ಕನ್ಯಾ ರಾಶಿಗೆ ಶನಿಪ್ರಭಾವ ನಡೆಯುತ್ತಿದೆ ಎನ್ನುವುದು ಗೊತ್ತೇ ಇದೆ, ಇದರಿಂದ ಬಹಳ ಕಷ್ಟಗಳಿಗೆ ಗುರಿ ಆಗಿರುತ್ತಾರೆ. ಯಾರಿಂದಲೂ ಬೆಂಬಲ ಇಲ್ಲ, ಯಾರು ಕೂಡ ತಮ್ಮ ಇಷ್ಟ ಕಷ್ಟಗಳಿಗೆ ಬೆಲೆ ಕೊಡುವುದಿಲ್ಲ, ಯಾವ ಕೆಲಸವೂ ಕೂಡ ಕೈಗೂಡುವುದಿಲ್ಲ, ಇಲ್ಲಸಲ್ಲದ ಗಲಾಟೆಗಳು, ಮನಸ್ತಾಪಗಳು, ಅವಮಾನಗಳು ಇದೆಲ್ಲವೂ ಬೇಸರ ತಂದಿರುತ್ತದೆ.
ಈಗ ಮಾರ್ಚ್ ತಿಂಗಳಲ್ಲಿ ಈ ಪ್ರಭಾವ ಹೇಗೆ ಮುಂದುವರೆಯುತ್ತದೆಯೇ ಅಥವಾ ಏನಾದರೂ ಬದಲಾವಣೆ ತರಲಿದೆಯಾ ಯಾವ ವಿಚಾರಗಳಲ್ಲಿ ಎಚ್ಚರವಾಗಿರಬೇಕು ಎನ್ನುವ ವಿಷಯವನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಇದೆಲ್ಲವೂ ಮುಂಚಿತವಾಗಿ ತಿಳಿದರೆ ಅದೆಷ್ಟೋ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು ಅಥವಾ ಧೈರ್ಯವಾಗಿ ಎದುರಿಸುವಂತಹ ಶಕ್ತಿಯು ಬರುತ್ತದೆ.
ಬುಧ ಹಾಗೂ ಗುರು ಗ್ರಹಗಳು ಈ ತಿಂಗಳಿನಲ್ಲಿ ಅಷ್ಟಮಕ್ಕೆ ಬರುವುದರಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಜಾಗರೂಕರಾಗಿ ಇರಬೇಕು ಯಾಕೆಂದರೆ ಮಾರ್ಚ್ ತಿಂಗಳು ಪರೀಕ್ಷೆಗಳು ನಡೆಯುವ ತಿಂಗಳಾಗಿದೆ.
ಈ ಸುದ್ದಿ ಓದಿ:- ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!
ಈ ಸಮಯದಲ್ಲಿ ನಿಮಗೆ ಓದಿದ್ದು ನೆನಪಿಗೆ ಬಾರತಂತಹ ಅಥವಾ ಓದಿನ ಮೇಲೆ ಆಸಕ್ತಿ ಕಳೆದು ಹೋಗುವಂತಹ ಸಂದರ್ಭಗಳು ಸೃಷ್ಟಿಯಾಗಬಹುದು ಅಥವಾ ಯಾರದ್ದೋ ಮೇಲಿನ ಕೋ’ಪ ನಿಮ್ಮನ್ನು ಡಿಸ್ಟರ್ಬ್ ಮಾಡಬಹುದು ಯಾವುದಕ್ಕೂ ಅವಕಾಶ ಕೊಡದೆ ನೀವು ಮುಂದಿನದರ ಬಗ್ಗೆ ಹೆಚ್ಚು ಗಮನ ಕೊಡಿ.
ಮಾರ್ಚ್ ತಿಂಗಳಿನಲ್ಲಿ ನಿಮ್ಮ ಹಿತ ಶತ್ರುಗಳ ಕಾಟ ಕಡಿಮೆ ಆಗುವ, ಬಹಳ ದಿನಗಳಿಂದ ನಡೆಯುತ್ತಿದ್ದ ಮುಸುಕಿನ ಗುದ್ದಾಟಗಳಿಗೆ ತೆರೆ ಬೀಳುವ ಸಾಧ್ಯತೆಗಳಿವೆ. ನಿಮ್ಮ ಕುಟುಂಬದಲ್ಲಿ ಗ್ರೂಪಿಸಂ ಆಗುವ ಮತ್ತು ನೀವು ಯಾರ ಗ್ರೂಪ್ ಗೂ ಕೂಡ ಸೇರದೆ ತಡಸ್ಥವಾಗಿ ಉಳಿಯುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ.
ಇದಲ್ಲದರ ಬಗ್ಗೆ ಜವಾಬ್ದಾರಿಯುತವಾಗಿ ನಿರ್ಧಾರ ತೆಗೆದುಕೊಳ್ಳಿ ಹಾಗೂ ಕೆಲವೊಂದು ಸಂದರ್ಭಗಳಲ್ಲಿ ಸಂಬಂಧಿಕರ ನಡುವೆ ಮಾತನಾಡುವಾಗ ನಿಮ್ಮ ಮಾತುಗಳ ಮೇಲೆ ನಿಗ ಇರಲಿ ಎನ್ನುವ ಎಚ್ಚರಿಕೆಯನ್ನು ಕನ್ಯಾ ರಾಶಿಯವರಿಗೆ ನೀಡಲಾಗುತ್ತಿದೆ.
