ಪ್ರತಿಯೊಬ್ಬರಿಗೂ ಕೂಡ ತಮ್ಮ ಸುತ್ತಮುತ್ತಲಿನ ಸ್ನೇಹಿತರಾಗಿರಬಹುದು ಬಂಧು ಬಾಂಧವರಿರಬಹುದು ಕುಟುಂಬದವರಾಗಿರಬಹುದು ಅವರುಗಳ ಮಧ್ಯೆ ನಾನೇ ಉತ್ತಮ ನಾನೇ ಗ್ರೇಟ್ ಎನ್ನುವಂತಹ ಮಾತನ್ನು ಕೇಳಬೇಕು ಎನ್ನುವಂತಹ ಆಸೆ ಪ್ರತಿಯೊಬ್ಬರಲ್ಲೂ ಕೂಡ ಇರುತ್ತದೆ.
ಆದರೆ ಕೆಲವೊಂದಷ್ಟು ಜನರಿಂದ ಅದು ಸಾಧ್ಯವಾಗುವುದಿಲ್ಲ ಅಂದರೆ ಕೆಲವೊಂದಷ್ಟು ಜನರ ಮಾತಿನ ವೈಖರಿಯಾಗಿರ ಬಹುದು ಅವರ ನಡವಳಿಕೆ ಆಗಿರಬಹುದು ಅದರಿಂದಲೇ ಅವರು ತಮ್ಮ ಸುತ್ತಮುತ್ತಲಿನ ಜನಗಳಿಗಿಂತ ವಿಭಿನ್ನರು ತಾವೇ ಹೈಲೈಟ್ ಎನ್ನುವ ಹಾಗೆ ಇರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಇದೇ ರೀತಿಯಾಗಿ ಇರಬೇಕು ಎಂದು ಆಸೆ ಪಡುತ್ತಿರುತ್ತಾರೆ.
ಹಾಗಾದರೆ ಈ ದಿನ ಈ ವಿಷಯವಾಗಿ ಅಂದರೆ ನಿಮ್ಮ ಸ್ನೇಹಿತರ ಗುಂಪಲ್ಲಿ ನೀವೇ ಹೈಲೈಟ್ ಆಗಿ ಕಾಣಬೇಕು ಎಂದರೆ ಈಗ ನಾವು ಹೇಳುವಂತಹ ಕೆಲವು ಅನುಸರಿಸುವುದು ಒಳ್ಳೆಯದು. ಆಗ ನೀವು ಎಲ್ಲರಂತೆ ಹೈಲೈಟ್ ಆಗಿ ಕಾಣಿಸುತ್ತೀರಿ ಹಾಗಾದರೆ ಆ ಟಿಪ್ಸ್ ಗಳು ಯಾವುದು ಎಂದು ಈಗ ತಿಳಿಯೋಣ.
ಈ ಸುದ್ದಿ ಓದಿ:- ಓಡುತ್ತಿರುವ 7 ಕುದುರೆಗಳ ಚಿತ್ರವನ್ನು ಯಾವ ದಿಕ್ಕಿಗೆ ಹಾಕಿದರೆ ಹಣದ ಮಳೆ ಆಗುತ್ತೆ.!
* ಮೊದಲನೆಯದಾಗಿ ಕೆಲವೊಂದಷ್ಟು ಜನ ಹೆಚ್ಚಿಗೆ ಮಾತನಾಡುವುದ ರಿಂದ ತಮ್ಮ ಜೀವನದ ಬಗ್ಗೆ ಹಾಗೂ ತಮ್ಮ ಗಂಡಂದಿರ ಬಗ್ಗೆ ಹಾಗೂ ತಮ್ಮ ಅತ್ತೆ ಹೇಗೆ ನಮ್ಮ ಜೊತೆ ಇದ್ದಾರೆ, ತಮ್ಮ ಆರ್ಥಿಕ ಪರಿಸ್ಥಿತಿ ಹೇಗಿದೆ ಹೀಗೆ ಪ್ರತಿಯೊಂದನ್ನು ಸಹ ಎಲ್ಲರ ಮುಂದೆ ಹೇಳಿಕೊಳ್ಳುತ್ತಿರುತ್ತಾರೆ. ನಾನು ತೆರೆದ ಪುಸ್ತಕದ ಹಾಗೆ ಎನ್ನುವಂತಹ ಕೆಲವೊಂದಷ್ಟು ಗುಣ ಸ್ವಭಾವಗಳನ್ನು ಸಹ ಅವರು ಹೊಂದಿರುತ್ತಾರೆ.
ಹೀಗಿದ್ದ ಮಾತ್ರಕ್ಕೆ ಎಲ್ಲರಿಗಿಂತ ನಾನು ಹೈಲೈಟ್ ಆಗಿ ಕಾಣಿಸುತ್ತೇನೆ ಎಂದುಕೊಳ್ಳುವುದು ಅವರ ಮೂರ್ಖತನ. ಹೀಗೆ ಇದ್ದರೆ ಯಾವುದೇ ಕಾರಣಕ್ಕೂ ಕೂಡ ಎಲ್ಲರಿಗಿಂತ ನೀವು ಹೈಲೈಟ್ ಆಗಿ ಕಾಣುತ್ತೀರಿ ಎಂದುಕೊಳ್ಳುವುದು ನಿಮ್ಮ ತಪ್ಪು ತಿಳುವಳಿಕೆ ಎಂದೇ ಹೇಳಬಹುದು.
