ಇತ್ತೀಚಿನ ದಿನಗಳಲ್ಲಿ ಥೈರಾಯಿಡ್ ಸಮಸ್ಯೆ ಎನ್ನುವುದನ್ನು ಹೆಚ್ಚಾಗಿ ಕೇಳುತ್ತಿದ್ದೇವೆ. ಥೈರಾಯ್ಡ್ ಗ್ರಂಥಿ ಸ್ರವಿಸುವ ಹಾರ್ಮೋನ್ ನಲ್ಲಿ ವ್ಯತ್ಯಾಸಗಳಾದರೆ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಬಹಳ ಗಂಭೀರ ಪರಿಣಾಮ ಉಂಟಾಗುತ್ತದೆ. ಆ ಗ್ರಂಥಿಗೆ ಬೇಕಾಗಿರುವ ಪ್ರಾಣಶಕ್ತಿ ಹಾಗೂ ಜೀವಸತ್ವಗಳ ಕೊರತೆಯಿಂದಾಗಿ ಹಾರ್ಮೋನ್ಸ್ ಇಂಬ್ಯಾಲೆನ್ಸ್ ಉಂಟಾಗುತ್ತದೆ.
ಈ ರೀತಿ ಸಮಸ್ಯೆಯಿಂದ ಹೆಣ್ಣು ಮಕ್ಕಳಲ್ಲಿ ಋತುಚಕ್ರಕ್ಕೆ ಅಡಚಣೆಗಳಾಗುತ್ತವೆ ಮತ್ತು ಇದೇ ಸಮಸ್ಯೆ ಸಂತಾನೋತ್ಪತ್ತಿ ಪ್ರಕ್ರಿಯೆಗೂ ತೊಂದರೆ ನೀಡುತ್ತದೆ. ರಿಪ್ರೊಡಕ್ಟಿವ್ ಗ್ರಂಥಿಗಳು ಸ್ರವಿಸುವ ಹಾರ್ಮೋನ್ ವ್ಯತ್ಯಾಸ ಉಂಟಾಗುತ್ತದೆ. ಆಯುರ್ವೇದ ಹೇಳುವ ಪ್ರಕಾರ ವಾತ ಪಿತ್ತ ವಿಕಾರದಿಂದ ಕೂಡ ಈ ರೀತಿ ಸಮಸ್ಯೆ ಬರುತ್ತದೆ, ಈ ವಿಕಾರಕ್ಕೆ ಮೂಲ ಕಾರಣ ಅವೈಜ್ಞಾನಿಕ ಆಹಾರ ಪದ್ಧತಿ ಮತ್ತು ಜೀವನ ಶೈಲಿ.
ಈ ರೀತಿ ತಪ್ಪಾದ ಬದುಕುವ ರೀತಿಯಿಂದಾಗಿ ಅಜೀರ್ಣ, ಮಲಬದ್ಧತೆ ಇಂತಹ ಸಮಸ್ಯೆಗಳು ಉಂಟಾಗಿ ಅದು ವಾತ, ಪಿತ್ತ ವಿಕಾರವಾಗಿ ಇಡೀ ದೇಹಕ್ಕೆ ತೊಂದರೆಯಾಗುತ್ತದೆ ಮತ್ತು ಹಾಗೆಯೇ ಆಯುರ್ವೇದದಲ್ಲಿ ಇದಕ್ಕೆ ಪರಿಹಾರ ಕೂಡ ಇದೆ ಶಂಕ ಮುದ್ರೆ ಮಾಡುವುದರಿಂದ ಈ ಅಸಮತೋಲನೆಯನ್ನು ಕಂಟ್ರೋಲ್ ಗೆ ತರಬಹುದು.
ಈ ಸುದ್ದಿ ಓದಿ:- ಎಲ್ಲಾ ರೈತರ ಖಾತೆಗೂ ಬೆಳೆ ಹಾನಿ ಹಾಗೂ ಬರ ಪರಿಹಾರದ ಹಣ ಜಮೆ, ನಿಮ್ಮ ಖಾತೆಗೆ ಹಣ ಬರಲಿದೆಯೇ ಈ ರೀತಿ ಚೆಕ್ ಮಾಡಿ.!
ಈ ಶಂಕ ಮುದ್ರೆ ಮಾಡುವುದು ಹೇಗೆಂದರೆ ಬಲಗೈ ಹೆಬ್ಬೆರಳನ್ನು ಎಡ ಕೈ ನ ಹೆಬ್ಬೆರಳು ಹೊರತುಪಡಿಸಿ ಇನ್ನ ನಾಲ್ಕು ಬೆರಳುಗಳಿಂದ ಸುತ್ತುವರಿದು ಬಲಗೈನ ಉಳಿದ ಬೆರಳುಗಳು ತುದಿಯನ್ನು ಮತ್ತು ಎಡಗೈ ಹೆಬ್ಬೆರಳಿನ ತುದಿಯು ಟಚ್ ಮಾಡುವ ಹಾಗೆ ಗೋಪುರದ ರೀತಿ ಮಾಡಬೇಕು ಮತ್ತು ಈ ಶಂಕ ಮುದ್ರೆಯಲ್ಲಿ ಮೊದಲಿಗೆ ಉಜ್ಜಾಯಿ ಪ್ರಾಣಾಯಾಮ ಮಾಡಬೇಕು.
