ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಜಾರಿ ಇರುವ ಗ್ಯಾರಂಟಿ ಯೋಜನೆಗಳ (Guaranty Scheme) ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದರಲ್ಲಿ ಹೈ ಬಜೆಟ್ ಯೋಜನೆ ಎನಿಸಿಕೊಂಡಿರುವ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕುರಿತಾದ ಒಂದು ಬಿಗ್ ಅಪ್ಡೇಟ್ ಒಂದನ್ನು ಈ ಲೇಖನದಲ್ಲಿ ತಿಳಿಸ ಬಯಸುತಿದ್ದೇವೆ.
ಅದೇನೆಂದರೆ, ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭೆ ಚುನಾವಣೆ 2023ರ ವೇಳೆ ನೀಡಿದ್ದ ಪಂಚಖಾತ್ರಿ ಭರವಸೆಗಳಲ್ಲಿ ಒಂದಾಗಿ ಗೃಹಲಕ್ಷ್ಮಿ ಯೋಜನೆಯು ಕೂಡ ಸೇರಿತ್ತು ಗೃಹಲಕ್ಷ್ಮಿ ಯೋಜನೆಯ ಉದ್ದೇಶವೇನಂದರೆ, ಕುಟುಂಬ ನಿರ್ವಹಣೆಗಾಗಿ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಎಂದು ಸ್ಥಾನ ಪಡೆದಿರುವ ಮಹಿಳೆಯ ಬ್ಯಾಂಕ್ ಖಾತೆಗೆ DBT ಮೂಲಕ ಪ್ರತಿ ತಿಂಗಳು ರೂ.2000 ಸಹಾಯಧನ ವರ್ಗಾವಣೆ ಮಾಡಲಾಗಿತ್ತು.
ಈ ಸುದ್ದಿ ಓದಿ:- ಮನೆಯಲ್ಲಿ ಕಷ್ಟ ಕಳೆದು ಹಣ, ಬಂಗಾರ ಹರಿದು ಬರಬೇಕೆಂದರೆ ಇದೊಂದು ಕೆಲಸ ಮಾಡಿ ಸಾಕು.!
ಮಹಿಳೆಯರ ಲಿಂಗ ಸಮಾನತೆ ಮತ್ತು ಆರ್ಥಿಕ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರುವುದಾಗಿ ಸರ್ಕಾರ ಹೇಳಿತ್ತು. ಅಂತೆಯೇ ಬಹುಮತ ಬೆಂಬಲದೊಂದಿಗೆ ಸ್ಥಾಪನೆಯಾದ ಕಾಂಗ್ರೆಸ್ ಸರ್ಕಾರವು (Congress) ಆಗಸ್ಟ್ 30 2023ರಂದು ಮೊದಲ ಕಂತಿನ ಗೃಹಲಕ್ಷ್ಮಿ ಹಣವನ್ನು ಬಿಡುಗಡೆ ಮಾಡತ್ತು.
ಇಂದು ತಿಂಗಳಿಗೆ 3000 ಕೋಟಿ ಬಜೆಟ್ ವೆಚ್ಚದಲ್ಲಿ ರಾಜ್ಯದ 1.17 ಕೋಟಿಗಿಂತ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು ರೂ.2000 ಸಹಾಯಧನ ಪಡೆಯುತ್ತಿದ್ದಾರೆ. ಅಂತೆಯೇ ಯಶಸ್ವಿಯಾಗಿ ಇದುವರೆಗೂ 10 ತಿಂಗಳ ಹಣವು ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಆಗಿದೆ ಮತ್ತು ಆಗಾಗ ಗೃಹಲಕ್ಷ್ಮಿ ಪ್ರಗತಿ ಪರಿಶೀಲರ ಸಭೆಗಳನ್ನು, ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು ನಡೆಸಿ ಹಣ ಪಡೆಯಲು ಸಾಧ್ಯವಾಗದ ಮಹಿಳೆಯರ ಸಮಸ್ಯೆ ಬಗ್ಗೆ ಹರಿಸಿಕೊಡಲು ಪ್ರಯತ್ನಿಸಲಾಗಿದೆ.
ಈ ಸುದ್ದಿ ಓದಿ:- ಗ್ರಾಮೀಣ ಭಾಗದ ರೈತರಿಗೆ ಗುಡ್ ನ್ಯೂಸ್ 2 ಲಕ್ಷ ಸಹಾಯಧನ ಘೋಷಣೆ.!
ಹಾಗಾದರೆ ಈಗ ಈ ಬಗ್ಗೆ ಸರ್ಕಾರ ಪ್ರಸ್ತಾಪಡಿಸಿರುವ ವಿಷಯ ಏನೆಂದರೆ ಇನ್ನು ಮುಂದೆ ರಾಜ್ಯದ ಸಾವಿರಾರು ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಹಣದಿಂದ ವಂಚಿತರಾಗಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ ಯಾವ ಮಹಿಳೆಯರಿಗೆ ಹಣ ಬರುವುದಿಲ್ಲ ಎನ್ನುವುದರ ಬಗ್ಗೆ ಹೇಳುವುದಾದರೆ.
