ಅಂಜೂರದ ಹಣ್ಣು ಎಂದ ತಕ್ಷಣ ಖಂಡಿತ ಬಾಯಲ್ಲಿ ನೀರು ಬರುತ್ತದೆ. ಯಾಕೆಂದರೆ ಇದು ಅಷ್ಟು ರುಚಿಕರವಾಗಿದೆ ಹಾಗೂ ಅಷ್ಟೇ ಪೌಷ್ಟಿಕಾಂಶಯುಕ್ತ ಆಹಾರವಾಗಿದೆ. ಈಗಲೂ ಕೂಡ ಬಹಳ ದುಬಾರಿಯಾದ ಡ್ರೈ ಫ್ರೂಟ್ ಗಳಲ್ಲಿ ಅಂಜೂರ ಕೂಡ ಒಂದು. ಇದನ್ನು ಹೇಗೆ ತಯಾರಿಸುತ್ತಾರೆ, ಈ ಹಣ್ಣಿನಿಂದ ಡ್ರೈ ಫ್ರೂಟ್ ಹೇಗೆ ಮಾಡುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ.
ಮನೆಯಲ್ಲಿ ಇದನ್ನು ಮಾಡಬಹುದೇ ಎನ್ನುವ ಪ್ರಶ್ನೆಗಳೂ ಇರುತ್ತವೆ ಮನೆಯಲ್ಲಿಯೂ ಅಂಜೂರ ಮಾಡಬಹುದು ಆದರೆ ಬಹಳ ರಿಸ್ಕ್ ಆದರೆ ಫ್ಯಾಕ್ಟರಿಗಳಲ್ಲಿ ಇದನ್ನು ತಯಾರಿಸಿ ಪ್ಯಾಕ್ ಮಾಡಿ ಸೇಲ್ ಮಾಡುತ್ತಾರೆ. ಈ ಪ್ರೋಸೆಸ್ ಹೇಗೆ ನಡೆಯುತ್ತದೆ ಇದಕ್ಕಿರುವ ಪ್ರಾಮುಖ್ಯತೆಗಳೇನು? ಎನ್ನುವ ಅಂಶದ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಇದು ಮಲ್ಬರಿಗೆ ಸೇರಿದ ಜಾತಿಯ ಫಲವಾಗಿದೆ. ಅಮೆರಿಕ, ಇಂಡಿಯಾ ಮತ್ತು ಆಫ್ರಿಕಾದ ಕೆಲವು ದೇಶಗಳಲ್ಲಿ ಮಾತ್ರ ಅಂಜೂರವನ್ನು ಬೆಳೆಯಲಾಗುತ್ತದೆ. ನಮ್ಮ ದೇಶದಲ್ಲಿ ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ.
ಈ ಸುದ್ದಿ ಓದಿ:- ಫೋನ್ ನಲ್ಲಿ ಫೋಟೋ ಡಿಲೀಟ್ ಆಗಿದ್ದರೆ ಅದನ್ನು ರಿಕವರಿ ಮಾಡುವುದು ಹೇಗೆ ನೋಡಿ.!
ಅಂಜೂರದ ಸಸಿಯನ್ನು ನಾಟಿ ಮಾಡಿದ ಎರಡೇ ವರ್ಷಗಳಲ್ಲಿ ಅದು ಫಲ ಕೊಡಲು ಆರಂಭಿಸುತ್ತದೆ, ಕಪ್ಪು ಹಾಗೂ ಕೆಂಪು ನೆಲದಲ್ಲಿ (PH 6-7) ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಬಿತ್ತನೆ ಮಾಡುವಾಗ ಸುಣ್ಣದ ಕಲ್ಲಿನ ಜೊತೆಗೆ ಮಣ್ಣು ಮಿಶ್ರಣ ಮಾಡಿ ಹಾಕಲಾಗುತ್ತದೆ, ಹೆಚ್ಚಾಗಿ ನೀರಿನ ಸೌಲಭ್ಯ ಕೂಡ ಕೊಡಬೇಕಾಗುತ್ತದೆ.
