ಬಡಜನರ ಸ್ವಂತ ಸೂರಿನ ಕನಸಿಗೆ ನೆರವಾಗಲು ಕೇಂದ್ರ ಸರ್ಕಾರವು ಕೆಲ ವಸತಿ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ ಇತ್ತೀಚೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು (PMAY) ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ (PM Narendra Modi) ಯವರು 2015 ರಲ್ಲಿ ಪ್ರಾರಂಭಿಸಿದರು.
ಈ ಯೋಜನೆಯನ್ನು ಸಮಾಜದ ದುರ್ಬಲ ವರ್ಗಗಳು, ಕಡಿಮೆ ಆದಾಯ ಹೊಂದಿರುವ ವರ್ಗದ ಜನರಿಗೆ, ಬಡವರು ಮತ್ತು ಗ್ರಾಮೀಣ ಭಾಗದವರಿಗೆ ಕೈಗೆಟುಕುವ ಬೆಲೆಯಲ್ಲಿ ವಸತಿ ಒದಗಿಸುವ ಗುರಿಯೊಂದಿಗೆ ಪ್ರಾರಂಭಿಸಲಾಗಿದೆ. ಯೋಜನೆಯಡಿ ಪ್ರಸ್ತುತವಾಗಿ ಫಲಾನುಭವಿಗೆ 2.70 ಲಕ್ಷ ಹಣವನ್ನು ಸಬ್ಸಿಡಿ ರೂಪದ ಸಹಾಯಧನ ನೀಡುತ್ತಿದೆ.
ಯೋಜನೆಗೆ ಯಾರು ಅರ್ಹರು? ಏನೆಲ್ಲ ದಾಖಲೆಗಳನ್ನು ನೀಡಬೇಕು? ಯಾವ ರೂಪದಲ್ಲಿ ಈ ಹಣ ಸಿಗುತ್ತದೆ? ಎಲ್ಲಿ? ಹೇಗೆ? ಅರ್ಜಿ ಸಲ್ಲಿಸಬೇಕು ಎನ್ನುವ ಯೋಜನೆ ಕುರಿತಾದ ಪೂರ್ತಿ ವಿವರ ಹೀಗಿದೆ ನೋಡಿ. ಯೋಜನೆ ಜಾರಿಯಾದಾಗಲಿಂದ ಇಲ್ಲಿಯವರೆಗೆ 7 ಕೋಟಿ ಕುಟುಂಬಗಳು ಈ ಯೋಜನೆಗೆ ಲಾಭ ಪಡೆದಿವೆ.
ಈ ಸುದ್ದಿ ಓದಿ:- ಈ 6 ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ, ಈ 6 ರಾಶಿಯವರು ಏನು ಮಾಡಿದರು ಲಾಭನೇ.!
2024ರ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲೂ ಕೂಡ ಈ ಯೋಜನೆ ಬಗ್ಗೆ ಪ್ರಸ್ತಾಪವಾಗಿದ್ದು ಮುಂದಿನ 5 ವರ್ಷಗಳಲ್ಲಿ ಎರಡು ಕೋಟಿ ಕುಟುಂಬಗಳಿಗೆ ಯೋಜನೆಯ ಮೂಲಕ 2.70 ಲಕ್ಷ ಸಬ್ಸಿಡಿ ನೆರವು ನೀಡುವ ಗುರಿ ಹೊಂದಿರುವುದಾಗಿ ಸರ್ಕಾರ ಭರವಸೆ ನೀಡಿದೆ.
ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳು ಮನೆ ಖರೀದಿಸುವುದಕ್ಕೆ ಅಥವಾ ಮನೆ ಕಟ್ಟಿಕೊಳ್ಳುವುದಕ್ಕೆ ಈ ಯೋಜನೆಯ ನೆರವು ಪಡೆಯಬಹುದು. ನಿಮ್ಮ ಕುಟುಂಬದ ಆದಾಯದ ಆಧಾರದ ಮೇಲೆ ಈ ಯೋಜನೆಯಡಿ ಸಾಲ ಮತ್ತು 2.67 ಲಕ್ಷದವರೆಗೆ ಸಬ್ಸಿಡಿ ಸಿಗುತ್ತದೆ.
ಯಾರಿಗೆ ಎಷ್ಟು ಸಾಲ ಸಿಗುತ್ತದೆ ಎನ್ನುವ ವಿವರ:-
* EWS ವರ್ಗದವರಿಗೆ 30sqm ಮನೆಗೆ ವಾರ್ಷಿಕವಾಗಿ 6.50% ಬಡ್ಡಿದರದಲ್ಲಿ 6 ಲಕ್ಷದವರೆಗೆ ಸಾಲಕ್ಕೆ 2.67ಲಕ್ಷ ಸಬ್ಸಿಡಿ ಸಿಗುತ್ತದೆ.
