ನಮ್ಮ ರಾಜ್ಯದಲ್ಲಿ ಲಕ್ಷಾಂತರ ದೇವಾಲಯಗಳಿಗೆ ಮತ್ತು ಪುರಾಣ ಪ್ರಸಿದ್ಧ ಸಾವಿರಾರು ಪುಣ್ಯಕ್ಷೇತ್ರಗಳು ಇವೆ. ಹಾಗೆಯೇ ಕೆಲವೊಂದು ಸ್ಥಳಗಳಲ್ಲಿ ಪವಾಡ ಸದೃಶವಾಗಿ ಭಗವಂತನ ಚಮತ್ಕಾರ ನಡೆಯುತ್ತಿರುವಂತಹ ವಿಶೇಷ ದೇವಾಲಯಗಳು ಕೂಡ ಇವೆ.
ಈ ಪೈಕಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮಳೂರು ಹೋಬಳಿಯ ಗೌಡಗೆರೆ ಎನ್ನುವ ಗ್ರಾಮದಲ್ಲಿ ಇರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮತ್ತು ಇಲ್ಲಿ ನೆಲೆಗೊಂಡಿರುವ ಪವಾಡ ಬಸವಪ್ಪನವರ ಪ್ರಭಾವದ ಬಗ್ಗೆ ನಾಡಿನ ಜನತೆಗೆ ಕೆಲ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಲು ಇಚಿಸುತ್ತಿದ್ದೇವೆ.
ಈ ದೇವಾಲಯಕ್ಕೆ ತಾಯಿ ಚಾಮುಂಡೇಶ್ವರಿಯ ದರ್ಶನಕ್ಕಾಗಿ ಮತ್ತು ಪವಾಡ ಬಸವಪ್ಪನವರಿಗೆ ಕಾಯಿ ಹರಕೆ ಮಾಡಿಕೊಳ್ಳುವುದಕ್ಕಾಗಿ ಸ್ಥಳೀಯರು ಮಾತ್ರವಲ್ಲದೆ ನಾಡಿನ ಮತ್ತು ದೇಶದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಬರುತ್ತಾರೆ.
ಈ ಸುದ್ದಿ ಓದಿ:- 1 ರೂಪಾಯಿ ಬಂಡವಾಳ ಇಲ್ಲದೆ ಮನೆಯಲ್ಲಿಯೇ ಕೂತು ಲಕ್ಷ ಹಣ ಸಂಪಾದನೆ ಮಾಡಬಹುದು.!
ನಾಡಿನ ಅಧಿದೇವತೆಯಾದ ಚಾಮುಂಡೇಶ್ವರಿ ತಾಯಿಯು ತನ್ನ ಭಕ್ತರ ಮೇಲೆ ಕರುಣೆ ತೋರಿ ಇಲ್ಲಿ ಎಲ್ಲರನ್ನು ಕಾಪಾಡುತ್ತಿದ್ದಾರೆ ಹಾಗೆ ಪವಾಡ ಬಸವಪ್ಪನವರು ಕಾಯಿ ಹರಕೆ ಮಾಡಿಕೊಂಡ ಭಕ್ತಾದಿಗಳ ಕೋರಿಕೆಗಳನ್ನು ಏಳು ವಾರಗಳಲ್ಲಿ ನೆರವೇರಿಸುತ್ತಿದ್ದಾರೆ.
ಈ ಸ್ಥಳ ಹಿನ್ನೆಲೆ ಬಗ್ಗೆ ಸ್ಥಳೀಯರು ಹೇಳಿದ ಮಾಹಿತಿ ಪ್ರಕಾರ ಕಸಾಯಿಖಾನೆಗೆ ಹೋಗುತ್ತಿದ್ದ ಬಸವ ತನ್ನ ದೈವೀ ಶಕ್ತಿಯಿಂದ ತಪ್ಪಿಸಿಕೊಂಡು ಈ ಸ್ಥಳದಲ್ಲಿ ನೆಲೆ ನಿಂತು ತನ್ನ ಶಕ್ತಿಯನ್ನು ತೋರುತ್ತಿದ್ದಾರೆ.
ಈ ಮೂಲಕ ಈ ಭಾಗದ ಸಾವಿರಾರು ಕುಟುಂಬಗಳ ಆರಾಧ್ಯ ದೈವವಾಗಿ ಪ್ರಖ್ಯಾತಿ ಹೊಂದಿದ್ದಾರೆ. ಬಸಪ್ಪ ಐಕ್ಯರಾದ ಮೇಲೆ ಆ ಸ್ಥಳದಲ್ಲಿಯೇ ಬಸವನ ವಿಗ್ರಹವನ್ನು ಮಾಡಲಾಗಿದೆ. ಇಂದು ಅಲ್ಲಿಗೆ ಭೇಟಿ ಕೊಟ್ಟವರು ಇದೇ ಗುಡಿಯ ಸುತ್ತಲು ರಾಶಿ ರಾಶಿ ತೆಂಗಿನಕಾಯಿ ಕಟ್ಟಿರುವುದನ್ನು ನೋಡಬಹುದು.
