ನಾವು ನಮ್ಮ ಜೀವನವನ್ನು ಕಳೆಯಲು ಬದುಕನ್ನು ಕಟ್ಟಿಕೊಳ್ಳಲು ಹೊಸದಾಗಿ ಬೇರೆ ಒಂದು ಸ್ಥಳಕ್ಕೆ ಹೋಗಿ ನೆಲೆಸುತ್ತಿದ್ದೇವೆ. ಅಂದರೆ ಅದು ಆ ಜಾಗಕ್ಕೆ ಗೃಹಪ್ರವೇಶ ಮಾಡುತ್ತಿದ್ದೇವೆ ಎಂದೇ ಅರ್ಥ. ಹೊಸ ಮನೆ ಕಟ್ಟಿದಾಗ ಗೃಹಪ್ರವೇಶ ನಡೆಯುತ್ತದೆ ಮದುವೆ ಆಗಿ ಮನೆಗೆ ಬಂದ ಮಹಾಲಕ್ಷ್ಮಿ ಸ್ವರೂಪ ಸೊಸೆಯನ್ನು ಮನೆತುಂಬಿಸಿಕೊಳ್ಳುವಾಗ ಗೃಹಪ್ರವೇಶ ಆಗುತ್ತದೆ.
ಹಾಗೆ ಇಷ್ಟು ಮಾತ್ರವಲ್ಲದೆ ನಾವು ದೂರದ ಊರುಗಳಿಗೆ ಹೋದಾಗ ಬಾಡಿಗೆ ಮನೆಯಲ್ಲಿ ನೆನೆಸಲು ಆ ಮನೆಯನ್ನು ಪ್ರವೇಶ ಮಾಡುವುದು ಕೂಡ ಗೃಹಪ್ರವೇಶವೇ. ಈ ಸಮಯದಲ್ಲಿ ಶುಭ ಘಳಿಗೆ ನೋಡಲೇಬೇಕು ಮತ್ತು ಕೆಲವು ನಿಯಮಗಳನ್ನು ಪಾಲಿಸಲೇಬೇಕು ಆಗ ಮಾತ್ರ ನಮಗೆ ಆ ವಾತಾವರಣ ಸಕಾರಾತ್ಮಕವಾಗಿರುತ್ತದೆ ಅಲ್ಲಿ ನಾವು ಕಳೆಯುವ ಕ್ಷಣಗಳು ಸುಮಧುರವಾಗಿರುತ್ತವೆ ಎನ್ನುವುದು ಶಾಸ್ತ್ರಗಳಲ್ಲಿ ಇರುವ ನಂಬಿಕೆ.
ಅದರಲ್ಲಿ ಇಂದು ನಾವು ಬಾಡಿಗೆ ಮನೆಗೆ ಹೋಗುವಾಗ ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಎನ್ನುವ ವಿಚಾರದ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಬಾಡಿಗೆ ಮನೆಗೆ ಇರುವವರಿಗೆ ಪದೇ ಪದೇ ಸ್ವಂತ ಸೂರು ಆಗುವವರೆಗೂ ಕೂಡ ಸಾಕಷ್ಟು ಬಾರಿ ಮನೆ ಬದಲಾಯಿಸುವ ಪರಿಸ್ಥಿತಿ ಬರುತ್ತದೆ.
ಈ ಸುದ್ದಿ ಓದಿ:- ಕನ್ಯಾ ರಾಶಿಗೆ ಎಚ್ಚರಿಕೆಯ ಸಂಕೇತ, ಮಾರ್ಚ್ ತಿಂಗಳಿನಲ್ಲಿ ಇದೆಲ್ಲವೂ ನಡೆಯಲಿದೆ.!
ಯಾಕೆಂದರೆ ಒಂದೇ ಮನೆಯಲ್ಲಿ ಹೆಚ್ಚಿನ ವರ್ಷಗಳು ಬಾಡಿಗೆಗೆ ಕೊಡುವುದಿಲ್ಲ ಅಥವಾ ಮನೆಯಲ್ಲಿ ವಸ್ತುಗಳು ಹೆಚ್ಚಾದಾಗ ಅಥವಾ ಮನೆಯಲ್ಲಿ ಸದಸ್ಯರು ಹೆಚ್ಚಾದಾಗ ಬೇರೆ ಮನೆಗೆ ಹೋಗಲೇಬೇಕಾಗುತ್ತದೆ. ಹೀಗೆ ಅನುಕೂಲಕ್ಕೆ ತಕ್ಕ ಹಾಗೆ ನಾವು ಮನೆ ಬದಲಾಯಿಸುವಾಗ ಆ ಮನೆಯ ಹಿರಿಯ ಸದಸ್ಯರ ಹೆಸರು ಬಲಕ್ಕೆ ಶಾಸ್ತ್ರ ಕೇಳುತ್ತೇವೆ ಅಥವಾ ಆ ಮನೆಯಲ್ಲಿ ದುಡಿಯುವ ವ್ಯಕ್ತಿಯ ಹೆಸರಿನ ಬಲಕ್ಕೆ ಶಾಸ್ತ್ರ ಕೇಳುತ್ತೇವೆ ಆಗಿಬರುತ್ತದೆ ಎಂದು ಹೇಳುವಾಗ ಆ ಮನೆಗೆ ಹೋಗುತ್ತೇವೆ.
