ಮೊದಲಲ್ಲಾ ಬುದ್ಧಿವಂತಿಕೆ ಹೆಚ್ಚಿಸಿಕೊಳ್ಳಲು ಹಾಗೂ ಮನೋರಂಜನೆ ಪಡೆಯಲು ಜನರು ನಾನಾ ಆಟಗಳನ್ನು ಆಡುತ್ತಿದ್ದರು. ಕೆಲವೊಂದು ದೈಹಿಕ ಶ್ರಮ ಉಪಯೋಗಿಸಿ ಆಡುವ ಆಟಗಳು ಆದರೆ ಕೆಲವೊಂದು ಮನಸ್ಸಿನಲ್ಲೇ ಬುದ್ಧಿವಂತಿಕೆ ಉಪಯೋಗಿಸಿ ಪ್ರಶ್ನೆಯನ್ನು ಬಿಡಿಸಿ ಅದಕ್ಕೆ ಉತ್ತರ ಹೇಳುವ ಆಟಗಳು, ಆದರೆ ಇನ್ನೂ ಕೆಲವು ಕಣ್ಣಿನ ದೃಷ್ಟಿಗೂ ಸಂಬಂಧ ಪಟ್ಟ ಆಟಗಳು ಆಗಿರುತ್ತವೆ. ಹಿಂದಿನ ಕಾಲದಲ್ಲೂ ಕೂಡ ರಾಜ ಮಹಾರಾಜರೇ ಯುದ್ಧ ಮಾಡುವಾಗ ಈ ರೀತಿ ಮಲ್ಲ ಯುದ್ದ, ದೃಷ್ಟಿಯುದ್ದ ಇಂತಹ ಯುದ್ಧಗಳನ್ನು ಮಾಡುತ್ತಿದ್ದರಂತೆ. ಇನ್ನು ಅದೇ ವಾಡಿಕೆ ಮುಂದುವರಿದು, ಆದರೆ ಕೆಲವು ಬೇರೆ ಬೇರೆ ರೂಪಗಳನ್ನು ಪಡೆದುಕೊಂಡು ಇಂತಹ ಆಟಗಳು ಅಥವಾ ಸ್ಪರ್ಧೆಗಳು ಜನರನ್ನು ರಂಜಿಸುತ್ತಲೇ ಬಂದಿವೆ. ಮೊದಲು ನಮ್ಮ ಹಿರಿಯರು ನಮಗೆ ಒಗಟುಗಳನ್ನು ಕೇಳಿ ಅದನ್ನು ಬಿಡಿಸಲು ಹೇಳುತ್ತಿದ್ದರು. ನಂತರ ಅದು ಕೂಡಿಸಿ ಕಳಿಸಿ ಭಾಗಿಸುವ ಬುದ್ಧಿವಂತಿಕೆ ಆಟಗಳು ಆಗಿ ಅಂಕೆಗಳನ್ನು ಒಳಗೊಂಡಿತ್ತು.
ಆದರೆ ಅದನ್ನು ಬಿಡಿಸುವಷ್ಟರಲ್ಲಿ ಒಳ್ಳೆಯ ಮನರಂಜನೆ ಸಿಗುತ್ತಿತ್ತು ಹಾಗೂ ಸಮಯವು ಕಳೆಯುತ್ತಿತ್ತು ಈಗಿನ ಕಾಲದಲ್ಲಿ ಸ್ಪರ್ಧಾತಕ ಪರೀಕ್ಷೆಗಳಲ್ಲಿ ಕೂಡ ಮೆಂಟಲ್ ಅಬಿಲಿಟಿ ಎನ್ನುವ ಒಂದು ಭಾಗ ಇರುತ್ತದೆ. ಅದು ತಲೆಗೆ ಕೆಲಸ ಕೊಟ್ಟು ಬುದ್ಧಿವಂತಿಕೆಗೆ ಆಹಾರ ನೀಡಿ ನಂತರ ಉತ್ತರ ಕಂಡುಕೊಳ್ಳುವ ಕೆಲಸವಾಗಿರುತ್ತದೆ. ಈಗಿನ ಕಾಲದಲ್ಲಿ ಮನೋರಂಜನೆ ನೀಡುತ್ತಿರುವುದು ಮೊಬೈಲ್ ಫೋನ್ಗಳು. ಈ ಮೊಬೈಲ್ ಫೋನ್ಗಳಲ್ಲಿ ದಿನ ಒಂದಕ್ಕೆ ಲಕ್ಷಾಂತರ ವಿಷಯಗಳು ಹಂಚಿಕೆಯಾಗುತ್ತಿವೆ ಇಂತಹ ಈ ದೊಡ್ಡ ಸಮುದ್ರದಲ್ಲಿ ಈ ರೀತಿ ಸಣ್ಣಪುಟ್ಟ ಆಟಗಳಿಗೂ ಕೂಡ ಚಿಕ್ಕದಾದ ಜಾಗ ಇದ್ದೇ ಇದೆ. ಕೆಲವೊಮ್ಮೆ ವಿಶೇಷವಾಗಿ ಕಾಣುವ ಪ್ರಶ್ನೆಗಳು ವೈರಲ್ ಆಗಿ ಆ ದಿನದಲ್ಲಿ ಅತಿ ಹೆಚ್ಚು ಶೇರ್ ಆದ ಕಂಟೆಂಟ್ ಕೂಡ ಆಗಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಕೇಳುವಾಗ ಯಾವುದಾದರು ಎರಡು ಒಂದೇ ರೀತಿಯ ಫೋಟೋಗಳನ್ನು ಹಾಕಿ ಅವುಗಳಲ್ಲಿರುವ ಕೆಲವೊಂದು ವ್ಯತ್ಯಾಸಗಳನ್ನು ಗುರುತಿಸಿ ಎಂದು ಕೇಳುತ್ತಾರೆ.
ಅಥವಾ ಒಂದು ದೊಡ್ಡ ಚಿತ್ರವನ್ನು ಹಾಕಿ ಅದರೊಳಗೆ ಕೆಲವು ಸಣ್ಣಪುಟ್ಟ ಪ್ರಾಣಿಗಳ ಚಿತ್ರ ಅಡಗಿರುವಂತೆ ಆದರೆ ಮೊದಲ ನೋಟಕ್ಕೆ ಅದು ತಿಳಿಯದಂತೆ ನಿಧಾನವಾಗಿ ವಿಚಾರ ಮಾಡಿ ನೋಡಿದಾಗ ಅವುಗಳು ಅರಿವಿಗೆ ಬರುವಂತೆ ಇರುತ್ತವೆ ಅಂತವುಗಳನ್ನು ಗುರುತಿಸಿ ಎಂದು ಕೇಳುತ್ತಾರೆ. ನಮಗೆ ಸಾಮಾಜಿಕ ಜಾಲತಾಣದಲ್ಲಿ ಆಡಲು ಸಿಗುತ್ತವೆ. ಅವುಗಳ ಜೊತೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿಗೆ ಹೆಸರು ಪಡೆಯುತ್ತಿರುವುದು ಆಪ್ಟಿಕಲ್ ಇಲ್ಯೂಷನ್ ಗಳು. ಆರ್ಟಿಕಲ್ ಇಲ್ಯೂಷನ್ ಎಂದರೆ ಅದೊಂದು ಮೊದಲ ನೋಟಕ್ಕೆ ಗೊತ್ತಾಗದೆ ಅದರೊಳಗೆ ಏನೋ ವಿಷಯವನ್ನು ಹಿಡಿದುಕೊಂಡು ಅದನ್ನು ಮರೆಮಾಚುವಂತೆ ಕಾಣುತ್ತಿರುವ ಒಂದು ಫೋಟೋ ಆಗಿರುತ್ತೆ. ಆದರೆ ಸೂಕ್ಷ್ಮ ದೃಷ್ಟಿ ಇಟ್ಟು ಅವಲೋಕಿಸಿದಾಗ ಅದರೊಳಗಿರುವ ಅಂಶವು ನಮಗೆ ತಿಳಿಯುತ್ತದೆ ಇದನ್ನೇ ಆರ್ಟಿಕಲ್ ಇಲ್ಯೂಷನ್ ಎನ್ನುತ್ತಾರೆ. ಈಗ ಇಂತಹದೇ ಒಂದು ಫೋಟೋ ಸೋಶಿಯಲ್ ಮೀಡಿಯಾದರೆ ಸಕ್ಕತ್ ವೈರಲ್ ಆಗುತ್ತಿದೆ.
ಕಪ್ಪು ಬಿಳಿ ಬಣ್ಣದ ಗೆರೆಗಳಿರುವ ಈ ಆರ್ಟಿಕಲ್ ಇಲ್ಯೂಶನ್ ಮೊದಲ ನೋಟಕ್ಕೆ ಬರಿ ಗೆರೆಗಳಿರುವ ಚಿತ್ರ ಎನ್ನುವಂತೆ ಕಾಣುತ್ತದೆ. ಆದರೆ ದೃಷ್ಟಿ ಇಟ್ಟು ಅದನ್ನೇ ಗಮನಿಸಿದಾಗ ತಿಳಿತ್ತದೆ ಅದರಲ್ಲಿ ಕರ್ನಾಟಕದ ಮಹಾನ್ ವ್ಯಕ್ತಿ ಒಬ್ಬರ ಹೆಸರಿದೆ ಎಂದು. ನೀವು ಕೂಡ ಇದನ್ನು ಪರೀಕ್ಷಿಸಿ ನೋಡಿ ಈ ಫೋಟೋವನ್ನು ನೋಡಿ ಕಂಡುಹಿಡಿಯುವ ಅದರಲ್ಲಿರುವ ಹೆಸರನ್ನು ಗುರುತಿಸುವ ಪ್ರಯತ್ನ ಮಾಡಿ. ಅಕಸ್ಮಾತ್ ನಿಮಗೆ ಇದು ತಿಳಿಯಲು ಸಾಧ್ಯವಾಗದೆ ಹೋದರೆ ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಯಾಕೆಂದರೆ ನಾವೇ ಉತ್ತರವನ್ನು ಹೇಳುತ್ತೇವೆ. ಈ ಹೆಸರು ಬೇರೆ ಯಾರದ್ದೂ ಅಲ್ಲ ಕರ್ನಾಟಕದ ಅಭಿಮಾನಿಗಳ ದೇವರು ಪುನೀತ್ ರಾಜಕುಮಾರ್ ಅವರ ಹೆಸರು. ಈ ಉತ್ತರ ಮೊದಲೇ ನಿಮಗೆ ತಿಳಿದಿದ್ದರೆ ಕಾಮೆಂಟ್ ಮಾಡಿ Yes ಅಂತ.