ತಾಯಿ ವರಾಹಿ ದೇವಿ ಭಕ್ತರ ಕೋರಿಕೆಯನ್ನು ಇಷ್ಟಾರ್ಥಗಳನ್ನು ತಕ್ಷಣಕ್ಕೆ ನೆರವೇರಿಸುವಂತಹ ಶಕ್ತಿ ದೇವತೆ ಆಗಿದ್ದಾರೆ. ಕಲಿಯುಗದಲ್ಲಿ ನರ ಮನುಷ್ಯನ ನೂರಾರು ಬಗೆಯ ಕಷ್ಟಗಳಿಗೆ ಪರಿಹಾರ ನೀಡುವ ಶಕ್ತಿ ಹೊಂದಿರುವ ಈ ದೇವತೆ ತನ್ನನ್ನು ಭಕ್ತಿ ಭಾವದಿಂದ ಶ್ರದ್ದೆಯಿಂದ ಪೂಜಿಸುವವರನ್ನು ಕೈ ಬಿಡುವುದಿಲ್ಲ.
ವರಾಹಿ ದೇವಿಗೆ ಮಂಗಳವಾರ, ಶುಕ್ರವಾರ, ಪಂಚಮಿ, ಅಷ್ಟಮಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳು ಬಹಳ ವಿಶೇಷ. ಅದರಲ್ಲೂ ಹುಣ್ಣಿಮೆ ದಿನ ನಾವು ಹೇಳುವ ರೀತಿಯಲ್ಲಿ ನೀವು ಸಣ್ಣ ಆಚರಣೆ ಮಾಡಿ ವರಾಹಿದೇವಿಗೆ ಮೊರೆ ಇಟ್ಟರೆ ನಿಮ್ಮ ಕಷ್ಟಗಳು ತೀರುವುದಲ್ಲಿ ಅನುಮಾನವೇ ಇಲ್ಲ ಹಾಗೂ ನೀವು ಅಂದುಕೊಂಡಿದ್ದು ನೂರಕ್ಕೆ ನೂರರಷ್ಟು ನೆರವೇರುತ್ತದೆ.
ಅದಕ್ಕಾಗಿ ಏನು ಮಾಡಬೇಕು ಎಂದರೆ ಹುಣ್ಣಿಮೆಯ ದಿನದಂದು ನೀವು ಮನೆಯನ್ನು ಶುದ್ಧಗೊಳಿಸಿ ಮನೆಯಲ್ಲಿ ನಿಮ್ಮ ಮನೆ ದೇವರಿಗೆ ಪೂಜೆ ಮಾಡಿ ರಾತ್ರಿ ಸಮಯದಲ್ಲಿ ಮಲಗುವ ಮುನ್ನ ಒಂದು ಚಿಕ್ಕ ಉಪಾಯ ಮಾಡಬೇಕು. ಒಂದು ಜಾಗದಲ್ಲಿ ಪ್ರಶಾಂತವಾಗಿ ಕುಳಿತುಕೊಂಡು ಎರಡು ನಿಮಿಷ ವರಾಹಿ ದೇವಿಯನ್ನು ಪ್ರಾರ್ಥಿಸಿ ಒಂದು ಹಾಳೆ ಮತ್ತುಹಸಿರು ಬಣ್ಣದ ಪೆನ್ ತೆಗೆದುಕೊಳ್ಳಿ.
ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಹೀಗೆ ಮಾಡಿ.! ನಿಮ್ಮ ಆಸೆ ಶೀಘ್ರದಲ್ಲಿ ನೆರವೇರುತ್ತದೆ.!
ನೀವು ಬಿಳಿ ಹಾಳೆ ಹಾಗೂ ಹಸಿರು ಬಣ್ಣದ ಪೆನ್ ಮಾತ್ರ ಉಪಯೋಗಿಸಬೇಕು. ಈಗ ಮೊದಲಿಗೆ ಒಂದು ವೃತ್ತ ಹಾಕಿ ವೃತ್ತದ ಒಳಗೆ ಮೊದಲಿಗೆ 777 ಎಂಬ ಸಂಖ್ಯೆ ಬರೆಯಿರಿ. ಅದರ ಕೆಳಗೆ ನಿಮ್ಮ ಹೆಸರು ಬರೆಯಿರಿ, ಆದರೆ ಕೆಳಗೆ ಒಂದೇ ಸಾಲಿನಲ್ಲಿ ನಿಮ್ಮ ಏನು ಕೋರಿಕೆ ಇದೆ ಅದನ್ನು ಬರೆಯಿರಿ.
