Home Viral News ಮುಸ್ಲಿಂ ಮಹಿಳೆಗೆ ಹಣ ಕೊಟ್ಟ ಸಿದ್ದರಾಮಯ್ಯ, ನಿಮ್ಮ ದುಡ್ಡು ಯಾರಿಗೆ ಬೇಕು ಎಂದು ವಾಪಸ್ ಎಸೆದ ಮಹಿಳೆ, ಈ ವೈರಲ್ ವಿಡಿಯೋ ನೋಡಿ.

ಮುಸ್ಲಿಂ ಮಹಿಳೆಗೆ ಹಣ ಕೊಟ್ಟ ಸಿದ್ದರಾಮಯ್ಯ, ನಿಮ್ಮ ದುಡ್ಡು ಯಾರಿಗೆ ಬೇಕು ಎಂದು ವಾಪಸ್ ಎಸೆದ ಮಹಿಳೆ, ಈ ವೈರಲ್ ವಿಡಿಯೋ ನೋಡಿ.

0
ಮುಸ್ಲಿಂ ಮಹಿಳೆಗೆ ಹಣ ಕೊಟ್ಟ ಸಿದ್ದರಾಮಯ್ಯ, ನಿಮ್ಮ ದುಡ್ಡು ಯಾರಿಗೆ ಬೇಕು ಎಂದು ವಾಪಸ್ ಎಸೆದ ಮಹಿಳೆ, ಈ ವೈರಲ್ ವಿಡಿಯೋ ನೋಡಿ.

ಇತ್ತೀಚೆಗೆ ಬಾಗಲಕೋಟೆಯಲ್ಲಿ ಬಾದಾಮಿ ವಿಧಾನಸಭಾ ಕ್ಷೇತ್ರದ ಕೆರೂರು ಪಟ್ಟಣದಲ್ಲಿ ಎರಡು ಗುಂಪುಗಳ ನಡುವೆ ಅಂದರೆ ಎರಡು ಸಮುದಾಯಗಳ ನಡುವೆ ಘ-ರ್ಷ-ಣೆ ಉಂಟಾಗಿತ್ತು. ಒಂದು ಗುಂಪಿನವರು ಹಿಂದೂ ಸಮುದಾಯಕ್ಕೆ ಸೇರಿದರೆ ಮತ್ತೊಂದು ಗುಂಪಿನವರು ಮುಸ್ಲಿಂ ಜನಾಂಗದವರು. ಪರಸ್ಪರ ಹೊ-ಡೆದಾಡಿಕೊಂಡು ಸಾಕಷ್ಟು ಜನರು ಗಾಯಗೊಂಡಿದ್ದರು. ಅವರೆಲ್ಲರೂ ಅಲ್ಲಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ಸಮಯದಲ್ಲಿ ಅವರೆಲ್ಲರ ಆರೋಗ್ಯವನ್ನು ವಿಚಾಯಿಸುವುದಕ್ಕೆ ಅವರ ಯೋಗಕ್ಷೇಮವನ್ನು ನೋಡುವುದಕ್ಕೆ ಸಾಕಷ್ಟು ರಾಜಕೀಯ ಮುಖಂಡರುಗಳು ಬರುತ್ತಿದ್ದರು. ಅದೇ ರೀತಿ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಗಾಯಾಳುಗಳನ್ನು ನೋಡಲು ಹೋಗಿದ್ದರು. ಮೊದಲು ಹಿಂದೂ ಸಮುದಾಯದವರನ್ನು ಮಾತನಾಡಿಸಲು ಹೋದಾಗ ತೀವ್ರ ವಿ-ರೋ-ಧ ವ್ಯಕ್ತವಾಗುತ್ತದೆ, ಅಲ್ಲಿಂದ ವಾಪಸ್ ಬರಬೇಕಾಗುತ್ತದೆ. ನಂತರ ಮುಸ್ಲಿಂ ಗಾಯಾಳುಗಳನ್ನು ನೋಡಲು ಹೋದಾಗ ಕೂಡ ಅದೇ ರೀತಿ ವಾತಾವರಣವಿರುತ್ತದೆ.

ಮುಸ್ಲಿಂ ಗಾಯಾಳುಗಳನ್ನು ಮಾತನಾಡಿಸಲು ಹೋದ ಸಂದರ್ಭದಲ್ಲಿ ಅಲ್ಲೇ ಅವರ ಕುಟುಂಬಸ್ಥರಿಗೆ ಅಂದರೆ ಅಲ್ಲಿದ್ದ ಗಾಯಾಳು ಕುಟುಂಬದ ಓರ್ವ ಮಹಿಳೆಗೆ ಎರಡು ಲಕ್ಷ ಹಣವನ್ನು ಕೊಡುತ್ತಾರೆ. ಆ ಮನೆಯಲ್ಲಿ ನಾಲ್ಕು ಜನ ಗಾಯಾಳುಗಳಾಗಿದ್ದರು ಹಾಗಾಗಿ ತಲ 50,000 ಶೇರ್ ಮಾಡಿಕೊಂಡು ಚಿಕಿತ್ಸೆ ಕೊಡಿಸಿ ಎಂದು ಹೇಳಿಕೊಡುತ್ತಾರೆ. ಹಾಗೆ ಹೇಳಿದ ತಕ್ಷಣ ಮಹಿಳೆಗೆ ಎಲ್ಲಿತ್ತೋ ಕೋಪ ತಕ್ಷಣ ತೀವ್ರವಾಗಿ ತಮ್ಮ ಸಿಟ್ಟನ್ನು ಹೊರ ಹಾಕುತ್ತಾರೆ. ನಿಮ್ಮ ಹಣ ಇಲ್ಲಿ ಯಾರಿಗೆ ಬೇಕು? ನಮಗೆ ಅದರ ಅವಶ್ಯಕತೆ ಇಲ್ಲ ನಮಗೆ ಜೀವಿಸಲು ನೆಮ್ಮದಿಯ ವಾತಾವರಣ ಸೃಷ್ಟಿ ಮಾಡಿಕೊಡಿ ಎಂದು ಮನವಿ ಮಾಡುತ್ತಾರೆ. ಆದರೆ ಸಿದ್ದರಾಮಯ್ಯನವರು ಮಾತ್ರ ಒತ್ತಾಯ ಪೂರಕವಾಗಿ ಮಹಿಳೆಯ ಕೈಗೆ ಹಣವನ್ನು ಇಡುತ್ತಾರೆ. ಮತ್ತು ಕಾರು ಹತ್ತಿ ಹೊರಡುತ್ತಾರೆ. ಆದರೆ ಹಣವನ್ನು ತೆಗೆದುಕೊಳ್ಳಲು ಒಪ್ಪದ ಮಹಿಳೆ ಸಿದ್ದರಾಮಯ್ಯನವರ ಕಾರಿನ ಹಿಂದೆ ಅದನ್ನೆಲ್ಲ ಎಸೆದು ಬಿಡುತ್ತಾರೆ.

