ಕಟಕ ರಾಶಿಯವರಿಗೆ ಅಷ್ಟಮದಲ್ಲಿ ಶನಿ ಇರುವುದರಿಂದ ಇದರ ಫಲಗಳನ್ನು ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಮಾರ್ಚ್ 2024ರಲ್ಲಿ ಶನಿ ಗ್ರಹದ ಪ್ರಭಾವ ಕಟಕ ರಾಶಿಯ ಮೇಲೆ ಯಾವ ರೀತಿಯೆಲ್ಲಾ ಬೀಳಲಿದೆ, ಯಾವ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು, ಈ ಸಮಯದಲ್ಲಿ ಒಳ್ಳೆಯ ಫಲಗಳು ಕೂಡ ಇವೆಯೇ? ಪರಿಹಾರವೇನು? ಇತ್ಯಾದಿ ವಿಷಯಗಳ ಬಗ್ಗೆ ಈ ಲೇಖನದಲ್ಲಿ ವಿಶೇಷ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.
ನವಗ್ರಹಗಳಲ್ಲಿ ಶನಿಯು ಬಹಳ ಮಂದಗತಿಯಲ್ಲಿ ಸಾಗುವ ಗ್ರಹವಾಗಿದೆ. ಕರ್ಕಾಟಕ ರಾಶಿ ವಿಚಾರವಾಗಿ ಹೇಳುವುದಾದರೆ ಕರ್ಕಾಟಕ ರಾಶಿ ಏಳನೇ ಮತ್ತು ಎಂಟನೇ ಮನೆ ಒಡೆಯನಾದ ಶನಿಯು ಕಟಕ ರಾಶಿಯಿಂದ 8ನೇ ಮನೆಯಲ್ಲಿರುವ ಕುಂಭ ರಾಶಿಯಲ್ಲಿ ನೆಲೆಸುತ್ತಾರೆ.
ಈ ಸುದ್ದಿ ಓದಿ:- ಫ್ರಿಡ್ಜ್ ಮೇಲೆ ಅಪ್ಪಿ ತಪ್ಪಿಯು ಈ 7 ವಸ್ತುಗಳನ್ನು ಇಡಬೇಡಿ, ಅಪ್ಪಿತಪ್ಪಿ ಇಟ್ಟರೆ ಹಣಕಾಸಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಚ್ಚರ.!
ಎಂಟನೇ ಮನೆ.ವಿಳಂಬ ಹಾಗೂ ಅಡೆತಡೆಯನ್ನು ಸೂಚಿಸುತ್ತದೆ. ಇದರ ಪ್ರಭಾವದಿಂದಾಗಿ ನೀವು ಯಾವುದೇ ಕಾರ್ಯವನ್ನು ಮಾಡಲು ಹೊರಟರು ಅದರ ಮೇಲೆ ನೀವೇ ಗೊಂದಲಗುತ್ತೀರಿ ಅಥವಾ ಇವತ್ತು ಮಾಡುವುದು ಬೇಡ ಎಂದು ಆ ಕಾರ್ಯಗಳನ್ನು ಮುಂದಕ್ಕೆ ಹಾಕಲು ನೋಡುತ್ತೀರಿ ಅಥವಾ ನೀವು ಎಷ್ಟೇ ಪ್ರಯುತ್ನ ಪಟ್ಟರು ಆ ಕಾರ್ಯಗಳು ಆಗದಂತೆ ಸಾಕಷ್ಟು ಅಡೆತಡೆಗಳು ಎದುರಾಗಬಹುದು.
ಅದನ್ನೆಲ್ಲಾ ನೀವು ಒಂದಕ್ಕಿಂತ ಹತ್ತು ಪಟ್ಟು ಶ್ರಮ ಹಾಕಿ ಮಾಡಬೇಕಾದ ಪರಿಸ್ಥಿತಿಯು ಬರಬಹುದು ಇದೆಲ್ಲ ಫಲವನ್ನು ಕೊಡುತ್ತಿದೆ. ಇದರೊಂದಿಗೆ ಅಷ್ಟಮ ಶನಿಯ ಪ್ರಭಾವದಿಂದಾಗಿ ಆರೋಗ್ಯ ಹದಗೆಡುವ ಸಣ್ಣಪುಟ್ಟ ಅ’ಪ’ಘಾ’ತಗಳು ಆಗುವ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಸಾಕಷ್ಟು ಈ ಸಮಯದಲ್ಲಿ ಎಚ್ಚರಿಕೆಯಿಂದ ಇರಿ.
ಸಂಗಾತಿಯೊಂದಿಗೆ ಮನಸ್ತಾಪ ಮತ್ತು ಉದ್ಯೋಗ ಸ್ಥಳದಲ್ಲಿ ಕೂಡ ಕಿರಿಕಿರಿ ಮಾನಸಿಕ ಒತ್ತಡ ಇಂತಹ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗಿ ಬರುತ್ತದೆ ಧೈರ್ಯದಿಂದ ಇರಿ ಈ ಸಮಯ ಕಳೆದ ಬಳಿಕ ಬಹಳ ಒಳ್ಳೆಯದಾಗುತ್ತದೆ. ಇದರ ನಡುವೆ ಎರಡು ಸಮಯಗಳಲ್ಲಿ ನೀವು ಸಮಾಧಾನಕರವಾದ ಪರಿಣಾಮಗಳನ್ನು ಕಾಣಬಹುದು.