ಉದಾಹರಣೆ ನನ್ನ 50,000 ಸಾಲ ತೀರಬೇಕು ಅಥವಾ ನಾನು ತುಂಬಾ ಕಷ್ಟಪಡುತ್ತಿದ್ದೇನೆ ನನ್ನ ಶ್ರಮಕ್ಕೆ ತಕ್ಕ ಹಾಗೆ ಸರ್ಕಾರಿ ಉದ್ಯೋಗ ಸಿಗಬೇಕು ಎಂದು ಹೀಗೆ ಒಂದೇ ಸಾಲಿನಲ್ಲಿ ನಿಮ್ಮ ಆಸೆ ಏನಿದೆ ಅದನ್ನು ಬರೆಯಿರಿ. ಅದರ ಕೆಳಗೆ 741 ಸಂಖ್ಯೆ ಬರೆಯಿರಿ ಈ 741 ಸಂಖ್ಯೆ ಅಕ್ಕಪಕ್ಕ ಡಾಲರ್ ಚಿಹ್ನೆ ಬರೆಯಿರಿ, ಅಥವಾ ರುಪೀಸ್ ಎನ್ನುವ ಚಿನ್ಹೆ ಬರೆಯಿರಿ ಮತ್ತು ಮೇಲೆ ಬರೆಯಲಾದ 777 ನೇರಕ್ಕೆ ಚಿಕ್ಕದಾಗಿ 8 ಬರೆದು ಅದರ ಕೆಳಗೆ 520 ಎಂದು ಬರೆಯಿರಿ.
ಇದನ್ನು ಬರೆದ ಮೇಲೆ ಮತ್ತೊಮ್ಮೆ ವರಾಹಿದೇವಿ ಬಳಿ ನಿಮ್ಮ ಕೋರಿಕೆ ಏನಿದೆ ಎಂದು ಮನಃಸ್ಪೂರ್ತಿಯಾಗಿ ಕೇಳಿಕೊಂಡು ಆಶೀರ್ವಾದಕ್ಕಾಗಿ ಪ್ರಾರ್ಥಿಸಿ. ಈಗ ಅದನ್ನು ಮಡಚಿ ಒಂದು ಪೌಚ್ ನಲ್ಲಿ ಹಾಕಿಕೊಳ್ಳಿ ಪ್ರತಿ ದಿನ ಮಲಗುವಾಗ ದಿಂಬಿನ ಕೆಳಗೆ ಹಾಕಿ ಮಲಗಿ.
ಈ ಸುದ್ದಿ ಓದಿ:-ಒಂದು ವೀಳ್ಯದೆಲೆ ಇದ್ದರೆ ಸಾಕು. ಲಕ್ಷ ಅಲ್ಲ ಕೋಟಿ ಸಾಲ ಇದ್ದರೂ ಕೂಡ ತೀರಿಸಬಹುದು ಹೇಗೆ ಅಂತ ನೋಡಿ.!
ಪ್ರತಿದಿನ ರಾತ್ರಿ ಮಲಗುವ ಮುನ್ನ ವರಾಹಿ ದೇವಿ ನೆನೆದು ಅಂ ಭಗವ ಎಂಬ ಮಂತ್ರವನ್ನು ಹೇಳಿ ಪ್ರಾರ್ಥನೆ ಸಲ್ಲಿಸಿ. ನಿಮ್ಮ ಇಷ್ಟಾರ್ಥ ನೆರವೇರುವಂತೆ ಅಥವಾ ನೀವು ಬರೆದುಕೊಂಡಿರುವ ಕಷ್ಟ ಕಳೆಯುವಂತೆ ಪ್ರಾರ್ಥಿಸಿ. ಹೀಗೆ ನಿಮ್ಮ ಸಮಸ್ಯೆ ಪರಿಹಾರ ಆಗುವವರೆಗೂ ಕೂಡ ಈ ರೀತಿಯಾಗಿ ಪ್ರತಿದಿನ ಮಾಡಿ ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹಾರವಾಗುತ್ತದೆ ನಂತರ ಅದನ್ನು ಹರಿವ ನೀರಿಗೆ ಬಿಡಿ.
ನೀವು ಯಾವುದೇ ಊರಿಗೆ ಹೋದರು ಕೂಡ ಇದನ್ನು ತೆಗೆದುಕೊಂಡು ಹೋಗಬಹುದು. ಒಂದು ವೇಳೆ ಹುಣ್ಣಿಮೆ ದಿನ ಮಾಡಲು ಸಾಧ್ಯವಾಗದೆ ಹೋದರೆ ಯಾವುದಾದರೂ ದಿನ ಈ ರೀತಿ ಮಾಡಬಹುದು, ಒಂದು ಕೋರಿಕೆ ನೆರವೇರಿದ ನಂತರ ಈ ಕೋರಿಕೆಯನ್ನು ಕೂಡ ಇದೇ ರೀತಿ ಬರೆದುಕೊಳ್ಳಬಹುದು.