ನಾವು ಪ್ರತಿದಿನ ಅಥವಾ ವಾರಕ್ಕೆ ನಾಲ್ಕು ಬಾರಿಯಾದರೂ ನಮ್ಮ ಮನೆಯಲ್ಲಿರುವ ವಾಷಿಂಗ್ ಮಿಷನ್ (Washing Machine) ಬಳಸುತ್ತೇವೆ. ಆದರೆ ಬಳಸಿದಾಗೆಲ್ಲಾ ಮಿಷನ್ ಕ್ಲೀನ್ ಮಾಡುವ ಗೋಜಿಗೆ ಹೋಗುವುದಿಲ್ಲ ಮತ್ತು ಅದರ ಅವಶ್ಯಕತೆ ಕೂಡ ಇಲ್ಲ. ಆದರೆ ಎರಡು ತಿಂಗಳಿಗೆ ಒಮ್ಮೆಯಾದರೂ ನಾವು ನೀಟಾಗಿ ನಮ್ಮ ವಾಷಿಂಗ್ ಮಿಷನ್ ಗಳನ್ನು ಕ್ಲೀನ್ ಮಾಡಬೇಕು.
ಇಲ್ಲವಾದಲ್ಲಿ ನಮ್ಮ ಬಟ್ಟೆಗಳಲ್ಲಿ ಇದ್ದ ಕೊಳೆಯು ಮಿಷನ್ ಗೆ ಸೇರಿಕೊಂಡು ಬಟ್ಟೆ ಸರಿಯಾಗಿ ಕ್ಲೀನ್ ಆಗುವುದಿಲ್ಲ ಹಾಗೆಯೇ ಮುಂದುವರೆದರೆ ಮಿಷನ್ ಕೂಡ ಕೆಟ್ಟು ಹೋಗುತ್ತದೆ. ನಿಮ್ಮ ಬಳಿ ಫ್ರಂಟ್ ಲೋಡ್ (Front load) ಅಥವಾ ಟಾಪ್ ಲೋಡ್ (Top Load) ಮಿಷನ್ ಇರಬಹುದು ನಿಮ್ಮ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಯಾವ ರೀತಿ ಸುಲಭವಾಗಿ ಕ್ಲೀನ್ ಮಾಡಬಹುದು ಎನ್ನುವ ಸುಲಭ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಈ ಹೆಸರಿನವರಿಗೆ ಮೂಗಿನ ಮೇಲೆಯೇ ಕೋಪ ಇರುತ್ತದೆ ಇವರಿಂದ ದೂರ ಇರುವುದೇ ಒಳ್ಳೆಯದು.!
ಇದಕ್ಕಾಗಿ ನೀವು ಮೊದಲು ಒಂದು ಸಲ್ಯೂಷನ್ (Solution) ರೆಡಿ ಮಾಡಿಕೊಳ್ಳಬೇಕು. ನಿಮ್ಮ ಮನೆಯಲ್ಲಿರುವ ವಸ್ತುಗಳಿಂದ ಇದನ್ನು ರೆಡಿ ಮಾಡಿಕೊಳ್ಳಬಹುದು. ಒಂದು ಕಪ್ ನೀರು ತೆಗೆದುಕೊಳ್ಳಿ ಅದಕ್ಕೆ ಎರಡು ಚಮಚ ಬೇಕಿಂಗ್ ಸೋಡ ಹಾಕಿ ಮತ್ತು ಒಂದು ಚಮಚದಷ್ಟು ಕೋಲ್ ಗೇಟ್ ಟೂತ್ ಪೇಸ್ಟ್ (Colgate toothpaste) ಹಾಕಿ ಈ ಟೂತ್ಪೇಸ್ಟ್ ಇಲ್ಲದೆ ಇದ್ದರೆ ನಿಮ್ಮ ಮನೆಯಲ್ಲಿ ಇರುವ ಬೇರೆ ಯಾವುದಾದರೂ ಟೂತ್ ಪೇಸ್ಟ್ ಹಾಕಿ ಅರ್ಧ ಹೋಳು ನಿಂಬೆಹಣ್ಣು ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಇದನ್ನು ಪಕ್ಕಕ್ಕೆ ಇಟ್ಟು ಮೊದಲು ಮಿಷನ್ ಕ್ಲೀನ್ ಮಾಡಿಕೊಳ್ಳಬೇಕು.
