ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರವನ್ನು ಸುಧಾರಿಸಿ ರೈತನ ಆದಾಯವನ್ನು ಹೆಚ್ಚಿಸುವುದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಈಗ ನೀರಾವರಿ ಸೌಲಭ್ಯ ಹೊಂದಿರುವ ರೈತನ ಅನುಕೂಲತೆಗಾಗಿ ಮತ್ತೊಂದು ಯೋಜನೆಯನ್ನು ಪರಿಚಯಿಸಿದೆ. ಪಂಪ್ ಸೆಟ್ ಗಳಲ್ಲಿ ನೀರಿನಷ್ಟೇ ಪ್ರಮುಖ ಸವಲತ್ತಾದ ವಿದ್ಯುತ್ ಪೂರೈಕೆ ಸಮಸ್ಯೆ ಪರಿಹಾರಕ್ಕಾಗಿ ವಿನೂತನ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ.
2019 ರಲ್ಲಿಯೇ ಈ ಕುರಿತ ಕ್ರಮ ಕೈಗೊಂಡು ಸೋಲಾರ್ ಪಂಪ್ಸೆಟ್ ಅಳವಡಿಕೆಗೆ ಪ್ರೋತ್ಸಾಹಿಸುತ್ತಿದ್ದು, ಪ್ರಧಾನಮಂತ್ರಿ ಕುಸುಮ್ ಬಿ ಯೋಜನೆ (Pradana Mantri KUSUM Scheme) ಎನ್ನುವ ಯೋಜನೆಯಡಿ ಘಟಕ ಸ್ಥಾಪನೆಗೆ 80% ವರೆಗೂ ಸಹಾಯಧನ ನೀಡುತ್ತಿದೆ.
ಈ ಸುದ್ದಿ ಓದಿ:- 18 ವರ್ಷಗಳ ನಂತರ ರಾಹು ಮತ್ತು ಬುಧ ಸಂಯೋಗ, ಸಿಂಹ ರಾಶಿಯವರ ಮನೆ ಬಾಗಿಲಿಗೆ ಬರುತ್ತಿದೆ ಅದೃಷ್ಟ…
ಮತ್ತೊಮ್ಮೆ ರೈತರಿಂದ ಸೋಲಾರ್ ಪಂಪ್ಸೆಟ್ ಅಳವಡಿಕೆಗೆ ಅರ್ಜಿ ಆಹ್ವಾನಿಸಲಾಗಿದೆ. ಯೋಜನೆ ಕುರಿತಾದ ಪ್ರಮುಖ ಸಂಗತಿಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲು ಇಚ್ಛಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಸ್ನಾನದ ನೀರಿನಲ್ಲಿ ಇದನ್ನು ಬೆರೆಸಿ ಕೋಟಿ ಸಾಲ ಇದ್ದರೂ ತೀರುತ್ತದೆ…
ಯೋಚನೆ ಹೆಸರು:- ಪ್ರಧಾನಮಂತ್ರಿ ಕುಸುಮ್ ಬಿ ಯೋಜನೆ
ಯೋಜನೆಯ ಉದ್ದೇಶ:-
ಸರ್ಕಾರವು ಕೃಷಿ ಕ್ಷೇತ್ರದಲ್ಲಿ ಸೋಲಾರ್ ಬಳಕೆಯನ್ನು ಉತ್ತೇಜಿಸುವುದಕ್ಕಾಗಿ ರೈತರಿಗೆ ತಮ್ಮ ಜಮೀನಿನಲ್ಲಿ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿಕೊಂಡು ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿಕೊಂಡು ಆ ಮೂಲಕ ಪಂಪ್ಸೆಟ್ ಗಳಲ್ಲಿ ಅಗತ್ಯವಿರುವ ವಿದ್ಯುತ್ ಬಳಕೆಯನ್ನು ಕಡಿಮೆಗೊಳಿಸುವ ಮತ್ತು ಅವಲಂಬಿಕೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದೆ.
