ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ. ಬಾಲ್ಯಾವಸ್ಥೆ ಮುಗಿದು ವಿದ್ಯಾಭ್ಯಾಸ ಪಡೆದು ಕುಟುಂಬವನ್ನು ನೋಡಿಕೊಳ್ಳಲು ಉದ್ಯೋಗ ದೊರೆತನಂತರ ಪುರುಷ ಗೃಹಸ್ಥಾಶ್ರಮಕ್ಕೆ ಕಾಲಿಡುವುದಕ್ಕೆ ಸರಿಯಾದ ಸಮಯ.
ಹಾಗೆಯೇ ಹೆಣ್ಣು ಮಕ್ಕಳಿಗೂ ಕೂಡ ಬಹಳ ತಡ ಮಾಡದೆ 18 ವರ್ಷ ತುಂಬಿದ ತಕ್ಷಣ ಅವರಿಗೆ ಕೆಲಸ ಅಥವಾ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇಲ್ಲ ಎಂದರೆ ಮದುವೆ ಮಾಡುವುದು ಬಹಳ ಒಳ್ಳೆಯದು. ಯಾಕೆಂದರೆ ತಲೆಮಾರು ಬೆಳೆಯುತ್ತಾ ಹೋಗಬೇಕು ಬಹಳ ಚಿಕ್ಕ ವಯಸ್ಸಿಗೆ ಮದುವೆ ಆದರೆ ಅವರಲ್ಲಿ ಹೊಂದಾಣಿಕೆ ಹಾಗೂ ಆರೋಗ್ಯ ಉತ್ತಮವಾಗಿರುತ್ತದೆ.
ಹಿರಿಯರು ಕೂಡ ತಮ್ಮ ಕಣ್ಣೆದುರಿಗೆ ಮೊಮ್ಮಕ್ಕಳು ಬೆಳೆಯುವುದನ್ನು ನೋಡಿ ಅವರಿಗೂ ಸರಿಯಾದ ದಾರಿ ತೋರಬಹುದು. ಹೀಗೆ ನಮ್ಮ ಹಿಂದೂ ಧರ್ಮದ ಪ್ರಕಾರವಾಗಿ ಹಿರಿಯರು ಯಾವುದನ್ನೇ ನಿರ್ಧಾರ ಮಾಡಿದ್ದರು ಕೂಡ ಅದು ಸರಿಯಾಗಿರುತ್ತದೆ, ಈಗ ವಿಜ್ಞಾನವೂ ಕೂಡ ಇದನ್ನೇ ಒಪ್ಪುತ್ತಿದೆ.
ಈ ಸುದ್ದಿ ಓದಿ:- ಸಿಂಹ ರಾಶಿಯವರ ಮಾರ್ಚ್ ತಿಂಗಳ ಮಾಸ ಭವಿಷ್ಯ, ಈ ತಿಂಗಳಲ್ಲಿ ನಿಮಗೆ ಬಲ ಕೊಡುವುದು ಇದೊಂದೇ ಶಕ್ತಿ.!
ಈ ರೀತಿ ಮದುವೆ ಮಾಡುವ ಮನಸ್ಸು ಮದುವೆ ಆಗುವ ಇಚ್ಛೆ ಇದ್ದರೂ ಅದಕ್ಕೆ ಸಿದ್ಧತೆ ಮಾಡಿಕೊಂಡಿದ್ದರು ಕೆಲವೊಮ್ಮೆ ಮದುವೆ ಬಹಳ ವಿಳಂಬವಾಗುತ್ತಿರುತ್ತದೆ. ಮದುವೆ ಮಾಡಬೇಕು ಎಂದು ಮಗಳ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿ ಇರಿಸಿಕೊಂಡಿದ್ದರು, ಒಳ್ಳೆಯ ಸಂಬಂಧಗಳು ಬರುವುದಿಲ್ಲ ಅಥವಾ ಯಾವ ಸಂಬಂಧಗಳು ಕೂಡ ಒಪ್ಪಿಗೆ ಆಗುವುದಿಲ್ಲ.
ಪುರುಷರಿಗೂ ಕೂಡ ಅನೇಕ ಬಾರಿ ನೋಡಲು ಚೆನ್ನಾಗಿ ಇದ್ದರು ವಿದ್ಯಾಭ್ಯಾಸ ಚೆನ್ನಾಗಿದ್ದರೂ ಒಳ್ಳೆಯ ಹುದ್ದೆಯಲ್ಲಿ ಇದ್ದರು ಆಸ್ತಿವಂತರಾಗಿದ್ದರು ಹೆಣ್ಣು ಸಿಗುವುದಿಲ್ಲ. ಹೆಣ್ಣು ನೋಡುತ್ತಲೇ 10 – 15 ವರ್ಷ ಕಳೆದೇ ಹೋಗಿರುವ ಉದಾಹರಣೆಗಳು ಕೂಡ ಸಾಕಷ್ಟು ಇವೆ. ಯಾವ ಕಾರಣದಿಂದಾಗಿ ಈ ರೀತಿ ವಿವಾಹ ವಿಳಂಬ ಆಗುತ್ತಿದೆ ಮತ್ತು ಇದಕ್ಕೆ ಪರಿಹಾರ ಏನು ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ.
