ಮನೆಯ ಒಟ್ಟು ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಪಾಲು ಇದೆ ಎನ್ನುವಂತಹ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಆದೇಶಿಸಿದೆ ಆದರೆ ಕೆಲವೊಂದು ಸಂದರ್ಭದಲ್ಲಿ ಕೆಲವೊಂದಷ್ಟು ಜನ ಮನೆಯ ಗಂಡು ಮಕ್ಕಳು ಮಾತ್ರ ಆಸ್ತಿಯಲ್ಲಿ ಹಂಚಿಕೆಯನ್ನು ಮಾಡಿಕೊಂಡಿರುತ್ತಾರೆ. ಕೆಲವೊಂದಷ್ಟು ಜನ ತಮ್ಮ ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ಆಸ್ತಿ ಹಂಚಿಕೆಯನ್ನು ಮಾಡಿರುವುದಿಲ್ಲ.
ಅಂತಹ ಸಂದರ್ಭದಲ್ಲಿ ಏನಾಗುತ್ತದೆ ಯಾವುದೆಲ್ಲ ರೀತಿಯ ಕ್ರಮಗಳನ್ನು ಮಹಿಳೆಯರು ಅಂದರೆ ಆ ಮನೆಯ ಹೆಣ್ಣು ಮಗಳು ತೆಗೆದುಕೊಳ್ಳಬಹುದು. ಆ ಆಸ್ತಿಯನ್ನು ತೆಗೆದುಕೊಳ್ಳುವುದಕ್ಕೆ ಏನೆಲ್ಲ ನಿಯಮಗಳನ್ನು ಅನುಸರಿಸುವುದರ ಮೂಲಕ ತನ್ನ ತಂದೆಯ ಆಸ್ತಿಯಲ್ಲಿ ಪಾಲನ್ನು ಪಡೆದುಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ನಮ್ಮ ವಯಸ್ಸು 25 ಆದ ಬಳಿಕ ಈ ನಿಯಮ ಪಾಲಿಸಬೇಕು.!
ಮೇಲೆ ಹೇಳಿದಂತೆ ಕೆಲವೊಮ್ಮೆ ಮನೆಯಲ್ಲಿರುವಂತಹ ಗಂಡು ಮಕ್ಕಳು ಮಾತ್ರ ತಂದೆಯ ಒಟ್ಟು ಆಸ್ತಿಯಲ್ಲಿ ಪಾಲನ್ನು ಮಾಡಿಕೊಂಡಿರುತ್ತಾರೆ ಆದರೆ ಕೆಲವೊಮ್ಮೆ ಹೆಣ್ಣು ಮಕ್ಕಳಿಗೆ ಆ ಒಂದು ಆಸ್ತಿಯಲ್ಲಿ ಯಾವುದೇ ರೀತಿಯ ಪಾಲನ್ನು ಕೊಟ್ಟಿರುವುದಿಲ್ಲ. ಎಲ್ಲಾ ಆಸ್ತಿಯನ್ನು ಅವರೇ ಅನುಭವಿಸುತ್ತಿರುತ್ತಾರೆ. ಹೀಗೆ ನಡೆದು ಸುಮಾರು ವರ್ಷಗಳೇ ಆದ ನಂತರ ಮನೆಯಲ್ಲಿರುವಂತಹ ಅಂದರೆ ಆ ಮನೆಯ ಹೆಣ್ಣು ಮಕ್ಕಳು ಆಸ್ತಿಯಲ್ಲಿ ನನಗೂ ಪಾಲು ಬೇಕು ಎಂದು ಕೇಳುವಂತಹ ಸಂದರ್ಭ ಬಂದೇ ಬರುತ್ತದೆ.
ಆಗ ಅವರು ಮೊದಲು ಏನು ಮಾಡಬೇಕು ಎಂದು ನೋಡುವುದಾದರೆ ಮೊದಲು ಒಟ್ಟು ಆಸ್ತಿಗೆ ಸಂಬಂಧಿಸಿದಂತಹ ಎಲ್ಲ ದಾಖಲೆಗಳನ್ನು ನೋಡಬೇಕಾಗುತ್ತದೆ. ಅಂದರೆ ಆಸ್ತಿ ಯಾವ ರೀತಿಯಾಗಿ ಬಂದಿದ್ದು ತಂದೆಯ ಸ್ವಯಾರ್ಜಿತ ಆಸ್ತಿಯ ಅಥವಾ ತಂದೆಗೆ ಪಿತ್ರಾರ್ಜಿತವಾಗಿ ಬಂದಿರುವಂತಹ ಆಸ್ತಿಯ ಎನ್ನುವುದನ್ನು ತಿಳಿದುಕೊಳ್ಳಬೇಕು.
ಈ ಸುದ್ದಿ ಓದಿ:- ಫ್ರಿಡ್ಜ್ ಯಾವತ್ತು ಹೊಸದರಂತೆ ಇರುತ್ತೆ ಫ್ರಿಡ್ಜ್ ಯಾವತ್ತು ರಿಪೇರಿಗೆ ಬರಲ್ಲ..!