ಫ್ರಂಟ್ ಲೋಡ್ ಇರಲಿ ಅಥವಾ ಟಾಪ್ ಲೋಡ್ ಇರಲಿ ಮೊದಲಿಗೆ ಡ್ರಮ್ ಮುಂಭಾಗದಲ್ಲಿರುವ ಬೆಲ್ಟ್ (Belt) ಅನ್ನು ಟೂತ್ ಬ್ರಷ್ ಸಹಾಯದಿಂದ ನೀಟಾಗಿ ಕ್ಲೀನ್ ಮಾಡಿಕೊಳ್ಳಬೇಕು. ಇದರ ಸಂಧಿ ಒಳಗಡೆ ಹೆಚ್ಚು ಕೊಳೆ ತುಂಬಿರುತ್ತದೆ ಹಾಗಾಗಿ ಸ್ವಲ್ಪ ನೀರು ಹಾಕಿ ವಿಮ್ ಜೆಲ್ ಹಾಕಿ ಟೂತ್ ಬ್ರಷ್ ಬಳಸಿ ಚೆನ್ನಾಗಿ ಸುತ್ತಲೂ ಉಜ್ಜಿ ತೊಳೆದುಕೊಳ್ಳಬೇಕು ಅಥವಾ ಚೆನ್ನಾಗಿ ಉಜ್ಜಿದ ಮೇಲೆ ಒದ್ದೆ ಬಟ್ಟೆಯಿಂದ ಕೊಳೆಯನ್ನೆಲ್ಲ ತೊಳೆದುಕೊಳ್ಳಬೇಕು.
ಈ ಸುದ್ದಿ ಓದಿ:- ಸರ್ಕಾರದಿಂದ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಮೂರು ಬಂಪರ್ ಕೊಡುಗೆ.!
ಆಮೇಲೆ ಫಿಲ್ಟರ್ ತೆಗೆದು ಅದನ್ನು ಕೂಡ ವಿಮ್ ಜೆಲ್ ಮತ್ತು ಬ್ರಷ್ ಸಹಾಯದಿಂದ ಚೆನ್ನಾಗಿ ಬ್ರಷ್ ಮಾಡಿ ಕ್ಲೀನ್ ಮಾಡಿಕೊಂಡು ಫಿಲ್ಟರ್ ಹಾಕುವ ಜಾಗವನ್ನು ಕೂಡ ಕ್ಲೀನ್ ಮಾಡಿಕೊಳ್ಳಬೇಕು. ಕೊನೆಯಲ್ಲಿ ನೀವು ಮೊದಲೇ ಮಾಡಿಟ್ಟುಕೊಂಡ ಸಲ್ಯೂಷನ್ ಅನ್ನು ಡ್ರಮ್ ಒಳಗಡೆ ಹಾಕಿ ಸ್ವಲ್ಪ ನೀರು ಹಾಕಿ ಕ್ಲೋಸ್ ಮಾಡಿ.
ನೀವು ಮಿಷನ್ ನಲ್ಲಿ ಸೆಟ್ಟಿಂಗ್ ಮಾಡಿಕೊಳ್ಳಬೇಕು ಫ್ರಂಟ್ ಲೋಡ್ ಮಿಷನ್ ಆದರೆ ಇಕೋ ಡ್ರಮ್ ಕ್ಲೀನಿಂಗ್ ಆಪ್ಷನ್ ಫಿಕ್ಸ್ ಮಾಡಬೇಕು. ಟಾಪ್ ಲೋಡ್ ವಾಷಿಂಗ್ ಮಿಷನ್ ಆಗಿದ್ದರೆ ಡ್ರಮ್ ಕ್ಲೀನಿಂಗ್ / ಟಬ್ ಕ್ಲೀನಿಂಗ್ / ಇಕೋ ಟಬ್ ಕ್ಲೀನಿಂಗ್ / ಇಕೋ ಡ್ರಮ್ ಕ್ಲೀನಿಂಗ್ / ಟಬ್ ಹೈಜೆನ್ ಆಪ್ಷನ್ ಇರುತ್ತದೆ ಇದನ್ನು ಫಿಕ್ಸ್ ಮಾಡಬೇಕು. ಯಾವುದು ಇಲ್ಲ ಎಂದರೆ ಕ್ವಿಕ್ ವಾಶ್ (Quick Wash) ಎನ್ನುವ ಆಪ್ಷನ್ ಫಿಕ್ಸ್ ಮಾಡಿ ವಾಶ್ ಮಾಡಿದರೆ ನಿಮ್ಮ ವಾಷಿಂಗ್ ಮಷೀನ್ ಪೂರ್ತಿ ಕ್ಲೀನ್ ಆಗುತ್ತದೆ ನಂತರ ವಾಶ್ ಮಾಡಿದಾಗ ಬಟ್ಟೆಗಳು ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ.