2024 ರಲ್ಲಿ ರಾಹು ಮೀನ ರಾಶಿಯಲ್ಲಿ ಇರಲಿದ್ದಾನೆ. ಈ ಗ್ರಹವು ಒಂದು ರಾಶಿ ಮನೆಯಿಂದ ಮತ್ತೊಂದು ರಾಶಿ ಮನೆಗೆ ಚಲಿಸಲು 18 ತಿಂಗಳುಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ಮೀನ ರಾಶಿಯ ರಾಶಿ ಅಧಿಪತಿ ಗುರು ಗ್ರಹ. ರಾಹು ಗ್ರಹ ಹಾಗೂ ಗುರುಗ್ರಹವು ಪರಸ್ಪರ ಸೌಹಾರ್ದ ಸಂಬಂಧವನ್ನು ಹೊಂದಿಲ್ಲ. ರಾಹು ಗ್ರಹವನ್ನು ಎರಡನೇ ಗ್ರಹ ಎಂದು ಕರೆಯುತ್ತಾರೆ, ಈ ಗ್ರಹವು ಹಿಮ್ಮುಖವಾಗಿ ಚಲನೆ ಮಾಡುತ್ತದೆ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ 2024ರಲ್ಲಿ ಮೀನ ರಾಶಿಯಲ್ಲಿರುವ ರಾಹುಗ್ರಹವು ದ್ವಾದಶ ರಾಶಿಗಳ ಮೇಲೆ ವಿವಿಧ ರೀತಿಯ ಪರಿಣಾಮ ಉಂಟು ಮಾಡುತ್ತಿದೆ . ಇದರಿಂದ ಕೆಲವು ರಾಶಿಗಳಿಗೆ ಪ್ರತಿಕೂಲ ಪರಿಣಾಮಗಳು ಉಂಟಾಗಿದ್ದರೆ ಇನ್ನು ಕೆಲವು ರಾಶಿಗಳು ಅನಾನುಕೂಲತೆಯನ್ನು ಹೊಂದಿವೆ. ರಾಹುವಿನ ಪ್ರಭಾವದಿಂದ ಯಾವ ರಾಶಿಯವರಿಗೆ ಶುಭ ಫಲ ಇಲ್ಲಿದೆ ನೋಡಿ ವಿವರ…
ಈ ಸುದ್ದಿ ಓದಿ:- ಎಷ್ಟೇ ವರ್ಷಗಳಿಂದ ಥೈರಾಯ್ಡ್ ಇರಲಿ, ಈ ಶಂಖ ಮುದ್ರೆ ಮಾಡಿದ್ರೆ ಥೈರಾಯ್ಡ್ ಸಂಪೂರ್ಣ ಗುಣಮುಖವಾಗುತ್ತೆ.!
ಮೇಷ ರಾಶಿ:- ಮೇಷ ರಾಶಿಯವರು 2024ರಲ್ಲಿ ರಾಹು ಗ್ರಹದ ಪ್ರಭಾವದಿಂದಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿ ಬಂದರೂ ಕೂಡ ಇದೆಲ್ಲದರಲ್ಲೂ ಯಶಸ್ವಿ ಆಗುತ್ತಾರೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ತೊಡಗಿಕೊಂಡಿರುವವರಿಗೆ ಬಹಳ ಉತ್ತಮವಾದ ಫಲಿತಾಂಶಗಳು ಸಿಗುತ್ತವೆ. ನಿಮ್ಮ ಮನೆಯಲ್ಲಿ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಕುಟುಂಬ ಸಮೇತವಾಗಿ ತೀರ್ಥಯಾತ್ರೆಗಳಿಗೂ ಕೂಡ ಹೋಗುತ್ತೀರಿ. ನಿಮ್ಮ ಅನಾರೋಗ್ಯ ಸಮಸ್ಯೆಗಳು ಕೂಡ ಪರಿಹಾರ ಆಗಲಿವೆ.
ಸಿಂಹ ರಾಶಿ:- ರಾಹುಗ್ರಹದ ಚಲನೆ ಪ್ರಭಾವವು 2024ರಲ್ಲಿ ಅನೇಕ ಮಂಗಳಕರ ಪರಿಣಾಮಗಳನ್ನು ಉಂಟು ಮಾಡುತ್ತದೆ. ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಅನೇಕ ಅವಕಾಶಗಳು ಸಿಗುತ್ತವೆ. ವರ್ಷದ ಮಧ್ಯದಲ್ಲಿ ಸಂಗಾತಿ ನೆರವಿನಿಂದ ಆಸ್ತಿ ಖರೀದಿ ಮಾಡುವ ಯೋಗಗಳಿವೆ. ನಿಮ್ಮ ಕುಟುಂಬದ ಅನೇಕ ಅಗತ್ಯತೆಗಳನ್ನು ಪೂರೈಸುವ ಶಕ್ತಿ ಹಾಗೂ ಅವಕಾಶ ಈ 2024ರ ವರ್ಷದಲ್ಲಿ ನಿಮಗೆ ಸಿಗಲಿದೆ. ಕುಟುಂಬದ ನೆರವು ಹಾಗೂ ಪೋಷಕರ ಆಶೀರ್ವಾದ ನಿಮಗೆ ಸದಾ ಸಿಗುವುದರಿಂದ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಮತ್ತು ಹೊಸ ವ್ಯಾಪಾರ ಆರಂಭಿಸುವ ಅವಕಾಶವನ್ನು ಕೂಡ ನೀಡುತ್ತದೆ.
