ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಒಂದು ಸಮಸ್ಯೆಯನ್ನು ಅನುಭವಿಸಿರುತ್ತಾರೆ. ಅದೇನೆಂದರೆ, ಸ್ಯಾರಿ ತುಂಬಾ ಚೆನ್ನಾಗಿರುತ್ತದೆ. ಆ ಸ್ಯಾರಿ ಬಣ್ಣ ಕೂಡ ಅವರಿಗೆ ಹೊಂದುತ್ತಿರುತ್ತದೆ ಆದರೆ ಅದಕ್ಕೆ ಮ್ಯಾಚಿಂಗ್ ಆಗಿ ಸ್ಟಿಚ್ ಮಾಡಿಸಿಕೊಂಡ ಬ್ಲೌಸ್ ನಲ್ಲಿ ಸಮಸ್ಯೆ ಇರುತ್ತದೆ.
ಬಹುತೇಕ ಸಮಯಗಳಲ್ಲಿ ಎಲ್ಲವು ಸರಿ ಇದ್ದರು ಬ್ಲೌಸ್ ಶೋಲ್ಡರ್ ಬೀಳುತ್ತಿರುತ್ತದೆ ಇದರಿಂದ ಬಹಳ ಕಸಿವಿಸಿ ಹಾಗೂ ಕಿರಿಕಿರಿ ಅನುಭವಿಸಬೇಕಾಗಿರುತ್ತದೆ ನೀವು ಕೂಡ ಈ ರೀತಿ ಸಾಕಷ್ಟು ಬಾರಿ ಈ ಸಮಸ್ಯೆಯಿಂದ ಮುಜರಕ್ಕೆ ಒಳಗಾಗಿದ್ದಾರೆ ಅದಕ್ಕೆ ಕಾರಣ ಮತ್ತು ಪರಿಹಾರ ಏನು ಎನ್ನುವುದನ್ನು ಈ ಅಂಕಣದಲ್ಲಿ ವಿವರಿಸುವ ಪ್ರಯತ್ನ ಮಾಡುತ್ತಿದ್ದೇನೆ.
* ನಾವು ಅಳತೆ ತೆಗೆದುಕೊಂಡಿರುವಂತಹ ಬ್ಲೌಸ್ ಮೆಜರ್ಮೆಂಟ್ ಸರಿಯಾಗಿದ್ದರೆ ನಾವು ಸ್ಟಿಚ್ ಮಾಡುವ ಬ್ಲೌಸ್ ಮೆಜರ್ಮೆಂಟ್ ಕೂಡ ಪಕ್ಕ ಅದೇ ರೀತಿ ಬರುತ್ತದೆ. ಹೀಗೆ ನಾವು ಆರಿಸಿಕೊಂಡ ಬ್ಲೌಸ್ ನಲ್ಲಿ ಸಮಸ್ಯೆ ಇದ್ದರೆ ಒಲಿದ ಬ್ಲೌಸ್ ಕೂಡ ಅದೇ ರೀತಿ ಆಗಿ ಬಿಡುತ್ತದೆ.
ಈ ಸುದ್ದಿ ಓದಿ:- ವಿವಾಹ ವಿಳಂಬವಾಗುತ್ತಿದೆಯೇ? ಶೀಘ್ರವಾಗಿ ಕಂಕಣ ಬಲ ಕೂಡಿ ಬರಲು ಈ ಸಿಂಪಲ್ ರೆಮಿಡಿ ಮಾಡಿ ಸಾಕು.!
* ಎಲ್ಲಾ ಮಹಿಳೆಯರಿಗೂ ಒಂದೇ ರೀತಿಯ ಶೋಲ್ಡರ್ ಮೆಜರ್ಮೆಂಟ್ ಇರುವುದಿಲ್ಲ ಇದು ಸ್ಟ್ಯಾಂಡರ್ಡ್ ಕೂಡ ಅಲ್ಲ, ಅನೇಕರು ತಪ್ಪು ತಿಳಿದುಕೊಂಡಿದ್ದಾರೆ. ಸಾಮಾನ್ಯವಾಗಿ ತಮ್ಮ ಅವಸರಕ್ಕೆ ಎಲ್ಲರಿಗೂ ಒಂದೇ ರೀತಿ ಕಟ್ ಮಾಡುತ್ತಾರೆ ಹೀಗೆ ಮಾಡಬೇಡಿ ಬ್ಲೌಸ್ ಮೆಜರ್ಮೆಂಟ್ ಚೇಂಜ್ ಆದಂತೆ ಶೋಲ್ಡರ್ ಮೆಜರ್ಮೆಂಟ್ ಕೂಡ ಚೇಂಜ್ ಆಗುತ್ತಿರುತ್ತದೆ ಅದನ್ನು ಅಳತೆಗೆ ಕೊಟ್ಟಿರುವ ಬ್ಲೌಸ್ ನಲ್ಲಿ ನೋಡಿ ಮೆಜರ್ಮೆಂಟ್ ಹಾಕಿಕೊಳ್ಳಿ.
* ಆರ್ಮ್ ಹೋಲ್ ಹಾಗೂ ಸ್ಲೀವ್ ಓಪನ್ ಕಡಿಮೆ ಆದಾಗ ಕೂಡ ಈ ರೀತಿಯಾಗಿ ಸಮಸ್ಯೆಯಾಗುತ್ತದೆ, ಇದೆಲ್ಲವೂ ಅಳತೆ ಬ್ಲೌಸ್ ನಲ್ಲಿ ಇರುವಂತೆಯೇ ಅಳತೆ ಇರಲಿ.
