ಮಾವಿನ ಎಲೆಯು ಶುಭದ ಸಂಕೇತ, ಸಮೃದ್ಧಿಯ ಸಂಕೇತ. ಮಾವಿನ ಎಲೆ ಎಂದರೆ ಏನೋ ಹೊಸ ಹುರುಪು, ಸಡಗರ, ಹಸಿರಾದ ಈ ಮಾವಿನ ಎಲೆಗೆ ಬಹಳ ಸಕಾರಾತ್ಮಕ ಶಕ್ತಿ ಇದೆ. ಹಾಗಾಗಿ ಯಾವುದೇ ಶುಭ ಕಾರ್ಯಗಳಾದರು ಮಾವಿನ ಎಲೆ ಇಲ್ಲದೆ ಪೂರ್ತಿ ಗೊಳ್ಳುವುದಿಲ್ಲ.
ಮಾವಿನ ಎಲೆಯಿಂದ ಹಿಡಿದು ಆ ವೃಕ್ಷದ ಪ್ರತಿಯೊಂದು ವಸ್ತುವೂ ಕೂಡ ನಮ್ಮ ಆಯುರ್ವೇದ ಮತ್ತು ವಾಸ್ತು ಶಾಸ್ತ್ರದಲ್ಲಿ ಹಾಗೂ ಪೂಜಾ ವಿಧಿ ವಿಧಾನದ ಸಂಪ್ರದಾಯಗಳಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ವಾಸ್ತುದೋಷಗಳಲ್ಲಿನ ಪರಿಹಾರಕ್ಕಾಗಿ ಕೂಡ ಮಾವಿನ ಎಲೆಗಳನ್ನು ಬಳಸುತ್ತಾರೆ.
ಇದೇ ಮಾವಿನ ಎಲೆಗಳನ್ನು ಬಳಸಿಕೊಂಡು ನಾವು ನಮ್ಮ ಜೀವನದ ಬಹಳ ದೊಡ್ಡ ಸಮಸ್ಯೆಗಳಿಗೆ ಹೇಗೆ ಪರಿಹಾರ ಮಾಡಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಮುಖ್ಯವಾಗಿ ಮನುಷ್ಯನಿಗೆ ಸಾಲ ಎನ್ನುವುದು ಎಲ್ಲದಕ್ಕಿಂತ ದೊಡ್ಡ ಸಮಸ್ಯೆ.
ಈ ಸುದ್ದಿ ಓದಿ:- ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!
ನೀವು ಇದೇ ರೀತಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರೆ ಇದರಿಂದ ಹೊರಬರಬೇಕು ಎಂದು ಬಯಸುವುದಾದರೆ ಶುದ್ಧವಾದ ಹಸಿರಾದ ಯಾವುದೇ ರೀತಿ ಒಡಕಾಗಿರದ 16 ಅಥವಾ 21 ಮಾವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ಪೋಣಿಸಿ ಅದರ ಮೇಲೆ ಹತ್ತಿ ಗೆಜ್ಜೆಬತ್ತಿ ಮಾಡಿ ಅಂಟಿಸಿ ಒಂದು ಬಟ್ಟಲು ಜೇನುತುಪ್ಪದೊಂದಿಗೆ ಸೋಮವಾರದಂದು ಶಿವನ ದೇವಾಲಯಕ್ಕೆ ಅರ್ಪಿಸಿ.
ಶಿವನ ಬಳಿ ನಿಮ್ಮ ಕಷ್ಟವನ್ನು ಹೇಳಿಕೊಳ್ಳಿ ಮತ್ತು ಅಲ್ಲೇ ಕುಳಿತು 108 ಬಾರಿ ಪಂಚಾಕ್ಷರಿ ಮಂತ್ರವನ್ನು ಪಠಿಸಿ ನೀವು ಈ ಉಪಾಯ ಮಾಡಿದ ಒಂದು ವಾರದೊಳಗೆ ನಿಮ್ಮ ಸಮಸ್ಯೆಗೆ ಖಂಡಿತ ಪರಿಹಾರ ಸಿಗುತ್ತದೆ. ಯಾವುದಾದರೂ ಮೂಲದಿಂದ ಧನಲಾಭವಾಗಿ ಸಾಲ ತೀರುತ್ತದೆ. ನಿಮ್ಮ ಒಂದು ಸಾಲ ತೀರಿದ ಬಳಿಕ ಬೇರೆ ಮತ್ತೊಬ್ಬರ ಸಾಲ ತೀರಿಸಬೇಕು ಎಂದಿದ್ದರೆ ಆಗ ಇದೇ ಆಚರಣೆಯನ್ನು ಮತ್ತೊಂದು ಸೋಮವಾರ ಮುಂದುವರಿಸಬಹುದು.