ಕನ್ಯಾ ರಾಶಿ:- 2024ರಲ್ಲಿ ಕನ್ಯಾ ರಾಶಿಯವರಿಗೆ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುವ ಅವಕಾಶಗಳಿವೆ. ಕೆಲವೊಂದು ಸಣ್ಣಪುಟ್ಟ ಸಮಸ್ಯೆಗಳು ಇದ್ದರೂ ಕೂಡ ನಿಮ್ಮ ಸಂವಹನ ಕೌಶಲ್ಯದಿಂದ ಪರಿಹರಿಸಿಕೊಳ್ಳುತ್ತೀರಿ. ಈ ವರ್ಷ ಅನೇಕ ಉತ್ತಮ ಕ್ಷಣಗಳನ್ನು ಹೊಂದಿದ್ದೀರಿ, ಕುಟುಂಬದ ಜೊತೆ ಮತ್ತು ಸಾಮಾಜಿಕ ಜೊತೆ ಇಂತಹ ಸಮಯವನ್ನು ಹಂಚಿಕೊಳ್ಳುತ್ತೀರಿ. ಉದ್ಯೋಗಸ್ಥರಿಗೂ ಕೂಡ ಅತ್ಯಂತ ಶುಭ ಮತ್ತು ವ್ಯಾಪಾರಸ್ಥರಿಗೆ ಲಾಭ ಅಧಿಕವಾಗುವ ಅದೃಷ್ಟ ಈ ವರ್ಷ ಇದೆ.
ಈ ಸುದ್ದಿ ಓದಿ:- ಎಲ್ಲಾ ರೈತರ ಖಾತೆಗೂ ಬೆಳೆ ಹಾನಿ ಹಾಗೂ ಬರ ಪರಿಹಾರದ ಹಣ ಜಮೆ, ನಿಮ್ಮ ಖಾತೆಗೆ ಹಣ ಬರಲಿದೆಯೇ ಈ ರೀತಿ ಚೆಕ್ ಮಾಡಿ.!
ತುಲಾ ರಾಶಿ:- ತುಲಾ ರಾಶಿಯವರಿಗೆ ಕೂಡ ಈ ವರ್ಷ ಹಣಕಾಸಿನ ಸಮಸ್ಯೆಗಳು ಕಾಡುವುದಿಲ್ಲ ಕುಟುಂಬದಲ್ಲೂ ಕೂಡ ಸುಖ ಶಾಂತಿ ನೆಮ್ಮದಿ ಇರುತ್ತದೆ. ನಿಮ್ಮ ಸಂಬಂಧಿಕರ ನಡುವೆ ಇದ್ದ ಸಣ್ಣ ಪುಟ್ಟ ಮನಸ್ತಾಪಗಳನ್ನು ಸರಿ ಮಾಡಿಕೊಳ್ಳುವ ಅವಕಾಶ ದೊರೆಯುತ್ತಿದೆ. ಉದ್ಯೋಗ, ವ್ಯಾಪಾರ, ವ್ಯವಹಾರ, ವಿದ್ಯಾಭ್ಯಾಸ ಎಲ್ಲದರಲ್ಲೂ ಕೂಡ ಉತ್ತಮ ಅವಕಾಶಗಳು ದೊರೆಯಲಿದೆ ಜಾಗರೂಕತೆಯಿಂದ ನಿಮಗೆ ಸಿಗುವ ಆಯ್ಕೆಗಳನ್ನು ಆರಿಸಿ.
ಮಕರ ರಾಶಿ:- ಮಕರ ರಾಶಿ ಕೂಡ 2024ರ ಪ್ರಭಾವ ಆನೇಕ ಲಾಭಗಳನ್ನು ತರುತ್ತದೆ. ಸರ್ಕಾರಿ ಹುದ್ದೆಗಳನ್ನು ಪಡೆಯಲು ತಯಾರಿಯಲ್ಲಿರುವ ವಿದ್ಯಾರ್ಥಿಗಳು ಶುಭ ಸುದ್ದಿ ಕೇಳುತ್ತಾರೆ. ಕುಟುಂಬ ಹಾಗೂ ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆಗಳು ಇವೆ. ಹಣಕಾಸಿನ ವಿಚಾರವೂ ಕೂಡ ಉತ್ತಮವಾಗಿರುತ್ತದೆ, ಹೂಡಿಕೆದಾರರು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತಾರೆ.