ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ಟೈಲರಿಂಗ್ ಕಲಿತಿರಬೇಕು. ತನಗೆ ಬಿಡುವಾದ ಸಮಯದಲ್ಲಿ ಹವ್ಯಾಸವಾಗಿ ಅಥವಾ ಮನೆಯಲ್ಲಿ ಕುಳಿತು ದುಡಿಮೆ ಮಾಡಲು, ಆಸಕ್ತಿ ಇದ್ದರೆ ಉದ್ಯಮವಾಗಿ ಬದಲಾಯಿಸಿಕೊಳ್ಳಲು ಟೈಲರಿಂಗ್ ಕೆಲಸ ಕೈ ಹಿಡಿಯುತ್ತದೆ ಆದರೆ ಇದಕ್ಕೆ ಟ್ರೈನಿಂಗ್ ಕೂಡ ಬೇಕೇ ಬೇಕು. ಸ್ನೇಹಿತರು ಅಥವಾ ಸಂಬಂಧಿಕರಿಗೆ ಟೈಲರಿಂಗ್ ಗೊತ್ತಿದ್ದರೆ ಕೇಳಿ ಕಲಿಯಬಹುದು ಅಥವಾ ಅಕಾಡೆಮಿಗಳಲ್ಲಿ ಹೋಗಿ ತರಬೇತಿ ಪಡೆದುಕೊಳ್ಳಬಹುದು.
ಈ ಯಾವ ಸೌಲಭ್ಯವು ಇಲ್ಲ ಎನ್ನುವವರು ಬೇಸರ ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಈಗ ಆನ್ಲೈನ್ ನಲ್ಲಿ ಯಾವ ಮಾಹಿತಿ ಬೇಕಾದರೂ ಕುಳಿತಲ್ಲಿಯೇ ಪಡೆಯಬಹುದು. ಯಾವುದೇ ಟೈಲರಿಂಗ್ ಗೊತ್ತಿಲ್ಲದಿದ್ದರೂ ಹೊಸಬರು ಕೂಡ ಯಾವ ರೀತಿ ಸುಲಭವಾಗಿ 30 ನಿಮಿಷಗಳಲ್ಲಿ ಟೈಲರಿಂಗ್ ಕಲಿಯಬಹುದು ಎನ್ನುವುದಕ್ಕೆ ಕೆಲವು ಟಿಪ್ ಗಳನ್ನು ಹೇಳುತ್ತಿದ್ದೇವೆ. ನಾವು ಹೇಳಿದ ವಿಧಾನವನ್ನು ಅನುಸರಿಸಿ ಬ್ಲೌಸ್ ಕಟಿಂಗ್ ಕಲಿಯಿರಿ.
ಯಾವಾಗ ಲೈನಿಂಗ್ ಕಟ್ ಮಾಡಿ ನಂತರ ಆ ಅಳತೆ ಮೇಲೆ ಬ್ಲೌಸ್ ಕಟ್ ಮಾಡಬೇಕು ಹಾಗಾಗಿ ಈಗ ಒಂದು ಮೀಟರ್ ಲೈನಿಂಗ್ ತೆಗೆದುಕೊಳ್ಳಿ ಮೊದಲಿಗೆ ಸ್ಲೀವ್ ಕಟ್ ಮಾಡಿಕೊಳ್ಳಬೇಕು. ಲೈನಿಂಗ್ ನಾಲ್ಕು ಫೋಲ್ಡ್ ಮಾಡಿ ಈಗ ಎರಡು ಫೋರ್ಡ್ ಓಪನಿಂಗ್ ಮತ್ತು ಒಂದು ಫೋಲ್ಡ್ ಮಡಿಕೆ ಇರುತ್ತದೆ. ತುದಿಯಲ್ಲಿ ಕಾಲು ಇಂಚಿನಷ್ಟು ಮಾರ್ಜಿನ್ ಗೆ ಮಾರ್ಕ್ ಮಾಡಿಕೊಳ್ಳಿ.
ಈ ಸುದ್ದಿ ಓದಿ:- BPL / APL / AAY ರೇಷನ್ ಕಾರ್ಡ್ ವಿತರಣೆ ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ.!
