ಶಿವರಾತ್ರಿ ಹಬ್ಬದ ದಿನ ಒಂದು ವಿಶೇಷವಾದ ಆಚರಣೆ ಮಾಡುವ ಮೂಲಕ ನೀವು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಯಾವ ರೀತಿ ಮಾಡಬೇಕು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಮೊದಲಿಗೆ ಶಿವರಾತ್ರಿ ಹಬ್ಬದ ಹಿಂದಿನ ದಿನ ಅಥವಾ ಶಿವರಾತ್ರಿ ದಿನ ಮನೆಯನ್ನು ಸ್ವಚ್ಛ ಮಾಡಿಕೊಳ್ಳಿ.
ಕೆಲವರು ಶಿವರಾತ್ರಿ ಹಬ್ಬದ ಮುಂಜಾನೆಯೇ ಕೆಲವರು ಪೂಜೆ ಮಾಡುತ್ತಾರೆ ಸಾಧ್ಯವಾಗದೆ ಇದ್ದವರು ಶಿವರಾತ್ರಿ ದಿನ ರಾತ್ರಿ ಸಮಯದ ಪೂಜೆ ವಿಶೇಷವಾಗಿರುವುದರಿಂದ ರಾತ್ರಿ ಸಮಯದಲ್ಲೂ ಕೂಡ ಇದನ್ನು ಮಾಡಬಹುದು. ಈಗ ದೇವರ ಕೋಣೆಯಲ್ಲಿ ಶಿವಪಾರ್ವತಿ ಇರುವ ಫೋಟೋ ಅಲಂಕಾರ ಮಾಡಿ ಅದರ ಮುಂದೆ ರಂಗೋಲಿ ಬರೆದು ಮೊದಲಿಗೆ ಒಂದು ತಟ್ಟೆಯನ್ನು ಇಡಿ ಆ ತಟ್ಟೆಯ ತುಂಬಾ ಅಕ್ಕಿ ಇರಲಿ.
ಈಗ ಆ ಅಕ್ಕಿಯ ಮೇಲೆ ಮತ್ತೊಂದು ಚಿಕ್ಕ ತಟ್ಟೆ ಇಡಿ ಇದರ ಮೇಲೆ ಒಂದು ಎಕ್ಕದ ಎಲೆಯನ್ನು ಇಡಿ ಎಕ್ಕದ ಎಲೆಯ ಮೇಲೆ ನಿಮ್ಮ ಮನೆಯಲ್ಲಿ ಇರುವ ಶಿವಲಿಂಗವನ್ನು ಇಡಿ. ಬೆಳ್ಳಿ ಅಥವಾ ಸ್ಪಟಿಕ ಅಥವಾ ನಿಮ್ಮ ಮನೆಯಲ್ಲಿ ಯಾವ ಲೋಹದ ಶಿವಲಿಂಗ ಇದೆಯೋ ಅದನ್ನೇ ಇಡಿ ಮತ್ತು ಈಗ ಈ ತಟ್ಟೆಯ ಅಕ್ಕಪಕ್ಕ ದೀಪಗಳನ್ನು ಇಟ್ಟು ಅಲಂಕರಿಸಿ ದೀಪ ಹಚ್ಚಿ ನೀವು ಎಕ್ಕದ ಮೇಲೆ ಇಟ್ಟಿರುವ ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸಿ.
16 ಎಕ್ಕದ ಹೂಗಳನ್ನು ಮಾಲೆ ಮಾಡಿ ಅರ್ಪಿಸಿ ಮತ್ತು ತಪ್ಪದೆ ಶಿವದಾರವನ್ನು ಕೂಡ ಶಿವಲಿಂಗಕ್ಕೆ ಅರ್ಪಿಸಿ. ಇವು ಶಿವನಿಗೆ ಬಹಳ ಪ್ರಿಯವಾದ ವಸ್ತುಗಳು ಇದನ್ನು ಅರ್ಪಿಸುವುದರಿಂದ ಮಹಾದೇವನು ಪ್ರಸನ್ನರಾಗುತ್ತಾರೆ. ಈಗ ನೀವು ಶಿವನ ಅಷ್ಟೋತ್ತರವನ್ನು ಮಾಡಬೇಕು ಹೇಗೆ ಎಂದರೆ ಒಂದು ಹಿಡಿ ಚೆನ್ನಾಗಿರುವ ಅಕ್ಕಿ ತೆಗೆದುಕೊಂಡು ಅದಕ್ಕೆ ವಿಭೂತಿ ಮತ್ತು ತುಪ್ಪ ಹಾಕಿ ಅಕ್ಷತೆಯನ್ನಾಗಿ ಮಾಡಿಕೊಳ್ಳಿ.