ಇಂತಹ ವಿಷಯದಲ್ಲಿ ನಾವು ಕೊಡುವ ಸಲಹೆ ಏನೆಂದರೆ, ನಿಮಗೆ ಏನು ತಿಳಿಯದೇ ಇದ್ದಾಗಲೂ ಅನಿವಾರ್ಯವಾಗಿ ತಕ್ಷಣ ಬಾಡಿಗೆ ಮನೆಗೆ ಹೋಗಬೇಕಾದರೆ ಈ ನಿಯಮಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಸಾಕು. ಪೂರ್ವ ಹಾಗೂ ಉತ್ತರದ ಬಾಗಿಲಿನ ಮನೆ ಮಾಡಿದರೆ ಅದು ಎಲ್ಲರಿಗೂ ಶುಭವೇ, ಹಾಗೆಯೇ ಆದಷ್ಟು ಸೂರ್ಯನ ಬೆಳಕು ಮನೆ ಒಳಗೆ ಬರುವ ಗಾಳಿ ಬರುವ, ಹತ್ತಿರದಲ್ಲೇ ದೇವಸ್ಥಾನ ಇರುವ ಮನೆಗಳನ್ನು ಆರಿಸಿಕೊಂಡರೆ ಇನ್ನೂ ಒಳ್ಳೆಯದು, ಇಂತಹ ವಾತಾವರಣದಲ್ಲಿ ಸಕಾರಾತ್ಮಕತೆ ಇರುತ್ತದೆ.
ಇನ್ನು ಮನೆಯ ಗೃಹಪ್ರವೇಶ ಅಂದರೆ ಮನೆ ಪ್ರವೇಶಿಸುವ ದಿನವು ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಹಾಗೂ ಭಾನುವಾರದಂದು ಇರಬೇಕು ಹಾಗೂ ಸಮಯವು ಬ್ರಾಹ್ಮಿ ಮುಹೂರ್ತವಾಗಿದ್ದರೆ ಅಂದರೆ ಬೆಳಗ್ಗೆ 4:30 ಯಿಂದ ಬೆಳಗಿನ 7:30 ಒಳಗಡೆ ನೀವು ಹಾಲು ಉಕ್ಕಿಸಿದರೆ ಬಹಳ ಶುಭವಾಗುತ್ತದೆ.
ಈ ಸುದ್ದಿ ಓದಿ:- ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಇದನ್ನು ಇಟ್ಟು ಮಲಗಿ, ವರಾಹಿ ದೇವಿ ನಿಮ್ಮ ಕೋರಿಕೆಗಳನ್ನು ಮೂರೇ ದಿನಗಳಲ್ಲಿ ನೆರವೇರಿಸುತ್ತಾರೆ.!
ಆ ದಿನ ಹಾಲು ಮುಗಿಸಿ ಸಿಹಿ ಮಾಡಿ ಅಕ್ಕ ಪಕ್ಕದವರಿಗೆ ಹಂಚಿ ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳಿ ಮತ್ತು ಸಾಧ್ಯವಾದಷ್ಟು ಬಡವರಿಗೆ ಅಸಹಾಯಕರಿಗೆ ಆ ದಿನ ನಿಮ್ಮ ಕೈಲಾದಷ್ಟು ಅನ್ನದಾನ ಮಾಡಿ. ಬಹಳ ಪಾಸಿಟಿವ್ ಆಗಿ ಮನೆಗೆ ಪ್ರವೇಶ ಮಾಡಿ ಯಾವುದೇ ಕಾರಣಕ್ಕೂ ಮನೆ ಯಾವುದೇ ಸದಸ್ಯನಿಗೆ ಬೇಸರ ಕೋಪದಿಂದ ಆ ಮನೆಗೆ ಬರುವ ಸಂದರ್ಭ ತಂದುಕೊಳ್ಳಬೇಡಿ ಜೊತೆಗೆ ಈ ರೀತಿ ಮನೆಗೆ ಪ್ರವೇಶ ಮಾಡಿ ಹೋಗುವಾಗ ಹಾಲು, ಉಪ್ಪು ಈ ರೀತಿ ಮಂಗಳ ದ್ರವ್ಯಗಳನ್ನು ಕೂಡ ಜೊತೆಗೆ ತೆಗೆದುಕೊಂಡು ಹೋಗಿ ಪ್ರವೇಶ ಮಾಡಿ ಬಹಳ ಒಳ್ಳೆಯದಾಗುತ್ತದೆ.