* ವಯಸ್ಸು ಹೆಚ್ಚುತ್ತಿದ್ದಂತೆ ನಿರ್ಮಲವಾದ, ಕಾಂತಿಯುತ ಮುಖ ಚರ್ಮ ಹೊಂದುವುದು ಸಾಮಾನ್ಯ ಸಂಗತಿಯಲ್ಲ. ವಯಸ್ಸಾಗುತ್ತಿರುವಂತೆ ಮುಖ ಚರ್ಮ ಬಾಡುತ್ತಾ, ಕಾಂತಿ ಹೀನವಾಗಲು ಪ್ರಾರಂಭವಾಗುತ್ತದೆ.
* 25 ವಯಸ್ಸಿನವರೆಗೂ ಚರ್ಮದಲ್ಲಿನ ಕಣಗಳು ಸೂಕ್ತ ತೇವಾಂಶ ವನ್ನು ಒದಗಿಸುತ್ತ ಚರ್ಮವನ್ನು ಮೃದುವಾಗಿ ಕಾಂತಿಯುಕ್ತವಾಗಿಡುತ್ತದೆ.
ವಯಸ್ಸು ಮೀರಿದಂತೆ ಚರ್ಮದ ಕಣಗಳು ತಮ್ಮ ಕೆಲಸವನ್ನು ತಗ್ಗಿಸುತ್ತಾ ಚರ್ಮಕ್ಕೆ ತೇವಾಂಶ ಒದಗಿಸಲು ಅಶಕ್ತವಾಗುತ್ತದೆ. ಆಗ ಮುಖ ಚರ್ಮ ಒಣಗಿದಂತೆ ಕಾಂತಿ ಹೀನವಾಗಿ ಕಾಣುತ್ತದೆ. ಇದನ್ನು ನಿವಾರಿಸಲು ಚರ್ಮಕ್ಕೆ ಜಿಡ್ಡಿನಾಂಶ ತೇವಾಂಶ ಒದಗಲು ಮುಖಕ್ಕೆ ಕ್ರೀಮ್ ಹಚ್ಚುವುದು ಅತ್ಯಗತ್ಯ.
* ಮೊದಲನೆಯದಾಗಿ ಸಮತೋಲನ ಆಹಾರ ಸೇವಿಸಲೇಬೇಕು.
ನೀವು ಹದಿಹರೆಯದಲ್ಲಿ ತಿನ್ನುತ್ತಿದ್ದ ಐಸ್ ಕ್ರೀಮ್, ಚಾಕೊಲೆಟ್, ಕರಿದ ತಿಂಡಿಗಳು, ಸಿಹಿ ಖಾದ್ಯಗಳನ್ನು ತ್ಯಜಿಸಿ ಬಿಡಿ.
* ಹಸಿ ತರಕಾರಿಗಳು, ರಾಗಿ, ಗೋಧಿ, ಹಣ್ಣುಗಳು ನಿಮ್ಮ ಆಹಾರದಲ್ಲಿ ಯಥೇಚ್ಛವಾಗಿರಲಿ.
* ವೈದ್ಯರ ಸಲಹೆ ಪಡೆದು ಪೌಷ್ಟಿಕಾಂಶ ಹೊಂದಿರುವಂತಹ ಮಾತ್ರೆಗಳನ್ನು ಸೇವಿಸಬಹುದು.
* ಬಿಡದೇ ಪ್ರತಿದಿನ 7-8 ಲೋಟಗಳಷ್ಟು ನೀರು ಕುಡಿಯಿರಿ, ಇದು ಮೂತ್ರಪಿಂಡ ಸೂಕ್ತವಾಗಿ ಕಲ್ಮಶವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಿಂದ ಚರ್ಮದ ಕಾಯಿಲೆಗಳನ್ನು ತಡೆಗಟ್ಟಬಹುದು.
* ಮುಖಕ್ಕೆ ಹಚ್ಚುವ ತೇವಾಂಶ ಕ್ರೀಮ್ ಅನ್ನು ಮನೆಯಲ್ಲಿಯೇ ಕಡಿಮೆ. ಖರ್ಚಿನಲ್ಲಿ ಸುಲಭವಾಗಿ ತಯಾರಿಸಿಕೊಳ್ಳಬಹುದು.
ತಲಾ ನೂರು ಗ್ರಾಂ ನಷ್ಟು ಬಾದಾಮಿ, ವಾಲ್‌ನಟ್ ಮತ್ತು ಕಡಲೆ ಕಾಯಿ ಬೀಜವನ್ನು ಹಿಂದಿನ ರಾತ್ರಿ ನೀರಿನಲ್ಲಿ ನೆನೆಸಿ. ಬೆಳಿಗ್ಗೆ ಅದರ ಸಿಪ್ಪೆ ಸುಲಿದು ನುಣ್ಣಗೆ ರುಬ್ಬಿಕೊಳ್ಳಿ. ಆ ರುಬ್ಬಿದ ಮಿಶ್ರಣಕ್ಕೆ ನಾಲ್ಕು ದೊಡ್ಡ ಚಮಚ ಹಾಲಿನ ಕೆನೆ, ಎರಡು ಚಮಚವನ್ನು ಸೌತೆಕಾಯಿ ರಸ ಮತ್ತು ತಲಾ ಒಂದೊಂದು ಚಮಚ ಜೇನುತುಪ್ಪ, ಪನ್ನೀರನ್ನು ಬೆರೆಸಿ ಎಲ್ಲವನ್ನೂ ಮಿಶ್ರಣ ಮಾಡಿ ತೇವ ವಿಲ್ಲದ ಬಾಟಲ್‌ನಲ್ಲಿ ಶೇಖರಿಸಿ ಇಟ್ಟುಕೊಳ್ಳಿ. ಅನುಕೂಲವಿದ್ದರೆ ಫ್ರಿಡ್ಜ್ ನಲ್ಲಿ ಇಡಬಹುದು.