ತಂದೆಯ ಸ್ವಯಾರ್ಜಿತ ಆಸ್ತಿಯಾಗಿದ್ದು ಅವರು ವಿಲ್ ಅನ್ನು ಅಂದರೆ ಮರಣ ಶಾಸನವನ್ನು ಮಾಡಿಸದೆ ಆಸ್ತಿಯನ್ನು ಹಾಗೆ ಬಿಟ್ಟು ಮರಣ ಹೊಂದಿದ್ದರೆ ಹಿಂದೂ ಸಕ್ಷೆಷನ್ ಆಕ್ಟ್ 8 ರ ಪ್ರಕಾರ ಎಲ್ಲಾ ವಾರಸು ದಾರರು ಕೂಡ ಹಕ್ಕುದಾರರಾಗಿರುತ್ತಾರೆ ಅವರು ಗಂಡು ಮಕ್ಕಳೇ ಆದರೂ ಸರಿ ಹೆಣ್ಣು ಮಕ್ಕಳೇ ಆದರೂ ಸರಿ.
ಹೆಚ್ಚಿನ ಜನಕ್ಕೆ ಗೊತ್ತಿಲ್ಲ 2005ರ ನಂತರ ಮಾತ್ರ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು ಬಂದಿರು ತ್ತದೆ ಎಂದು ಆದರೆ ಅದು ತಪ್ಪು. ಬದಲಿಗೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ತಂದೆಯ ಮರಣದ ನಂತರ ಎಲ್ಲಾ ಮಕ್ಕಳು ಕೂಡ ಹಕ್ಕುದಾರರಾಗಿರುತ್ತಾರೆ. ಈಗ ಪೌತಿ ಖಾತೆ ಮನೆಯಲ್ಲಿ ಯಾರಾದರೂ ಒಬ್ಬರ ಹೆಸರಿಗೆ ಖಾತೆ ಬದಲಾವಣೆಯಾಗಿದ್ದರೆ ಅವರೇ ಆ ಒಂದು ಆಸ್ತಿಯ ಹಕ್ಕುದಾರರು ಎಂದು ಹೇಳುವುದಕ್ಕೆ ಬರುವುದಿಲ್ಲ.
ಈ ಸುದ್ದಿ ಓದಿ:- ಈ 5 ರಾಶಿಯವರು ಮುಂದಿನ ವರ್ಷದೊಳಗೆ ಸ್ವಂತ ಮನೆ ಮಾಡಿಯೇ ತೀರುತ್ತಾರೆ.!
ಯಾಕೆ ಎಂದರೆ ಆ ಒಂದು ಆಸ್ತಿಗೆ ಪ್ರತಿ ಬಾರಿ ಕಂದಾಯವನ್ನು ಕಟ್ಟು ವಂತಹ ಉದ್ದೇಶದಿಂದ ಇವರ ಹೆಸರನ್ನು ಇಟ್ಟಿರುತ್ತಾರೆ ಹೊರತು ಅವರೇ ಆ ಒಂದು ಆಸ್ತಿಯ ಸ್ವಂತ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ.
ಮೊದಲೇ ಹೇಳಿದಂತೆ 2005ರ ನಂತರ ಯಾವುದೇ ಆಸ್ತಿ ವಿಭಾಗ ಆಗಿದ್ದರೂ ಕೂಡ ಅದರಲ್ಲಿ ಮನೆಯಲ್ಲಿರು ವಂತಹ ಹೆಣ್ಣು ಮಕ್ಕಳು ಆಸ್ತಿ ವಿಭಜನೆಯ ಪಾಲನ್ನು ಕೇಳಬಹುದು. ಅದು ತಂದೆಯ ಸ್ವಯಾರ್ಜಿತ ಆಸ್ತಿಯಾಗಿದ್ದರೆ ಮಾತ್ರ. ಬದಲಿಗೆ ತಂದೆಗೆ ಅವರ ಅಜ್ಜ ಮುತ್ತಜ್ಜ ಇವರುಗಳಿಂದ ಆಸ್ತಿ ಬಂದಿದ್ದರೆ ಅವರು ಇನ್ನೂ ಆಸ್ತಿಯನ್ನು ಹಂಚಿಕೊಂಡಿಲ್ಲ ಎಂದರು ಕೂಡ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ಪಾಲನ್ನು ಕೇಳಲು ಬರುವುದಿಲ್ಲ.
ಈ ಸುದ್ದಿ ಓದಿ:- ಅಕ್ಷಯ ತೃತೀಯದಂದು ನಿಮ್ಮ ರಾಶಿಗೆ ಅನುಗುಣವಾಗಿ ಈ ವಸ್ತು ಖರೀದಿಸಿದರೆ ಬದುಕು ಬಂಗಾರ.!
ಆದ್ದರಿಂದ ತಂದೆಯ ಸ್ವಯಾರ್ಜಿತ ಆಸ್ತಿ ಗಂಡು ಮಕ್ಕಳು ವಿಭಜನೆ ಮಾಡಿಕೊಂಡಿ ದ್ದರು ಕೂಡ ಆ ಒಂದು ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲನ್ನು ಕೇಳ ಬಹುದು. ಅವರೇನಾದರೂ ಕೊಡುವುದಕ್ಕೆ ಹಿಂದೆ ಮುಂದೆ ಮಾಡಿದರೆ ನೀವು ಕೋರ್ಟ್ ಮುಖಾಂತರ ನೀವು ಅರ್ಜಿ ಸಲ್ಲಿಸಿ ಆಸ್ತಿಯಲ್ಲಿ ಪಾಲನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.