ಕೇಂದ್ರ ಸರ್ಕಾರವು (Central Government) 2019ರಲ್ಲಿ ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradhana Mantri Kisan Samman Nidhi) ಯೋಜನೆ ಬಗ್ಗೆ ಬಹುತೇಕ ದೇಶದ ಎಲ್ಲ ರೈತರಿಗೂ ತಿಳಿದೇ ಇದೆ. ಐದು ಹೆಕ್ಟರಿಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವಂತಹ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಸರ್ಕಾರದ ಕಡೆಯಿಂದ ನಾಲ್ಕು ತಿಂಗಳಿಗೊಮ್ಮೆ.
ಅಂದರೆ ವಾರ್ಷಿಕವಾಗಿ 3 ಕಂತುಗಳಲ್ಲಿ ರೂ.6,000 ಹಣವನ್ನು ಅವರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸಹಾಯಧನವಾಗಿ ನೀಡಲಾಗುತ್ತಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ರೈತರಿಗೆ ಕೂಡ ಪ್ರೋತ್ಸಾಹ ದನ ನೀಡಿ ಕೃಷಿ ವಲಯವನ್ನು ಸದೃಢಗೊಳಿಸಲಾಗುತ್ತಿದೆ.
ಈವರೆಗೆ ಯಶಸ್ವಿಯಾಗಿ ಸುಮಾರು 16 ಕಂತುಗಳ ಹಣವನ್ನು ಫಲಾನುಭವಿಗಳು ಪಡೆದಿದ್ದಾರೆ ಆದರೆ ಇನ್ನು ಮುಂದೆ ಕಿಸಾನ್ ಸಮ್ಮಾನ್ ನಿಧಿ ಹಣ ಪಡೆಯಬೇಕಾದರೆ ರೈತರು ಈ ಒಂದು ಕೆಲಸವನ್ನು ಕಡ್ಡಾಯವಾಗಿ ಮಾಡಿರಬೇಕು. ಸಾಮಾನ್ಯವಾಗಿ ನಾವು ಗಮನಿಸಿದರೆ ಯೋಜನೆ ಆರಂಭವಾದ ದಿನದಿಂದ ಪ್ರತಿ ವರ್ಷವೂ ಕೂಡ ಈ ಯೋಜನೆಯ ಫಲಾನುಭವಿಗಳ ಪಟ್ಟಿ ಕಡಿಮೆ ಆಗುತ್ತಿರುವುದು ತಿಳಿದು ಬರುತ್ತದೆ.
ಈ ಸುದ್ದಿ ಓದಿ:- ಮೊಬೈಲ್ ಮೂಲಕ ಬುಕ್ ಮಾಡಿದ್ರೆ ಸಾಕು ಉಚಿತವಾಗಿ ನಿಮ್ಮ ಮನೆಗೆ ಬರುತ್ತದೆ 10Kg ಭಾರತ್ ಅಕ್ಕಿ, ಗೋಧಿ ಹಿಟ್ಟು ಹಾಗೂ ಕಡಲೇಬೇಳೆ, ಬುಕ್ ಮಾಡುವ ವಿಧಾನ ಹೇಗೆ ನೋಡಿ.!
ಇದಕ್ಕೆ ಕಾರಣವೇನೆಂದರೆ ಅನೇಕ ಕಡೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಾಗೂ ಸತ್ಯಾಂಶ ಮರೆ ಮಾಚಿ ಸರ್ಕಾರಕ್ಕೆ ವಂಚಿಸಿ ಅನೇಕರು ಹಣ ಪಡೆಯುತ್ತಿದ್ದರು. ಇದನ್ನು ಕಂಡುಹಿಡಿದ ಆರ್ಥಿಕ ಇಲಾಖೆಯ ಈ ಯೋಜನೆ ಕಂಡಿಷನ್ ಗಳನ್ನು ಇನ್ನಷ್ಟು ಬಿಗಿಗೊಳಿಸಿ ಸರ್ಕಾರದ ಹಣ ವ್ಯರ್ಥವಾಗುವುದನ್ನು ತಡೆಯುತ್ತಿದೆ.
