ತಲೆ ಕೂದಲಿಗೆ ಸ್ನಾನ ಮಾಡಿ ದಿನ ನಾವು ಹೆಚ್ಚು ಫ್ರೆಶ್ ಆಗಿ ಕಾಣುತ್ತೇವೆ ಮತ್ತು ಸ್ವಲ್ಪ ರಿಲ್ಯಾಕ್ಸ್ ಅನುಭವ ಆಗುತ್ತದೆ. ದೇಹ ಮತ್ತು ಮನಸ್ಸಿಗೆ ಮುದ ನೀಡುವ ಇಂತಹ ಆಚರಣೆಗಳಿಗೂ ಕೂಡ ಒಂದು ನಿಯಮವಿದೆ. ಶಾಸ್ತ್ರಗಳಲ್ಲಿ ಮಾತ್ರವಲ್ಲದೆ ಆಯುರ್ವೇದ ಪದ್ಧತಿಯಲ್ಲೂ ಕೂಡ ಸ್ನಾನಕ್ಕೆ ವಿಶೇಷ ಸ್ಥಾನಮಾನಗಳಿದ್ದು ಸ್ನಾನವನ್ನು ಕೂಡ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ.
ಸ್ನಾನ ಎನ್ನುವುದು ಸರಳವಾದ ವಿಚಾರ ಖಂಡಿತ ಅಲ್ಲ, ಯಾವ ಸಮಯದಲ್ಲಿ ತಲೆ ಸ್ನಾನ ಮಾಡಬೇಕು? ಪ್ರತಿದಿನವೂ ಮಾಡಬಹುದೇ? ತಣ್ಣೀರು ಸ್ನಾನ ಉತ್ತಮವೇ? ಬಿಸಿನೀರ ಸ್ನಾನ ಉತ್ತಮವೇ? ಇಂತಹ ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಇದರಲ್ಲಿ ಯಾವುದು ಸರಿ? ಯಾವುದು ಉತ್ತಮ? ಎನ್ನುವ ವಿಚಾರದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ಹೆಬ್ಬೆರಳ ಉಗುರ ಮೇಲೆ ಅರ್ಧಚಂದ್ರಾಕೃತಿ ಕಂಡರೆ 30 ದಿನಗಳ ಒಳಗೆ ನಿಮ್ಮ ಜೀವನದಲ್ಲಿ ಈ ಘಟನೆ ನಡೆಯುತ್ತದೆ ಎಂದರ್ಥ.
* ತಣ್ಣೀರು ಸ್ನಾನ ಮಾಡಿದಾಗ ದೇಹದ ಉಷ್ಣವು ಉದರಕ್ಕೆ ಹೋಗಿ ಸೇರಿಕೊಳ್ಳುತ್ತದೆ ಹೀಗಾಗಿ ತಣ್ಣೀರು ಸ್ನಾನ ಮಾಡಿದವರಿಗೆ ತಕ್ಷಣ ಹೆಚ್ಚು ಹಸಿವಾಗುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಇರುವವರು ತಣ್ಣೀರು ಸ್ನಾನ ಮಾಡುವುದು ಉತ್ತಮ. ಆದರೆ ಚಿಕ್ಕ ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ಬಾಣಂತಿಯರು, ವಾತ ದೇಹ ಪ್ರಕೃತಿಯವರು, ರೋಗಿಗಳು ತಣ್ಣೀರ ಸ್ನಾನ ಮಾಡುವುದು ಸೂಕ್ತವಲ್ಲ
* ತಣ್ಣೀರ ಸ್ನಾನ ಮಾಡುವಾಗ ಮೊದಲು ನೀರನ್ನು ತಲೆಗೆ ಹಾಕಬೇಕು ಬಿಸಿನೀರು ಸ್ನಾನ ಮಾಡುವಾಗ ನೀರನ್ನು ಮೊದಲಿಗೆ ನೀರನ್ನು ಕಾಲಿಗೆ ಹಾಕಿ ಆರಂಭಿಸಬೇಕು ಎನ್ನುವವ ನಿಯಮ ಇದೆ ಅನೇಕರಿಗೆ ಇದು ತಿಳಿದಿಲ್ಲ, ಇದು ದೇಹದಲ್ಲಿ ರಕ್ತ ಪರಿಚಲನೆ ಹಾಗೂ ನರವ್ಯೂಹದ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ ಹಾಗಾಗಿ ಇಂದಿನಿಂದಲೇ ಅನುಸರಿಸಿ.
ಈ ಸುದ್ದಿ ಓದಿ:- ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!
