ಸೋಮವಾರ ಎಂದ ತಕ್ಷಣ ಎಲ್ಲರಿಗೂ ಶಿವನ ವಾರ ಎಂದೇ ನೆನಪಾಗುತ್ತದೆ. ಹೌದು ಸೋಮವಾರದ ದಿನವೂ ಶಿವನನ್ನು ಪ್ರಾರ್ಥಿಸುವುದಕ್ಕೆ ಆತನನ್ನು ಆರಾಧಿಸುವುದಕ್ಕೆ ಅತ್ಯಂತ ಸೂಕ್ತವಾದ ಶಿವನಿಗೆ ಪ್ರಿಯವಾದ ದಿನವಾಗಿದೆ. ಸೋಮವಾರದ ದಿನದಂದು ಶಿವ ಪೂಜೆ ಮಾಡುವುದರಿಂದ ಇಷ್ಟಾರ್ಥ ಸ ಪ್ರಾಪ್ತಿಯಾಗುತ್ತವೆ ಮತ್ತು ಕಷ್ಟಕಾರ್ಪಣ್ಯಗಳು ಕಳೆಯುತ್ತವೆ ನಮ್ಮ ಪಾಪಗಳು ಪರಿಹಾರ ಆಗುತ್ತವೆ.
ಆದರೆ ಯಾವುದೇ ಪೂಜೆ ಮಾಡುವುದಕ್ಕೂ ಕೂಡ ವಿಧಿ ವಿಧಾನಗಳು ಇವೆ. ಶ್ರದ್ಧಾ ಭಕ್ತಿಯಿಂದ ಇದನ್ನು ಆಚರಣೆ ಮಾಡುವುದರಿಂದ ಮಾತ್ರ ಇಂತಹ ಫಲಗಳನ್ನು ಪಡೆಯಬಹುದು ಇದರೊಂದಿಗೆ ಇದಕ್ಕಿಂತಲೂ ಶ್ರೇಷ್ಠವಾದ ಸಂಗತಿ ಏನೆಂದರೆ ಪ್ರತಿಯೊಂದು ಪೂಜೆ ಹಿಂದೆ ಇರುವ ಕಾರಣವನ್ನು ಅರಿತುಕೊಳ್ಳುವುದು.
ಈ ಸುದ್ದಿ ಓದಿ:- ಹೆಬ್ಬೆರಳ ಉಗುರ ಮೇಲೆ ಅರ್ಧಚಂದ್ರಾಕೃತಿ ಕಂಡರೆ 30 ದಿನಗಳ ಒಳಗೆ ನಿಮ್ಮ ಜೀವನದಲ್ಲಿ ಈ ಘಟನೆ ನಡೆಯುತ್ತದೆ ಎಂದರ್ಥ.
ಶಿವನ ಪೂಜೆ ಮಾಡುವುದನ್ನು ಅರ್ಥ ಮಾಡಿಕೊಂಡರೆ ನಮ್ಮ ಜೀವನ ಸಾರ್ಥಕವಾಗುವುದರಲ್ಲಿ ಸಂಶಯ ಇಲ್ಲ. ಶಿವ ಎಂದರೆ ಆತ ಭೈರಾಗಿ ಶಿವನಿಗೆ ಪ್ರಿಯವಾದ ವಸ್ತು ವಿಭೂತಿ ಆತ ವಾಸಿಸುವ ಸ್ಥಳ ಸ್ಮಶಾನ ಮತ್ತು ಆತನ ವೇಷಭೂಷಣ ಪ್ರತಿಯೊಬ್ಬರಿಗೂ ಕೂಡ ಗೊತ್ತೇ ಇದೆ ಮತ್ತು ಲಿಂಗ ರೂಪದ ಶಿವನನ್ನು ನಾವು ಆರಾಧಿಸುತ್ತೇವೆ.
ಇದೆಲ್ಲವೂ ನಮಗೆ ಬದುಕು ನಶ್ವರ ಎನ್ನುವ ವೈರಾಗ್ಯ ಮನೋಭಾವ ಮೂಡುವಂತೆ ಮಾಡುತ್ತದೆ. ಭವಬಂಧನಗಳನ್ನು ಮೀರಿ ಭಗವಂತನೇ ಸತ್ಯ ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತದೆ ಆದರೆ ಇಂತಹ ಸ್ಥಾನ ತಲುಪುವುದಕ್ಕೆ ಒಮ್ಮೆಲೆ ಸಾಧ್ಯವಾಗುವುದಿಲ್ಲ ನಿಧಾನವಾಗಿ ಶಿವನನ್ನು ಆರಾಧಿಸುತ್ತಾ ಇಂತಹದೊಂದು ಜ್ಞಾನ ಮನದೊಳಗೆ ಹರಿಯುತ್ತದೆ.
ಆ ಅರಿವು ಗುರುವಾಗಿ ನಮಗೆ ಭಗವಂತನ ಸಾಕ್ಷಾತ್ಕಾರವನ್ನು ಕೊಡುತ್ತದೆ ಇದು ಸಾಧ್ಯವಾಗಬೇಕು ಎಂದರೆ ಅದಕ್ಕೆ ಶ್ರದ್ಧೆ ಬರಬೇಕು, ಮನಸ್ಸಿನಲ್ಲಿ ಏಕಾಗ್ರತೆ ಬರಬೇಕು, ಭಯ ಭಕ್ತಿ ಬರಬೇಕು. ಇದೆಲ್ಲವೂ ನಾವು ಪದ್ಧತಿ ಪ್ರಕಾರವಾಗಿ ಶಿವನನ್ನು ಪೂಜೆ ಮಾಡುವಾಗ ಸ್ವಲ್ಪ ಸ್ವಲ್ಪವಾಗಿ ಪರಿವರ್ತನೆಗೊಳ್ಳುತ್ತಾ ಬರುತ್ತದೆ.