* ಮನೆಯಲ್ಲಿ ಅ’ಶಾಂ’ತಿ, ಕ’ಲ’ಹಗಳಾಗುತ್ತಿವೆ. ಯಾವ ಕಾರ್ಯವು ಕೈಗೂಡುತ್ತಿಲ್ಲ ನರ ದೃಷ್ಟಿ ದೋಷವಾಗಿದೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತಿದೆ ಎನ್ನುವ ರೀತಿ ಭಾಸವಾಗುತ್ತಿದ್ದರೆ ಇದರ ನಿವಾರಣೆಗೆ ನೀವು ಮನೆಯ ಮುಂದೆ ಮಾವಿನ ಎಲೆಗಳ ತೋರಣವನ್ನು ಕಟ್ಟಬೇಕು. ಪ್ರತಿ 15 ದಿನಕ್ಕೊಮ್ಮೆ ಇದನ್ನು ಬದಲಾಯಿಸುತ್ತಿರಬೇಕು ಆಗ ಯಾವುದೇ ದೋಷಗಳು ಇದ್ದರೂ ಪರಿಹಾರವಾಗಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಮತ್ತು ಆ ಮನೆ ಮೇಲೆ ಲಕ್ಷ್ಮಿ ಕಟಾಕ್ಷವಾಗುತ್ತದೆ.
ಈ ಸುದ್ದಿ ಓದಿ:-ಮಲಗುವಾಗ ಯಾರು ಕೂಡ ಅಪ್ಪಿತಪ್ಪಿಯೂ ಈ 6 ವಸ್ತುಗಳನ್ನು ತಲೆಯ ಬಳಿ ಇಟ್ಟುಕೊಳ್ಳಬೇಡಿ.!
* ನೀವು ಎಷ್ಟೇ ಕಷ್ಟಪಟ್ಟರು ಮನೆಯಲ್ಲಿ ಹಣ ಉಳಿಯುತ್ತಿಲ್ಲ ಪರ್ಸ್ ಯಾವಾಗಲೂ ಖಾಲಿಯಾಗಿರುತ್ತದೆ ಎಂದರೆ, ಮನೆಯ ಆರ್ಥಿಕ ಅಭಿವೃದ್ಧಿಯಾಗಲು ಈ ರೀತಿ ಮಾಡಬೇಕು ಶುಕ್ಲವಾರದಂದು ದೇವರ ಪೂಜೆ ಮಾಡಿದ ನಂತರ ಒಂದು ತಾಮ್ರದ ಚಂಬಿನಲ್ಲಿ ಪೂರ್ತಿ ಶುದ್ಧ ನೀರು ತುಂಬಿಟ್ಟು ಲಕ್ಷ್ಮಿ ಅಷ್ಟೋತ್ತರ ಮತ್ತು ಲಕ್ಷ್ಮಿ ನಾಮಾವಳಿಗಳನ್ನು ಹೇಳಿಕೊಂಡು ತುಂಬಿದ ಚಂಬಿಗೆ ಪೂಜೆ ಮಾಡಿ ಮಾವಿನ ಎಲೆಯ ಸಹಾಯದಿಂದ ಆ ನೀರನ್ನು ಮನೆ ಪೂರ್ತಿ ಪ್ರೋಕ್ಷಣೆ ಮಾಡುತ್ತಾ ಬರಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕಾಭಿವೃದ್ಧಿಯಾಗುತ್ತದೆ.
* ಒಂದು ಮಾವಿನ ಮರವನ್ನು ಬೆಳೆಸಿದರೆ ಹತ್ತು ಮದುವೆ ಮಾಡಿಸಿದಷ್ಟು ಪುಣ್ಯ ಬರುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ನಿಮ್ಮ ಕೈಲಿ ಸಾಧ್ಯವಾದರೆ ಮಾವಿನ ಗಿಡಗಳನ್ನು ನೆಡಿ ಇಲ್ಲವಾದಲ್ಲಿ ನಿಮ್ಮ ಹತ್ತಿರದ ಮಾವಿನ ಗಿಡಗಳಿಗೆ ನೀವು ನೀರನ್ನು ಹಾಕಿ ಜೋಪಾನ ಮಾಡುವುದರಿಂದ ನಿಮ್ಮ ಜೀವನದಲ್ಲಿ ಬರುವ ಅನೇಕ ಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.