ಈ ಮರ 4-5 ವರ್ಷಗಳಲ್ಲಿ ಸಮೃದ್ಧಿಯಾಗಿ ಬೆಳೆಯುತ್ತದೆ ಆ ಸಮಯಕ್ಕೆ 15-20KG ಇಳುವರಿಯನ್ನು ಕೂಡ ಕೊಡುತ್ತದೆ ಮತ್ತು 50ರಿಂದ 60 ವರ್ಷಗಳವರೆಗೆ ಇದೇ ರೀತಿಯಾಗಿ ಫಲ ಕೊಡುತ್ತದೆ. ಅಂಜೂರ ಹಣ್ಣಾದಾಗ ಹಣ್ಣಿನ ಮೇಲಿರುವ ಬಣ್ಣ ಬದಲಾಗುತ್ತದೆ ಪರ್ಪಲ್ ಬಣ್ಣಕ್ಕೆ ತಿರುಗಿದಾಗ ಕಟಾವು ಮಾಡಲಾಗುತ್ತದೆ.
ಈ ಹಣ್ಣಿನಲ್ಲಿ ಹೇರಳವಾದ ಪೋಷಕಾಂಶವಿದೆ ದೇಹಕ್ಕೆ ಬೇಕಾದ ನ್ಯಾಚುರಲ್ ಶುಗರ್, ಮೆಗ್ನೀಷಿಯಂ, ಐರನ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಜೂರದಿಂದ ಸಿಗುತ್ತದ. ಫಿಟ್ನೆಸ್ ಮೆಂಟೇನ್ ಮಾಡುವವರು ತಮ್ಮ ಡಯಟ್ ನಲ್ಲಿ ಅಂಜೂರದ ಹಣ್ಣನ್ನು ಬಳಸುತ್ತಾರೆ.
ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು, ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!
ಮಕ್ಕಳ ಆರೋಗ್ಯಕ್ಕೂ ಮತ್ತು ಬುದ್ಧಿಶಕ್ತಿಗೂ ಬಹಳ ಒಳ್ಳೆಯದು ಅಸ್ತಮ ಕಾಯಿಲೆಗೆ ಒಳ್ಳೆಯ ಔಷಧಿ, ರಕ್ತ ಶುದ್ಧಿ ಆಗುತ್ತದೆ, ಶೀತ ನೆಗಡಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕ್ಯಾನ್ಸಲ್ ಸೆಲ್ ಗಳ ನಿಯಂತ್ರಣ ಇತ್ಯಾದಿ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ. ಹಾಗಾಗಿ ಗುಣಮಟ್ಟಕ್ಕೆ ಅನುಗುಣವಾಗಿ Kg ಗೆ ರೂ.1000 ದವರೆಗೂ ಕೂಡ ಇದು ಮಾರಾಟ ಆಗುತ್ತದೆ.
ಇದನ್ನು ಫ್ಯಾಕ್ಟರಿಗಳಲ್ಲಿ ಹೇಗೆ ತಯಾರಿಸುತ್ತಾರೆ ಎಂದರೆ ಖರೀದಿಸಿದ ಹಣ್ಣುಗಳನ್ನು ನೀರಿನಿಂದ ಮೊದಲ ಸ್ವಚ್ಛ ಮಾಡಿ ನಂತರ ಏಳು ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸುತ್ತಾರೆ. ಬಿಸಿ ನೀರಿನಲ್ಲಿ ಬಾಯ್ಲ್ ಮಾಡಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತೆ ಒಣಗಿಸುತ್ತಾರೆ ಆಮೇಲೆ ಟ್ರೇಗಳಲ್ಲಿ ತುಂಬಿಸಿ ಫ್ಯಾಕ್ಟರಿಗೆ ತರುತ್ತಾರೆ.
ಫ್ಯಾಕ್ಟರಿ ಗಳಲ್ಲಿ ಹಲವಾರು ವಿಧಾನದ ಮಿಷನ್ ಗಳು ಇದ್ದು ಇದರಲ್ಲಿ ಮತ್ತೊಮ್ಮೆ ಕ್ಲೀನ್ ಆಗುವುದು ಡ್ರೈ ಆಗುವುದು ಈ ರೀತಿ ಕ್ರಿಯೆಗಳಿಗೆ ಒಳಪಟ್ಟು ಅಂತಿಮವಾಗಿ ಪ್ಯಾಕ್ ಕೂಡ ಆಗಿ ಪರೀಕ್ಷೆಗೆ ಒಳಪಟ್ಟು ಸೇಲ್ ಆಗುತ್ತದೆ. ಈ ಅಂಜೂರದ ಕುರಿತಾದ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.