ಈ ಸುದ್ದಿ ಓದಿ:-BPL, APL, AAY ರೇಷನ್ ಕಾರ್ಡ್ ದಾರರಿಗೆ ಬಿಗ್ ಶಾಕ್, ಇನ್ನು ಮುಂದೆ ಈ ಬಗೆಯ ರೇಷನ್ ಕಾರ್ಡ್ ದಾರರಿಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಬರುವುದಿಲ್ಲ…
ಈ ರೀತಿ ಹರಕೆಗೆ ಕಾರಣವೆನೇವೆಂದರೆ ಇಲ್ಲಿನ ಜನರ ನಂಬಿಕೊಂಡು ಬಂದಿರುವ ನಂಬಿಕೆ ಪ್ರಕಾರ ಮತ್ತು ಅದೇ ರೀತಿ ಇಂದಿಗೂ ಕೂಡ ನಡೆಯುತ್ತಿರುವ ಚಮತ್ಕಾರದ ಪ್ರಕಾರ ಏಳು ಭಾನುವಾರದಂದು ಈ ಕ್ಷೇತ್ರಕ್ಕೆ ಬಂದು ಪ್ರತಿ ಭಾನುವಾರವೂ ಒಂದೊಂದು ತೆಂಗಿನ ಕಾಯಿಯನ್ನು ತಂದು ಬಸವನಗುಡಿಗೆ ಏಳು ಪ್ರದಕ್ಷಿಣೆ ಹಾಕಿ ಹರಕೆ ಮಾಡಿಕೊಂಡು.
ನಂತರ ಭಾನುವಾರದಂದು ಈ ಕ್ಷೇತ್ರದಲ್ಲಿ ಹಣೆ ಮೇಲಿಂದ ನೀರನ್ನು ಹಾಕಲಾಗುತ್ತದೆಯಂತೆ ಇದನ್ನು ಹಾಕಿಸಿಕೊಂಡುಹೋಗುವುದರಿಂದ ಏಳು ವಾರದ ಒಳಗೆ ಅವರ ಕಷ್ಟಗಳಿಗೆ ಪರಿಹಾರ ಸಿಗುತ್ತದೆಯಂತೆ. ಇಷ್ಟು ಪ್ರಭಾವವಿರುವ ಈ ಕ್ಷೇತ್ರದ ಖ್ಯಾತಿಯು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಬರುವ ಭಕ್ತಾದಿಗಳ ಸಂಖ್ಯೆಯು ಹೆಚ್ಚಾಗುತ್ತಿದೆ ಹಾಗಾಗಿ ಹರಕೆ ಕಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಹರಕೆ ಫಲಿಸಿದ ನಂತರ ಭಕ್ತಾದಿಗಳು ಬಂದು ಸೇವೆ ಕೂಡ ಸಲ್ಲಿಸುತ್ತಾರೆ ವಿವಾಹ ವಿಳಂಬ, ಸಂತಾನ ವಿಳಂಬ, ಹಣಕಾಸಿನ ಸಮಸ್ಯೆ, ಉದ್ಯೋಗ ಸಮಸ್ಯೆ, ವಿದ್ಯಾಭ್ಯಾಸದ ಸಮಸ್ಯೆ, ಕೌಟುಂಬಿಕ ಸಮಸ್ಯೆಗಳು, ಅದರಲ್ಲೂ ಅತಿ ಮುಖ್ಯವಾಗಿ ತಮ್ಮ ಗಂಡಂದಿರ ಕುಡಿತದ ಚಟ ಬಿಡಿಸುವುದಕ್ಕಾಗಿಯೇ ಹರಕೆ ಮಾಡಿಕೊಳ್ಳುವವರ ಸಂಖ್ಯೆಯು ಹೆಚ್ಚಾಗಿ ಇದೆಯಂತೆ.
ಈ ಸುದ್ದಿ ಓದಿ:-ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!
ಸುತ್ತ ಮುತ್ತಲಿನಲ್ಲಿ ಸಾವಿರಕ್ಕೂ ಹೆಚ್ಚು ಕುಟುಂಬಗಳಲ್ಲಿ ಬಸವಣ್ಣನ ಕೃಪೆಯಿಂದಾಗಿ ನೆಮ್ಮದಿ ನೆಲೆಸಿದೆಯಂತೆ ಆ ಕುಟುಂಬದ ಹೆಣ್ಣು ಮಕ್ಕಳು ತಮ್ಮ ಪತಿ ಅಥವಾ ತಂದೆ ಅಥವಾ ಮಕ್ಕಳ ಕುಡಿತದ ಚಟಕ್ಕೆ ಮುಕ್ತಿ ಕೊಡಿಸುವಂತೆ ಬಂದು ಇಲ್ಲಿ ಹರಕೆ ಸಲ್ಲಿಸಿ ಕುಡಿತದ ಚಟವನ್ನು ಬಿಡಿಸಿದ್ದಾರಂತೆ. ಇಷ್ಟು ಪ್ರಭಾವ ಬೀರುವ ಈ ಕ್ಷೇತ್ರಕ್ಕೆ ನೀವು ಸಹ ನಿಮ್ಮ ಕುಟುಂಬದೊಡನೆ ಒಮ್ಮೆ ಭೇಟಿ ಕೊಡಿ.