ದೇವರ ಪೂಜೆ ಮಾಡುವಂತಹ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಬಹಳ ಭಕ್ತಿಯಿಂದ ಪೂಜೆ ಮಾಡುವುದು ಬಹಳ ಉತ್ತಮ ಹಾಗೂ ಪೂಜೆ ಮಾಡುವಂತಹ ಸಂದರ್ಭದಲ್ಲಿ ನಾವು ಯಾವುದೇ ವಿಚಾರದ ಬಗ್ಗೆ ಆಲೋಚನೆಯನ್ನು ಮಾಡಬಾರದು ಕೇವಲ ದೇವರ ಧ್ಯಾನದಲ್ಲಿ ದೇವರನ್ನು ನೆನಪಿಸಿಕೊಳ್ಳುತ್ತಾ ಯಾವುದೇ ಕೆಟ್ಟ ಆಲೋಚನೆಗಳನ್ನು ಮಾಡದೇ ಒಂದೇ ಮನಸ್ಸಿನಿಂದ ಏಕಾಗ್ರತೆಯಿಂದ ಪೂಜೆಯನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ಹಾಗೇನಾದರೂ ನೀವು ಬೇರೆ ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಪೂಜೆ ಮಾಡಿದರೆ ನಿಮಗೆ ದೇವರ ಯಾವುದೇ ರೀತಿಯ ಫಲ ಸಿಗುವುದಿಲ್ಲ. ಆದ್ದರಿಂದ ನೀವು ಪೂಜೆ ಮಾಡುವಂತಹ ಸಂದರ್ಭದಲ್ಲಿ ಆದಷ್ಟು ಭಕ್ತಿಯಿಂದ ಶ್ರದ್ಧೆಯಿಂದ ಪೂಜೆಯನ್ನು ಮಾಡುವುದು ಒಳ್ಳೆಯದು. ಈ ರೀತಿ ಮಾಡುವುದರಿಂದ ನೀವು ಅತಿ ಹೆಚ್ಚಿನ ಫಲಗಳನ್ನು ಪಡೆದುಕೊಳ್ಳಬಹುದು.
ಈ ಸುದ್ದಿ ಓದಿ:- ಇಲ್ಲಿ 48 ಬಾರಿ ಆಂಜನೇಯನ ಹೆಸರು ಬರೆದರೆ ನಿಮ್ಮ ಕೆಲಸ ಸ್ಥಳದಲ್ಲೇ ಆಗುತ್ತೆ.!
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪೂಜೆ ಮಾಡುವಂತಹ ಸಂದರ್ಭದಲ್ಲಿ ನಾವು ಯಾವ ಕೆಲವು ವಿಷಯಗಳನ್ನು ತಿಳಿದುಕೊಂಡಿರಬೇಕು ಹಾಗೂ ಪೂಜೆ ಮಾಡುವಂತಹ ಸಂದರ್ಭದಲ್ಲಿ ಯಾವ ನಿಯಮಗಳನ್ನು ಅನುಸರಿಸಬೇಕು ಹಾಗೇನಾದರೂ ನಾವು ಆ ನಿಯಮಗಳನ್ನು ಅನುಸರಿಸದೇ ಇದ್ದರೆ ಅದರಿಂದ ನಮ್ಮ ಮನಸ್ಸಿಗೆ ಹೇಗೆ ತೊಂದರೆ ಉಂಟಾಗುತ್ತದೆ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
* ನೈಟಿ ಧರಿಸಿ ಅಥವಾ ಮೈ ಒರೆಸಿದ ಟವೆಲ್ ಧರಿಸಿ ಪೂಜೆ ಮಾಡಬೇಡಿ. ಅದರಲ್ಲೂ ಬಹಳ ವಿಶೇಷವಾಗಿ ನಿಮ್ಮ ಮನೆ ದೇವರ ವಾರದ ದಿನವಾದರೂ ಸೀರೆಯನ್ನು ಧರಿಸಿ ಪೂಜೆ ಮಾಡುವುದು ಉತ್ತಮ ಈ ರೀತಿ ಮಾಡುವುದರಿಂದ ಅತಿ ಹೆಚ್ಚಿನ ಫಲಗಳನ್ನು ಪಡೆಯಬಹುದು.
* ಪೂಜೆ ಆಗುವ ವರೆಗೂ ಗಂಡ ಹೆಂಡತಿ ಮಲಗುವ ಹಾಸಿಗೆಯ ಮೇಲೆ ಕೂರುವುದಾಗಲಿ ಮುಟ್ಟಿಸಿಕೊಳ್ಳುವುದಾಗಲಿ ಮಾಡಬೇಡಿ.
* ಸ್ನಾನ ಮಾಡದೇ ದೇವರ ದೀಪ ಹಚ್ಚಬಾರದು.
* ಕೂದಲು ಬಿಚ್ಚುಕೊಂಡು ಪೂಜೆ ಮಾಡಬೇಡಿ ಅದರಲ್ಲೂ ತಲೆ ಸ್ನಾನ ಮಾಡಿ ನಿಮ್ಮ ತಲೆಯಲ್ಲಿ ನೀರು ಇದ್ದರು ಅದು ಹಾಗೆ ಕೆಳಗಡೆ ಬೀಳುತ್ತಾ ಇದ್ದರೂ ಪೂಜೆ ಮಾಡುವುದು ಅಶುಭ ಎಂದು ಶಾಸ್ತ್ರಪುರಾಣಗಳು ತಿಳಿಸುತ್ತವೆ. ಆದ್ದರಿಂದ ಸಂಪೂರ್ಣವಾಗಿ ನಿಮ್ಮ ತಲೆಯನ್ನು ಒರೆಸಿ ಆನಂತರ ಜಡೆ ಹಾಕಿ ಪೂಜೆ ಮಾಡುವುದು ಉತ್ತಮ.
ಈ ಸುದ್ದಿ ಓದಿ:-ಬಾಳೆ ಎಲೆಯಲ್ಲಿ ಎರೆಡು ಕಪ್ ಹಾಲಿನಲ್ಲಿ ಕ್ರೀಮ್ ಇಲ್ಲದೆ ಚಾಕೊಬಾರ್ ಐಸ್ ಕ್ರೀಮ್ ಮಾಡುವ ಸುಲಭ ವಿಧಾನ.!
* ಒಲೆಯ ಮೇಲೆ ಏನೋ ಇಟ್ಟು ಅದರ ಮೇಲೆ ನಿಮ್ಮ ಗಮನ ಇಟ್ಟು ಪೂಜೆ ಮಾಡಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಗಮನ ಆದರೆ ಮೇಲೆ ಇರುತ್ತದೆ ಬದಲಿಗೆ ದೇವರ ಮೇಲೆ ಯಾವುದೇ ರೀತಿಯ ಭಕ್ತಿ ಭಾವ ಇರುವುದಿಲ್ಲ ಆದ್ದರಿಂದ ಯಾವುದೇ ಕೆಲಸ ಇದ್ದರೂ ಅದನ್ನು ಪೂಜೆ ಮಾಡಿ ಮುಗಿಸಿದ ಮೇಲೆ ಮಾಡುವುದು ಉತ್ತಮ.
* ಸೂತಕವಿದ್ದಾಗ ಪೂಜೆ ಮಾಡಬೇಡಿ.
* ಮುಟ್ಟಿನ ಸಮಯದಲ್ಲಿ ಮಹಿಳೆಯರು ವಿಶ್ರಾಂತಿ ಪಡೆಯುವುದು ಉತ್ತಮ. ಪೂಜೆ ಮಾಡುವುದು ದೀಪ ಹಚ್ಚುವುದು ಮಾಡಬೇಡಿ ಆ ಸಮಯದಲ್ಲಿ ರಜ ಅಂಶ ಅಧಿಕವಾಗಿರುತ್ತದೆ.
* ಬೈಯುತ್ತಾ, ಮಾತನಾಡುತ್ತಾ ಪೂಜೆ ಮಾಡಬೇಡಿ ಮೌನದಿಂದ ಪೂಜೆ ಮಾಡುವುದು ಬಹಳ ಒಳ್ಳೆಯದು.
* ಸುಖಾಸನದಲ್ಲಿ ಕೂತು ಪೂಜೆ ಪ್ರಾರಂಭಿಸಿ ಪೂಜೆಗೆ ಕೂತಾಗ ಆಗಾಗ ಎದ್ದು ಹೋಗಬೇಡಿ.
* ನಿಮ್ಮ ಫೋನ್ ಸೈಲೆಂಟ್ ನಲ್ಲಿಡಿ.
* ದೇವರಿಗೆ ಬೆನ್ನು ಹಾಕಿ ಕೂತು ಪೂಜೆ ಮಾಡಬೇಡಿ.
* ಬರೀಗೈಯಲ್ಲಿ ದೇವರಿಗೆ ಏನೂ ಅರ್ಪಿಸಬೇಡಿ ತಟ್ಟೆಯಲ್ಲಿಟ್ಟು ಅರ್ಪಿಸಿ.
ಈ ಸುದ್ದಿ ಓದಿ:-ತಕ್ಷಣ ಹಣದ ಅವಶ್ಯಕತೆ ಇದ್ರೆ 21 ಅಕ್ಕಿಕಾಳಿನಿಂದ ಈ ರೀತಿ ಮಾಡಿ.!
* ಒಂದು ದೀಪದಿಂದ ಮತ್ತೊಂದು ದೀಪ ಹಚ್ಚಬೇಡಿ.
* ಹಬ್ಬದ ದಿನಗಳಲ್ಲಿ, ಶುಕ್ರವಾರ, ಭಾನುವಾರ, ಏಕಾದಶಿ, ದಿನಗಳಲ್ಲಿ ತುಳಸಿ ಕೀಳಬೇಡಿ.
* ಗಣೇಶ ದೇವರಿಗೆ ತುಳಸಿ ಅರ್ಪಿಸಿ ಪೂಜೆ ಮಾಡಬೇಡಿ.