ಈ ಸುದ್ದಿ ಓದಿ:- ಶಿವನಿಗೆ ಪ್ರಿಯವಾದ 24 ಅಭಿಷೇಕಗಳು, ಯಾವ ಅಭಿಷೇಕ ಮಾಡುವುದರಿಂದ ಏನು ಫಲ ಗೊತ್ತಾ.?
ಅದೇನೆಂದರೆ ಫೆಬ್ರುವರಿ 11, 2024 ರಿಂದ ಮಾರ್ಚ್ 18, 2024ರ ವರೆಗೆ ಶನಿ ಅಸ್ತಂಗತನಾಗಿರುವ ಪರಿಣಾಮವಾಗಿ ನೀವು ಇಷ್ಟು ದಿನಗಳವರೆಗೆ ಪಟ್ಟ ಕಷ್ಟದಲ್ಲಿ ಸ್ವಲ್ಪ ರಿಲೀಫ್ ಸಿಗುತ್ತದೆ ಆದರೆ ಅದು ಕೆಲವು ದಿನಗಳ ವರೆಗೆ ಮಾತ್ರ ಮತ್ತೆ ಹಿಂದಿನ ಯಥಾ ಸ್ಥಿತಿ ಮುಂದುವರೆಯುತ್ತದೆ.
ಈ ಸಮಯದಲ್ಲಿ ನಿಮಗೆ ಹಣಕಾಸಿನ ಪರಿಸ್ಥಿತಿ ಸುಧಾರಿಸುವುದು, ಅನಿರೀಕ್ಷಿತ ಧನ ಲಾಭವಾಗುವುದು ಅಥವಾ ಇದ್ದಕ್ಕಿದ್ದಂತೆ ನಿಮ್ಮ ವ್ಯಾಪಾರ ವ್ಯವಹಾರ ಅಭಿವೃದ್ಧಿ ಹೊಂದಿ ಈ ವರ್ಷದಲ್ಲಿ ಅತ್ಯಂತ ಲಾಭ ಪಡೆಯುವುದು ಇಂತಹ ಪರಿಣಾಮಗಳು ಉಂಟಾಗುತ್ತವೆ 38 ದಿನಗಳ ಈ ಒಳ್ಳೆಯ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ ಇದರ ನಂತರ ಜೂನ್ 29, 2024 ರಿಂದ ನವೆಂಬರ್ 15, 2024ರ ವರೆಗೆ ಶನಿ ಹಿಮ್ಮುಖವಾಗಿ ಚಲನೆ ಆರಂಭಿಸುತ್ತಾನೆ.
ಈ ಸಮಯದಲ್ಲಿ ನಿಮಗೆ ಅಷ್ಟಮ ಶನಿ ಪ್ರಭಾವದಿಂದ ಉಂಟಾಗುತ್ತಿದ್ದ ವಿಪರೀತ ಕಷ್ಟಗಳು ನಿವಾರಣೆಯಾಗಿ ಶನಿಯ ವಕ್ರ ದೃಷ್ಟಿಯಿಂದ ಪಾರಾಗುತ್ತಿರಿ ಎಂದು ಸುಲಭವಾಗಿ ಹೇಳಬಹುದು. ಅದುವರೆಗೂ ನೀವು ಅನುಭವಿಸಿದ್ದ ಉದ್ಯೋಗಕ್ಕೆ ಸಂಬಂಧಿಸಿದ ಕಷ್ಟಗಳು ಅಥವಾ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಸಂಬಂಧಗಳಲ್ಲಿ ಸಮಸ್ಯೆಗಳು ಇವೆಲ್ಲವೂ ನಿವಾರಣೆ ಆಗುತ್ತವೆ.
ಈ ಸುದ್ದಿ ಓದಿ:- ಈ 6 ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ, ಈ 6 ರಾಶಿಯವರು ಏನು ಮಾಡಿದರು ಲಾಭನೇ.!
ನಿಮ್ಮ ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಬದುಕಿನಲ್ಲಿ ಕಷ್ಟಗಳು ಕಳೆದು ನೆಮ್ಮದಿ ಬರುತ್ತಿರುವ ಮುನ್ಸೂಚನೆ ಸಿಗುವ ರೀತಿ ಭಾವನೆ ಯಾಗುತ್ತದೆ. ತಪ್ಪದೇ ನೀವು ಪ್ರತಿನಿತ್ಯವು ಶನಿ ಸ್ತೋತ್ರವನ್ನು 11 ಬಾರಿ ಪಟಿಸುವುದರಿಂದ ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಂಡು ಇನ್ನು ಹೆಚ್ಚಿನ ಶುಭ ಫಲಗಳನ್ನು ಪಡೆಯಬಹುದು.
ಸ್ತೋತ್ರ:-
ಓಂ ಪ್ರಾಂ ಪ್ರಿ ಪ್ರೌಂ ಸಃ ಶನೈಶ್ಚರಾಯ ನಮಃ