* ಮಲ ವಿಸರ್ಜನೆ ಯಾವ ಬಲಪ್ರಯೋಗವೂ ಇಲ್ಲದೆ ನೀರನ್ನು ಸಹ ಕುಡಿಯದೆ ಸಹಜವಾಗಿ ನಡೆಯಬೇಕು.
* ಪ್ರತಿನಿತ್ಯ 8 ರಿಂದ 12 ಲೋಟಗಳಷ್ಟು ಕಾದಾರಿದ ನೀರು ಕುಡಿಯ ಬೇಕು. ಕನಿಷ್ಠವೆಂದರೂ 2 ಗಂಟೆಗೊಮ್ಮೆ ನೀರು ಕುಡಿಯಬೇಕು.
* ನೆಟ್ಟಗೆ ಕುಳಿತು ದೀರ್ಘವಾಗಿ ಉಸಿರಾಟ ನಡೆಸಬೇಕು. ಪ್ರತಿನಿತ್ಯ ಎರಡು ಹೊತ್ತು ಮಲವಿಸರ್ಜನೆ ಆಗುವಂತೆ ಅಭ್ಯಾಸಗಳನ್ನು ರೂಢಿಸಿ ಕೊಳ್ಳಬೇಕು.
* ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ತಣ್ಣೀರಿನಲ್ಲಿ ಎರಡು ಹೊತ್ತು ಸ್ನಾನ ಮಾಡುವುದು ಒಳ್ಳೆಯದು.
* ಊಟದ ನಂತರ ಮೂತ್ರ ವಿಸರ್ಜನ ಮಾಡುವುದು ಒಳ್ಳೆಯದು. ಅದರ ನಂತರ ಕಾಲುಗಂಟೆಯಷ್ಟು ಹೊತ್ತು ವಜ್ರಾಸನ ಹಾಕಬೇಕು.
* ಪ್ರತಿದಿನ ಬೆಳಿಗ್ಗೆ ಸಂಜೆ ಧ್ಯಾನ ಮಾಡಬೇಕು.
* ನಿದ್ರೆಗೂ, ಊಟಕ್ಕೂ ಕನಿಷ್ಠ 1-2 ಗಂಟೆಗಳ ಅಂತರ ಇರಬೇಕು.
* ಬೆಳಗಿನ ಹೊತ್ತು ಅರ್ಧ ಗಂಟೆಯಷ್ಟಾದರೂ ನೆಡೆದಾಡುವ ಅಭ್ಯಾಸ ಮಾಡಬೇಕು.
* ವ್ಯಾಯಾಮ, ಸೂರ್ಯ ನಮಸ್ಕಾರ ತೋಟದ ಕೆಲಸ, ಈಜು, ಆಟ ಇವೆಲ್ಲವನ್ನು ಅಭ್ಯಾಸ ಮಾಡುತ್ತಿರಬೇಕು.
* ಆಹಾರವನ್ನು ಅಗಿದು ನುಂಗಬೇಕು. ಹಸಿವಾದಾಗ ತಿನ್ನಬೇಕು. ಹೊಟ್ಟೆ ತುಂಬಾ ತಿನ್ನಬಾರದು. ಒಂದು ಭಾಗ ಖಾಲಿ ಇರಬೇಕು.
* ಊಟಕ್ಕೆ ಅನುಕೂಲಕರ ಸಮಯ ಎಂದರೆ ಬೆಳಿಗ್ಗೆ 9 ರಿಂದ 11 ಘಂಟೆ ಸಂಜೆ ಐದ ರಿಂದ ಏಳು ಘಂಟೆ.
ಈ ಸುದ್ದಿ ಓದಿ:- ಈ 5 ರಾಶಿಯ ಹೆಣ್ಣು ಮಕ್ಕಳು ಗಂಡನ ಮನೆಯ ಅದೃಷ್ಟ ದೇವತೆಗಳಂತೆ.!
* ದಿನಕೆ ಎರಡು ಸಲ ಆಹಾರ ಸೇವಿಸಬೇಕು. ಎರಡಕ್ಕೂ ಮಧ್ಯೆ 7 ಘಂಟೆಯಷ್ಟು ಅಂತರ ಇರಬೇಕು.
* ಕಾಳು ಅಥವಾ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು ಮರುದಿನ ತಿನ್ನ ಬೇಕು. ಅದೇ ರೀತಿ ಒಣಹಣ್ಣುಗಳನ್ನು ನೀರಿನಲ್ಲಿ ನೆನೆಸಿಟ್ಟು ಮರುದಿನ ತಿನ್ನಬೇಕು.
* ಊಟದಲ್ಲಿ ದ್ವಿದಳ ಧಾನ್ಯಗಳು, ತೃಣ ಧಾನ್ಯಗಳು, ತರಕಾರಿ ಇರಬೇಕು ಹಸಿ ಪದಾರ್ಥ ಮತ್ತು ಬೇಯಿಸಿದ ಪದಾರ್ಥ ಗಳೆರಡನ್ನು ಒಟ್ಟಿಗೆ ತಿನ್ನಬಾರದು. ಬಿಡಿಬಿಡಿಯಾಗಿ ಸೇವಿಸಬೇಕು.
* ಅಡುಗೆಗೆ ಎಳ್ಳೆಣ್ಣೆ ಬಳಸುವುದು ಒಳ್ಳೆಯದು.
* ಸೀದು ಹೋಗದಂತೆ ಚೆನ್ನಾಗಿ ಬೇಯಿಸಿದ್ದನ್ನು ತಿನ್ನುವುದು ಒಳ್ಳೆಯದು. ಮೊಳಕೆಕಾಳು, ಬೀಜಗಳು, ಹಣ್ಣುಗಳು , ಹಣ್ಣಿನ ರಸ, ತರಕಾರಿ ಹಸಿರುಸೊಪ್ಪು, ಸಲಾಡ್ಗಳನ್ನು ಬಳಸಬೇಕು.ಹಾಲಿಗಿಂತಲೂ ಮಜ್ಜಿಗೆ ಮೊಸರು ತಕ್ಕ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.
* ಗೋಧಿ ಹಿಟ್ಟು, ಪಾಲಿಷ್ ಮಾಡದಿರುವ ಅಕ್ಕಿ, ಆವಿಯಲ್ಲಿ ಬೇಯಿಸದ ಪದಾರ್ಥಗಳನ್ನು ಸೇವಿಸಬೇಕು. ಎಣ್ಣೆಯಲ್ಲಿ ಕರಿದ ತಿಂಡಿ ತಿನ್ನಬಾರದು.
* ಉಪ್ಪು, ಸಕ್ಕರೆ, ಮಸಾಲೆಗಳು, ಮೆಣಸು, ಬೇಳೆಕಾಳು, ತುಪ್ಪ ಬೆಣ್ಣೆ, ಕೆನೆ, ಐಸ್ ಕ್ರೀಮ್, ಆಲೂಗಡ್ಡೆ, ನಟ್ಸ್ ಬಳಕೆಯನ್ನು ಕಡಿಮೆ ಮಾಡಬೇಕು.
* ಧೂಮಪಾನ, ಮದ್ಯಪಾನ, ಡ್ರಗ್ಸ್ ಸಾಫ್ಟ್ ಡ್ರಿಂಕ್ಸ್, ತಂಬಾಕು, ಪಾನ್ ಬೀಡ, ಸಿಗರೇಟ್, ಜರ್ದಾಗಳ ಬಳಕೆ ತ್ಯಜಿಸಬೇಕು.
* ಕಾಫಿ, ಟೀ ಅಭ್ಯಾಸ ಆದಷ್ಟು ಕಡಿಮೆ ಮಾಡಬೇಕು.
ಈ ಸುದ್ದಿ ಓದಿ:- ಮನೆಯ ಒಟ್ಟು ಬಾಗಿಲುಗಳ ಸಂಖ್ಯೆ ಎಷ್ಟಿರಬೇಕು.? ಎಷ್ಟಿದ್ದರೆ ಉತ್ತಮ ನೋಡಿ.!
* ಮೈದಾ, ಬಿಳಿ ಸಕ್ಕರೆ, ಪಾಲಿಷ್ ಮಾಡಿಸಿದ ಅಕ್ಕಿ ಬಳಸಬಾರದು.
* ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರಕ್ಕೆ ಆದ್ಯತೆ ಕೊಡಿ.
* ಆಹಾರ ತುಂಬಾ ಬಿಸಿಯಾಗಿರಬಾರದು.
* ಹಾಗೆಯೇ ಬಹಳ ತಣ್ಣಗೂ ಇರಬಾರದು.
* ಹಾನಿಕಾರಕ ಕಾಸ್ಟೆಟಿಕ್ಸ್, ಮೆಡಿಕೇಟೆಡ್ ಸೋಪು, ಕ್ರೀಮ್ ಗಳನ್ನು ಬಳಸಬಾರದು.
* ಆಹಾರ ಸೇವಿಸುವಾಗ ಮಧ್ಯೆ ಮಧ್ಯೆ ನೀರು ಕುಡಿಯಬಾರದು.
* ತಡವಾಗಿ ಸೇವಿಸಬಾರದು. ಹೊಟ್ಟೆ ಬರಿಯುವಂತೆ ತಿನ್ನಬಾರದು. ತಡವಾಗಿ ನಿದ್ರಿಸಬಾರದು. ಎಡ ಮಗ್ಗುಲಿಗೆ ತಿರುಗಿ ಮಲಗಬೇಕು. ಅಂಗಾತ ಮಲಗಬಾರದು.
* ದಿನಕ್ಕೊಮ್ಮೆ ಉಪ್ಪು ನೀರಿನಿಂದ ಬಾಯಿ ಸ್ವಚ್ಛಗೊಳಿಸಬೇಕು.
* ತ್ರಿಫಲ ನೀರಿನಿಂದ ದಿನಕ್ಕೊಮ್ಮೆ ಕಣ್ಣುಗಳನ್ನು ತೊಳೆದುಕೊಳ್ಳಬೇಕು. ಅದರಿಂದ ಕಣ್ಣುಗಳು ಹೊಳೆಯುತ್ತವೆ.
* ಈ ಮಲಬದ್ಧತೆ ಇದ್ದರೆ ಎನಿಮಾ ತೆಗೆದುಕೊಳ್ಳುವುದು ಒಳ್ಳೆಯದು. ಅದರಿಂದ ಹೊಟ್ಟೆಯೊಳಗಿನ ಕಲ್ಮಶಗಳೆಲ್ಲ ಹೊರ ಹೋಗುತ್ತವೆ. ವಾರ ಕ್ಕೊಮ್ಮೆಯಾದರೂ ಮಸಾಜ್, ಸನ್ಬಾತ್, ಸ್ಟೀಮ್ ಬಾತ್ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.