* ಪ್ರತಿದಿನವೂ ಮತ್ತು ದಿನದ ಯಾವ ಸಮಯದಲ್ಲಾದರೂ ತಣ್ಣೀರ ಸ್ನಾನ ಮಾಡುವುದು ಎಲ್ಲರಿಗೂ ಅಷ್ಟೊಂದು ಹೊಂದುವುದಿಲ್ಲ ಇದರ ಬದಲು ಬಹಳ ಬೇಸಿಗೆ ಇರುವಾಗ ತಣ್ಣೀರು ಸ್ನಾನ ಮಾಡುವುದು, ಬಹಳ ತಂಪು ಅಥವಾ ಚಳಿ ಇರುವಾಗ ಬೆಚ್ಚಗಿನ ನೀರಿನ ಸ್ನಾನ ಮಾಡುವುದು ಒಳ್ಳೆಯದು. ಬಹಳ ಸುಡುವ ನೀರನ್ನು ತಲೆಗೆ ಹಾಕಿ ಸ್ನಾನ ಮಾಡುವುದು ಅಷ್ಟೊಂದು ಉತ್ತಮವಲ್ಲ
* ರಕ್ತಪಿತ್ತ ಸಮಸ್ಯೆ ಇರುವವರು ಕೂಡ ತಣ್ಣೀರ ಸ್ನಾನ ಮಾಡುವುದು ಉತ್ತಮ. ಮೂಗಿನಲ್ಲಿ ರಕ್ತ ಬರುವುದು, ಮಹಿಳೆಯರಿಗೆ ಅನಿಯಮಿತ ಮುಟ್ಟು, ಪೈಲ್ಸ್ ಸಮಸ್ಯೆಯಿಂದ ರಕ್ತ ಬೀಳುವುದು ಇಂತಹ ಸಮಸ್ಯೆಗಳು ಇರುವವರು ಕೂಡ ತಣ್ಣೀರ ಸ್ನಾನ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ.
ಈ ಸುದ್ದಿ ಓದಿ:- ನೀವೇನಾದರೂ ತಿರುಪತಿಗೆ ಪ್ರಯಾಣ ಮಾಡಲು ಬಯಸುತ್ತಿದ್ದೀರಾ? ಕೇವಲ 1799 ರೂಪಾಯಿಗೆ ಊಟ + ಲಕ್ಸೂರಿ ರೂಮ್ ನೊಂದಿಗೆ ಆರಾಮದಾಯಕ ಪ್ರಯಾಣ.!
* ದೇಹದಲ್ಲಿ ಉಷ್ಣ ಹೆಚ್ಚಾದಾಗಲೂ ನೆಗಡಿ ಆಗುತ್ತದೆ ಇಂತಹ ಸಮಸ್ಯೆ ಇದ್ದಾಗ ತಣ್ಣೀರು ಸ್ನಾನ ಮಾಡಿದರೆ ತಕ್ಷಣ ನಿಲ್ಲುತ್ತದೆ.
* ಬಿಸಿ ನೀರಿನ ಸ್ನಾನವು ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ ವಾತ ಹಾಗೂ ಕಫ ದೋಷಗಳು ಇದ್ದರೆ ಇದನ್ನು ಸರಿಪಡಿಸುತ್ತದೆ
* ಸುಡುವ ನೀರನ್ನು ತಲೆಗೆ ಹಾಕಿಕೊಳ್ಳುವುದರಿಂದ ಕೂದಲ ಉದುರುವಿಕೆ ಹೆಚ್ಚಾಗಿರುವುದು ಎಂದು ಹೇಳಲಾಗುತ್ತದೆ. ಕೂದಲು ಆರೋಗ್ಯದಿಂದ ಇರಲು ಬೆಚ್ಚಗಿನ ಅಥವಾ ತಣ್ಣೀರಿನ ಸ್ನಾನ ತುಂಬಾ ಸಹಾಯಕ.
ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ
* ಸುಡುವ ನೀರಿನ ಸ್ನಾನದಿಂದ ಕೂದಲು ದುರ್ಬಲವಾಗುವುದು ಮಾತ್ರವಲ್ಲದೆ ಇಂದ್ರಿಯಗಳ ಶಕ್ತಿಯು ಕೂಡ ಕುಂದಿ ಹೋಗುತ್ತದೆ. ಹಾಗಾಗಿ ತಲೆಗೆ ಹೆಚ್ಚು ಸುಡುವ ನೀರನ್ನು ಹಾಕಬಾರದು ಎಂದು ಆಯುರ್ವೇದ ಹೇಳುತ್ತದೆ.
* ಪ್ರತಿದಿನವೂ ಕೂಡ ತಲೆಗೆ ಸ್ನಾನ ಮಾಡುವುದು ಮತ್ತು ಪ್ರತಿದಿನವೂ ಸ್ಥಾನಕ್ಕೆ ಶಾಂಪೂ ಬಳಸುವುದು ಅಷ್ಟೊಂದು ಒಳ್ಳೆಯದಲ್ಲ. ಕೂದಲಿಗೆ ಸ್ನಾನದ ಜೊತೆಗೆ ಎಣ್ಣೆಯ ಅವಶ್ಯಕತೆ ಕೂಡ ಅಷ್ಟೇ ಇರುತ್ತದೆ ಮತ್ತು ತಲೆಗೆ ಎಣ್ಣೆ ಹಾಕುವುದು ಸ್ನಾನ ಮಾಡುವುದು ಕೂದಲಿನ ಆರೋಗ್ಯದ ವಿಷಯ ಮಾತ್ರವಲ್ಲದೆ ಇಡೀ ದೇಹದ ಮತ್ತು ನರಮಂಡಲದ ಆರೋಗ್ಯಕ್ಕೆ ಸಂಬಂಧಿಸಿದ ವಿಷಯ ಕೂಡ ಹೌದು. ತಲೆ ಕೂದಲು ತೊಳೆಯಲು ಆದಷ್ಟು ನ್ಯಾಚುರಲ್ ಆದ ವಸ್ತುಗಳನ್ನು ಉಪಯೋಗಿಸುವುದು ಹೆಚ್ಚು ಉತ್ತಮ ಎಂದು ಆಯುರ್ವೇದ ಹೇಳುತ್ತದೆ.