ಈಗ ನೀವು ಪ್ರತಿಷ್ಠಾಪಿಸಿರುವ ಶಿವಲಿಂಗದ ಎದುರು ಒಂದು ಮಣೆ ಅಥವಾ ಚಾಪೆ ಹಾಕಿ ಕುಳಿತುಕೊಂಡು ಉಂಗುರದ ಬೆರಳು ಹಾಗೂ ಹೆಬ್ಬರಳಿನಿಂದ ಎಷ್ಟು ಅಕ್ಕಿ ಬರುತ್ತದೆ ಅಷ್ಟು ಅಕ್ಕಿಯನ್ನು ತೆಗೆದುಕೊಂಡು ಶಿವನ ಅಷ್ಟೋತ್ತರವನ್ನು ಒಂದೊಂದೇ ಹೇಳುತ್ತಾ ಶಿವಲಿಂಗದ ಮೇಲೆ ಹಾಕಿ ಅಷ್ಟೋತ್ತರ ಎಂದರೆ ಶಿವನ ಹೆಸರುಗಳು. 101 ನಾಮಗಳನ್ನು ಹೇಳಿ ನಂತರ ಸಂಕಲ್ಪ ಮಾಡಿಕೊಳ್ಳಿ.
ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸಬೇಕು ಆದಷ್ಟು ಬೇಗ ಹಣಕಾಸಿನ ಸಮಸ್ಯೆಗಳಿಂದ ಹೊರಬಂದು ಜೀವನದಲ್ಲಿ ಏಳಿಗೆ ಆಗಬೇಕು ಎಂದು ನಿಮ್ಮ ಕಷ್ಟ ಹೇಳಿಕೊಂಡು ಪ್ರಾರ್ಥಿಸಿ. ನಂತರ ಏನು ಮಾಡಬೇಕು ಎಂದರೆ ಒಂದು ಬಿಳಿ ಮಡಿ ವಸ್ತ್ರವನ್ನು ತೆಗೆದುಕೊಳ್ಳಿ ಸಾಧ್ಯವಾದಷ್ಟು ಹೊಸ ಬಟ್ಟೆಯನ್ನು ತೆಗೆದುಕೊಳ್ಳಬೇಕು ಇದು ಒಂದು ಅಂಗೈ ಅಳತೆ ಇರಲಿ.
ಇದಕ್ಕೆ ನೀವು ಎಕ್ಕದ ಮೇಲೆ ಶಿವಲಿಂಗ ಇಟ್ಟಿದ್ದರಿಂದ ಈ ಎಲೆ ಮೇಲೆ ಅಕ್ಷತೆ ಸಂಗ್ರಹವಾಗಿರುತ್ತದೆ. ನೀವು ಅಷ್ಟೋತ್ತರ ಮಾಡಿದ ಅಕ್ಷತೆ ಯನ್ನು ತೆಗೆದುಕೊಂಡು ಬಿಳಿ ವಸ್ತ್ರಕ್ಕೆ ಹಾಕಿ ಇದರ ಜೊತೆಗೆ ತಪ್ಪದೆ ನೀವು ಶಿವಲಿಂಗಕ್ಕೆ ಅರ್ಪಿಸಿದ್ದ ಒಂದು ಬಿಲ್ವಪತ್ರೆಯನ್ನು ಕೂಡ ಹಾಕಿ ಬಿಳಿ ದಾರದಿಂದ ಗಂಟು ಕಟ್ಟಿ ಮತ್ತು ಈ ಗಂಟಿನ ಮೇಲೆ ಒಂದು ಎಕ್ಕದ ಮತ್ತು ಬಿಲ್ವ ಪತ್ರೆ ಇಟ್ಟು ಶಿವ ಪಾರ್ವತಿಯ ಫೋಟೋ ಮುಂದೆ ಅಥವಾ ಶಿವಲಿಂಗದ ಪಕ್ಕದಲ್ಲಿಯೇ ಇಟ್ಟು ಆ ದಿನ ಪೂರ್ತಿ ಇರಲು ಬಿಡಿ.
ಮರುದಿನ ಕೂಡ ಶಿವನಿಗೆ ಪೂಜೆ ಮಾಡುವ ಸಮಯದಲ್ಲಿ ಇದಕ್ಕೂ ಪೂಜೆ ಮಾಡಿ ಪ್ರಾರ್ಥಿಸಿಕೊಳ್ಳಿ. ಈಗ ಸಂಪೂರ್ಣ ಶಕ್ತಿಯು ಆ ಗಂಟಿಗೆ ಬಂದಿರುತ್ತದೆ. ಇದನ್ನು ನೀವು ಹಣಕಾಸು ಇಡುವ ಜಾಗದಲ್ಲಿ ಇಟ್ಟುಕೊಳ್ಳುವುದರಿಂದ ಬಹಳ ಉತ್ತಮವಾದ ಪರಿಣಾಮಗಳನ್ನು ಕಾಣುತ್ತೀರಿ. 48 ದಿನಗಳವರೆಗೂ ಕೂಡ ಇದರ ಶಕ್ತಿ ಇರುತ್ತದೆ ನಂತರ ನೀವು ಇದನ್ನು ಹರಿಯುವ ನೀರಿಗೆ ಬಿಡಬಹುದು ಶಿವರಾತ್ರಿ ಹಬ್ಬದ ದಿನದಂದು ಮಾತ್ರ ಈ ಆಚರಣೆ ಮಾಡಲು ಸಾಧ್ಯ ಆ ದಿನ ಮಾಡಿದ ಈ ವಿಧಾನದ ಪೂಜೆಗೆ ಹೆಚ್ಚು ಶಕ್ತಿ ಇರುತ್ತದೆ.