ಮೂರ್ಖ ಪುರುಷರ ಲಕ್ಷಣಗಳು.!

 

ಪ್ರತಿಯೊಬ್ಬ ಪುರುಷನೂ ಕೂಡ ತನ್ನ ಜೀವನದಲ್ಲಿ ತನ್ನ ಪತ್ನಿಯಾದವ ಳನ್ನು ಒಳ್ಳೆಯ ರೀತಿಯಿಂದ ಸ್ನೇಹಿತೆಯಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಅವಳಲ್ಲಿ ನಿಮ್ಮ ಮೇಲೆ ಒಂದು ಒಳ್ಳೆಯ ಭಾವನೆ ಇರುತ್ತದೆ. ಹಾಗೇನಾದರೂ ನೀವು ಅವಳನ್ನು ಮನೆಯ ಕೆಲಸದವಳ ಹಾಗೆ ನೋಡಿ ಕೊಂಡರೆ ಅವಳ ಮನಸ್ಸಿನಲ್ಲಿ ನಿಮ್ಮ ಮೇಲೆ ಯಾವುದೇ ರೀತಿಯ ಒಳ್ಳೆಯ ಭಾವನೆ ಇರುವುದಿಲ್ಲ.

ಕೆಲವೊಂದಷ್ಟು ಜನ ಪುರುಷರು ಮದುವೆಯಾಗುವುದು ನನ್ನ ಕೆಲಸ ಕಾರ್ಯ ಮಾಡುವುದಕ್ಕೆ ಅವಳು ಮನೆಯನ್ನು ನೋಡಿಕೊಳ್ಳುವುದಕ್ಕೆ ಕುಟುಂಬವನ್ನು ನೋಡಿಕೊಳ್ಳುವು ದಕ್ಕೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಅಂತಹ ಒಂದು ಆಲೋಚನೆಯನ್ನು ಸಹ ಪುರುಷರು ಮಾಡಬಾರದು.

ಮನೆಗೆ ಬಂದಂತಹ ಹೆಣ್ಣು ಮಗಳನ್ನು ತಮ್ಮ ಮನೆಯ ಮಗಳಂತೆ ನೋಡಿಕೊಂಡು ಅವಳಿಗೆ ಅತಿ ಹೆಚ್ಚಿನ ಪ್ರೀತಿ ವಿಶ್ವಾಸ ಬಾಂಧವ್ಯವನ್ನು ತೋರಿಸುವುದರಿಂದ ಅವಳು ತನ್ನ ಕುಟುಂಬವನ್ನೇ ಮರೆತು ಗಂಡನ ಮನೆಯನ್ನೇ ತನ್ನ ಕುಟುಂಬ ಎನ್ನುವಂತೆ ಬಹಳ ಪ್ರೀತಿ ವಿಶ್ವಾಸದಿಂದ ಎಲ್ಲರನ್ನು ಕೂಡ ನೋಡಿಕೊಳ್ಳುತ್ತಿರುತ್ತಾಳೆ.

ಆದರೆ ಕೆಲವೊಂದಷ್ಟು ಜನ ಕೆಲವೊಂದು ವಿಚಾರಗಳಲ್ಲಿ ಹೆಂಡತಿಯ ಮೇಲೆ ತಪ್ಪು ಭಾವನೆಗಳನ್ನು ಹೊಂದಿರುತ್ತಾರೆ. ಅದು ಅವರ ಮೂರ್ಖತನ ಎಂದು ಹೇಳಿದರೆ ತಪ್ಪಾ ಗುವುದಿಲ್ಲ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಮೂರ್ಖ ಪುರುಷರ ಲಕ್ಷಣಗಳು ಯಾವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

* ಮೂರ್ಖ ಪುರುಷ ತನ್ನ ಪತ್ನಿಯನ್ನು ಮನೆ ಕೆಲಸದವಳು ಎಂದು ಭಾವಿಸಿ ತಾನು ಕೆಲಸದವಳ ಪತಿಯಾಗಿ ಇರುತ್ತಾನೆ ಆದರೆ ಬುದ್ಧಿವಂತ ಪುರುಷ ಹೆಂಡತಿಯನ್ನು ರಾಣಿಯಾಗಿ ನೋಡಿಕೊಂಡು ತಾನು ರಾಜನಾಗಿ ಬಾಳುತ್ತಾನೆ.

* ಮೂರ್ಖ ಪುರುಷ ತನ್ನ ಹೆಂಡತಿಯನ್ನು ಬುಗುರಿಯಂತೆ ಆಡಿಸುತ್ತಾನೆ ಬೇರೆ ಕಡೆ ಮನೆ ಮಾಡಿ ಇರೋಣ ಅಂತ ಹಠ ಹಿಡಿಯುತ್ತಾನೆ ಅವನಿಗೆ ತಂದೆ ತಾಯಿಯೊಂದಿಗೆ ಕೂಡಿ ಬಾಳಲು ಅಷ್ಟು ಇಷ್ಟ ಇರುವುದಿಲ್ಲ.
* ಆದರೆ ಬುದ್ದಿವಂತ ಪುರುಷ ಸಂಸಾರದಲ್ಲಿ ಎಷ್ಟೇ ಕಷ್ಟವಿರಲಿ ಎಲ್ಲ ರನ್ನು ಎಲ್ಲವನ್ನು ಎಲ್ಲರನ್ನು ಹೊಂದಿಕೊಂಡು ಪರಿಸ್ಥಿತಿ ಅರ್ಥಮಾಡಿ ಕೊಂಡು ಎಲ್ಲರೊಂದಿಗೆ ಒಟ್ಟಿಗೆ ಬಾಳುವ ಆಸಕ್ತಿ ಹೊಂದಿರುತ್ತಾನೆ.