ಈ ಸುದ್ದಿ ಓದಿ:-ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!
ಶಿವನಿಗೆ ಅಲಂಕಾರ ಇಷ್ಟ ಇಲ್ಲ ಇದು ಆತನ ಸರಳತೆಯನ್ನು ಪ್ರತಿಪಾದಿಸುತ್ತದೆ ಮತ್ತು ಶಿವನಿಗೆ ಬಿಲ್ವಪತ್ರೆ ಹಾಗೂ ಸುಗಂಧ ಭರಿತವಾದ ಬಿಳಿ ಬಣ್ಣದ ಹೂವುಗಳು ಪ್ರಿಯ. ಮೂರು ದಳ ಇರುವ ಬಿಲ್ಪತ್ರೆ ಶಿವನನ್ನು ಪ್ರತಿನಿಧಿಸುತ್ತದೆ ಮತ್ತು ಬಿಲ್ವದ ಕಾಯಿ ನೈವೇದ್ಯ ಮಾಡಿ ಅರ್ಪಿಸುವುದರಿಂದ ಶಿವ ಪ್ರಸನ್ನರಾಗುತ್ತಾರೆ ಎನ್ನುವ ಮಾತು ಇದೆ ಹಾಗಾಗಿ ಈ ಮರವನ್ನು ಶಿವನ ರೂಪದಲ್ಲಿಯೇ ಕಾಣಲಾಗುತ್ತದೆ.
ಶಿವನಿಗೆ ಅಭಿಷೇಕ ಇಷ್ಟ ಜಲಾಭಿಷೇಕ, ಕ್ಷೀರಾಭಿಷೇಕ ಹಾಗೂ ಬಿಳಿ ಬಣ್ಣದ ಅಕ್ಷತೆಯಲ್ಲಿ ಅಭಿಷೇಕ ಮಾಡುವುದರಿಂದ ಶಿವ ಪ್ರಸನ್ನರಾಗುತ್ತಾರೆ ಇವುಗಳನ್ನು ಮಾಡುವುದರ ಜೊತೆಗೆ ಅರ್ಪಣಾ ಮನೋಭಾವ ಬಹಳ ಮುಖ್ಯ.
ಇವುಗಳನ್ನು ಮಹಾದೇವನಿಗೆ ಅರ್ಪಿಸಿ ಇದುವರೆಗೆ ಯಾವುದೇ ವಿಷಯ ಗೊತ್ತೋ ಗೊತ್ತಿಲ್ಲದೆಯೋ ತಪ್ಪಾಗಿದ್ದರೂ ಇನ್ನು ಮುಂದೆ ತಿದ್ದುಕೊಂಡು ಮನುಷ್ಯನಾಗಿ ಬದುಕುತ್ತೇನೆ ನನ್ನ ತಪ್ಪುಗಳನ್ನು ಕ್ಷಮಿಸು ಎಂದು ಸನ್ಮಾರ್ಗದ ಕಡೆ ದಾರಿ ತೋರಿಸು ಎಂದು ಈಶ್ವರನನ್ನು ಪ್ರಾರ್ಥಿಸಬೇಕು.
ಈ ಸುದ್ದಿ ಓದಿ:-ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!
ಶಿವನಂತೆ ಸದಾ ಶಾಂತ ಭಾವದಲ್ಲಿ ಇರಬೇಕು ಮತ್ತು ಶಿವನಿಗೆ ಪ್ರಿಯವಾಗಬೇಕು ಎಂದರೆ ಶಿವ ಪ್ರಪಂಚವನ್ನು ಕಾಪಾಡುವುದಕ್ಕಾಗಿ ವಿಷ ಕುಡಿದ ರೀತಿಯಲ್ಲಿ ಪರೋಪಕಾರ ಮನೋಭಾವನೆ ಹೊಂದಬೇಕು ಇದನ್ನು ಮನಃಸ್ಪೂರ್ತಿಯಾಗಿ ಮಾಡಬೇಕು.
ಇದು ಸಾಧ್ಯವಾಗದಿದ್ದರೆ ಮತ್ತೊಬ್ಬರ ಜೀವನದಲ್ಲಿ ಹೋಗಿ ತೊಂದರೆ ಕೊಡಬಾರದು ಯಾವಾಗದು ಮನುಷ್ಯತ್ವದಿಂದ ದೈವತ್ವದ ಕಡೆಗೆ ಹೋಗಲು ಪ್ರಯತ್ನಿಸಬೇಕು ಹೊರತು ರಾಕ್ಷಸತ್ವ ಗುಣದ ಕಡೆ ಹೋಗಿ ಪಶುಗಳಾಗಬಾರದು. ಶಿವನ ಧ್ಯಾನದಲ್ಲಿ ಇರುವುದರ ಜೊತೆಗೆ ಶಿವನ ಪ್ರತಿಯೊಂದು ಆಚರಣೆ ಹಿಂದೆ ಇರುವ ಕಾರಣ ಅರಿತು ಅಳವಡಿಸಿಕೊಳ್ಳುವುದರಿಂದ ಮಾತ್ರ ಶಿವ ಪೂಜೆಯ ಫಲಗಳು ಸಿಗುತ್ತವೆ.