ಆರ್ಥಿಕ ಇಲಾಖೆ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ನಡೆಸಿರುವ ರೇಷನ್ ಕಾರ್ಡ್ ಪರಿಶೀಲನೆ ಕಾರ್ಯದಲ್ಲಿ ರಾಜ್ಯದಲ್ಲಿ ಅನೇಕ ಕುಟುಂಬಗಳು ಒಗ್ಗಟ್ಟಿನಿಂದ ಇದ್ದರು ಒಂದೇ ಮನೆಯಲ್ಲಿ ಹತ್ತಾರು ಕಾರ್ಡುಗಳನ್ನು ಪಡೆದಿದ್ದಾರೆ ಎನ್ನುವ ವಿಷಯ ತಿಳಿದು ಬಂದಿದೆ.
ಉದಾಹರಣೆಗೆ ಒಂದು ಕುಟುಂಬದಲ್ಲಿ ಅಣ್ಣತಮ್ಮಂದಿರು ತಮ್ಮ ಹೆಂಡತಿ ಮಕ್ಕಳೊಂದಿಗೆ ತಂದೆ ತಾಯಿ ಜೊತೆ ತಂದೆ ಮನೆಯಲ್ಲಿ ಇದ್ದರೂ ಕೂಡ ಒಂದೇ ಸೂರಿನಡಿ ವಾಸಿಸುತ್ತಿದ್ದರು ಕೂಡ ತಂದೆ ತಾಯಿಗೆ ಪ್ರತ್ಯೇಕವಾದ ರೇಷನ್ ಕಾರ್ಡ್, ಅಣ್ಣ ಮತ್ತು ಅಣ್ಣನ ಹೆಂಡತಿ ಮಕ್ಕಳಿಗೆ ಪ್ರತ್ಯೇಕ ಪ್ರತ್ಯೇಕ ರೇಷನ್ ಕಾರ್ಡ್ ಹಾಗೂ ತನಗೆ ಹಾಗೂ ತನ್ನ ಹೆಂಡತಿ ಮಕ್ಕಳಿಗೂ ಪ್ರತ್ಯೇಕವಾದ ರೇಷನ್ ಕಾರ್ಡ್ ಗಳನ್ನು ಮಾಡಿಸಿಕೊಂಡಿರುವಂತಹ ಪ್ರಕರಣಗಳು ರಾಜ್ಯದಾದ್ಯಂತ ಪ್ರತಿ ಗ್ರಾಮದಲ್ಲೂ ಸಾವಿರಾರು ಸಂಖ್ಯೆಯಲ್ಲಿದೆ ಎನ್ನುವುದು ತಿಳಿದು ಬಂದಿದೆ.
ಈ ಸುದ್ದಿ ಓದಿ:- ಜೂನ್ 01 ನೇ ತಾರೀಕಿನಿಂದ 40 ವರ್ಷಗಳ ಕಾಲ ಈ 6 ರಾಶಿಯವರಿಗೆ ಗಜಕೇಸರಿ ಯೋಗ ಹೆಜ್ಜೆ ಹೆಜ್ಜೆಗೂ ದುಡ್ಡಿನ ಮಳೆ.!
ಇದು ಉದ್ದೇಶಪೂರ್ವಕವಾಗಿ ಸರ್ಕಾರಕ್ಕೆ ವಂಚಿಸುತ್ತಿರುವ ಪ್ರಕರಣ ಎನ್ನುವುದನ್ನು ಪರಿಗಣಿಸಿ ಈ ರೀತಿ ರೇಷನ್ ಕಾರ್ಡ್ ಗಳನ್ನು ಪ್ರತ್ಯೇಕವಾಗಿ ಹೊಂದುವ ಅವಶ್ಯಕತೆ ಇಲ್ಲ ಈ ಕುಟುಂಬವು ಒಟ್ಟಿಗೆ ಅವಿಭಕ್ತ ಕುಟುಂಬವಾಗಿ ರೇಷನ್ ಕಾರ್ಡ್ ಹೊಂದಬಹುದು ಒಂದೇ ಮನೆಯಲ್ಲಿ ಒಟ್ಟಿಗೆ.
ಸರಕಾರಿ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದಲೇ ಈ ರೀತಿ ರೇಷನ್ ಕಾರ್ಡ್ ಗಳನ್ನು ಪ್ರತ್ಯೇಕವಾಗಿ ಪಡೆದಿರುವ ಕಾರಣ ಅವುಗಳನ್ನು ವಶಪಡಿಸಿಕೊಳ್ಳಲು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಈ ರೀತಿ ರದ್ದುಪಡಿಸಲಾಗುವ ಕುಟುಂಬದ ಮುಖ್ಯಸ್ಥೆ ಮಹಿಳೆಯು ಇನ್ನು ಮುಂದೆ ಗೃಹಲಕ್ಷ್ಮಿ ಹಣ ಪಡೆಯಲು ಆಗುವುದಿಲ್ಲ ಎನ್ನುವ ಮಾಹಿತಿ ತಿಳಿದು ಬಂದಿದೆ.