* ಮೂರ್ಖ ಪುರುಷರು ತನ್ನ ಮಕ್ಕಳು ಏನಾದರೂ ತಪ್ಪು ಮಾಡಿದರೆ ಎಲ್ಲರ ಮುಂದೆ ಬಾಯಿಗೆ ಬಂದಂತೆ ಬೈದು ಹೊಡೆದು ಮಕ್ಕಳಿಗೆ ಪಾಠ ಕಲಿಸುತ್ತಾರೆ.
* ಆದರೆ ಬುದ್ಧಿವಂತ ಪುರುಷ ಮಕ್ಕಳು ಏನೇ ತಪ್ಪು ಮಾಡಿದರು ಅದನ್ನು ಸಮಾಧಾನವಾಗಿ ತಾಳ್ಮೆಯಿಂದ ತಿಳಿಸಿ ಬುದ್ಧಿಮಾತು ಹೇಳುತ್ತಾನೆ.
* ಭಾವನೆಗಳಿಲ್ಲದ ಗಂಡಿನ ಮನಸ್ಸು ಬರಿದಾಗಿ ಹೋದ ಬಹುದೊಡ್ಡ ತೋಟದಂತೆ ಬರಿ ಹೆಸರಿಗೆ ಮಾತ್ರ ದೊಡ್ಡದಾದ ತೋಟ ಆದರೆ ಯಾವುದಕ್ಕೂ ಉಪಯೋಗವಿಲ್ಲ.

* ಮೂರ್ಖ ಪುರುಷ ಕುಟುಂಬ ಮತ್ತು ಪತ್ನಿಯ ಮನೆಯವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾನೆ.
* ಪತ್ನಿ ಏನೇ ಮಾಡಿದರೂ ನಗುಮುಖದ ಬದಲು ಹುಳಿ ಮುಖದಿಂದ ಅವಳನ್ನು ನೋಡುತ್ತಾನೆ.
* ಸಭ್ಯತೆ ಹೊಂದಿರುವ ಪುರುಷ ಯಾವಾಗಲೂ ಪ್ರೀತಿಯಿಂದ ಮಾತ ನಾಡುತ್ತಾನೆ ಕಠೋರವಾಗಿ ಮಾತನಾಡುವುದಿಲ್ಲ ಮತ್ತು ಇತರರ ಮುಂದೆ ಅಥವಾ ಮನೆಯಲ್ಲಿ ಪತ್ನಿಗೆ ಗೌರವ ನೀಡುತ್ತಾನೆ.
* ಬುದ್ಧಿವಂತ ಪುರುಷನಿಗೆ ತಾಳ್ಮೆ ಇರುತ್ತದೆ ಎಲ್ಲರೊಂದಿಗೆ ಹೊಂದಿ ಕೊಂಡು ಹೋಗುವ ಗುಣವಿರುತ್ತದೆ.

* ಆದರೆ ಸ್ವಾರ್ಥ ಮನೋಭಾವನೆ ಊಟ ತಿಂಡಿ ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು ಪ್ರತಿಯೊಂದರಲ್ಲಿ ನನ್ನದು ಎಂಬ ಸ್ವಾರ್ಥ ಇರುವಂತಹ ಪುರುಷ ಯಾವತ್ತಿಗೂ ಖುಷಿಯಾಗಿರಲು ಸಾಧ್ಯವಿಲ್ಲ.
* ಹೆಂಡತಿ ತನ್ನ ಪತಿಯನ್ನು ರಾಜನಂತೆ ನಡೆಸಿ ಕೊಳ್ಳಬೇಕೆಂದು ಬಯಸಿದರೆ ಗಂಡ ಕೂಡ ಅವಳನ್ನು ರಾಣಿಯಂತೆ ನೋಡಿಕೊಳ್ಳಬೇಕು.
* ತಾಳಿಯನ್ನು ತೂಕವೆಂದು ಭಾವಿಸುವ ಯಾವುದೇ ಹೆಣ್ಣು ಸಂಸಾರ ನಡೆಸಲು ಯೋಗ್ಯಳಲ್ಲ ಹೆಣ್ಣು ತನ್ನ ಮನೆಯ ಆಳು ಎಂದು ಭಾವಿಸುವ ಯಾವುದೇ ಗಂಡನಿಗೆ ಸಂಸಾರಿಯಾಗಿ ಬಾಳಲು ಯೋಗ್ಯನಲ್ಲ.

Leave a Comment

WhatsApp Group Join Now
Telegram Group Join Now