* ಅದೇ ರೀತಿಯಾಗಿ ಒಂದು ಗುಂಪಿನಲ್ಲಿ ಐದು ಜನ ಇದ್ದರೆ ಅದರಲ್ಲಿ ಎಲ್ಲರೂ ಚೆನ್ನಾಗಿ ಮಾತನಾಡುತ್ತಿದ್ದು ಅದರಲ್ಲಿ ಒಬ್ಬರು ಮಾತ್ರ ಯಾವುದೇ ಸಂದರ್ಭದಲ್ಲಿ ಆಗಿರಬಹುದು ಯಾವುದೇ ವಿಚಾರದಲ್ಲಾಗಿರ ಬಹುದು ಯಾವುದಕ್ಕೂ ಕೂಡ ಹೆಚ್ಚು ಪ್ರತಿ ಉತ್ತರವನ್ನು ಕೊಡದೆ ಹೆಚ್ಚು ತಾಳ್ಮೆಯನ್ನು ಹೊಂದಿರುತ್ತಾರೋ ಕಡಿಮೆ ಮಾತನಾಡುತ್ತಾರೋ ಅವರು ಕೂಡ ಎಲ್ಲರಿಗಿಂತ ಹೈಲೈಟ್ ಆಗಿ ಕಾಣುತ್ತಾರೆ.
ಈ ಸುದ್ದಿ ಓದಿ:- ಮನೆಯಲ್ಲಿ ಬಾಗಿಲುಗಳು ನೀಚ ಸ್ಥಾನದಲ್ಲಿ ಇದ್ದರೆ ಸಾಲದ ಸುಳಿಗೆ ಸಿಲುಕುತ್ತೀರಾ.!
ಹೆಚ್ಚು ತಾಳ್ಮೆ ಯಾರಲ್ಲಿ ಇರುತ್ತದೆಯೋ ಅವರು ಅತಿಹೆಚ್ಚಿನ ಬುದ್ಧಿವಂತರು ಎಂದೇ ಹೇಳಬಹುದು. ಇವರು ಯಾವುದೇ ವಿಚಾರವನ್ನು ಸಹ ಎಲ್ಲರ ಮುಂದೆ ಹೇಳಿಕೊಳ್ಳುವುದಿಲ್ಲ ಬದಲಿಗೆ ಎಲ್ಲವನ್ನೂ ಸಹ ಮನಸ್ಸಿನಲ್ಲಿ ಇಟ್ಟು ಕೊಂಡು ಬಹಳ ತಾಳ್ಮೆಯಿಂದ ಇರುತ್ತಾರೆ.
* ಉದಾಹರಣೆಗೆ ಮೊದಲೇ ಹೇಳಿದಂತೆ ಒಂದು ಗುಂಪಿನಲ್ಲಿ ಐದು ಜನ ಇರುತ್ತಾರೆ ಅವರೆಲ್ಲರೂ ಕೂಡ ಎಲ್ಲರ ವಿಚಾರಗಳನ್ನು ಎಲ್ಲರ ಮುಂದೆ ಯೂ ಹೇಳುವುದಿಲ್ಲ. ಬದಲಿಗೆ ಯಾವುದೋ ಒಬ್ಬ ವ್ಯಕ್ತಿ ಆ ಒಂದು ಸಂದರ್ಭದಲ್ಲಿ ಅವನು ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿ ಅವನ ಬಗ್ಗೆ ಆ ಒಂದು ಗುಂಪಿನಲ್ಲಿ ಅವನ ಕೆಲವೊಂದಷ್ಟು ವಿಚಾರಗಳನ್ನು ಮಾತನಾಡುತ್ತಿರುತ್ತಾನೆ.
ಈ ರೀತಿ ಮಾತನಾಡುವುದ ರಿಂದ ನೀವು ಆ ಒಂದು ಗುಂಪಿನಲ್ಲಿ ನಕಾರಾತ್ಮಕತೆಯನ್ನು ಹರಡಿದ ಹಾಗಾಗುತ್ತದೆ. ಯಾವುದೇ ಕಾರಣಕ್ಕೂ ಕೂಡ ನಿಮ್ಮ ಗುಂಪಿನಲ್ಲಿಯೇ ನಿಮ್ಮ ಸುತ್ತಮುತ್ತ ಇರುವಂತಹ ವ್ಯಕ್ತಿಗಳ ಜೊತೆಯಲ್ಲಿಯೇ ಇದು ಅವರಿಗೆ ನೀವು ಕೇಡನ್ನು ಬಯಸಿದರೆ ನೀವು ಅಲ್ಲಿ ಯಾವುದೇ ಕಾರಣಕ್ಕೂ ಒಳ್ಳೆಯ ವ್ಯಕ್ತಿಯಾಗಿ ಕಾಣಿಸುವುದಿಲ್ಲ. ಬದಲಿಗೆ ನಿಮ್ಮ ಒಂದು ಕೆಟ್ಟತನವನ್ನು ಅಲ್ಲಿ ಪ್ರದರ್ಶಿಸಿದಂತೆ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.