ಈ ಕ್ರಮವಾಗಿ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣ ಪಡೆಯಲು ಇ-ಕೆವೈಸಿ (e-KYC) ಕಡ್ಡಾಯ ಎಂದು ಘೋಷಿಸಿದೆ. ಈ ನಿಯಮದ ಪ್ರಕಾರವಾಗಿ ಯಾರೆಲ್ಲಾ ಇ-ಕೆವೈಸಿ ಮಾಡಿಸಿಲ್ಲ ಅಂತಹ ರೈತರಿಗೆ ಇನ್ನು ಮುಂದೆ ಈ ಯೋಜನೆಯ ಅನುದಾನ ಸಿಗುವುದಿಲ್ಲ.
ಸರ್ಕಾರ ಸೂಚಿಸಿರುವ ನಿಯಮದಂತೆ ತಪ್ಪದೆ ರೈತರು ತಮ್ಮ ಹತ್ತಿರದ ಯಾವುದೇ CSC ಕೇಂದ್ರಗಳಿಗೆ ಹೋಗಿ ತಮ್ಮ ಆಧಾರ್ ಕಾರ್ಡ್ ಮತ್ತು ಕಿಸಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಪತ್ರದೊಂದಿಗೆ ತಮ್ಮ ಬಯೋಮೆಟ್ರಿಕ್ ಮಾಹಿತಿಗಳನ್ನು ನೀಡಿ ಇ-ಕೆವೈಸಿ ಪೂರ್ತಿ ಗೊಳಿಸಬಹುದು.
ಈ ಸುದ್ದಿ ಓದಿ:- ತುಂಬಾ ಸಾಲ ಮಾಡಿ ಕೊರಗುತ್ತಿದ್ದೀರಾ.? ಈ 2 ಕೆಲಸ ಮಾಡಿ ಖಂಡಿತ ಕೋಟ್ಯಾಧಿಪತಿಗಳಾಗುತ್ತೀರಿ.!
ಇಲ್ಲವಾದಲ್ಲಿ ಪಿಎಂ ಕಿಸಾನ್ ಸಮ್ಮಾನ್ ಸಂಬಂಧಿತ ಆನ್ಲೈನ್ ಅಧಿಕೃತ ವೆಬ್ಸೈಟ್ ಅಥವಾ ಆಪ್ ಗಳ ಮೂಲಕ ಕೂಡ ಇ-ಕೆ ವೈ ಸಿ ಪೂರ್ತಿಗೊಳಿಸಬಹುದು. ಈ ಬಗ್ಗೆ ಯಾವುದೇ ಗೊಂದಲ ಉಂಟಾದರೆ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಗೆ ಹೋಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸಮಸ್ಯೆ ಬಗೆ ಹರಿಸಿಕೊಳ್ಳಬಹುದು.
ಹಾಗೆ ಯಾವ ರೈತರು ಕಳೆದ ಹತ್ತು ವರ್ಷಗಳಿಂದ ಒಮ್ಮೆ ಕೂಡ ತಮ್ಮ ಆಧಾರ್ ಅಪ್ಡೇಟ್ (Aadhar renewal) ಮಾಡಿಸಿಲ್ಲ ಜೂನ್ 14ರ ವರೆಗೆ ತಪ್ಪದೆ ಮಾಡಿಸಿಕೊಳ್ಳಿ. ಇಲ್ಲವಾದಲ್ಲಿ dbt ಮೂಲಕ ಹಣ ವರ್ಗಾವಣೆ ಮಾಡಲು ಸಮಸ್ಯೆ ಎದುರಾಗಬಹುದು. ಹೀಗೆ ಕಾಲ ಕಾಲಕ್ಕೆ ಸರ್ಕಾರ ಸೂಚಿಸಿರುವ ನಿಯಮಗಳನ್ನು ಪಾಲಿಸುವ ಫಲಾನುಭವಿಗಳಿಗೆ ಮಾತ್ರ ಹೀಗೆ ಸರ್ಕಾರದ ಅನುದಾನ ಸಿಗುವುದು.
ಇದು ಬಹಳ ಉಪಯುಕ್ತ ಮಾಹಿತಿ ಆಗಿದ್ದು ಅನೇಕ ರೈತರಿಗೆ ಈ ಬಗ್ಗೆ ವಿಚಾರ ಗೊತ್ತಿರುವುದಿಲ್ಲ ಹಾಗಾಗಿ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಮಾಹಿತಿಯು ಹೆಚ್ಚಿನ ರೈತರಾಗಿ ತಲುಪುವಂತೆ ಮಾಡಿ.