* ಅನೇಕರಿಗೆ ಬ್ಯಾಕ್ ಡೀಪ್ ಇರುವ ಬ್ಲೌಸ್ ಸ್ಟಿಚ್ ಮಾಡಿದಾಗ ಮಾತ್ರ ಈ ರೀತಿ ಸಮಸ್ಯೆ ಆಗುತ್ತಿರುತ್ತದೆ. ಅದಕ್ಕೆ ಕಾರಣ ಅವರು ನೆಕ್ ವಿಡ್ತ್ ಮೇಲೆ ಶೋಲ್ಡರ್ ಪಕ್ಕದಲ್ಲಿ ಎಷ್ಟಿರುತ್ತದೆ ಅಷ್ಟೇ ಡೀಪ್ ವರೆಗೂ ಕೂಡ ಮಾರ್ಕ್ ಮಾಡಿರುತ್ತದೆ ಇದೇ ಸಮಸ್ಯೆ ನೀವು ಶೋಲ್ಡರ್ ಪಕ್ಕ ನೆಕ್ ವಿಡ್ತ್ ಮಾರ್ಕ್ ಮಾಡುವಾಗ ನೀವು ತೆಗೆದುಕೊಂಡಿರುವ ಅಳತೆ ಬ್ಲೌಸ್ ನಲ್ಲಿ ಎಷ್ಟಿದೆ ಅಷ್ಟು ಮಾಡಿ ಕೆಳಗೆ ಡೀಪ್ ನಲ್ಲಿ ನಿಮ್ಮ ಡಿಸೈನ್ ಅಥವಾ ನಿಮಗೆಷ್ಟು ಅಗಲಕ್ಕೆ ಎಷ್ಟು ಬೇಕು ಅಷ್ಟು ಮಾರ್ಕ್ ಮಾಡಿ ಸ್ಕೇಲ್ ನಿಂದ ಗೆರೆ ಎಳೆದು ಕಟ್ ಮಾಡಬಹುದು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಮಹಿಳೆಯರಿಗೆ ಬಿಗ್ ಶಾ ಕ್ ! ರಾತ್ರೋರಾತ್ರಿ ಸರ್ಕಾರದಿಂದ ಹೊಸ ರೂಲ್ಸ್, ಇನ್ನು ಮುಂದೆ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ.!
* ಇನ್ನೊಂದು ಸುಲಭವಾದ ಟಿಪ್ ಇದೆ ಅದೇನೆಂದರೆ ಶೋಲ್ಡರ್ ಜಾಯಿಂಟ್ ಮಾಡುವಾಗ ನೇರವಾಗಿ ಸ್ಟಿಚ್ ಹಾಕುತ್ತೇವೆ ಇದನ್ನು ನೆಕ್ ವಿಡ್ತ್ ಕಡೆ ಬಂದಾಗ ಸ್ವಲ್ಪ ಕ್ರಾಸ್ ಆಗಿ ಅದರಲ್ಲೂ ಒಳಗಡೆಗೆ ಬೆಂಡ್ ಆಗಿ ಬರುವಂತೆ ಹಾಕಿದರೆ ಆಗಲು ಕೂಡ ಸಮಸ್ಯೆ ಅವಾಯ್ಡ್ ಆಗುತ್ತದೆ.
* ಬ್ಲೌಸ್ ನ ಬಸ್ಟ್ ಹೈಟ್ ನಿಂದ ಕಾಲು ಇಂಚು ಕಡಿಮೆ ನೆಟ್ ವಿಡ್ತ್ ಕಡೆ ಮೆಜರ್ಮೆಂಟ್ ಇಟ್ಟುಕೊಂಡರೂ ಕೂಡ ಈ ಸಮಸ್ಯೆ ಅವಾಯ್ಡ್ ಆಗುತ್ತದೆ.
* ಇನ್ನೊಂದು ಎಲ್ಲಕ್ಕಿಂತ ಸುಲಭವಾದ ಟಿಪ್ ಏನೆಂದರೆ ನೀವು ಒಮ್ಮೆ ಬ್ಲೌಸ್ ಎಲ್ಲ ಸ್ಟಿಚ್ ಮಾಡಿದ ಮೇಲೆ ಈಗ ನಿಮ್ಮ ಬ್ಲೌಸ್ ಪೂರ್ತಿ ಉಲ್ಟಾ ಮಾಡಿಕೊಳ್ಳಿ ಈಗ ಒಳಗೆ ಸ್ಲೀವ್ ಜಾಯಿಂಟ್ ಮಾಡಿರುವ ಶೋಲ್ಡರ್ ತುದಿಯಿಂದ ನೆಕ್ ವಿಡ್ತ್ ಷೋಲ್ಡರ್ ತುದಿಗೆ ಕ್ರಾಸ್ ಆಗಿ ಒಂದು ಲೈನ್ ಹಾಕಿಕೊಳ್ಳಿ. ಇದು ನೆಕ್ ವಿಡ್ತ್ ಕಡೆಗೆ ಕ್ರಾಸ್ ಆಗಿ ಬರಬೇಕು ಈಗ ಅಲ್ಲಿ ಒಂದು ಕ್ರಾಸ್ ಸ್ಟಿಚ್ ಕೂಡ ಹಾಕಿ ಹೀಗೆ ಮಾಡುವುದರಿಂದ 100% ಸಮಸ್ಯೆ ಸರಿ ಹೋಗುತ್ತದೆ. ಈಗಾಗಲೇ ಬ್ಲೌಸ್ ರೆಡಿ ಆಗಿ ಹೋಗಿದೆ ಎನ್ನುವವರು ಈ ಟಿಪ್ ಟ್ರೈ ಮಾಡಬಹುದು.