ಇದ್ದಕಿದ್ದಂತೆ ಕಣ್ಣು ಅದುರುತ್ತಿದ್ದರೆ ಅಂದರೆ ಕಣ್ಣಿನ ರೆಪ್ಪೆಗೆ ಅಂಟಿಕೊಂಡಿರುವ ಚರ್ಮವು ಪದೇ ಪದೇ ಕಂಟ್ರೋಲ್ ಇಲ್ಲದೆ ಹೊಡೆದುಕೊಳ್ಳುತ್ತಿದ್ದರೆ ಅದನ್ನು ಶಕುನ ಎಂದು ಭಾವಿಸಲಾಗುತ್ತದೆ ಮತ್ತು ಇದು ಎಡಗಡೆಯ ಅಥವಾ ಬಡಗಡೆಯ ಕಣ್ಣೋ? ಪುರುಷನೋ? ಮಹಿಳೆಯೋ? ಎನ್ನುವುದರ ಮೇಲೆ ಶುಭ ಮತ್ತು ಅಶುಭಗಳು ನಿರ್ಧಾರ ಆಗುತ್ತದೆ ಎನ್ನುವುದನ್ನು ನಂಬಲಾಗಿದೆ.
ನಮ್ಮ ಮನೆಯಲ್ಲಿ ಕೂಡ ಹಿರಿಯರು ಈ ರೀತಿ ಕಣ್ಣು ಅದಿರುತ್ತಿದೆ ಎಂದಾಗ ಅದರ ಬಗ್ಗೆ ಒಳ್ಳೆಯದಾಗುತ್ತದೆ ಕೆಟ್ಟದಾಗುತ್ತದೆ ಎಂದು ಸಲಹೆ ಕೊಟ್ಟಿರುವುದನ್ನು ನಾವು ಬೇಕಾದರೆ ನೆನಯಬಹುದು. ಹಾಗಾದರೆ ಇದು ನಿಜವೇ ಅಥವಾ ಇದರ ಹಿಂದೆಯೂ ಯಾವುದಾದರೂ ವೈಜ್ಞಾನಿಕ ಕಾರಣ ಇದೆಯೇ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ಲೇಖನವನ್ನು ಕೊನೆಯವರೆಗೂ ಓದಿ.
ಈ ಸುದ್ದಿ ಓದಿ:- ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!
ಈ ರೀತಿಯಾಗಿ ಹಿರಿಯರು ಯಾವುದೇ ಮಾತನ್ನು ಹೇಳಿದರು ಕೂಡ ಅದರ ಹಿಂದೆ ಖಂಡಿತ ಒಂದು ವೈಜ್ಞಾನಿಕ ಕಾರಣ ಇದ್ದೇ ಇರುತ್ತದೆ. ಆದರೆ ನೇರವಾಗಿ ಹೇಳಿದರೆ ಮಕ್ಕಳು ನಿರ್ಲಕ್ಷ ಮಾಡುತ್ತಾರೆ ಎಂದು ಕಿರಿಯರನ್ನು ಎಚ್ಚರಿಸಲು ಈ ರೀತಿ ಶಕುನಗಳ ಹೆಸರಿನಲ್ಲಿ ಅಥವಾ ಹಿಂದೆ ಆಗಿದ್ದ ಘಟನೆಗಳನ್ನು ಹೇಳಿ ಜಾಗ್ರತೆಯಿಂದ ಇರುವಂತೆ ಸೂಚಿಸಿರಬಹುದು.
ಇಂತಹದಕ್ಕೆ ಹಲವಾರು ಉದಾಹರಣೆಗಳಿದ್ದು ಈಗೀಗ ಅವುಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದೇವೆ. ಯಾವುದು ಕೂಡ ಮೂಢನಂಬಿಕೆಯು ಅಲ್ಲ ಮತ್ತು ಅತಿರೇಕವು ಅಲ್ಲ ಆದರೆ ಖಂಡಿತ ಹಿರಿಯರ ಪ್ರತಿಯೊಂದು ಮಾತಿನ ಹಿಂದೆಯೂ ಒಂದು ಕಾರಣ ಇತ್ತು ಎನ್ನುವುದನ್ನು ಈಗ ಅರ್ಥ ಮಾಡಿಕೊಂಡು ಒಪ್ಪುತ್ತಿದ್ದೇವೆ.
ಈ ಸುದ್ದಿ ಓದಿ:- ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!
