ಸೊಳ್ಳೆ ಕಾಟವನ್ನು ಸಹಿಸಿಕೊಡುವುದು ಬಹಳ ಕಷ್ಟ. ಯಾಕೆಂದರೆ ಸೊಳ್ಳೆಯಿಂದಲೇ ಅನೇಕ ಕಾಯಿಲೆಗಳು ಹರಡುತ್ತಿರುವುದು. ಮಲೇರಿಯ, ಡೆಂಗ್ಯೂ, ಚಿಕನ್ ಗುನ್ಯಾ, ಚರ್ಮ ಸಮಸ್ಯೆ, ಇತ್ಯಾದಿ ರೋಗಗಳನ್ನು ತರುವುದು ಮಾತ್ರವಲ್ಲದೇ ಸೊಳ್ಳೆ ಕಾಟದಿಂದ ನಿದ್ರೆ ಬರದೇ ಇರುವುದರಿಂದ ಮರುದಿನದ ಚಟುವಟಿಕೆಗಳು ಕೂಡ ಹಾಳಾಗುತ್ತವೆ.
ಸೊಳ್ಳೆ ಎನ್ನುವುದು ಚಿಕ್ಕ ವಿಚಾರವಾಗಿದ್ದರೂ ಇದರ ಕಷ್ಟವನ್ನು ಅನುಭವಿಸಿದವರಿಗೇ ಗೊತ್ತು. ಸೊಳ್ಳೆ ಬರೆದಂತೆ ತಡೆಯಲು ಅನೇಕ ಕ್ರಮಗಳಿವೆ. ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಮತ್ತು ಮನೆಯಲ್ಲಿ ಅಕ್ಕಪಕ್ಕ ಹಸಿರು ಗಿಡಗಳು ಇದ್ದರೆ ನಮ್ಮ ಮನೆಯ ಕಿಟಕಿಗಳಿಗೆ ಮೆಷ್ ಹಾಕಬೇಕು ಮತ್ತು ಎಲ್ಲೂ ಮನೆ ಬಳಿ ಚರಂಡಿಯಲ್ಲಿ ಆಗಲಿ ಅಥವಾ ಪ್ಲಾಸ್ಟಿಕ್ ಒಡೆದ ಬಕೆಟ್ ಬಿಂದಿಗೆಗಳಲ್ಲಿ ಆಗಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
ಈ ಸುದ್ದಿ ಓದಿ:- ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!
ಇದೆಲ್ಲ ಮೀರಿ ಸೊಳ್ಳೆ ಕಾಡಿದರೂ ತಪ್ಪಿಸಿಕೊಳ್ಳಲು ಅನೇಕ ಟೆಕ್ನಿಕ್ ಗಳನ್ನು ಮಾಡಲಾಗುತ್ತದೆ. ಸೊಳ್ಳೆ ಪರದೆ ಕಟ್ಟುತ್ತೇವೆ, ಸೊಳ್ಳೆ ಕಡಿಯದಂತೆ ಮಾಯ್ಶ್ಚರೈಸರ್ ಹಚ್ಚುತ್ತೇವೆ, ಸೊಳ್ಳೆ ಕಾಯಿಲ್ ಹಚ್ಚುತ್ತೇವೆ, ಗುಡ್ ನೈಟ್ ಹಾಕುತ್ತೇವೆ ಆದರೆ ಈ ರೀತಿ ಮಾಡುವುದರಿಂದ ಎಷ್ಟು ಅನುಕೂಲತೆ ಇದೆಯೋ ಅಷ್ಟೇ ಆರೋಗ್ಯಕ್ಕೆ ದುಷ್ಪರಿಣಾಮಗಳು ಕೂಡ ಇದೆ ಎಂದರೆ ತಪ್ಪಾಗುವುದಿಲ್ಲ.
ಯಾಕೆಂದರೆ ಇವು ಬಹಳ ಡೇಂಜರಸ್ ಕೆಮಿಕಲ್ ಆಗಿರುವುದರಿಂದ ಮನೆಯಲ್ಲಿರುವ ಮಕ್ಕಳ ಮೇಲೆ ತಕ್ಷಣ ದುಷ್ಪರಿಣಾಮ ಬೀರುತ್ತದೆ ಮತ್ತು ಆರೋಗ್ಯವಂತರ ಮೇಲೂ ಕೂಡ ಸ್ಲೋ ಪಾಯಿಸನ್ ಆಗಿ ವರ್ಕ್ ಆಗುತ್ತದೆ ಹಾಗಾಗಿ ಆದಷ್ಟು ನ್ಯಾಚುರಲ್ ಕ್ರಮಗಳಿಂದ ನಾವು ಸೊಳ್ಳೆ ಬರದಂತೆ ತಡೆಯಲು ಕ್ರಮ ಕೈಗೊಳ್ಳುವುದು ಒಳ್ಳೆಯದು. ಇದಕ್ಕಾಗಿ ಬಹಳ ಸಿಂಪಲ್ ಆದ ಟೆಕ್ನಿಕ್ ಒಂದನ್ನು ನಾವು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ಈ ವೃಕ್ಷದ ನೆರಳೇನಾದರೂ ಮನೆ ಮೇಲೆ ಬಿದ್ದರೆ ಮನೆ ಉದ್ದಾರ ಆಗಲ್ಲ ಎಚ್ಚರ.!
ಹಳ್ಳಿಗಳಲ್ಲಿ ಬೇವಿನ ಸೊಪ್ಪಿನ ಹೊಗೆ, ಹೊಂಗೆ ಸೊಪ್ಪಿನ ಹೊಗೆ ಹಾಕಿದರೆ ಕೊಟ್ಟಿಗೆಗಳಲ್ಲಿ ಬರುವ ಸೊಳ್ಳೆ ಕಾಟ ಕಡಿಮೆಯಾಗುತ್ತದೆ. ಕೊಟ್ಟಿಗೆ ಆದಮೇಲೆ ಮನೆ ಇರುವುದರಿಂದ ಮನೆಗಳಿಗೂ ಸೊಳ್ಳೆ ಪ್ರವೇಶ ಮಾಡುವುದಿಲ್ಲ ಆದರೆ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಇರುವವರು ಅಥವಾ ಈ ಸೊಪ್ಪುಗಳು ಸಿಗುದೇ ಇದ್ದವರು ಏನು ಮಾಡಬೇಕು ಎಂದು ಟೆನ್ಶನ್ ಆಗೋದು ಬೇಡ ಇದಕ್ಕೂ ಕೂಡ ನಿಮ್ಮ ಮನೆಯಲ್ಲಿ ಸಿಗುವ ವಸ್ತುಗಳಿಂದ ಪರಿಹಾರ ಇದೆ.
ಪ್ರತಿಯೊಬ್ಬರ ಮನೆಯಲ್ಲಿ ಈರುಳ್ಳಿ ಬೆಳ್ಳುಳ್ಳಿ ಅಂತೂ ಬಳಸೇ ಬಳಸುತ್ತೇವೆ ಈ ಈರುಳ್ಳಿ-ಬೆಳ್ಳುಳ್ಳಿ ಸಿಪ್ಪೆಯಿಂದಲೇ ಸೊಳ್ಳೆಗಳಿಗೆ ಒಂದು ಔಷಧಿ ಮಾಡಿಕೊಳ್ಳಬಹುದು. ಒಂದು ಕಪ್ ನಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸಿಪ್ಪೆ ಹಾಕಿ ಸಂಜೆ 5:00ರ ಸಮಯದಲ್ಲಿ ಅದಕ್ಕೆ ಒಂದು ಕರ್ಪೂರ ಹಾಗೂ ಒಂದು ಲವಂಗ ಹಾಕಿ ಹಚ್ಚಿ ಇಟ್ಟರೆ ಆ ವಾಸನೆ ಸೊಳ್ಳೆಗಳಿಗೆ ಇಷ್ಟ ಆಗುವುದಿಲ್ಲ ಹಾಗಾಗಿ ಅವು ನಿಮ್ಮ ಮನೆಯತ್ತ ತಲೆ ಕೂಡ ಹಾಕುವುದಿಲ್ಲ ಮತ್ತು ಇದರ ಹೊಗೆಯು ಯಾವುದೇ ಕೆಟ್ಟ ಪ್ರಭಾವ ಬೀರುವುದಿಲ್ಲ.
ಈ ಸುದ್ದಿ ಓದಿ:- ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!
ಈ ಈರುಳ್ಳಿ ಬೆಳ್ಳುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಕುದಿವಾಗ ಕರ್ಪೂರ ಹಾಗೂ ಏಲಕ್ಕಿ ಹಾಕಿ ಕುದಿಸಿ, ಅದನ್ನು ಸ್ವಲ್ಪ ಹೊತ್ತು ಅರಲು ಬಿಡಿ. ಈಗ ಒಂದು ಕ್ಯಾನ್ ಗೆ ಅದನ್ನು ಸ್ಟೋರ್ ಮಾಡಿಕೊಂಡು ಸಂಜೆ ಸಮಯ ಮನೆ ಸುತ್ತ ಕಿಟಕಿಗಳ ಮೇಲೆ ಸೊಳ್ಳೆ ಬಂದು ಕೂರುವ ಜಾಗದಲ್ಲಿ ಸ್ಪ್ರೇ ಮಾಡಿ ನೋಡಿ. ಸೊಳ್ಳೆಗಳು ಕೂತರು ಅದು ಸತ್ತು ಹೋಗುತ್ತವೆ ಮತ್ತು ಒಮ್ಮೆ ಈ ಘಾಟು ಅವುಗಳಿಗೆ ತಾಕಿದರೆ ಮತ್ತೆ ಎಂದೂ ಕೂಡ ಈ ಕಡೆ ಅವು ಬರುವುದಿಲ್ಲ.