ಈ ಸುದ್ದಿ ಓದಿ:- ನಿಮ್ಮ ರಾಶಿ ಪ್ರಕಾರವಾಗಿ ನೀವು ಇನ್ನು ಎಷ್ಟು ವರ್ಷ ಬದುಕುತ್ತೀರಿ ಎಂದು ತಿಳಿಯಿರಿ.!
ಮಾರ್ಚ್ 14 ರವರೆಗೆ ಷಷ್ಠ ಭಾವದಲ್ಲಿ ಶನಿ ಜೊತೆ ರವಿ ಗ್ರಹ ಇರುತ್ತದೆ ಮಾರ್ಚ್ 14ರಂತೆ ರವಿ ಗ್ರಹವು ಸಪ್ತಮಕ್ಕೆ ಸಂಚರಿಸುತ್ತದೆ, ತೆರವಾದ ಸ್ಥಾನಕ್ಕೆ 15ನೇ ತಾರೀಕಿನಂದು ಕುಜ ಸೇರುತ್ತದೆ. ಇದೊಂದು ಅವಕಾಶ ನಿಮಗೆ ಬಹಳ ಅನುಕೂಲತೆಯನ್ನು ಮಾಡಿಕೊಡಲಿದೆ.
ನಿಮಗೆ ಅನಿರೀಕ್ಷಿತ ಧನ ಲಾಭವಾಗುವ ಅಥವಾ ಇದುವರೆಗೂ ಸಮಸ್ಯೆಯಾಗಿ ಉಳಿದಿದ್ದ ದೊಡ್ಡ ಮೊತ್ತದ ಸಾಲ ತೀರಿಹೋಗುವ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಅಥವಾ ನಿಮಗೆ ಬಹಳ ತೊಂದರೆ ಕೊಡುತ್ತಿದ್ದ ಶತ್ರುಗಳು ಅವರ ತಪ್ಪುಗಳನ್ನು ಅರಿತುಕೊಂಡು ಸುಮ್ಮನಾಗುವ ಇಂತಹ ಶುಭ ಸಂಗತಿಗಳು ನಡೆಯಲಿವೆ.
ನಿಮಗೆ ಯಾವುದೇ ಮಾಹಿತಿ ತಿಳಿಯದೆ ನಿಮ್ಮ ಪ್ರಯತ್ನವೂ ಇಲ್ಲದೆ ಇಂತಹದೊಂದು ಅವಕಾಶ ಮಾರ್ಚ್ ತಿಂಗಳಲ್ಲಿ ನಿಮಗೆ ಸಿಗುತ್ತಿದೆ. ಮಾರ್ಚ್ ಮಾಸದ ಕೊನೆಯಲ್ಲಿ ನಿಮ್ಮ ಮನೆ ಹಾಗೂ ಮನದಲ್ಲಿ ಇಂತಹದೊಂದು ಕಪ್ಪು ಮೋಡದ ನಡುವೆ ಮೂಡುವ ಬೆಳ್ಳಿ ಚುಕ್ಕಿಯ ರೀತಿ ನಗು ಮೂಡಲಿದೆ.
ಈ ಸುದ್ದಿ ಓದಿ:- ಈ ರಾಶಿ ಹೆಣ್ಣು ಮಕ್ಕಳು ಪಾಪ ಸದಾ ಕಣ್ಣೀರು ಇಡುತ್ತಿರುತ್ತಾರೆ.! ನೆಮ್ಮದಿ ಅನ್ನುವುದೇ ಇವರ ಜೀವನದಲ್ಲಿ ಇರಲ್ಲ
ಕನ್ಯಾ ರಾಶಿಗೆ ಸಪ್ತಮದಲ್ಲಿ ರಾಹು ಗ್ರಹ ಇದೆ. ಶುಕ್ರ ಮತ್ತು ರವಿಯು ಕೂಡ ಕೂಡ ಅಲ್ಲಿಗೆ ಸೇರಲಿದ್ದಾರೆ ಇದು ಸಂಬಂಧಗಳಲ್ಲಿ ಕೆಲ ಸವಾಲನ್ನು ತರಬಹುದು ಮತ್ತು ಮುಖ್ಯವಾಗಿ ಪತಿ ಪತ್ನಿ ನಡುವೆ ವಿ’ರ’ಸ, ಮ’ನ’ಸ್ತಾ’ಪ, ಜ’ಗ’ಳ ಸೃಷ್ಟಿಸಬಹುದು. ನೀವೇನಾದರೂ ಪಾರ್ಟ್ನರ್ ಶಿಪ್ ನಲ್ಲಿ ಬಿಸಿನೆಸ್ ಮಾಡುತ್ತಿದ್ದರೆ ಅದರ ಮೇಲೆ ಕೂಡ ಇದರ ಕೆಟ್ಟ ಪ್ರಭಾವ ಬೀರಲಿದೆ ಹಾಗಾಗಿ ಈ ವಿಚಾರಗಳ ಬಗ್ಗೆ ಕನ್ಯಾ ರಾಶಿಯವರು ಈ ತಿಂಗಳಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಿ.