ಸಾಮಾನ್ಯವಾಗಿ ಜನಸಾಮಾನ್ಯರು ಮದುವೆಯ ಸಂದರ್ಭದಲ್ಲಿ, ಹೊಸ ಮನೆ ಕಟ್ಟುವಾಗ ಅಥವಾ ಸೈಟು ಖರೀದಿಸುವಾಗ, ಹೊಸ ವ್ಯಾಪಾರ ಶುರು ಮಾಡಲು ಗುರುಬಲ ಇರಬೇಕು. ತಮಗೆ ಒಳ್ಳೆ ಸಮಯ ಯಾವಾಗ ಇದೆ ಎಂದು ನೋಡಿ ತಿಳಿದುಕೊಳ್ಳಲು ಗುರುಬಲ ಇದೆಯೇ ಎಂದು ಜ್ಯೋತಿಷ್ಯರ ಬಳಿ ಪರಿಶೀಲನೆ ಮಾಡಿಸುತ್ತಾರೆ.
ವರ್ಷಕ್ಕೊಮ್ಮೆ ಗುರುವಿನ ಸ್ಥಾನ ಬದಲಾವಣೆ ಆದಾಗ ದ್ವಾದಶ ರಾಶಿಗಳ ಭವಿಷ್ಯವನ್ನು ವೃತ್ತಪತ್ರಿಕೆಗಳಲ್ಲಿ ಹಾಗೂ ಟಿವಿ ಪ್ರೋಗ್ರಾಮ್ಗಳಲ್ಲಿ ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಸಾಮಾನ್ಯವಾಗಿ ಗುರುಬಲದ ಬಗ್ಗೆ, ಗುರುವಿನ ಪ್ರಭಾವದ ಬಗ್ಗೆ ಹೇಳುವುದಾದರೆ ಗುರುವು ಜಾತಕದಲ್ಲಿ ಬಲವಾಗಿರುವವರ ಮೇಲೆ ತಾಯಿ ಮಹಾಲಕ್ಷ್ಮಿಯ ಆಶೀರ್ವಾದ ಕೂಡ ಇರುತ್ತದೆ, ಅವರು ಸ್ವಂತ ಗ್ರಹಗಳಲ್ಲಿಯೇ ವಾಸಿಸುತ್ತಾರೆ.
ಗುರುಬಲ ಇದ್ದರೆ ಅವರಿಗೆ ಯಾವುದೇ ವ್ಯಾಪಾರ ವ್ಯವಹಾರ ಆರಂಭಿಸಿದರು ಕೂಡ ಅದರಲ್ಲಿ ನಿರೀಕ್ಷೆಗಿಂತ ಹೆಚ್ಚು ಲಾಭ ಕಾಣುತ್ತಾರೆ ಮತ್ತು ಯಾವುದೇ ತೊಂದರೆ ಇಲ್ಲದೆ ಗುರು ಬಲದಿಂದ ಅವರ ಕೆಲಸ ಕಾರ್ಯಗಳು ಬಹಳ ಸರಳವಾಗಿ ನಡೆದುಕೊಂಡು ಹೋಗುತ್ತಿರುತ್ತವೆ. ಬಹಳ ಶ್ರೀಮಂತ ಉದ್ಯಮಿ ಅಥವಾ ಬಹಳ ಶ್ರೀಮಂತ ವ್ಯಾಪಾರಿ ವ್ಯಕ್ತಿಗಳಾಗುತ್ತಾರೆ.
ಈ ಸುದ್ದಿ ಓದಿ:- ಧನಸ್ಸು ರಾಶಿಯವರ ಬದುಕು ಹೀಗಿರುತ್ತದೆ, ಇದೊಂದು ವಿಚಾರದಲ್ಲಿ ಅವರಿಗೆ ಬಹಳ ಕಷ್ಟ.!
ಗುರು ಬಲ ಚೆನ್ನಾಗಿರುವವರಿಗೆ ಬಹು ಪುತ್ರ ಸಂತಾನ ಪ್ರಾಪ್ತಿ ಆಗಿರುತ್ತದೆ, ಒಳ್ಳೆಯ ವಿದ್ಯಾಭ್ಯಾಸ ಪಡೆದಿರುತ್ತಾರೆ. ಮತ್ತೊಬ್ಬರಿಗೆ ಉತ್ತಮ ಮಾರ್ಗದರ್ಶನ ಮಾಡುವಷ್ಟು ಜ್ಞಾನವಂತರಾಗಿರುತ್ತಾರೆ ಮತ್ತು ಕರುಣಾಮಯಿಗಳಾಗಿರುತ್ತಾರೆ. ಅವರು ವಿಶೇಷ ಸ್ತ್ರೀಯನ್ನು ಮದುವೆಯಾಗುವ ಅದೃಷ್ಟವನ್ನು ಕೂಡ ಹೊಂದಿರುತ್ತಾರೆ ಒಂದು ರೀತಿಯಲ್ಲಿ ಅವರ ಎಲ್ಲ ಇಷ್ಟಾರ್ಥಗಳು ಕೂಡ ನೆರವೇರುತ್ತದೆ, ಕೈ ಹಾಕಿದ ಕೆಲಸ ಕೈ ಹಿಡಿಯುತ್ತದೆ.