* ಒಂದು ಚಮಚ ಅಕ್ಕಿ ಹಿಟ್ಟಿಗೆ ಎರಡು ತೊಟ್ಟು ಹುಳಿ ಮೊಸರು, ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ಚರ್ಮಕ್ಕೆ ಅಂಟಿಕೊಂಡ ಹಿಟ್ಟನ್ನು ಉಜ್ಜುತ್ತಾ ಮುಖ ತೊಳೆದುಕೊಳ್ಳಿ ಇದರಿಂದ ಚರ್ಮದ ರಂಧ್ರ ಸ್ವಚ್ಛವಾಗುತ್ತದೆ.
* ನಂತರ ಮನೆಯಲ್ಲಿಯೇ ತಯಾರಿಸಿದ ತೇವಾಂಶದ ಕ್ರೀಮ್ ಅನ್ನು ಅಂಗೈಗೆ ತೆಗೆದುಕೊಂಡು ವರ್ತುಲಾಕಾರದಲ್ಲಿ ಮುಖಕ್ಕೆ ಹಚ್ಚುತ್ತಾ ಬನ್ನಿ. ನಿಮ್ಮ ಕೈಗಳ ಚಲನೆ ಕಣ್ಣುಗಳ ಬಳಿ ಜಾಗೃತವಾಗಿರಬೇಕು. ಈ ಕ್ರೀಮ್ ಅನ್ನು ಸುಮಾರು 15 ನಿಮಿಷವಾದರೂ ಚರ್ಮಕ್ಕೆ ತೀಡಬೇಕು. ಆ ಮೇಲೆ ಟ್ಯೂಶ್ಯೂ ಪೇಪರ್ ಆಗಲಿ ಹತ್ತಿಯನ್ನಾಗಲಿ ತೆಗೆದುಕೊಂಡು ಉಳಿದ ಮುಖದ ಕ್ರೀಮ್ ಅನ್ನು ಒರೆಸಿಕೊಳ್ಳಿ.
ಈ ರೀತಿ ಪ್ರತಿದಿನ ಅನುಸರಿಸಿದರೆ ಒಂದು ತಿಂಗಳಲ್ಲಿ ನಿಮ್ಮ ಮುಖದ ಚರ್ಮದ ಬದಲಾವಣೆ ಕಂಡು ನೀವೇ ಆಶ್ಚರ್ಯ ಪಡುವಿರಿ. ಈ ವಯಸ್ಸಿನಲ್ಲಿ ನೀವು ಹಚ್ಚುವ ಮೇಕಪ್ ನಲ್ಲಿ ತೇವಾಂಶ ಹೆಚ್ಚಿರುವಂತೆ ನೋಡಿ ಸಾಮಗ್ರಿಗಳನ್ನು ಖರೀದಿಸಿ.
* ನೀವು ನೀಳವಾಗಿ ತೆಳ್ಳಗಿದ್ದರೆ ಸೀರೆಯಲ್ಲದೇ ಬೇರೆ ಉಡುಪುಗಳನ್ನೂ
ಧರಿಸಬಹುದು. ಆದರೆ ನಿಮ್ಮ ಅಲಂಕಾರ ಹದಿಹರೆಯದವರನ್ನು ಅನುಕರಣೆ ಮಾಡದಂತೆ ಆದಷ್ಟು ಸಂಯಮವಾಗಿರಲಿ. ಹೀಗೆ ಮೇಲೆ ಹೇಳಿದ ಈ ವಿಧಾನಗಳನ್ನು ನೀವು ಅನುಸರಿಸುವುದರಿಂದ ನಿಮ್ಮ ಚರ್ಮ ಸುಂದರವಾಗಿರುತ್ತದೆ ಹಾಗೂ ಎಷ್ಟೇ ವಯಸ್ಸಾದರೂ ಕೂಡ ನಿಮ್ಮ ಚರ್ಮ ಸುಕ್ಕುಗಟ್ಟಿರುವ ಹಾಗೆ ವಯಸ್ಸಾದ ಹಾಗೆ ಕಾಣಿಸುವುದಿಲ್ಲ.
ಇದೆಲ್ಲವೂ ಕೂಡ ನಿಮ್ಮ ಮುಖದ ಮೇಲಿರುವಂತಹ ಚರ್ಮದ ಆರೋಗ್ಯವನ್ನು ಕಾಪಾಡುವಂತಹ ವಿಧಾನಗಳಾಗಿದ್ದು ಪ್ರತಿಯೊಬ್ಬರೂ ಕೂಡ ಈ ವಿಧಾನವನ್ನು ಅನುಸರಿಸಬಹುದು ಇದರಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.