ಎರಡು ಲಕ್ಷ ಸಂಪೂರ್ಣ ಹಣವು ರಸ್ತೆಯ ತುಂಬೆಲ್ಲಾ ಚೆಲ್ಲಿ ಹೋಗುತ್ತದೆ. ಅದಾದ ಬಳಿಕ ಆ ಮಹಿಳೆ ಕೆಲವು ಮಾತುಗಳನ್ನು ಕೂಡ ಹೇಳುತ್ತಾರೆ. ನಮ್ಮ ಊರಿನಲ್ಲಿ ಎಲ್ಲರೂ ನೆಮ್ಮದಿಯಿಂದ ಶಾಂತಿ ವಾತಾವರಣದಲ್ಲಿ ಬದುಕುತ್ತಿದ್ದೆವು, ಹಿಂದುಗಳು ಮುಸ್ಲಿಮರಿಗೆ ಹಾಗೂ ಮುಸ್ಲಿಮರು ಹಿಂದುಗಳಿಗೆ ಸಹಾಯ ಮಾಡಿಕೊಂಡು ಸಹಬಾಳ್ವೆ ನಡೆಸುತ್ತಿದೆವು. ಯಾವುದೋ ಸಣ್ಣ ಕಾರಣಕ್ಕಾಗಿ ಈಗ ಗಲಾಟೆ ಆಗಿದೆ ಅದು ನಮ್ಮ ನಡುವೆ ಸರಿ ಹೋಗುತ್ತದೆ. ಆದರೆ ಈ ರಾಜಕೀಯ ನಾಯಕರುಗಳು ಇದರ ಮಧ್ಯೆ ಬಂದು ತಮ್ಮ ರಾಜಕೀಯ ಲಾಭ ಪಡೆಯುವುದಕ್ಕಾಗಿ ನಮ್ಮ ನಮ್ಮ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ನಾಳೆಯೂ ಕೂಡ ನಮ್ಮ ಕಷ್ಟಗಳಿಗೆ ಹಿಂದುಗಳು ಬರ್ತಾರೆ ಹಾಗೂ ಹಿಂದೂಗಳ ಕಷ್ಟಗಳಿಗೆ ನಾವು ಹೋಗುತ್ತಿವೆ. ಆದರೆ ಈ ರಾಜಕೀಯ ನಾಯಕರು ಮತ್ತು ಜನಪ್ರತಿನಿಧಿಗಳು ನಮ್ಮ ಕಷ್ಟ ಸುಖಕ್ಕೆ ಬರುವುದಿಲ್ಲ.

ಇವರು ನಮ್ಮ ನಮ್ಮ ನಡುವೆ ಜಗಳ ತಂದಿಟ್ಟು ಅವರು ಲಾಭ ಮಾಡಿಕೊಳ್ಳುತ್ತಾರೆ. ಹಾಗಾಗಿ ನನಗೆ ಇವರ ಹಣ ಬೇಡ ಎಂದು ಎಸೆದೆ ಎಂದು ಆ ಮಹಿಳೆ ತನ್ನ ಮಾತುಗಳನ್ನು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಈ ಸುದ್ದಿ ಎಲ್ಲೆಡೆ ಪ್ರಸಾರವಾಗುತ್ತಿದ್ದು ಮತ್ತು ಮಹಿಳೆ ಹಾಗೂ ಸಿದ್ದರಾಮಯ್ಯ ಅವರ ನಡುವೆ ನಡೆದ ಈ ಘಟನೆ ವಿಡಿಯೋ ಎಲ್ಲಡೆ ವೈರಲ್ ಕೂಡ ಆಗುತ್ತಿದೆ. ಹಣದಾಸೆಗೆ ತನ್ನ ವಿವೇಕ ಕಳೆದುಕೊಳ್ಳದ ಈ ದಿಟ್ಟ ಮಹಿಳೆಯ ಗುಣವನ್ನು ಎಲ್ಲರೂ ಮೆಚ್ಚಿ ಗುಣಗಾನ ಮಾಡುತ್ತಿದ್ದಾರೆ. ಈ ಮುಸ್ಲಿಂ ಮಹಿಳೆ ಮಾಡಿದ ಈ ರಾದಂತದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

LEAVE A REPLY

Please enter your comment!
Please enter your name here