ಆಧಾರ್ ಕಾರ್ಡ್ (Adhar Card) 12 ಅಂಕಿಗಳ ಒಂದು ಗುರುತಿನ ಚೀಟಿ ಭಾರತದ ಪ್ರತಿಯೊಬ್ಬ ನಾಗರಿಕನು ಕೂಡ ಆಧಾರ್ ಕಾರ್ಡ್ ದಾಖಲೆ ಹೊಂದಿರಲೇಬೇಕು. ಭಾರತ ಸರ್ಕಾರದ ಅಂಗ ಸಂಸ್ಥೆಯಾಗಿರುವ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ದೇಶದ ನಾಗರಿಕರಿಗೆ ಆಧಾರ್ ಕಾರ್ಡ್ ವಿತರಿಸುತ್ತದೆ. ಒಬ್ಬ ವ್ಯಕ್ತಿಗೆ ಆತನ ಜೀವಮಾನದಲ್ಲಿ ನೀಡಲಾಗುವ ಒಂದು ಆಧಾರ್ ಸಂಖ್ಯೆಯು ಶಾಶ್ವತವಾಗಿ ಆತನ ಆಧಾರ್ ಸಂಖ್ಯೆ ಆಗಿರುತ್ತದೆ.
ಆದರೆ ಆ ವ್ಯಕ್ತಿಯ ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಮುಖ ಚಹರೆ ಮತ್ತು ಆತನ ಬಯೋಮೆಟ್ರಿಕ್ ಬದಲಾಗುವುದರಿಂದ 10 ವರ್ಷಕೊಮ್ಮೆ ಇದನ್ನು ರಿನಿವಲ್ (Aadhar Renewal) ಮಾಡಿಕೊಳ್ಳಬೇಕಾಗುತ್ತದೆ. ಇದರ ನಡುವೆ ವ್ಯಕ್ತಿಯು ಈ 10 ವರ್ಷದಲ್ಲಿ ತನ್ನ ಯಾವುದೇ ಒಂದು ಮಾಹಿತಿ ತಿದ್ದುಪಡಿಗಾಗಿ ಆಧಾರ್ ಕಾರ್ಡ್ ರಿನಿವಲ್ ಮಾಡಿಸಿದ್ದರೆ ಮತ್ತೆ ಅದನ್ನು ಅಪ್ಡೇಟ್ ಮಾಡಿಸುವ ಅವಶ್ಯಕತೆ ಇರುವುದಿಲ್ಲ.
ಈಗಾಗಲೇ ಆಧಾರ್ ಕಾರ್ಡ್ ವಿತರಿಸಿ 10 ವರ್ಷಗಳಾಗಿದ್ದು, ಇದುವರೆಗೂ ಒಂದು ಬಾರಿ ಕೂಡ ಯಾವ ಕಾರಣದಿಂದಲೂ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳದ ಮತ್ತು ಅಪ್ಡೇಟ್ ಮಾಡಿಸದ ಲಕ್ಷಾಂತರ ನಾಗರಿಕರಿದ್ದಾರೆ. ಇವರಿಗೆ UIDAI ಕೂಡಲೆ ಆಧಾರ್ ಕಾರ್ಡ್ ರಿನಿವಲ್ ಮಾಡಿಸುವಂತೆ ಎಚ್ಚರಿಕೆ ನೀಡಿದೆ. ಕಳೆದ ವರ್ಷವೇ ಅಂದರೆ 2023 ರಲ್ಲಿ UIDAI ಈ ಬಗ್ಗೆ ಪ್ರಕಟಣೆ ಹೊರಡಿಸಿ ಉಚಿತವಾಗಿ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಅನುಮತಿ ನೀಡಿತ್ತು.
ಈ ಸುದ್ದಿ ಓದಿ:- ಈ ವರ್ಷ ಬಹಳ ಅದೃಷ್ಟ ಪಡೆದಿರುವ ರಾಶಿಗಳು ಇವು, 2025 ರ ವರೆಗೂ ಈ ರಾಶಿಯವರಿಗೆ ಹಣದ ಹೊಳಯೇ ಹರಿಯುತ್ತಿರುತ್ತದೆ, ರಾಹು ನೀಡಲಿದ್ದಾನೆ ಸುಖದ ಸುಪ್ಪತ್ತಿಗೆ.!