ಪ್ರಯೋಜನಗಳು:-
ಈ ಯೋಜನೆಯಡಿ, ರೈತರು ತಮ್ಮ ಜಮೀನುಗಳಲ್ಲಿ ಸೋಲಾರ್ ಪಂಪ್ ಸೆಟ್‌ಗಳನ್ನು (Solar Pump sets installation) ಅಳವಡಿಸಿಕೊಳ್ಳಲು ಸರ್ಕಾರದಿಂದ ಘಟಕವೆಚ್ಚದ 80% ವರೆಗೂ ಸಹಾಯಧನ(Subsidy) ಪಡೆಯಬಹುದು.
* ಇದರಿಂದ, ವಿದ್ಯುತ್ ಖರ್ಚು ಗಣನೀಯವಾಗಿ ಕಡಿಮೆಯಾಗುತ್ತದೆ.
* ರೈತರು ಹಗಲಿನ ಸಮಯದಲ್ಲಿ ವಿದ್ಯುತ್ ಮೇಲೆ ಅವಲಂಬಿತರಾಗದೆ ತಮ್ಮ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಬಹುದು. ವಿದ್ಯುತ್ ಬಳಸಿ ಪಂಪ್ಸೆಟ್ ನಲ್ಲಿ ನೀರು ಎತ್ತುವ ಕೆಲಸವನ್ನು ಇನ್ನು ಮುಂದೆ ಸೌರಶಕ್ತಿ ಬಳಸಿ ಮಾಡಲು ಸಾಧ್ಯವಾಗುತ್ತದೆ.
ಅರ್ಜಿ ಸಲ್ಲಿಸಲು ಯಾರು ಅರ್ಹರು:-
* 18 ವರ್ಷ ಮೇಲ್ಪಟ್ಟ ರೈತನ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ
* ರೈತನ ಹೆಸರಿನಲ್ಲಿ ಸ್ವಂತ ಜಮೀನಿದ್ದು ನೀರಾವರಿ ಸೌಲಭ್ಯ ಕೂಡ ಹೊಂದಿರಬೇಕು
ಅರ್ಜಿ ಸಲ್ಲಿಸುವ ವಿಧಾನ:-
* ಈ ಯೋಜನೆಯಲ್ಲಿ ಆಸಕ್ತಿ ಇರುವ ರೈತರ ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಈ ಯೋಜನೆಯ ಬಗ್ಗೆ ವಿಚಾರಿಸಿ ಪೂರ್ತಿ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬೇಕು
* ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಬಹಳ ಎಚ್ಚರಿಕೆಯಿಂದ ಸರ್ಕಾರದ ಅಧಿಕೃತ ವೆಬ್ಸೈಟ್ ಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಿ.
ಯಾಕೆಂದರೆ ಇತ್ತೀಚೆಗೆ ಸರ್ಕಾರದ ಯೋಜನೆಗಳು ಎಂದು ರೈತರಿಂದ ವಿವರಗಳನ್ನು ಪಡೆದು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ, ಹಾಗಾಗಿ ಸರ್ಕಾರ ಇಂತಹದೊಂದು ಘೋಷಣೆ ಮಾಡಿ ಎಲ್ಲ ರೈತ ಬಾಂಧವರಿಗೂ ಎಚ್ಚರಿಸಿದೆ.
* ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸುವ ರೈತರು ನೇರವಾಗಿ https://souramitra.com ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ, ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ರೈತನ ಆಧಾರ್ ಕಾರ್ಡ್
* ರೈತನ ಬ್ಯಾಂಕ್ ಪಾಸ್ ಬುಕ್ ವಿವರ
* ರೈತನ ಹೆಸರಿನಲ್ಲಿರುವ ಜಮೀನಿನ ಪಹಣಿ ಪತ್ರ
* ರೈತನು ಜಮೀನಿನಲ್ಲಿ ನೀರಾವರಿ ಸೌಲಭ್ಯ ಹೊಂದಿರುವುದಕ್ಕಾಗಿ ದಾಖಲೆ
* ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳುವುದಕ್ಕೆ ಖರೀದಿಸಿದ ಸಾಮಗ್ರಿಗಳ ಬಿಲ್ ಅಥವಾ ಇನ್ವಾಯ್ಸ್ (invoice) ಅಥವಾ
ಇನ್ನಿತರ ಪ್ರಮುಖ ದಾಖಲೆಗಳು