ವಯಸ್ಸಾದವರು ಅಲ್ಲಲ್ಲಿ ಕುಸಿದು ಬೀಳುತ್ತಾರೆ. ಇದು ಅವರಿಗೆ ಹಾಗೂ ಅವರ ಕುಟುಂಬದವರಿಗೆ ದೊಡ್ಡ ಟೆನ್ಶನ್ ಆಗಿರುತ್ತದೆ. ಇದು ವಯೋಸಹಜ ಸಮಸ್ಯೆ ಕೂಡ ಎನಿಸಿ ಕೊಂಡಿದೆ. WHO ಸಂಶೋಧನೆಯ ಪ್ರಕಾರವಾಗಿ 65 ವಯಸ್ಸಾದವರಲ್ಲಿ 35% ಜನ ವರ್ಷಕ್ಕೆ ಒಮ್ಮೆಯಾದರೂ ಬೀಳುತ್ತಾರೆ.
ವಯಸ್ಸಾಗುತ್ತಾ ಹೋದಂತೆ ದೇಹದ ಸಮತೋಲನ ತಪ್ಪುತ್ತದೆ, ಮಾಂಸಖಂಡಗಳಲ್ಲಿ ಶಕ್ತಿ ಕಡಿಮೆ ಆಗುತ್ತದೆ, ಮೂಳೆಗಳು ದುರ್ಬಲವಾಗುತ್ತದೆ, ದೃಷ್ಟಿ ಮಂದವಾಗುವುದು ಅಥವಾ ಇನ್ಯಾವುದೋ ಕಾಯಿಲೆಗೆ ತೆಗೆದುಕೊಳ್ಳುವ ಔಷಧಿಗಳ ಮಂಪರಿನ ಕಾರಣವೂ ಈ ರೀತಿ ಕುಸಿಯುವುದಕ್ಕೆ ಕಾರಣವಾಗಿದೆ.
ಈ ರೀತಿ ವಯಸ್ಸಾದವರು ಬಿದ್ದು ಅವರ ಬೆನ್ನು ಮೂಳೆ ಏಟಾಗಿ ಮಣಿಕಟ್ಟು ಏಟಾಗ, ಮಂಡಿ ಮುರಿದು ತಿಂಗಳುಗಟ್ಟಲೇ ಹಾಸಿಗೆ ಹಿಡಿದಿರುವ ಉದಾಹರಣೆಗಳು ನಮ್ಮ ಕಣ್ಣೆದುರಿಗೆ ಸಾಕಷ್ಟು ನೋಡಿದ್ದೇವೆ. ಪೋಷಕಾಂಶಯುಕ್ತ ಆಹಾರ ಸೇವನೆ ಮಾಡುವುದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಕೂಡ ದೇಹಕ್ಕೆ ಶಕ್ತಿ ಬರುತ್ತದೆ.
ಈ ಸುದ್ದಿ ಓದಿ;- ಹೇರ್ ಕಟ್ ಮಾಡಿಸಿಕೊಂಡು ಬಂದ ದಿನ ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ 72 ಘಂಟೆಗಳಲ್ಲಿ ನಿಮ್ಮ ಜೀವನ ಬದಲಾಗುತ್ತದೆ.!
ಕೆಲ ವ್ಯಾಯಾಮಗಳನ್ನು ಮಾಡುವ ಮೂಲಕ ಸ್ಟ್ರೆಂಥ್ ಬ್ಯಾಲೆನ್ಸ್ ಹಾಗೂ ಫೆಕ್ಸಿಬಿಲಿಟಿ ಮೈನ್ಟೈನ್ ಮಾಡಬಹುದು, ಆಗ ಈ ಸಮಸ್ಯೆ ಕಡಿಮೆಯಾಗುತ್ತದೆ. ಹಾಗಾಗಿ ವಯಸ್ಸಾದ ಮೇಲೆ ಮಾಡಲೇಬೇಕಾದ ಕೆಲ ವ್ಯಾಯಾಮದ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇನೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ಎಲ್ಲಾ ವಯಸ್ಸಾದವರಿಗೆ ಹಾಗೂ ನಿಮ್ಮ ಕುಟುಂಬದವರು ಮತ್ತು ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
1. ವಾರ್ಮ್ ಅಪ್ (Warm up):- ಬೆಳಗ್ಗೆ ಎದ್ದ ಕೂಡಲೇ ವ್ಯಾಯಾಮಕ್ಕೆ ಸ್ವಲ್ಪ ಸಮಯ ಮೀಸಲಿಡಲೇಬೇಕು ಮತ್ತು ವ್ಯಾಯಾಮ ಮಾಡುವಾಗ ಮೊದಲು ವಾರ್ಮ್ ಅಪ್ ಮಾಡಿ ಆರಂಭಿಸಬೇಕು.
