲದೆ ನಿಮ್ಮ ಮನೆಯಲ್ಲಿ ಇರುವ ಅದರಲ್ಲೂ ಕಸಕ್ಕೆ ಬಿಸಾಕುವ ವೇಸ್ಟ್ ವಸ್ತುಗಳನ್ನು ಉಪಯೋಗಿಸಿಕೊಂಡು ನೀವು ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಬಹುದು.

ಎಲ್ಲರ ಮನೆಯಲ್ಲೂ ಕೂಡ ತೆಂಗಿನಕಾಯಿ ಬಳಸುತ್ತೇವೆ. ಈ ರೀತಿ ತೆಂಗಿನಕಾಯಿ ಬಳಸಿದ ಮೇಲೆ ಚಿಪ್ಪು ನಾರು ಇವುಗಳನ್ನು ಕಸಕ್ಕೆ ಬಿಸಾಕುತ್ತೇವೆ. ಆದರೆ ಇನ್ನು ಮುಂದೆ ಆ ರೀತಿ ಮಾಡಬೇಡಿ ಜೊತೆಗೆ ಈರುಳ್ಳಿ ಬೆಳ್ಳುಳ್ಳಿಯನ್ನು ಬಿಡಿಸುವಾಗ ಬರುವ ಸಿಪ್ಪೆಯನ್ನು ಕೂಡ ಕಸಕ್ಕೆ ಹಾಕಬೇಡಿ ಅದನ್ನು ಕೂಡ ಇಟ್ಟುಕೊಳ್ಳಿ. ಪ್ರತಿದಿನ ಸಂಜೆ ತೆಂಗಿನಕಾಯಿ ಚಿಪ್ಪಿಗೆ ನಾರು ಹಾಗೂ ಈರುಳ್ಳಿ ಬೆಳ್ಳುಳ್ಳಿ ಸಿಪ್ಪೆಯನ್ನು ಹಾಕಿ ಬೆಂಕಿ ಹಚ್ಚಿ ಇದು ಹತ್ತಿಕೊಂಡ ತಕ್ಷಣ ಹೋಗೆ ಬರಲು ಆರಂಭವಾಗುತ್ತದೆ ಆಗ ಮನೆಯ ಮೂಲೆ ಮೂಲೆಗೂ ಕೂಡ ಅದನ್ನು ಹಿಡಿದುಕೊಂಡು ಓಡಾಡಿ.

ಈ ಸುದ್ದಿ ಓದಿ:-ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಮಾರ್ಚ್ 14ರ ಒಳಗೆ ಈ ಕೆಲಸ ಮಾಡದೇ ಇದ್ದರೆ ಆಧಾರ್ ಕಾರ್ಡ್ ಬಂದ್ ಆಗುವುದು ಗ್ಯಾರಂಟಿ.!

ಈ ರೀತಿ ಮಾಡಿದರೆ ಈ ಹೊಗೆಗೆ ಸೊಳ್ಳೆಗಳು ನಿಮ್ಮ ಮನೆಗೆ ಪ್ರವೇಶ ಮಾಡುವುದಿಲ್ಲ ಮತ್ತು ಇತರ ಘಾಟು ಅವುಗಳಿಗೆ ಆಗದೆ ಇರುವುದರಿಂದ ಮತ್ತೆ ನಿಮ್ಮ ಮನೆ ಕಡೆಗೆ ಅವು ತಲೆ ಕೂಡ ಹಾಕುವುದಿಲ್ಲ. ಕೆಲವರು ಇದೇ ರೀತಿ ಬೇವಿನ ಸೊಪ್ಪಿನಿಂದ ಕೂಡ ಹೊಗೆ ಹಾಕುತ್ತಾರೆ, ಅದನ್ನು ಕೂಡ ಮಾಡಿ ನೋಡಬಹುದು. ಈ ಟಿಪ್ ಬಹಳ ಗಂಭೀರವಾದ ಉತ್ತಮ ಪರಿಣಾಮವನ್ನು ಕೊಡುತ್ತದೆ ಇದನ್ನು ಒಮ್ಮೆ ಟ್ರೈ ಮಾಡಿ ಇದರ ಅನುಕೂಲತೆ ತಿಳಿದ ಮೇಲೆ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆಗೂ ಕೂಡ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here