5 ನಿಮಿಷಗಳ ಕಾಲ ಉಜ್ಜಾಯಿ ಪ್ರಾಣಯಾಮ ಆದಮೇಲೆ ಇದೇ ಶಂಕ ಚಕ್ರ ಮುದ್ರೆಯಲ್ಲಿ ಕಪಾಳಬಾತಿಯನ್ನು 5 ನಿಮಿಷ ಮಾಡಬೇಕು. ಆದರೆ ಯಾವುದೇ ಕಾರಣಕ್ಕೂ ಇವುಗಳನ್ನು ಗರ್ಭಿಣಿ ಸ್ತ್ರೀಯರು, ಹೃದಯದ ಸಮಸ್ಯೆ ಮತ್ತು ಹೈಬಿಪಿ ಸಮಸ್ಯೆ ಇರುವವರು ಮಾಡಬಾರದು. ಈ ಶಂಕ ಚಕ್ರ ಪ್ರಾಣಯಾಮ ಮಾಡುವುದರಿಂದ ಹೈಪೋ ಥೈರಾಯಿಡಿಸಂ ಮತ್ತು ಹೈಪರ್ ಥೈರಾಯಿಡಿಸಂ ಈ ಎರಡರಲ್ಲಿ ಯಾವುದೇ ರೀತಿ ತೊಂದರೆ ಇದ್ದರೂ ಕೂಡ ಅದು ನ್ಯಾಚುರಲ್ ಆಗಿ ಕಂಟ್ರೋಲಿಗೆ ಬರುತ್ತದೆ.
ಆದರೆ ನೀವು ಯೋಗ ಗುರುಗಳ ಮಾರ್ಗದರ್ಶನ ಪಡೆದು ಅಥವಾ ವೈದ್ಯರ ಸಲಹೆ ಮೇರೆಗೆ ಮಾತ್ರ ಮುಂದುವರೆಯಬೇಕು. ಆಯುರ್ವೇದದಲ್ಲಿ ತಿಳಿಸಿರುವ ಕೆಲ ಮನೆಮದ್ದುಗಳನ್ನು ಬಳಸುವುದರಿಂದ ಕೂಡ ಕಂಟ್ರೋಲ್ ಗೆ ತರಬಹುದು.
ಈ ಸುದ್ದಿ ಓದಿ:- ಹಣಕಾಸು ಉಳಿತಾಯಕ್ಕೆ ನಿಮ್ಮ ಮನೆ ವಾಸ್ತು ಕಾರಣವಾಗುತ್ತಾ ನೀವೇ ತಿಳಿದುಕೊಳ್ಳಿ.
* ಮೆಂತ್ಯೆ ಪುಡಿ 1 ಚಮಚ, ಬೆಲ್ಲ 1 ಚಮಚ, ನಾಟಿ ಹಸುವಿನ ತುಪ್ಪ 1 ಚಮಚ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು
* ಬೆಳಗ್ಗೆ ಮತ್ತು ಸಂಜೆ ಧನಿಯಾ ಕಷಾಯ ಕುಡಿಯಬೇಕು. ಎರಡು ಲೋಟ ನೀರಿಗೆ ಒಂದು ಚಮಚ ಧನಿಯಾ ಪುಡಿ ಹಾಕಿ ಅರ್ಧ ಲೋಟ ಆಗುವಷ್ಟು ಕುದಿಸಿ ಬೆಚ್ಚಗಾದ ಮೇಲೆ ಕುಡಿಯಬೇಕು. ಬೆಳಗ್ಗೆ ಮತ್ತು ಸಂಜೆ ಪ್ರತ್ಯೇಕವಾಗಿ ಫ್ರೆಶ್ ಆಗಿಯೇ ಮಾಡಿಕೊಂಡು ಸೇವಿಸಬೇಕು.
* ಹುರಳಿ ಹಿಟ್ಟಿನ ಗಂಜಿಯನ್ನು ಪ್ರತಿ ರಾತ್ರಿ ಸೇವಿಸಬೇಕು
* ಇವುಗಳಿಂದ ರಿಸಲ್ಟ್ ಸಿಗದೇ ಇದ್ದರೆ ಆಯುರ್ವೇದದಲ್ಲಿ ಪಂಚ ಕರ್ಮ ಚಿಕಿತ್ಸೆ, ಕಂಚಿನ ಅರಗು, ಆರೋಗ್ಯ ವರ್ಧಿನಿ ಮಡ್ಡಿ ಇತ್ಯಾದಿಗಳನ್ನು ನೀಡುತ್ತಾರೆ. ಆರ್ಯುವೇದ ವೈದ್ಯರ ಸಲಹೆ ಪಡೆದು ಇಂತಹ ಚಿಕಿತ್ಸೆಗಳನ್ನು ಪಡೆದುಕೊಳ್ಳಿ.