ಕುತ್ತಿಗೆಯನ್ನು ಪ್ರದಕ್ಷಿಣೀಯವಾಗಿ ಮತ್ತು ಅಪ್ರದಕ್ಷಣೀಯವಾಗಿ 5-6 ಬಾರಿ ತಿರುಗಿಸುವುದು, ಶೋಲ್ಡರ್ ಅಪ್ ಮಾಡುವುದು, ಆಂಕಲ್ ಸರ್ಕಲ್ ಮಾಡುವುದು, ಜಂಪಿಂಗ್ ಜಾಕ್ಸ್ ಅಥವಾ ನಿಧಾನವಾಗಿ ನಿಂತಲ್ಲಿಗೆ ಮಾರ್ಚ್ ಫಸ್ಟ್ ಮಾಡುವುದು ಇಂತಹ ವಾರ್ಮ್ ಅಪ್ ಮಾಡಲೇಬೇಕು.
ಈ ಸುದ್ದಿ ಓದಿ;-ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!
2. ಬ್ಯಾಲೆನ್ಸ್ ಎಕ್ಸರ್ಸೈಜ್ (Balance Exercise):- ಇದನ್ನು ಒಂಟಿ ಕಾಲಿನಲ್ಲಿ ನಿಲ್ಲುವ ವ್ಯಾಯಾಮ (Single leg stance) ಎಂದು ಸರಳ ಭಾಷೆಯಲ್ಲಿ ಹೇಳಬಹುದು. ಕಂಬಿ ಹಿಡಿದುಕೊಂಡು ಅಥವಾ ಒಂದು ಚೇರ್ ಸಹಾಯ ತೆಗೆದುಕೊಂಡು 20-30 ಸೆಕೆಂಡ್ ಕಾಲ ಒಂದೇ ಕಾಲಲ್ಲಿ ನಿಂತು ಬ್ಯಾಲೆನ್ಸ್ ಮಾಡುವುದು.
ಈ ರೀತಿ ಮಾಡುವುದರಿಂದ ಕೋರ್ ಮಝಲ್, ಬೆನ್ನು ಹೊಟ್ಟೆ ಭಾಗ ಮತ್ತು ಎದೆ ಭಾಗದ ಅಕ್ಕ ಪಕ್ಕ ಇರುವ ಮಾಂಸ ಖಂಡಗಳು ಮತ್ತು ತೊಡೆಯ ಭಾಗದ ಮಾಂಸ ಖಂಡಗಳು ಗಟ್ಟಿ ಆಗುತ್ತವೆ. ಎರಡು ಕಾಲುಗಳನ್ನು ಹೀಗೆ ಒಂದಾದ ಮೇಲೆ ಒಂದರಂತೆ ಬದಲಾಯಿಸುತ್ತಾ ಐದಾರು ಬಾರಿ ದಿನವು ಈ ಎಕ್ಸರ್ಸೈಜ್ ಮಾಡಬೇಕು ಆಗ ಬೀಳುವ ಸಾಧ್ಯತೆ ಕಡಿಮೆ ಆಗುತ್ತದೆ.
ಈ ಸುದ್ದಿ ಓದಿ;-ಮಕರ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ, 6 ವರ್ಷಗಳಿಂದ ನೀವು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿತು, ಏಪ್ರಿಲ್ ತಿಂಗಳಿನಿಂದಲೇ ರಾಜಯೋಗ ಶುರು.!