ಈಗ ನಿಮ್ಮ ಅಳತೆ ಬ್ಲೌಸ್ ನಲ್ಲಿ ಎಷ್ಟು ಉದ್ದ ಇದೆ ಅಷ್ಟನ್ನು ಬ್ಲೌಸ್ ಇಟ್ಟು ಮಾರ್ಕ್ ಮಾಡಿ ನಂತರ ಸ್ಲೀವ್ ಓಪನಿಂಗ್ ಎಷ್ಟಿದೆ ಅದನ್ನು ಕೂಡ ಮಾರ್ಕ್ ಮಾಡಿ ಇಡಿ. ಸ್ಲೀವ್ಸ್ ಡೌನ್ ಮಾರ್ಕ್ ಅಳತೆ ಬ್ಲೌಸ್ ಆಧಾರದ ಮೇಲೆ ಇಡಬಹುದು ಅಥವಾ ಸರಾಸರಿ ಮೇಲೆ ಇಡಬಹುದು. 32 ರಿಂದ 38 ಇಂಚು ಎದೆ ಸುತ್ತಳತೆ ಇದ್ದರೆ 3.5 ಇಂಚು ಡೌನ್ ಗೆ ಮಾರ್ಕ್ ಮಾಡಿ ಇದಕ್ಕಿಂತ ಜಾಸ್ತಿ ಇರುವವರಿಗೆ 4 ಇಂಚು ಇಡಬೇಕಾಗುತ್ತದೆ ಅಥವಾ ಬ್ಲೌಸ್ ಅಳತೆ ತೆಗೆದುಕೊಳ್ಳಬೇಕಾಗುತ್ತದೆ.
ಶೋಲ್ಡರ್ ಜಾಯಿಂಟ್ ಇಂದ ಸೈಡ್ಸ್ ಇನ್ ಜಾಯಿಂಟ್ ವರೆಗೆ ಎಷ್ಟು ಅಳತೆ ಇದೆ ಅದೇ ನಿಮ್ಮ ಬ್ಲೌಸ್ ನ ವಿಡ್ತ್ ಆಗಿರುತ್ತದೆ. ಆ ಅಳತೆ ಟೇಪ್ ನಲ್ಲಿ ಅಳತೆ ಮಾಡಿ ಅಷ್ಟೇ ಇಂಚಿಗೆ ಲೈನಿಂಗಲ್ಲಿ ಮಾರ್ಕ್ ಮಾಡಿ ಅಥವಾ ಬ್ಲೌಸ್ ಇಟ್ಟು ಮಾರ್ಕ್ ಮಾಡಿ ಇದರ ಜೊತೆಗೆ ಎರಡು ಇಂಚು ಎಕ್ಸ್ಟ್ರಾ ಮಾರ್ಕಿಂಗ್ ಹಾಕಿ.
ಸ್ಲೀವ್ ಲೆಂಥ್ ಅಳತೆ ಮಾಡಿದ್ದರಿಂದ ಒಂದೂವರೆ ಇಂಚಿಗೆ ಮಾರ್ಕ್ ಮಾಡಿ ಇದನ್ನು ನೀವು ಸ್ಲೀವ್ ಡೌನಿಂಗ್ ಮಾಡಿದ ತುದಿಗೆ ಸೇರಿಸಿ ಮತ್ತೆ ಫ್ರಂಟ್ ಶೇಪ್ ತೆಗೆಯಲು ಕೂಡ ಸ್ಲೀವ್ ಲೆಂಥ್ ಟುಡೇ ಇಂದ 1 ಇಂಚ್ ಗೆ ಮಾರ್ಕ್ ಮಾಡಿ ಅದನ್ನು ಡೌನ್ ಮಾರ್ಕ್ ಮಾಡಿದ್ದ ತುದಿಗೆ ಸೇರಿಸಿ ಶೇಪ್ ಮಾರ್ಕ್ ಮಾಡಿ.
ಈ ಸುದ್ದಿ ಓದಿ:- ಈ ವರ್ಷದಲ್ಲಿ ಮನೆ ಕಟ್ಟುವ ಯೋಗ ಪಡೆದಿವೆ ಈ 5 ರಾಶಿಗಳು, ಆ ರಾಶಿಗಳು ಯಾವುವು ಗೊತ್ತಾ.?
ಇದುವರೆಗೆ ಸ್ಲೀವ್ ಮಾರ್ಕಿಂಗ್ ಮುಗಿಯಿತು. ಮಾರ್ಕ್ ಮಾಡಿರುವ ರೀತಿ ಸ್ಲೀವ್ ಕಟ್ ಮಾಡಿ ತೆಗೆದು ಇಟ್ಟುಕೊಂಡು ಉಳಿದ ಬಟ್ಟೆಯನ್ನು ಸಮವಾಗಿ ಕಟ್ ಮಾಡಿ ಫ್ರಂಟ್ ಮತ್ತು ಬ್ಯಾಕ್ ಕಟ್ ಮಾಡಿಕೊಳ್ಳಬೇಕು. ಇದನ್ನು ಹೇಗೆ ಕಟ್ ಮಾಡಬಹುದು ಎನ್ನುವುದನ್ನು ಕಲಿತುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಅದರಲ್ಲಿ ನೀಡಿರುವ ಇನ್ಸ್ಟ್ರಕ್ಷನ್ಸ್ ಅನುಸರಿಸಿ ಬ್ಲೌಸ್ ಕಟಿಂಗ್ ಕಲಿತುಕೊಳ್ಳಿ.