ಅದೇ ರೀತಿಯಾಗಿ ಕಣ್ಣು ಹೊಡೆದುಕೊಳ್ಳುವ ಶಕುನದ ಬಗ್ಗೆ ಹೇಳುವುದಾದರೆ ಇದರ ಹಿಂದೆಯೂ ಕೂಡ ವೈಜ್ಞಾನಿಕ ಕಾರಣ ಖಂಡಿತ ಇದೆ ಅದಕ್ಕೂ ಮೊದಲು ಇದಕ್ಕಿರುವ ಶಕುನದ ಬಗ್ಗೆ ನೋಡೋಣ. ಹೆಣ್ಣು ಮಕ್ಕಳಿಗೆ ಅವರ ಎಡ ಕಣ್ಣು ಹೊಡೆದುಕೊಂಡರೆ ಅದು ಶುಭ ಶಕುನ, ಬಲಗಣ್ಣು ಹೊಡೆದುಕೊಂಡರೆ ಅದು ಅಪಶಕುನ ಎಂದು ಹೇಳುತ್ತಾರೆ ಮತ್ತು ಗಂಡು ಮಕ್ಕಳಿಗೆ ಬಲಗಣ್ಣು ಶುಭ ಎಡಗಣ್ಣು ಹೊಡೆದುಕೊಂಡರೆ ಅಪಶಕುನ ಎಂದು ಹೇಳುತ್ತಾರೆ.
ಇನ್ನು ಕೆಲವು ಕಡೆ ಸರಿಯಾಗಿ ಕಣ್ಣು ಹೊಡೆದುಕೊಳ್ಳುವುದೇ ಅಪಶಕುನ ಎಂದು ನಿರ್ಧರಿಸಿ ಹೇಳುತ್ತಾರೆ. ಈ ಕೊನೆಯ ಮಾತು ಸತ್ಯ ಯಾಕೆಂದರೆ ಇದು ಅಪಶಕುನವೇ ಆದರೆ ಇದು ಆರೋಗ್ಯದ ದೃಷ್ಟಿಯಿಂದ ಆಗುತ್ತಿರುವ ಅಪಶಕುನ ಆಗಿದೆ. ನಿಮ್ಮ ಕಣ್ಣು ಈ ರೀತಿ ಹೊಡೆದುಕೊಳ್ಳುತ್ತಿದ್ದರೆ ಅದು ನಿಮ್ಮ ದೇಹದ ಆರೋಗ್ಯಕ್ಕೆ ಸಂಬಂಧಿಸಿದ ಎಚ್ಚರಿಕೆ ಆಗಿದ್ದು ದೇಹ ಕೊಡುವ ಮುನ್ಸೂಚನೆ ಆಗಿದೆ.
ಈ ಸುದ್ದಿ ಓದಿ:- ದಿಢೀರ್ ಎಂದು ಏಪ್ರಿಲ್ ತಿಂಗಳಿನಲ್ಲಿ ಈ ರಾಶಿಗಳ ಜನರಿಗೆ ಅದೃಷ್ಟ, ಮುಟ್ಟಿದ್ದೆಲ್ಲ ಚಿನ್ನ ಆಗುವ ಯೋಗ.!
ದೇಹದಲ್ಲಿ ಕೆಫಿನ್, ಕೊಲೆಸ್ಟ್ರಾಲ್ ಮುಂತಾದ ಟಾಕ್ಸಿನ್ ಅಂಶ ಹೆಚ್ಚಾದಾಗ ಮತ್ತು ವಿಟಮಿನ್ ಎ ಮತ್ತು ಡಿ ಹಾಗೂ ಪೋಷಕಾಂಶಗಳ ಕೊರತೆ ಉಂಟಾದಾಗ ಈ ರೀತಿ ಕಣ್ಣು ಅದುರುವುದಕ್ಕೆ ಆರಂಭ ಆಗುತ್ತದೆ. ಯಾವುದೋ ಒಂದು ದಿನ ಈ ರೀತಿ ಆದರೆ ಅದು ದೇಹದ ಉಷ್ಣತೆ ಹೆಚ್ಚಾಗಿರುವ ಸೂಚನೆ ಆಗಿದೆ ಅದನ್ನು ಹೊರತುಪಡಿಸಿ ಬೆಳಗ್ಗೆಯಿಂದ ಸಂಜೆವರೆಗೆ ಅಥವಾ ಪದೇಪದೇ ಹೀಗೆ ಆಗುತ್ತಿದೆ ಎಂದರೆ ಸೂಕ್ತ ವೈದ್ಯರನ್ನು ಒಮ್ಮೆ ಭೇಟಿ ಹಾಕಿ ಇದಕ್ಕೆ ಪರಿಹಾರ ಕೇಳುವುದು ಸೂಕ್ತ.
ನಿಮಗೆ ಆರೋಗ್ಯ ಸಮಸ್ಯೆ ಇದೆ ಎನ್ನುವ ಸೂಚನೆಯನ್ನು ಇದು ಕೊಡುತ್ತಿದೆ ಇದೇ ಶಕುನವನ್ನು ಅದು ಹೇಳುತ್ತಿದೆ ಎಂದು ಬಲವಾಗಿ ನಂಬಬಹುದು. ಈ ಬಗ್ಗೆ ನಿಮ್ಮ ಹಿರಿಯರು ಏನು ಹೇಳಿದ್ದಾರೆ ಮತ್ತು ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.