3. ಟ್ಯಾಂಡೆಮ್ ವೋಕಿಂಗ್ (Tandem Walking / heal to toe walk):- ಹೆಚ್ಚಿಗೆ ಹೆಜ್ಜೆಯನ್ನು ತಾಗುತ್ತಾ ಒಂದೇ ಸಲಿನಲ್ಲಿ ನಡೆಯುತ್ತಾ ಹೋಗುವುದು ಇದು ಕೂಡ ಒಂದು ವ್ಯಾಯಾಮ, ಇದನ್ನು ಕೂಡ ವಯಸ್ಸಾದವರು ಮಾಡಲೇಬೇಕು ಇದರಿಂದ ಕೂಡ ಬ್ಯಾಲೆನ್ಸ್ ಕಂಟ್ರೋಲ್ ಗೆ ಬರುತ್ತದೆ. ಕಾನ್ಫಿಡೆಂಟ್ ಬರುತ್ತದೆ ಮತ್ತು ಸಮತೋಲನ ಇಲ್ಲದ ಜಗತ್ತಿನ ಆರಾಮಾಗಿ ನಡೆಯಲು ಅಭ್ಯಾಸ ಆಗುತ್ತದೆ
4. ಸ್ಟ್ರೆಂಥ್ ಟ್ರೈನಿಂಗ್(Strength training):- ಮಾಂಸ ಖಂಡಗಳಿಗೆ ಶಕ್ತಿ ತುಂಬುವಂತಹ ವ್ಯಾಯಮ ಮಾಡಬೇಕು ಅವು ಯಾವುವೆಂದರೆ ಭಸ್ಕಿ ಹೊಡೆಯುವುದು (Squats), ಕಿಟಕಿ ಸಹಾಯದಿಂದ ಅಥವಾ ಬಹಳ ಕಷ್ಟ ಆಗುತ್ತಿದೆ ಎಂದರೆ ಒಂದು ಚೇರ್ ಸಹಾಯದಿಂದ ಆದರೂ ನಿಧಾನವಾಗಿ ಚೇರ್ ಮೇಲೆ ಕುಳಿತು ನಂತರ ಕೆಳಗೆ ಕೂರುವುದು, ನಿಧಾನವಾಗಿ ಮೇಲೆ ಏಳುವುದು ಈ ರೀತಿ ಎಕ್ಸರ್ಸೈಜ್ ಮಾಡಲೇಬೇಕು.
ಈ ಸುದ್ದಿ ಓದಿ;-ಬಲಗಣ್ಣು ಅಥವಾ ಎಡಗಣ್ಣು ಯಾವ ಕಣ್ಣು ಅದುರಿದರೆ ಏನು ಫಲ? ಇದರ ಹಿಂದೆ ಇರುವ ವೈಜ್ಞಾನಿಕ ಕಾರಣವೇನು ಗೊತ್ತಾ.?
5. ವಾಲ್ ಪುಷ್ ಅಪ್ (Wall Push up):- ಯುವಕರು ಪುಷ್ ಅಪ್ ಮಾಡುವುದನ್ನು ನೋಡಿರುತ್ತೇವೆ ಆದರೆ ವಯಸ್ಸಾದವರಿಗೆ ಅದು ಅಸಾಧ್ಯ. ಆದರೆ ಅವರು ವಾಲ್ ಪುಷ್ ಅಪ್ ಮಾಡಬಹುದು. ಆರು ಅಡಿ ಗೋಡೆಯಿಂದ ದೂರ ನಿಂತುಕೊಂಡು ಗೋಡೆಗೆ ಪುಷ್ ಅಪ್ ಮಾಡಬಹುದು, ಈ ರೀತಿ ವ್ಯಾಯಾಮ ಮಾಡುವುದರಿಂದ ಕೂಡ ಮಾಂಸ ಖಂಡಗಳು ಗಟ್ಟಿ ಆಗುತ್ತವೆ, ದೇಹಕ್ಕೆ ಶಕ್ತಿ ಬರುತ್ತದೆ.