* LIG ವರ್ಗದವರಿಗೆ 60sqm ಮನೆಗೆ ವಾರ್ಷಿಕವಾಗಿ 6.50% ಬಡ್ಡಿದರದಲ್ಲಿ 6 ಲಕ್ಷದವರೆಗಿನ ಸಾಲಕ್ಕೆ 2.67ಲಕ್ಷ ಸಬ್ಸಿಡಿ ಸಿಗುತ್ತದೆ
* MIG – 1 ವರ್ಗದವರಿಗೆ 120sqm ಮನೆಗೆ ವಾರ್ಷಿಕವಾಗಿ 4% ಬಡ್ಡಿದರದಲ್ಲಿ 9 ಲಕ್ಷದವರೆಗಿನ ಸಾಲಕ್ಕೆ 2.35 ಲಕ್ಷ ಸಬ್ಸಿಡಿ ಸಿಗುತ್ತದೆ
* MIG – 2 ವರ್ಗದವರಿಗೆ 200sqm ಮನೆಗೆ ವಾರ್ಷಿಕವಾಗಿ 3% ಬಡ್ಡಿದರದಲ್ಲಿ 12 ಲಕ್ಷದವರೆಗೆ ಸಾಲಕ್ಕೆ 2.30 ಲಕ್ಷ ಸಬ್ಸಿಡಿ ಸಿಗುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು:-
* 18 ವರ್ಷ ಪೂರೈಸಿರಬೇಕು
* ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನವನ್ನು ಮನೆ ಖರೀದಿಸುವಾಗ ಅಥವಾ ಮನೆ ಕಟ್ಟಿಸಲು ಹೌಸ್ ಲೋನ್ (House loan) ಮಾಡುವಾಗಲೇ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಈಗಾಗಲೇ ಮನೆ ಪೂರ್ತಿಯಾಗಿದೆ ಈಗ ಇದರ ಪ್ರಯೋಜನ ಪಡೆದು ಕೊಳ್ಳಬಹುದೇ ಇದ್ರೆ ಸಾಧ್ಯವಿಲ್ಲ.
ಬ್ಯಾಂಕ್ ಗಳಲ್ಲಿ ನೀವು ಗೃಹ ಸಾಲ ಪಡೆದುಕೊಳ್ಳುವ ಸಮಯದಲ್ಲಿಯೇ ಒಟ್ಟಿಗೆ ಅರ್ಜಿ ಸಲ್ಲಿಸಬೇಕು. ಕ್ರೆಡಿಟ್ ಲಿಂಕ್ ಸಬ್ಸಿಡಿ ಲೋನ್ (Credit linked Subsidy) ಫಾರ್ಮುಲಾದಲ್ಲಿ ಇದು ವರ್ಕ್ ಮಾಡುತ್ತದೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು ಸೇರಿ ಈ ಯೋಜನೆಯಡಿ ಅನುದಾನ ನೀಡುತ್ತಿವೆ.
ಈ ಸುದ್ದಿ ಓದಿ:- ದೇವರ ಕೋಣೆಯಲ್ಲಿ ಈ 5 ವಸ್ತುಗಳಿದ್ದರೆ ತಕ್ಷಣ ತೆಗೆದುಬಿಡಿ, ಇದರಿಂದ ದೋಷ ಉಂಟಾಗುವುದು ಖಚಿತ…
ಎಲ್ಲಿ ಅರ್ಜಿ ಸಲ್ಲಿಸಬೇಕು?
* ನೀವು ಯಾವ ಬ್ಯಾಂಕ್ ನಲ್ಲಿ ಗೃಹ ಸಾಲ ಮಾಡುತ್ತಿರೋ ಅದೇ ಬ್ಯಾಂಕ್ ನಲ್ಲಿ ಅದೇ ಸಮಯದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ
ಬೇಕಾಗುವ ದಾಖಲೆಗಳು:-
* ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ / ವೋಟರ್ ಐಡಿ / ಪಾನ್ ಕಾರ್ಡ್ / DL ಇವುಗಳಲ್ಲಿ ಯಾವುದಾದರೂ ಒಂದು
* ವಿಳಾಸ ಪುರಾವೆಯಾಗಿ ಆಧಾರ್ ಕಾರ್ಡ್ / ರೇಷನ್ ಕಾರ್ಡ್ / ಪ್ಯಾನ್ ಕಾರ್ಡ್ ಇತ್ಯಾದಿಗಳಲ್ಲಿ ಯಾವುದಾದರೂ ಒಂದು
* ಆದಾಯದ ಪುರಾವೆಗಾಗಿ
ಉದ್ಯೋಗಸ್ಥರಾಗಿದ್ದರೆ 3 ತಿಂಗಳ ಸ್ಯಾಲರಿ ಸ್ಲಿಪ್ ಮತ್ತು 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
* ಸ್ವಂತ ಉದ್ಯಮಿಗಳಾಗಿದ್ದರ ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ ಬ್ಯಾಲೆನ್ಸ್ ಶೀಟ್, 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು 2 ವರ್ಷಗಳ ITR ರಿಪೋರ್ಟ್.