ಹಣ, ಕೀರ್ತಿ, ನೆಮ್ಮದಿ, ಸುಖ, ಶಾಂತಿ ಯಾವುದರಲ್ಲೂ ಕೂಡ ಕೊರತೆ ಇಲ್ಲದಂತೆ ಗುರು ಬಲ ಚೆನ್ನಾಗಿರುವವರೆಗೂ ಕೂಡ ಅವರು ಬದುಕುತ್ತಾರೆ. ಗುರುವು ಒಳ್ಳೆಯ ಸ್ಥಾನದಲ್ಲಿದ್ದರೆ ಅಥವಾ ಲಗ್ನವನ್ನು ನೋಡಿದರೆ ಅಥವಾ ರಾಶಿಯನ್ನು ನೋಡಿದರೆ ಕೋಟಿ ಪುಣ್ಯ ಎಂದು ಹೇಳಲಾಗುತ್ತದೆ.
ಗುರು ಗ್ರಹದ ಕುರಿತಾದ ಇನ್ನಷ್ಟು ಸಂಗತಿಗಳು
ಪ್ರತಿನಿಧಿಸುವ ವಾರ – ಗುರುವಾರ
ಬಣ್ಣ – ಹಳದಿ ಬಣ್ಣ
ಧಾನ್ಯ – ಕಡಲೆ ಕಾಳು
ಮಿತ್ರಗ್ರಹ – ಸೂರ್ಯ, ಚಂದ್ರ ಮತ್ತು ಮಂಗಳ ಗ್ರಹ
ಶತ್ರು ಗ್ರಹ – ಶುಕ್ರ ಗ್ರಹ ಮತ್ತು ಬುಧ ಗ್ರಹ
ಆಳುವ ದಿಕ್ಕು – ಈಶಾನ್ಯ ದಿಕ್ಕು
ವಾಹನ – ಆನೆ
ಈ ಸುದ್ದಿ ಓದಿ:- ನೀರಿನ ಮೇಲೆ ತೇಲುವ ವಿಶ್ವದ ಏಕೈಕ ವಿಷ್ಣುವಿನ ವಿಗ್ರಹ, ಇದರ ಹಿಂದಿನ ರೋಚಕ ಕಥೆ ಕೇಳಿದ್ರೆ ನಿಜಕ್ಕೂ ಬೆರಗಾಗ್ತೀರಾ.!
ಹಸ್ತ ಸಾಮೂಹಿಕ ಶಾಸ್ತ್ರದ ಪ್ರಕಾರ ಅಂಗೈನ ತೋರುಬೆರಳನ್ನು ಗುರು ಗ್ರಹವನ್ನು ಪ್ರತಿನಿಧಿಸುವ ಬೆರಳು ಎಂದು ಹೇಳುತ್ತಾರೆ. ಬೆರಳ ಕೊನೆಯಲ್ಲಿ ರೇಖೆ ಮೂಡಿದ್ದರೆ ಶುಭ ಎಂದು ಭಾವಿಸಬಹುದು. ಗುರು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸಲು 12 ತಿಂಗಳು ತೆಗೆದುಕೊಳ್ಳುತ್ತದೆ. ತಮಿಳುನಾಡಿನ ಕುಂಭಕೋಣಂ ಬಳಿ ಗುರುಗ್ರಹದ ದೇವಸ್ಥಾನ ಕಾಣಬಹುದು.
ಮಂತ್ರಾಲಯದಲ್ಲಿ ನೆಲೆಸಿರುವ ಗುರು ರಾಘವೇಂದ್ರ, ಸಾಯಿಬಾಬ, ದತ್ತಾತ್ರೇಯ ಈ ರೀತಿ ಗುರುವಿನ ಸ್ಥಾನದಲ್ಲಿರುವ ಪೂಜ್ಯರನ್ನು ಅಥವಾ ವಿದ್ಯೆ ಕಲಿಸಿದ ಗುರುಗಳನ್ನು ತಂದೆ ತಾಯಿಗಳನ್ನು ಕೂಡ ಗುರುವಿನ ಸ್ಥಾನದಲ್ಲಿಟ್ಟು ಭಕ್ತಿ ಹಾಗೂ ಶ್ರದ್ಧೆಯಿಂದ ನಡೆದುಕೊಳ್ಳುವುದರಿಂದ ಗುರುವಿನ ಸಂಪೂರ್ಣ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುತ್ತಿದೆ.
ಸಾಧ್ಯವಾದರೆ ಪ್ರತಿದಿನವೂ ಕೂಡ ಈ ಗುರುಗಳ ದರ್ಶನ ಮಾಡಿ ಆಶೀರ್ವಾದ ಪಡೆಯಿರಿ ಮತ್ತು ಹಣೆಗೆ ಅಷ್ಟಗಂಧವನ್ನು ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಗುರುವಿಗೆ ಸಂಬಂಧಪಟ್ಟ ದೋಷಗಳು ಇದ್ದರೆ ನಿವಾರಣೆ ಆಗುತ್ತದೆ ಮತ್ತು ಗುರುವು ನಿಮಗೆ ಒಳ್ಳೆಯ ಪ್ರಭಾವಗಳನ್ನು ಉಂಟು ಮಾಡುತ್ತಾರೆ.