ಸಾಮಾನ್ಯವಾಗಿ ಹೇಳಬೇಕು ಎಂದರೆ ಮಿತಿಮೀರಿದ ನಿರೀಕ್ಷೆಗಳು ಇದ್ದರೆ ಖಂಡಿತ ಮದುವೆ ಕಷ್ಟ ಯಾವುದು ಪ್ರಾಕ್ಟಿಕಲ್ ಆಗಿ ನಡೆಯಲು ಒಪ್ಪಲು ಸಾಧ್ಯವಿಲ್ಲ ಅಂತಹ ನಿರೀಕ್ಷೆಗಳನ್ನು ಮದುವೆಯಾಗುವ ಹುಡುಗ ಅಥವಾ ಹುಡುಗಿಯಿಂದ ಬಯಸಿದರೆ ಮದುವೆ ಆಗುವುದಿಲ್ಲ ಅಥವಾ ನೀವು ಏನಾದರೂ ಯಾರಿಗಾದರೂ ಮದುವೆ ಆಗುತ್ತೇನೆ ಎಂದು ಹೇಳಿ ಮಾತು ಮುರಿದಿದ್ದರು ಕೂಡ.
ಈ ಸುದ್ದಿ ಓದಿ:-ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಇದನ್ನು ಇಟ್ಟು ಮಲಗಿ, ವರಾಹಿ ದೇವಿ ನಿಮ್ಮ ಕೋರಿಕೆಗಳನ್ನು ಮೂರೇ ದಿನಗಳಲ್ಲಿ ನೆರವೇರಿಸುತ್ತಾರೆ.!
ಆ ದೋಷದಿಂದ ವಿವಾಹ ವಿಳಂಬ ಆಗುತ್ತಿರಬಹುದು ಇದರ ಪರಿಹಾರಕ್ಕಾಗಿ ಪಶ್ಚಾತಾಪದಿಂದ ಅವರ ಎದುರು ಸಾಧ್ಯವಿಲ್ಲದಿದ್ದರೂ ದೇವರ ಮುಂದೆ ಅಥವಾ ಮನಸಾಕ್ಷಿಯ ಮುಂದೆ ಕ್ಷಮೆ ಕೇಳಿಕೊಳ್ಳಬೇಕು. ಈ ರೀತಿ ಯಾವುದೇ ಸಮಸ್ಯೆ ಇಲ್ಲದೆ ಮದುವೆ ಆಗುತ್ತಿಲ್ಲ ಎಂದರೆ ಅದು ಪೂರ್ವ ಜನ್ಮದ ಕರ್ಮದ ಫಲ ಅಥವಾ ಜನ್ಮ ಜಾತಕದಲ್ಲಿರುವ ದೋಷ ಎಂದು ಹೇಳಲಾಗುತ್ತದೆ. ತಜ್ಞ ಜ್ಯೋತಿಷ್ಯರ ಬಳಿ ಜಾತಕ ವಿಮರ್ಶೆ ಮಾಡಿ ಅವರು ಸೂಚಿಸುವಂತೆ ಪರಿಹಾರಗಳನ್ನು ಮಾಡಿಕೊಳ್ಳಬೇಕು.
ಗೋವಿನ ಪೂಜೆಯನ್ನು 9 ದಿನ ಮಾಡುವುದರಿಂದ ಈ ರೀತಿ ದೋಷಗಳಿದ್ದರೆ ನಿವಾರಣೆ ಆಗುತ್ತದೆ ಮತ್ತು ಯಾರಾದರೂ ಅಸಹಾಯಕರು ಅಥವಾ ಬಡವರ ಮಕ್ಕಳ ಮದುವೆಗೆ ಸಹಾಯ ಮಾಡಿದರು ಕೂಡ ಈ ದೋಷಗಳು ನಿವಾರಣೆ ಆಗುತ್ತವೆ.
ಗಿರಿಜಾ ಕಲ್ಯಾಣ ಕಥೆಗಳನ್ನು ಕೇಳುವುದು ಪಾರಾಯಣ ಮಾಡುವುದರಿಂದ ಕೂಡ ಈ ದೋಷಗಳು ಪರಿಹಾರವಾಗಿ ಬಹಳ ಬೇಗ ಮದುವೆಗಳು ನಡೆಯುತ್ತವೆ ಮತ್ತು ಶಿವ ಪಾರ್ವತಿ ಸನ್ನಿಧಿಗೆ ಭೇಟಿ ಕೊಟ್ಟು ಪೂಜೆ ಮಾಡಿಸುವುದರಿಂದ ಮತ್ತು ಸಾಕ್ಷಾತ್ ಪಾರ್ವತಿ ಪರಮೇಶ್ವರ ಬಳಿ ನಿಮ್ಮ ಸಮಸ್ಯೆ ಹೇಳಿಕೊಡುವುದರಿಂದ ಇದಕ್ಕೆ ಪರಿಹಾರ ಸಿಗುತ್ತದೆ. ಇದರೊಂದಿಗೆ 48 ದಿನ ರುಕ್ಮಿಣಿ ಕಲ್ಯಾಣ ಲೇಖನವನ್ನು ಪಾರಾಯಣ ಮಾಡುವುದರಿಂದ ಕೂಡ ಕಂಕಣ ಭಾಗ್ಯ ಕೂಡಿ ಬರುತ್ತದೆ.
https://youtu.be/dCUYirD5Ksc?si=GZlLAFJNCoMGfOKh