ಆದರೆ ಮಾಹಿತಿ ಕೊರತೆ ಕಾರಣದಿಂದಾಗಿ ಅನೇಕರು ಇನ್ನೂ ಕೂಡ ತಮ್ಮ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಸಿರದ ಕಾರಣ ಕಡೆ ಸಮಯದಲ್ಲಿ ಹೆಚ್ಚಿನ ಕಾಲಾವಕಾಶಕ್ಕಾಗಿ ಕೋರಿಕೆ ಕೂಡ ಕೇಳಿ ಬಂದಿತ್ತು. ಇದರ ಮೇರೆಗೆ ಸತತವಾಗಿ ಮೂರನೇ ಬಾರಿಗೆ ಈ ಕಾಲಾವಕಾಶವನ್ನು ವಿಸ್ತರಿಸಲಾಗಿತ್ತು.
ಆ ಪ್ರಕಾರವಾಗಿ ಉಚಿತವಾಗಿ ಮಾರ್ಚ್ 14 ರ ವರೆಗೂ ಕೂಡ ಇನ್ನು ಯಾರು ಕಳೆದ 10 ವರ್ಷದಲ್ಲಿ ಒಮ್ಮೆ ಕೂಡ ತಮ್ಮ ಆಧಾರ್ ಕಾರ್ಡ್ ರಿನಿವಲ್ ಮಾಡಿಸಿಲ್ಲ ಅವರು ತಮ್ಮ ಗುರುತಿನ ಚೀಟಿ (POI) ಮತ್ತು ವಿಳಾಸದ ಪುರಾವೆ (POA) ಜೊತೆ ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು. ಒಂದು ವೇಳೆ ನೀವೇನಾದರೂ ಸರ್ಕಾರ ನೀಡುವ ಸೂಚನೆಯಂತೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಹೋದರೆ ಅನೇಕ ತೊಡಕುಗಳನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ.
ಸರ್ಕಾರದ ನಿಯಮದಂತೆ 10 ವರ್ಷಗಳಿಂದ ಒಂದು ಬಾರಿ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಆಗದಿದ್ದರೆ ಅಂತಹ ಆಧಾರ್ ಕಾರ್ಡ್ ಗಳನ್ನು UIDAI ತಾತ್ಕಾಲಿಕವಾಗಿ ನಿರ್ಬಂಧಿಸಲಿದೆ ಮತ್ತು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿದ ನಂತರವಷ್ಟೇ ಅದು ತೆರವುಗೊಳ್ಳುವುದು. ಈಗ ಶಾಲೆಗೆ ದಾಖಲಾತಿ ಮಾಡುವುದರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವುದು, ಪಾಸ್ಪೋರ್ಟ್ ಮಾಡಿದ್ದು ಯಾವುದೇ ಉದ್ಯೋಗಕ್ಕೆ ಸೇರುವುದು ಮತ್ತು ಮನೆ ಬಾಡಿಗೆ ಪಡೆಯುವಾಗ ಕೂಡ ನಮ್ಮ ಗುರುತಿಗಾಗಿ ಆಧಾರ್ ಕಾರ್ಡ್ ನೀಡಲೇಬೇಕು.
ಈ ಸುದ್ದಿ ಓದಿ:- ವಿವಾಹ, ಸಂತಾನ ಭಾಗ್ಯ, ಸ್ವಂತ ಮನೆ, ಅದೃಷ್ಟ ವ್ಯಾಪಾರ ಉದ್ಯೋಗ ಇವು ನಿಮ್ಮ ಜೀವನದಲ್ಲಿ ವಿಳಂಭವಾಗುತ್ತಿದೆಯೇ.? ಈ ಸರಳ ಉಪಾಯ ಮಾಡಿ ಸಾಕು
ಅಲ್ಲದೆ ಸರ್ಕಾರದಿಂದ ಸಿಗುವ ಯಾವುದೇ ಯಾವುದೇ ಯೋಜನೆ ಕಿಸಾನ್ ಸಮ್ಮಾನ್, ಗೃಹಲಕ್ಷ್ಮಿ, ಅನ್ನ ಭಾಗ್ಯ ಯೋಜನೆ, ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಗಳು ಇವುಗಳನ್ನು ಕೂಡ ಆಧಾರ್ ಕಾರ್ಡ್ ಇಲ್ಲದೆ ಪಡೆಯಲು ಆಗುವುದಿಲ್ಲ. ಈ ಕಾಲಾವಕಾಶ ಮುಗಿದ ಮೇಲೆ ಮುಂದಿನ ದಿನಗಳಲ ದಂಡ ನೀಡಿ ಆಧಾರ್ ಅಪ್ಡೇಟ್ ಮಾಡಿಸುವ ಪರಿಸ್ಥಿತಿ ಬರಬಹುದು ಹಾಗಾಗಿ ಕೂಡಲೇ ಆಧಾರ್ ಅಪ್ಡೇಟ್ ಮಾಡಿಸಿ.